ಪರಾತ್ಪರ ಗುರು ಡಾ. ಆಠವಲೆಯವರ ವಿವಿಧ ಕ್ಷೇತ್ರಗಳಲ್ಲಿನ ಸಂಶೋಧನಾ ಕಾರ್ಯ !

ತಮ್ಮ ದೇಹ ಹಾಗೂ ಬಳಕೆಯ ವಸ್ತುಗಳಲ್ಲಾದ ದೈವೀ ಬದಲಾವಣೆಯ ಕುರಿತು ಸಂಶೋಧನಾಕಾರ್ಯ
ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ದೇಹ, ಚರ್ಮ, ಕೂದಲು, ಉಗುರು ಹಾಗೂ ವಸ್ತುಗಳಲ್ಲಿ ಆಗುತ್ತಿರುವ ದೈವೀ ಬದಲಾವಣೆಯ ವಿಷಯದಲ್ಲಿ ನಿಯಮಿತವಾಗಿ ಛಾಯಾಚಿತ್ರಗಳನ್ನು ತೆಗೆದು ಹಾಗೂ ಲೇಖನ ಬರೆದು ಆ ಬದಲಾವಣೆಯ ವಿಷಯದಲ್ಲಿ ಶಾರೀರಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿದರು. ಈ ಸಂಶೋಧನೆಯ ಮೂಲಕ ಅವರು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತರ ವಿಷಯದಲ್ಲಿ ಆಗುವ ದೈವೀ ಬದಲಾವಣೆಗಳ ಶಾಸ್ತ್ರವನ್ನು ಕಂಡುಹಿಡಿದರು. (ಈ ವಿಷಯದ ಸಂಪೂರ್ಣ ಮಾಹಿತಿಯನ್ನು ಸನಾತನ-ನಿರ್ಮಿತ ‘ಪರಾತ್ಪರ ಗುರು ಡಾ. ಆಠವಲೆಯವರ ವಿಷಯದಲ್ಲಿನ ದೈವೀ ಬದಲಾವಣೆಯಲ್ಲಿನ ಅಧ್ಯಾತ್ಮ ಶಾಸ್ತ್ರ’ ಎಂಬ ಗ್ರಂಥಮಾಲಿಕೆಯಲ್ಲಿ ನೀಡಲಾಗಿದೆ.)

ತಮ್ಮ ಮಹಾಮೃತ್ಯುಯೋಗದ ಸಂಶೋಧನಾತ್ಮಕ  ಅಭ್ಯಾಸ
ಜ್ಯೋತಿಷ್ಯಾಸ್ತ್ರಕ್ಕನುಸಾರ ೧೯೯೮ ರಿಂದ ಇಂದಿನ ವರೆಗೆ ಪರಾತ್ಪರ ಗುರು ಡಾ. ಆಠವಲೆಯವರ ಜೀವನದಲ್ಲಿ ಅನೇಕ ಮಹಾಮೃತ್ಯು ಯೋಗಗಳು ಬಂದವು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರ ದೇಹಧಾರಿ ಅಸ್ತಿತ್ವ ಆವಶ್ಯಕವಿರುವುದರಿಂದ ಅವರ ಮಹಾಮೃತ್ಯು ಯೋಗವನ್ನು ತಡೆಯಲು ವಿವಿಧ ಸಂತರು ಮತ್ತು ಮಹರ್ಷಿಗಳು ತಾವಾಗಿ ಆಧ್ಯಾತ್ಮಿಕ ಸಹಾಯ ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಈ ಮಹಾ ಮೃತ್ಯುಯೋಗದ ಕಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ ಆಧುನಿಕ ವೈದ್ಯಕೀಯ ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ ಮುಂತಾದವುಗಳ ದೃಷ್ಟಿಯಿಂದ ತುಲನಾತ್ಮಕ ಅಧ್ಯಯನ ಮಾಡಿ ಅಧ್ಯಾತ್ಮ ಶಾಸ್ತ್ರದ ಶ್ರೇಷ್ಠತೆಯನ್ನು ತೋರಿಸಿಕೊಟ್ಟರು. (ಈ ವಿಷಯದ ಬಗ್ಗೆ ಗ್ರಂಥ ಮಾಲಿಕೆ ಶೀಘ್ರದಲ್ಲಿಯೇ ಪ್ರಕಾಶನವಾಗಲಿಕ್ಕಿದೆ.)
