ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಮಧ್ಯಪ್ರವೇಶಿಸುವಂತೆ ಅವರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿ !

ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಹಿಂದೂಗಳ
ಸುರಕ್ಷತೆಗೆ ಕೋರಿರುವ ಮನವಿಯನ್ನು ಒಪ್ಪುವುದು ಬಹುಸಂಖ್ಯಾತ ಹಿಂದೂಗಳಿರುವ
ಭಾರತ ಸರಕಾರದ ನೈತಿಕ ಕರ್ತವ್ಯವೇ ಆಗಿದೆ. ಇದಕ್ಕಾಗಿ ಮೊದಲು ಭಾರತದಲ್ಲಿರುವ
ಹಿಂದೂಗಳು ಸಹ ಸುರಕ್ಷಿತರಾಗಿದ್ದಾರೆಯೇ ಎಂದು ಸರಕಾರ ಖಚಿತ ಪಡಿಸಿಕೊಳ್ಳಬೇಕು ! 
ಕೋಲಕಾತಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿಯ ಹಿಂದೂಗಳು ಬಹುಸಂಖ್ಯಾತ ಹಿಂದೂಗಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಅವರ ಸುರಕ್ಷತೆಯ ವಿಷಯವಾಗಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
೧. ಬಾಂಗ್ಲಾದೇಶ ಹಿಂದೂ ಬುದ್ಧಿಸ್ಟ ಕ್ರಿಶ್ಚಿಯನ ಯುನಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮತ್ತು ಮಾನವಾಧಿಕಾರ ಕಾರ್ಯಕರ್ತರಾದ ರಾಣಾ ದಾಸಗುಪ್ತಾ ಇವರು ಮಾತನಾಡುತ್ತಾ, ಬಾಂಗ್ಲಾದೇಶದಲ್ಲಿ ಧರ್ಮಾಂಧ ಮತ್ತು ಜಮಾತ ಸಂಘಟನೆಗಳು ಹಿಂದೂಗಳ ವಂಶಸಂಹಾರವನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿವೆ. ಹಿಂದೂ ಬಹುಸಂಖ್ಯಾತರಾಗಿರುವುದರಿಂದ ಭಾರತವು ಈ ವಿಷಯದಲ್ಲಿ ಏನಾದರೂ ಮಾಡಬೇಕು ಎಂದು ನಮಗನಿಸುತ್ತದೆ. ನಾವು ಪ್ರಧಾನಿ ಮೋದಿಯವರಿಂದ ಅಪೇಕ್ಷಿಸುತ್ತಿದ್ದೇವೆ. ಅವರು ಹೆಜ್ಜೆ ಇಡಬೇಕು ಮತ್ತು ಬಾಂಗ್ಲಾದೇಶದ ಸರಕಾರದ ಮುಂದೆ ಈ ಅಂಶಗಳನ್ನು ಎತ್ತಿ ಹಿಡಿಯಬೇಕು. ಹಾಗೆಯೇ ಹಿಂದೂಗಳ ಸುರಕ್ಷತೆ ಗಾಗಿ ಭರವಸೆ ನೀಡಬೇಕು. ಭಾರತೀಯ ಉಪ ಮಹಾದ್ವೀಪದಲ್ಲಿ ಶಾಂತಿ ಸ್ಥಾಪನೆಯಾಗಬೇಕಾಗಿದ್ದಲ್ಲಿ ಹಿಂದೂಗಳನ್ನು ರಕ್ಷಿಸುವುದು ಪ್ರಸ್ತುತ ಆವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಬಾಂಗ್ಲಾದೇಶವು ಕಟ್ಟರ್‌ವಾದಿಗಳ ದೇಶವಾಗುವುದು.
೨. ಬಾಂಗ್ಲಾದೇಶದ ಖ್ಯಾತ ನಟ ಮತ್ತು ಬಾಂಗ್ಲಾ ದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಮಾಜಿ ಸಂಚಾಲಕರಾದ ಪೀಯೂಷ ಬಂಡೋಪಾಧ್ಯಾಯ ಇವರು ಎಲ್ಲಿಯವರೆಗೆ ಭಾರತ ಬಾಂಗ್ಲಾದೇಶದ ಮೇಲೆ ಒತ್ತಡವನ್ನು ತರುವುದಿಲ್ಲವೋ ಅಲ್ಲಿಯವರೆಗೆ ಧರ್ಮಾಂಧರ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.
ಭಾರತವು ಈ ಕ್ಷೇತ್ರದಲ್ಲಿ ಬಲಾಢ್ಯ ದೇಶವಾಗಿದ್ದು, ಪಕ್ಕದ ದೇಶದಲ್ಲಿ ಹಿಂದೂಗಳ ಮೇಲೆ ಅನ್ಯಾಯ ವಾಗುತ್ತಿರುವಾಗ ಭಾರತವು ಮೂಕವಾಗಿ ನೋಡುತ್ತಿರುವುದು ಸರಿಯಲ್ಲವೆಂದು ನುಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಮಧ್ಯಪ್ರವೇಶಿಸುವಂತೆ ಅವರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿ !