ಫ್ರಾನ್ಸ್ ಅಮೇರಿಕಾ ಮತ್ತು ಜಪಾನ್‌ಗಳಂತಹ ವಿವಿಧ ದೇಶಗಳಿಂದ ‘ಐಸಿಸ್’ಗೆ ಆಗುತ್ತಿರುವ ವಿರೋಧ !

ಐಸಿಸ್‌ಗೆ ಖಂಡತುಂಡ ಉತ್ತರ ನೀಡುವ ಫ್ರಾನ್ಸ್
ನವೆಂಬರ್ ೧೩ ರಂದು ಐಸಿಸ್‌ನ ಉಗ್ರರು ಪ್ಯಾರೀಸ್‌ನ ಒಂದು ಮೈದಾನಕ್ಕೆ ಮುತ್ತಿಗೆ ಹಾಕಿದರು ಮತ್ತು ೧೨೯ ಅಮಾಯಕ ನಾಗರಿಕರನ್ನು ಹತ್ಯೆಗೈದರು. ೩೫೨ ಜನರು ಗಾಯಗೊಂಡರು. ಮುಂಬಯಿಯಲ್ಲಿ ೨೬/೧೧ ರಂದು ನಡೆದ ದಾಳಿಯಂತೆಯೇ ಈ ದಾಳಿಯಾಗಿತ್ತು. ಅದರ ಸೇಡು ತೀರಿಸಲು ಫ್ರಾನ್ಸ್ ಯಾರ ಅನುಮತಿಗಾಗಿ ದಾರಿ ಕಾಯಲಿಲ್ಲ. ಅದು ೨೨೩೫ ಮತಾಂಧರ ಮನೆಗಳ ಮೇಲೆ ದಾಳಿ ಮಾಡಿತು. ೨೩೨ ಜನರನ್ನು ಹಿಡಿದು ಅವರಿಂದ ೩೦೨ ಆಯುಧ ಮತ್ತು ೩೨ ಸ್ಫೋಟಕಗಳನ್ನು ವಶಪಡಿಸಿಕೊಂಡಿತು. ೧೬೦ ಅನಧಿಕೃತ ಮಸೀದಿಗಳಿಗೆ ಬೀಗ ಜಡಿಯಲು ಆದೇಶ ನೀಡಿತು. ಈ ಆಕ್ರಮಣಕ್ಕೆ ಒಂದು ತಿಂಗಳಾಗುವ ಮೊದಲೇ ಫ್ರಾನ್ಸ್ ಐಸಿಸ್‌ನ ಜಾರ್ಡನ್ ಮತ್ತು ಸಂಯುಕ್ತ ಅರಬ್ ಅಮಿರಾತ್ (ಯು.ಎ.ಇ) ಈ ದೇಶಗಳಲ್ಲಿನ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಸಿರಿಯಾದ ಐಸಿಸ್‌ನ ನೆಲೆಗಳ ಮೇಲೆಯೂ ಫ್ರಾನ್ಸ್ ಬಾಂಬ್ ದಾಳಿ ನಡೆಸಿತು. ಒಂದು ವಿಮಾನ ಸಾಗಾಟದ ಹಡಗನ್ನೇ ಅದು ಸಿರಿಯಾದ ಸಮೀಪ ಇಟ್ಟಿದೆ.
ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಿಂದ ಐಸಿಸ್‌ಗೆ ಆರ್ಥಿಕ ದಿಗ್ಬಂಧನದ ಠರಾವ್ !