ತಾವು ವಾಸಿಸುತ್ತಿರುವ ವಾಸ್ತುವಿನಲ್ಲಿ ತನ್ನಷ್ಟಕ್ಕೆ ಆಗುತ್ತಿರುವ
ಬದಲಾವಣೆಯ ವಿಷಯದಲ್ಲಿ ಸಂಶೋಧನೆ
ಪರಾತ್ಪರ ಗುರು ಡಾ. ಆಠವಲೆಯವರ ನಿವಾಸ ಸ್ಥಾನವಾಗಿರುವ ವಾಸ್ತು, ಅಂದರೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮ ! ಈ ಆಶ್ರಮದಲ್ಲಾಗುವ ದೈವೀ ಬದಲಾವಣೆ (ಉದಾ. ಟೈಲ್ಸ್‌ಗಳ ಮೇಲೆ ಓಂ ಮೂಡುವುದು) ಹಾಗೂ ಕೆಟ್ಟ ಶಕ್ತಿಗಳ ಮುಖ ಮೂಡುವುದು, ಮುಂತಾದವುಗಳ ವೈಜ್ಞಾನಿಕ ಪದ್ಧತಿಯಿಂದ ಸಂಶೋಧನೆ ಮಾಡಲಾಗುತ್ತದೆ. ಸಂತರ ವಾಸ್ತುಗಳಲ್ಲಾಗುವ ಬದಲಾವಣೆಯ ಹಿಂದಿನ ಶಾಸ್ತ್ರವು ಸಮಾಜಕ್ಕೆ ತಿಳಿಯಬೇಕೆಂಬುದು ಪರಾತ್ಪರ ಗುರು ಡಾ. ಆಠವಲೆಯವರ ಈ ಸಂಶೋಧನೆಯ ಹಿಂದಿನ ಉದ್ದೇಶವಾಗಿದೆ.
ಪಂಚಮಹಾಭೂತಗಳಿಂದ ಘಟಿಸುವ ಬುದ್ಧಿಯ ಆಚೆಗಿನ ಘಟನೆಗಳ ಅಧ್ಯಯನ
ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆ
ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳಿಂದ ಘಟಿಸುವ ಬುದ್ಧಿಯ ಆಚೆಗಿನ ಘಟನೆಗಳು ಉದಾ. ಸಾಧಕರ ವಸ್ತುಗಳಿಗೆ ದೈವೀ ಸುಗಂಧ ಬರುವುದು, ಗಾಜಿನ ಬಾಟಲಿಯಲ್ಲಿ ತನ್ನಷ್ಟಕ್ಕೆ ಸುಗಂಧ ದ್ರವ್ಯ (ಅತ್ತರ್)  ನಿರ್ಮಾಣವಾಗುವುದು, ದೈವೀ ಕಣಗಳು ಕಾಣಿಸುವುದು, ದೇವತೆಗಳ ಮತ್ತು ಇತರ ಚಿತ್ರಗಳ ಬಣ್ಣ ಬದಲಾಗುವುದು, ವೈಶಿಷ್ಟ್ಯಪೂರ್ಣ ನಾದ ಕೇಳಿಸುವುದು, ವಾಸ್ತುವಿನಲ್ಲಿರುವ ಟೈಲ್ಸ್‌ಗಳು ಪಾರದರ್ಶಕವಾಗುವುದು ಇತ್ಯಾದಿ ವಿಷಯಗಳ ಬಗ್ಗೆ ವೈಜ್ಞಾನಿಕ ಪದ್ಧತಿಯಿಂದ ಸಂಶೋಧನೆ ಆಗಬೇಕೆಂದು, ಪರಾತ್ಪರ ಗುರು ಡಾ. ಆಠವಲೆಯವರು ಪ್ರಯತ್ನಿಸುತ್ತಿದ್ದಾರೆ.
