ಮಾಂಸ ನಿರ್ಮಿತಿಯ ದುಷ್ಪರಿಣಾಮ !

 ಮಾಂಸ ನಿರ್ಮಿತಿಗಾಗಿ ಅಧಿಕ ಪ್ರಮಾಣದಲ್ಲಿ ಬೇಕಾಗುವ ನೀರು : ಕೆಲವು ಉದಾಹರಣೆಗಳು
ನ್ಯಾಯವಾದಿ ಶ್ರೀ. ವೀರೆಂದ್ರ
ಇಚಲಕರಂಜೀಕರ
ಸ್ವಯಂ ವೇದ್ಯವಾಗಿರುವ ಈ ಅಂಕಿ-ಅಂಶವನ್ನು ಈ ಜಾಲತಾಣದಲ್ಲಿ ಪರಿಶೀಲಿಸಬಹುದು.
(http://www.theguardian.com/news/datablog/೨೦೧೩/jan/೧೦/how-much-water-food-production-waste)
ಕಡಿಮೆ ಬೆಲೆಯ ಮಾಂಸವೋ ? ದುಬಾರಿ ಮಾಂಸವೋ ?
ಪಶುಗಳ ಮಾಂಸದ ಬೆಲೆ ಅತಿ ಕಡಿಮೆಯಿದೆಯೆಂದು ವಾದಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಾದಿಗಳ ವಾದವು ಶುದ್ಧ ಸುಳ್ಳಾಗಿದ್ದು, ಮೋಸಗೊಳಿಸುವಂತಹದ್ದಾಗಿದೆ. ವಾಸ್ತವ ಸ್ಥಿತಿ ಏನು ?
ಎತ್ತು ಮತ್ತು ಕೋಣಗಳ ಮಾಂಸವನ್ನು ತಯಾರಿಸುವಾಗ ಅತೀ ಹೆಚ್ಚು ನೀರಿನ ಬಳಕೆಯಾಗುತ್ತದೆ. ಅಲ್ಲದೇ ಆ ಪಶುಗಳ ಆಹಾರವೂ ಪ್ರತ್ಯೇಕವಾಗಿದೆ ! ಅಮೇರಿಕಾದ ಒಂದು ಹಸು ಒಂದು ಕಿಲೋ ಪ್ರೊಟೀನ್‌ಗಾಗಿ ೭೫ ರಿಂದ ೩೦೦ ಕಿಲೋ ಮೇವು ಮತ್ತು ಆಹಾರ ಪದಾರ್ಥವನ್ನು ತಿನ್ನುತ್ತಿದ್ದರೆ, ಆಫ್ರಿಕಾದ ಗೋವಿಗೆ ೫೦೦ ಕಿಲೋಗಿಂತ ಅಧಿಕ ಆಹಾರ ಬೇಕಾಗುತ್ತದೆ.
ಪಶುಗಳಿಗೆ ಈ ರೀತಿ ಅಧಿಕ ಮೇವು ಬೇಕಾಗುವುದನ್ನು ಮನಗಂಡು ಪ್ರಾಯೋಗಿಕವಾಗಿ ಪಶುಗಳಿಗೆ ತಿನ್ನಲು ಮೇವಿನ ಬದಲಾಗಿ ಧಾನ್ಯವನ್ನು ನೀಡಿದರು. ಅದರ ಪರಿಣಾಮ ಚೆನ್ನಾಗಿತ್ತು. ಮೇವಿನ ಅವಶ್ಯಕತೆ ಬೀಳಲಿಲ್ಲ ಹಾಗೂ ಮಾಂಸದ ಗುಣ ಮಟ್ಟವೂ ಅದೇ ರೀತಿ ಇತ್ತು. ಇದರಿಂದ ಮಾಂಸ ತಯಾರಿಕಾ ಘಟಕದ ಮಾಲೀಕನು ಸಂತೋಷಪಟ್ಟನು. ಆದರೆ ಮಾಂಸವನ್ನು ತಯಾರಿಸಲು ತಗಲುವ ಧಾನ್ಯದ ಗತಿಯೇನು ? ಅಮೇರಿಕಾದ ಕರ್ನಲ್ ವಿದ್ಯಾಪೀಠ ನಡೆಸಿದ ಸಮೀಕ್ಷೆಯ ವರದಿಯನುಸಾರ ಜಗತ್ತಿನ ಶೇ. ೪೦ ರಷ್ಟು ಧಾನ್ಯವು ಇಂದು ಮಾಂಸ ನಿರ್ಮಿತಿಗಾಗಿ ಉಪಯೋಗಿಸಲಾಗುತ್ತಿದೆ. ಸಂಯುಕ್ತರಾಷ್ಟ್ರ ಸಂಘದ ಆಹಾರ ಮತ್ತು ಕೃಷಿ ಸಂಘಟನೆಯು ನಡೆಸಿದ ಸಮೀಕ್ಷೆಯ ಇತರೆ ಸಮೀಕ್ಷೆಗಳನ್ನು ಆಧರಿಸಿ ಇಂಗ್ಲೆಂಡಿನ ವರ್ಲ್ಡ್ ಪ್ರಿಸರ್ವೆಷನ್ ಫೌಂಡೇಶನ ಸಂಘಟನೆಯು ನೀಡಿರುವ ಮಾಹಿತಿಯು ಬಹಳ ಮಹತ್ವದ್ದಾಗಿದೆ.
ಈ ಮಾಹಿತಿಗನುಗುಣವಾಗಿ ಗೋಮಾಂಸವನ್ನು ತಿನ್ನುವುದಕ್ಕಿಂತ ಹಂದಿಯ ಮಾಂಸವನ್ನು ತಿನ್ನುವುದು ಆರೋಗ್ಯಕರವಾಗಿದೆಯೆಂದು ತಿಳಿಯುತ್ತದೆ. ಈಗ ಈ ವಿಷಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವಾದಿಗಳು ಪ್ರಚಾರ ಮಾಡಲಿದ್ದಾರೆಯೇ ? ಎನ್ನುವ ಪ್ರಶ್ನೆ ಗೋರಕ್ಷಕರು ಅವರಿಗೆ ಕೇಳಬೇಕು. ಮತಾಂಧ ಮುಸ್ಲಿಮರ ಪರ ವಹಿಸಿಕೊಂಡು ಮಾತನಾಡುವವರು ಈ ಕುರಿತು ಏನು ಹೇಳುತ್ತಾರೆ ? - ನ್ಯಾಯವಾದಿ ಶ್ರೀ. ವೀರೆಂದ್ರ ಇಚಲಕರಂಜೀಕರ, ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು, ಮುಂಬಯಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಾಂಸ ನಿರ್ಮಿತಿಯ ದುಷ್ಪರಿಣಾಮ !