‘ಐಸಿಸ್’ನ ಆರ್ಥಿಕ ಮೂಲವನ್ನು ತಡೆಗಟ್ಟಲು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ಸಭೆಯಲ್ಲಿ ನಿರ್ಧರಿಸಲಾಯಿತು. ಅದಕ್ಕಾಗಿ ಅವರು ‘ಐಸಿಸ್’ಗೆ ಯಾರೆಲ್ಲ ತೈಲ ಅಥವಾ ಬೆಲೆಬಾಳುವ ವಸ್ತುಗಳನ್ನು ಕಾಳಸಂತೆ ಮೂಲಕ ಒದಗಿಸುತ್ತಾರೆಯೋ, ಅದನ್ನು ತಡೆಗಟ್ಟಲು ಪ್ರಯತ್ನಿಸಲು ನಿರ್ಧರಿಸಿದರು. ಇದನ್ನು ಜಗತ್ತಿನಹೆಚ್ಚಿನ ರಾಷ್ಟ್ರಾಧ್ಯಕ್ಷರು ಒಮ್ಮುಖವಾಗಿ ಅನುಮೋದಿಸಿದ್ದಾರೆ.
ಅಮೇರಿಕಾದ ದಾಳಿಯಲ್ಲಿ ೧ ಸಾವಿರದ ೬೦೦ ಉಗ್ರರ ದಮನ
ಅಮೇರಿಕಾ ‘ಐಸಿಸ್’ಅನ್ನು ದಮನಿಸಲು ಕೃತಿಯನ್ನು ಆರಂಭಿಸಿದೆ. ಅಮೇರಿಕಾದ ೬೨ ಜನರನ್ನು ‘ಐಸಿಸ್’ನ ಉಗ್ರರು ಹತ್ಯೆಗೊಳಿಸಿದ್ದಾರೆ; ಆದ್ದರಿಂದ ಅಮೇರಿಕಾ ವಿವಿಧ ಸಮಯದಲ್ಲಿ ಆಗಾಗ ಆಕ್ರಮಣಗಳನ್ನು ಮಾಡಿ ಇಂದಿನವರೆಗೆ ‘ಐಸಿಸ್’ನ ೧ ಸಾವಿರದ ೬೦೦ ಉಗ್ರರನ್ನು ಹತ್ಯೆ ಮಾಡಿದೆ. ಅಮೇರಿಕಾ, ಇರಾಕ್ ಮತ್ತು ಸಿರಿಯಾಗೆ ‘ಐಸಿಸ್’ ವಿರುದ್ಧ ಪ್ರತಿದಿನ ೯೧ ಲಕ್ಷ ಡಾಲರ್ ಖರ್ಚು ಮಾಡಬೇಕಾಗುತ್ತಿದೆ. ಅಮೇರಿಕಾ ‘ಐಸಿಸ್’ ವಿರುದ್ಧ ಇಂದಿನವರೆಗೆ ೩ ಅಬ್ಜ ಡಾಲರ್‌ಗಳಷ್ಟು ಖರ್ಚು ಮಾಡಿದೆ; ಆದರೆ ‘ಐಸಿಸ್’ ಸಂಪೂರ್ಣ ಜಗತ್ತನ್ನೇ ಸುತ್ತುವರಿದಿರುವ ಪದ್ಧತಿಯನ್ನು ನೋಡಿದರೆ ಜಗತ್ತಿನಲ್ಲಿನ ಎಲ್ಲ ದೇಶಗಳು ತಮ್ಮ ಕ್ಷಮತೆಗನುಸಾರ ‘ಐಸಿಸ್’ಅನ್ನು ವಿರೋಧಿಸಬೇಕು.
ಸಿರಿಯಾಗೆ ಹೊರಟಿದ್ದ ಜಪಾನಿ ಪತ್ರಕರ್ತರನ್ನು ತಡೆದ ಐಸಿಸ್ !