ಅ. ವೈಜ್ಞಾನಿಕ ಉಪಕರಣಗಳ ಮೂಲಕ ನಡೆಯುತ್ತಿರುವ ಸಂಶೋಧನ ಕಾರ್ಯ : ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಹಿಂದೂ ಆಚಾರ, ಆಹಾರ, ವೇಶಭೂಷಣ, ಕೇಶರಚನೆ, ಧಾರ್ಮಿಕ ಕೃತಿ, ಯಜ, ನಾಮಜಪ, ಮುದ್ರೆ, ನ್ಯಾಸ, ಶ್ರೀಯಂತ್ರ ಇತ್ಯಾದಿಗಳಿಂದ ವಸ್ತು, ವಾಸ್ತು ಮತ್ತು ವಾತಾವರಣದ ಮೇಲಾಗುವ ಪರಿಣಾಮಗಳ ವಿಷಯದಲ್ಲಿ ವಿವಿಧ ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆ ನಡೆಯುತ್ತಿದೆ. ಇದರಲ್ಲಿ ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’, ‘ರೆಝೋನೆಂಟ್ ಫೀಲ್ಡ್ ಇಮೇಜಿಂಗ್’, ‘ಇಲೆಕ್ಟ್ರೋ-ಮ್ಯಾಗ್ನೆಟಿಕ್ ಫೀಲ್ಡ್’, ‘ಲೆಕರ್ ಅಂಟೆನಾ’, ‘ಕಿರ್ಲ್ಲಿಯನ್ ಫೊಟೋಗ್ರಾಫಿ’, ‘ಯುನಿವರ್ಸಲ್ ಥರ್ಮಲ್ ಸ್ಕ್ಯಾನರ್’, ‘ಥರ್ಮಲ್ ಇಮೇಜಿಂಗ್’, ‘ಪಿಪ್’ ಇತ್ಯಾದಿ ವೈಜ್ಞಾನಿಕ ಉಪಕರಣಗಳಿವೆ.
ಆಧ್ಯಾತ್ಮಿಕ ಸಂಗ್ರಹಾಲಯಕ್ಕಾಗಿ ಆಧ್ಯಾತ್ಮಿಕ ಮೌಲ್ಯವಿರುವ
ವಸ್ತುಗಳ ಸಂಗ್ರಹ ಕಾರ್ಯ
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ಈ ಸಂಗ್ರಹಾಲಯಕ್ಕಾಗಿ ಭಾರತದಲ್ಲಿನ ತೀರ್ಥಕ್ಷೇತ್ರಗಳು, ದೇವಸ್ಥಾನಗಳು, ಸಂತರ ಮಠ, ಸಂತರ ಸಮಾಧಿಸ್ಥಳ, ಐತಿಹಾಸಿಕ ಸ್ಥಳಗಳು ಇತ್ಯಾದಿ ಸ್ಥಳಗಳಲ್ಲಿ ಅಧ್ಯಾತ್ಮಶಾಸ್ತ್ರದ ದೃಷ್ಟಿಯಲ್ಲಿ ವೈಶಿಷ್ಟ್ಯಪೂರ್ಣ ಮಣ್ಣು, ನೀರು ಇತ್ಯಾದಿ ಹಾಗೂ ಪಂಚಮಹಾಭೂತಗಳ ಪರಿಣಾಮವನ್ನು ತೋರಿಸುವ ಸಾವಿರಾರು ವಸ್ತುಗಳು, ಛಾಯಾಚಿತ್ರಗಳು ಮತ್ತು ೧೬ ಸಾವಿರಕ್ಕಿಂತಲೂ ಹೆಚ್ಚು ಧ್ವನಿಚಿತ್ರಮುದ್ರಿಕೆಗಳನ್ನು ಇಂದಿನ ವರೆಗೆ ಸಂಗ್ರಹ ಮಾಡಲಾಗಿದೆ. ಇಂತಹ ಅನೇಕ ವಿಧಗಳ ಆಧ್ಯಾತ್ಮಿಕ ಮೌಲ್ಯವಿರುವ ವಸ್ತುಗಳನ್ನು ಸಂಗ್ರಹ ಮಾಡಿ ಪರಾತ್ಪರಗುರು ಡಾ. ಆಠವಲೆಯವರು ಅಧ್ಯಾತ್ಮವಿಶ್ವದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆಯುತ್ತಿದ್ದಾರೆ.
ಪ್ರಾಣಿ ಮತ್ತು ವನಸ್ಪತಿಗಳ
ಸಾತ್ತ್ವಿಕತೆಯ ದೃಷ್ಟಿಯಲ್ಲಿ ಅಧ್ಯಯನ
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಪಾತರಗಿತ್ತಿಗಳು, ಹುಂಜ, ಗಿಳಿ, ಹಸು, ಕುದುರೆ ಮುಂತಾದವುಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆ ಮಾಡಲಾಗಿದೆ. ಅದೇ ರೀತಿ ತುಳಸಿ, ಕುರುಕ್ಷೇತ್ರದಲ್ಲಿನ ಅಕ್ಷಯವಟ, ಶುಕತಾಲದಲ್ಲಿನ ವಟವೃಕ, ಬಾಲಕಾತೀರ್ಥದಲ್ಲಿನ ಅರಳೀಮರ, ದೇಹೂವಿನ ನಾಂದೂರ್ಕೀ ವೃಕ್ಷ ಮುಂತಾದ ವೃಕ್ಷಗಳ ಸಾತ್ತ್ವಿಕತೆಯ ದೃಷ್ಟಿಯಲ್ಲಿ ಅಧ್ಯಯನ ಮಾಡಲಾಗಿದೆ.
ದೈವೀ (ಸಾತ್ತ್ವಿಕ) ಬಾಲಕರನ್ನು ಗುರುತಿಸುವುದು ಹಾಗೂ
ಅವರಿಗೆ ಸಂಬಂಧಿಸಿದ  ಸಂಶೋಧನೆ
ಸಾತ್ತ್ವಿಕತೆ, ಸಾಧನೆ, ದೇವತೆಗಳು ಮುಂತಾದ ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಇರುವ ಬಾಲಕರ ದೈವೀ ಗುಣಗಳನ್ನು ನೋಡಿ ಅವರು ಸ್ವರ್ಗ, ಮಹರ್, ಜನ ಮುಂತಾದ ಉಚ್ಚ ಲೋಕಗಳಿಂದ ಪೃಥ್ವಿಯ ಮೇಲೆ ಜನಿಸಿರುವರು ಎಂದು ಮೊಟ್ಟಮೊದಲು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದರು. ಅವರು ಇಂತಹ ಬಾಲಕರ ಆ ವಯಸ್ಸಿನ ಆಧ್ಯಾತ್ಮಿಕ ಮಟ್ಟ, ಅಸಾಮಾನ್ಯ ವಿಚಾರ ಮತ್ತು ಆಚರಣೆ ಇತ್ಯಾದಿಗಳು ಎಲ್ಲರಿಗೂ ತಿಳಿಯಬೇಕೆಂದು ಅವರ ವಿಷಯದ ಧ್ವನಿಚಿತ್ರ-ಮುದ್ರಿಕೆ (ಡಿವಿಡಿ)ಯನ್ನು ಪ್ರಕಾಶನಗೊಳಿಸಿದರು. ಸದ್ಯ ಬಾಲಕರ ಗುಣವೈಶಿಷ್ಟ್ಯದಿಂದ ಅವರು ಯಾವ ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ್ದಾರೆ, ಯೋಗ್ಯವಾದ ಮಾರ್ಗದರ್ಶನ  ಲಭಿಸಿದರೆ ಅವರು ಎಷ್ಟನೇ ವಯಸ್ಸಿನಲ್ಲಿ ಸಂತರಾಗಬಹುದು ? ಮುಂತಾದ ವಿಷಯದಲ್ಲಿ ಸಂಶೋಧನೆ ನಡೆಯುತ್ತಿದೆ. ಪರಾತ್ಪರಗುರು ಡಾ. ಆಠವಲೆಯವರು ಇಂತಹ ಬಾಲಸಾಧಕರ ಮೂಲಕ ‘ಹಿಂದೂ ರಾಷ್ಟ್ರ’ವನ್ನು ನಡೆಸುವ ಭಾವೀ ಪೀಳಿಗೆಯನ್ನು ಸಿದ್ಧಪಡಿಸುತ್ತಿದ್ದಾರೆ.