ಇರಾಕ್ ಮತ್ತು ಸಿರಿಯಾದಲ್ಲಿನ ಯುದ್ಧ ವಾರ್ತೆಯನ್ನು ನೀಡುವ ಇಬ್ಬರು ಜಪಾನಿ ಪತ್ರಕರ್ತರನ್ನು ಐಸಿಸ್ ಹತ್ಯೆಮಾಡಿತು. ಅನಂತರ ಇನ್ನೊಬ್ಬ ಜಪಾನಿ ಪತ್ರಕರ್ತನು ಸಿರಿಯಾಗೆ ಹೋಗುತ್ತಿರುವಾಗ ಮಾತ್ರ ಸರಕಾರ ಅವನಿಗೆ ಹೋಗಲು ಬಿಡಲಿಲ್ಲ. ಈ ಕೃತಿ ಯನ್ನು ಅಲ್ಲಿನ ಶೇ. ೬೦ ರಷ್ಟು ಜನರು ಸಮರ್ಥಿಸಿದರು. ಇದರಿಂದ ಜಪಾನ್‌ನಂತಹ ಸಣ್ಣ ದೇಶದಲ್ಲಿ ತಮ್ಮ ಇಬ್ಬರು ಪತ್ರಕರ್ತರ ಬಗ್ಗೆ ಇರುವ ಜಾಗೃತಿಯು ಎದ್ದು ಕಾಣಿಸಿತು; ಅಷ್ಟು ಮಾತ್ರವಲ್ಲ, ಅಲ್ಲಿನ ಜನರು ಐಸಿಸ್‌ನ ಅಪಾಯವನ್ನು ಗುರುತಿಸಿದ್ದಾರೆ, ಎಂಬುದೂ ಸ್ಪಷ್ಟವಾಯಿತು. ಅದೇ ರೀತಿ ಫ್ರಾನ್ಸ್, ಇಸ್ರೈಲ್, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಇದರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಆರಂಭವಾಗಿದೆ.
ಕ್ರೈಸ್ತ ಮತ್ತು ಇಸ್ಲಾಮಿ ಧರ್ಮಗುರುಗಳಿಂದಲೂ ವಿರೋಧ !
ವ್ಯಾಟಿಕನ್‌ನ ಪ್ರಮುಖ ಪೋಪ್ ಫ್ರಾನ್ಸಿಸ್‌ರೊಂದಿಗೆ ಸೌದಿ ಅರಬ್‌ನಲ್ಲಿನ ಗ್ರಾಂಡ್ ಮುಫ್ತಿ, ಅನೇಕ ಸುನ್ನಿ ಇಮಾಮ್‌ಗಳು, ಇಸ್ಲಾಮೀ ವಿದ್ವಾಂಸರ ಅಂತರರಾಷ್ಟ್ರೀಯ ಸಂಘಟನೆಗಳು, ‘ಐಯುಎಮ್ಎಸ್’, ‘ಅಮೇರಿಕನ್ ಇಸ್ಲಾಮಿಕ್ ರಿಲೇಶನ್ಸ್ ಪರಿಷತ್ತು’ (ಸಿಐಆರ್), ಇಂಗ್ಲೆಂಡ್‌ನಲ್ಲಿನ ಪ್ರಮುಖ ಇಮಾಮ್, ಕತಾರ್‌ನ ಧರ್ಮಶಾಸ್ತ್ರಜ್ಞ ಇವರೂ ‘ಐಸಿಸ್’ನ ಕೃತ್ಯಗಳನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. ಅಂದರೆ ‘ಐಸಿಸ್’ ಜಗತ್ತಿನ ಮಾನವತಾವಾದದ ಮೇಲೆ ಆಘಾತವನ್ನು ಮಾಡುವ ಸಂಘಟನೆ ಆಗಿದೆಯೆಂದು ಇಡೀ ಜಗತ್ತು ಒಪ್ಪಿದೆ. ಆದ್ದರಿಂದ ಭಾರತೀಯರೂ ಅದರ ವಿರುದ್ಧ ಸಂಘಟಿತರಾಗುವುದು ಆವಶ್ಯಕವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫ್ರಾನ್ಸ್ ಅಮೇರಿಕಾ ಮತ್ತು ಜಪಾನ್‌ಗಳಂತಹ ವಿವಿಧ ದೇಶಗಳಿಂದ ‘ಐಸಿಸ್’ಗೆ ಆಗುತ್ತಿರುವ ವಿರೋಧ !