ಜ್ಯೋತಿಷ್ಯಾಸ್ತ್ರ ಮತ್ತು ನಾಡಿ ಜ್ಯೋತಿಷ್ಯದ ಮೂಲಕ ಸಂಶೋಧನಕಾರ್ಯ
ಅ. ಜ್ಯೋತಿಷ್ಯಾಸ್ತ್ರದ ಮೂಲಕ ಸಂಶೋಧನೆ : ದೈವೀ ಬಾಲಕರ, ಸನಾತನದ ಸಂತರ, ಆಧ್ಯಾತ್ಮಿಕ ತೊಂದರೆ ಇರುವವರು ಮುಂತಾದವರ ಜಾತಕವನ್ನು ಅಧ್ಯಯನ ಮಾಡಿ ಅವರ ಜೀವನದಲ್ಲಿನ ವಿಶೇಷ ಯೋಗವನ್ನು ಅಧ್ಯಯನ ಮಾಡುವುದು, ದೇಶದಾದ್ಯಂತ ಘಟಿಸುವ ವಿವಿಧ ಆಧ್ಯಾತ್ಮಿಕ ಘಟನೆಗಳ ಜ್ಯೋತಿಷ್ಯ ಶಾಸ್ತ್ರೀಯ ವಿಚಾರಮಂಥನ ಮಾಡುವುದು ಮುಂತಾದ ಸಂಶೋಧನಕಾರ್ಯವು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
ಆ. ಹಸ್ತಸಾಮುದ್ರಿಕ ಮತ್ತು ಪಾದಸಾಮುದ್ರಿಕ ಶಾಸ್ತ್ರದ ಮೂಲಕ ಸಂಶೋಧನೆ : ‘ಮನುಷ್ಯನ ಶರೀರದಲ್ಲಿ ವಿಭಿನ್ನ ಲಕ್ಷಣಗಳನ್ನು ನೋಡಿ ಅವನ ಸ್ವಭಾವ, ಗುಣದೋಷ, ಭೂತಕಾಲ ಮತ್ತು ಭವಿಷ್ಯತ್ಕಾಲದ ವಿಷಯಗಳನ್ನು ಕಂಡುಹಿಡಿಯುವ ‘ಸಾಮುದ್ರಿಕ’ ವಿದ್ಯೆಯು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ  ಪ್ರಚಲಿತವಿದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೈಗಳ ಹಾಗೂ ಪಾದಸಾಮುದ್ರಿಕ ಶಾಸ್ತ್ರದಲ್ಲಿ ಕಾಲುಗಳ ಪಾದಗಳಲ್ಲಿನ ರೇಖೆ, ಉಬ್ಬು-ತಗ್ಗು ಮತ್ತು ಇತರ ಚಿಹ್ನೆಗಳನ್ನು ಅಧ್ಯಯನ ಮಾಡುತ್ತಾರೆ. ಈ ಶಾಸ್ತ್ರದ ಮೂಲಕ ಆಧ್ಯಾತ್ಮಿಕ ಸಂಶೋಧನೆ ಮಾಡುವ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಯುತ್ತಿದೆ.
ಇ. ನಾಡಿಜ್ಯೋತಿಷ್ಯಾಸ್ತ್ರ ಮೂಲಕ ಸಂಶೋಧನೆ : ಪ್ರಾಚೀನ ಕಾಲದಲ್ಲಿ ವಿವಿಧ ಋಷಿಮುನಿಗಳು ನಾಡಿಪಟ್ಟಿಗಳಲ್ಲಿ ಬರೆದಿಟ್ಟಿರುವ ಭವಿಷ್ಯಕ್ಕನುಸಾರ ಮಾನವನ ಜೀವನದಲ್ಲಿ ಸಂಭವಿಸುವ ಘಟನೆಗಳ ಅಧ್ಯಯನ, ಎರಡು ಬೇರೆ ಬೇರೆ ನಾಡಿಪಟ್ಟಿಗಳಲ್ಲಿ ಮಹರ್ಷಿಗಳು ಒಂದೇ ವ್ಯಕ್ತಿಯ ವಿಷಯದಲ್ಲಿ ಬರೆದಿರುವ ಭವಿಷ್ಯದ ತುಲನಾತ್ಮಕ ಅಧ್ಯಯನ, ಜೀವನದಲ್ಲಿ ಸಂಭವಿಸಬಹುದಾದ ಅಪ್ರಿಯ ಘಟನೆಗಳನ್ನು ತಡೆಯಲು ಸಾಧ್ಯವಾಗಬೇಕೆಂದು ನಾಡಿ ಭವಿಷ್ಯದಲ್ಲಿ ಹೇಳಿದ ಉಪಾಯಗಳಿಂದ ಆಗುವ ಲಾಭ ಇತ್ಯಾದಿ ವಿಷಯದಲ್ಲಿ ಸಂಶೋಧನೆ ಮಾಡುವ ಸಲುವಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ೪-೫ ಸಾಧಕರ ಒಂದು ತಂಡವು ಭಾರತದಾದ್ಯಂತ ಸಂಚರಿಸುತ್ತಿದೆ.
ಸೂಕ್ಷ್ಮ ಜ್ಞಾನಕ್ಕೆ  ಸಂಬಂಧಿಸಿದ ಕಾರ್ಯ
ಪರಾತ್ಪರ ಗುರು ಡಾ. ಆಠವಲೆಯವರು ೧೯೮೨ ರಿಂದ ಸೂಕ್ಷ್ಮ ಜ್ಞಾನದ (ಟಿಪ್ಪಣಿ) ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ೧೯೮೨ ರಿಂದ, ಅಂದರೆ ಸಾಧನೆಗೆ ಬರುವ ಮೊದಲಿನಿಂದಲೇ ಅವರಿಗೆ ಸೂಕ್ಷ್ಮದ ವಿಷಯಗಳು ತಿಳಿಯಲು ಆರಂಭವಾಗಿದೆ. ಮೊದಲು ಯಾವುದೇ ಒಂದು ಪ್ರಸಂಗದ ಅಥವಾ ಪ್ರಕ್ರಿಯೆಯ ವಿಷಯದಲ್ಲಿ ‘ಹೌದು’ ಅಥವಾ ‘ಇಲ್ಲ’, ಹೀಗೆ ಸೂಕ್ಷ್ಮದಲ್ಲಿ ಉತ್ತರ ತಿಳಿಯುತ್ತಿತ್ತು. ಸಾಧನೆಗೆ ಬಂದನಂತರ ಅವರಿಗೆ ಉತ್ತರಗಳ ಕಾರ್ಯಕಾರಣಭಾವ ತಿಳಿಯಲು ಆರಂಭವಾಯಿತು.  ಅವರು ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳಿಗೆ ಸಂಬಂಧಿಸಿ ಪೃಥ್ವಿಯ ಮೇಲೆ ಲಭಿಸದಿರುವ ನಾವಿನ್ಯಪೂರ್ಣ ಜ್ಞಾನವನ್ನು ಧ್ಯಾನದಿಂದ (ಸೂಕ್ಷ್ಮದಿಂದ) ಪಡೆದಿದ್ದಾರೆ ಹಾಗೂ ಈ ಜ್ಞಾನವು ಸನಾತನದ ಗ್ರಂಥಗಳಲ್ಲಿ ಪ್ರಕಟಿಸಲಾಗಿದೆ. ಅವರು ಸ್ವತಃ ಸೂಕ್ಷ್ಮಜ್ಞಾನೇಂದ್ರಿಯಗಳು ಕಾರ್ಯನಿರತವಾಗಿರುವ ಸಾಧಕರಿಗೆ ಸೂಕ್ಷ್ಮದಲ್ಲಿನ ಜ್ಞಾನವನ್ನು ಗ್ರಹಣ ಮಾಡುವುದು, ಸೂಕ್ಷ್ಮ-ಪರೀಕ್ಷಣೆ ಮಾಡುವುದು, ‘ಸೂಕ್ಷ್ಮ-ಚಿತ್ರ’ಗಳನ್ನು ಬಿಡಿಸುವುದು ಇತ್ಯಾದಿ ಕೃತಿಗಳನ್ನು ಕಲಿಸಿದರು. ಆದ್ದರಿಂದ ಇಂದು ಸನಾತನದ ಅನೇಕ ಸಾಧಕರಿಗೆ ಸೂಕ್ಷ್ಮದ ವಿಷಯಗಳು ತಿಳಿಯುತ್ತವೆ.
(ಟಿಪ್ಪಣಿ - ಸೂಕ್ಷ್ಮ ಜ್ಞಾನ : ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನು ಉಪಯೋಗಿಸದೆ ಪಡೆಯುವ ಜ್ಞಾನ)
ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯ ಮಾಡುವ ಉಪಾಯಪದ್ಧತಿಯ ವಿಷಯದಲ್ಲಿ  ಸಂಶೋಧನೆ
ಮನುಷ್ಯನ ಅನೇಕ ಸಮಸ್ಯೆಗಳ ಮೂಲಭೂತ ಕಾರಣ ‘ಕೆಟ್ಟ ಶಕ್ತಿಗಳ ತೊಂದರೆ’ಯೇ ಇರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಕೆಟ್ಟ ಶಕ್ತಿಗಳಿಗೆ ಸಂಬಂಧಿಸಿ ‘ನ ಭೂತೋ ನ ಭವಿಷ್ಯತಿ’ ಎಂಬ ಸಂಶೋಧನೆ ಮಾಡಿದ್ದು ಆಧ್ಯಾತ್ಮಿಕ ಕಾರಣಗಳಿಂದಾಗುವ ತೊಂದರೆಗಳಿಗೆ ಪೃಥ್ವಿಯ ಮೇಲಿಲ್ಲದ ಆಧ್ಯಾತ್ಮಿಕ ಉಪಾಯಗಳನ್ನು ಕಂಡುಹಿಡಿದಿದ್ದಾರೆ.
(ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಸಂಪೂರ್ಣ ಮಾಹಿತಿ ಸನಾತನ-ನಿರ್ಮಿತ ‘ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಾಯ’ ಈ ಗ್ರಂಥ ಮಾಲಿಕೆಯಲ್ಲಿ ನೀಡಲಾಗಿದೆ.
ವಿವಿಧ ತೊಂದರೆಗಳ ಉಪಾಯಪದ್ಧತಿಯ
ವಿಷಯದಲ್ಲಿ ಸಂಶೋಧನೆ
ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಪೆಟ್ಟಿಗೆಗಳ ಉಪಾಯ, ಸ್ಪರ್ಷ ರಹಿತ ಬಿಂದುಒತ್ತಡ ಹಾಗೂ ಪ್ರಾಣಶಕ್ತಿ (ಚೇತನಾ) ವಹನದಲ್ಲಿನ ಅಡಚಣೆಯಿಂದ ನಿರ್ಮಾಣವಾಗುವ ಕಾಯಿಲೆಗಳಿಗೆ ಉಪಾಯ ಇತ್ಯಾದಿ ಅನೇಕ ನಾವಿನ್ಯಪೂರ್ಣ ಆಧ್ಯಾತ್ಮಿಕ ಉಪಚಾರ ಪದ್ಧತಿಗಳ ಸಂಶೋಧನೆ ಮಾಡಿದರು.
(ಈ ಕುರಿತು ಸವಿಸ್ತಾರ ಮಾಹಿತಿಯನ್ನು ಸನಾತನದ ‘ಖಾಲಿ ಪೆಟ್ಟಿಗೆಗಳ ಉಪಾಯ’, ‘ಬಿಂದುಒತ್ತಡ’ (ಭಾಗ ೨), ಹಾಗೂ ಪ್ರಾಣಶಕ್ತಿ (ಚೇತನಾ) ವಹನದಲ್ಲಿ ಅಡಚಣೆಗಳಿದಾಗಿ ಉದ್ಭವಿಸುವ ಕಾಯಿಲೆಗಳಿಗೆ ಉಪಾಯ’ ಈ ಗ್ರಂಥಗಳಲ್ಲಿ ನೀಡಲಾಗಿದೆ.)

ತಜ್ಞರು, ಅಧ್ಯಯನ ಮಾಡುವವರು ಮತ್ತು ಶಿಕ್ಷಣ ಪಡೆಯುತ್ತಿರುವ
ವಿದ್ಯಾರ್ಥಿಗಳು ಹಾಗೂ ವೈಜ್ಞಾನಿಕ ಸಂಶೋಧನೆ ಮಾಡುವವರಿಗೆ ವಿನಂತಿ !
ಪರಾತ್ಪರ ಗುರು ಡಾ. ಆಠವಲೆಯವರ ನಿವಾಸಸ್ಥಾನವಾಗಿರುವ ವಾಸ್ತು, ಅಂದರೆ ರಾಮನಾಥಿ, ಗೋವಾದಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ಆಗುವ ದೈವಿ ಬದಲಾವಣೆ (ಉದಾ. ಟೈಲ್ಸ್ ಮೇಲೆ ‘ಓಂ’ ಮೂಡುವುದು) ಹಾಗೂ ಕೆಟ್ಟ ಶಕ್ತಿ ಮುಖದ ಆಕಾರ ಮೂಡುವುದು ಇವುಗಳ ಬಗ್ಗೆ ವೈಜ್ಞಾನಿಕ ಪದ್ಧತಿಯಿಂದ ಸಂಶೋಧನೆ ಮಾಡಲಾಗುತ್ತಿದೆ. ಸಂತರ ವಾಸ್ತುವಿನಲ್ಲಿ ಆಗುವ ಬದಲಾವಣೆಯ ಹಿಂದೆ ಯಾವ ವೈಜ್ಞಾನಿಕ ಪ್ರಕ್ರಿಯೆ ಆಗುತ್ತದೆ, ಈ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ಲಭಿಸಿದರೆ ನಾವು ಕೃತಜ್ಞರಾಗಿರುವೆವು. - ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ, ಗೋವಾ.
(ಸಂಪರ್ಕ : ಶ್ರೀ. ರೂಪೇಶ ರೇಡಕರ್, ವಿ-ಅಂಚೆ : savv.research@gmail.com)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ವಿವಿಧ ಕ್ಷೇತ್ರಗಳಲ್ಲಿನ ಸಂಶೋಧನಾ ಕಾರ್ಯ !