ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯಿಂದ ಸಾಧನೆಯ ಆವಶ್ಯಕತೆ

. ಧರ್ಮಸಂಸ್ಥಾಪನೆಯ ಕಾರ್ಯ ಯಶಸ್ವಿಯಾಗಲು ಶಾರೀರಿಕ ಮತ್ತು ಮಾನಸಿಕ ಸಿದ್ಧತೆಯೊಂದಿಗೆ ಸಾಧನೆಯ ಬಲವಿರುವುದೂ ಆವಶ್ಯಕ ! : ಸಾಧನೆಯ ಬಲ ಮತ್ತು ಸಮರ್ಥ ರಾಮದಾಸಸ್ವಾಮಿಗಳ ಮಾರ್ಗದರ್ಶನವಿದ್ದುದರಿಂದಲೇ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಸ್ವಾತಂತ್ರ್ಯ ಸಿಗುವ ಮುನ್ನ ಹೆಚ್ಚಿನ ಕ್ರಾಂತಿಕಾರರಲ್ಲಿ ಪ್ರಖರ ರಾಷ್ಟ್ರಾಭಿಮಾನವಿದ್ದರೂ ಸಾಧನೆಯ ಬಲ ಇಲ್ಲದಿರುವುದರಿಂದ ಅವರ ಕ್ರಾಂತಿ ಯಶಸ್ವಿಯಾಗದೇ ಅವರು ಅನಾವಶ್ಯಕವಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.
ರಾಷ್ಟ್ರಗುರು ಸಮರ್ಥ ರಾಮದಾಸಸ್ವಾಮಿಗಳು ‘ದಾಸಬೋಧ ಗ್ರಂಥ’ದಲ್ಲಿ ಮುಂದಿನಂತೆ ಬರೆದಿದ್ದಾರೆ, ಚಳುವಳಿ ಮಾಡುವುದು ನಮ್ಮ ಕೈಯಲ್ಲಿದೆ; ಆದರೆ ಕಾರ್ಯಕ್ಕೆ ತಕ್ಕ ನಿಯೋಜನೆಯಾಗಿ ಕಾರ್ಯ ಯಶಸ್ವಿ ಯಾಗಲು ಭಗವಂತನ ಅಧಿಷ್ಠಾನ ಮತ್ತು ಸಾಧನೆ ಆವಶ್ಯಕವಾಗಿದೆ. - ದಾಸಬೋಧ, ದಶಕ ೨೦, ಸಮಾಸ ೪, ದ್ವಿಪದಿ ೨೬
. ಈಶ್ವರ ಭಕ್ತನಿಗೆ ಸಹಾಯ ಮಾಡುತ್ತಾನೆ, ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಧನೆಯನ್ನು ಮಾಡಿರಿ ! : ದುಷ್ಟರಿಂದ ಭಕ್ತರಿಗೆ ತೊಂದರೆ ಯಾದರೆ ಮಾತ್ರ, ಈಶ್ವರ ಅವತಾರ ತಾಳುತ್ತಾನೆ. ಆದ್ದರಿಂದ ನಾವು ಸಾಧನೆ ಮಾಡಿ ಈಶ್ವರನ ಭಕ್ತರಾದರೆ ಮಾತ್ರ ನಮಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಈಶ್ವರನ ಬೆಂಬಲ ಸಿಗುವುದು.
. ‘ಸಾಧನೆಯನ್ನು ಮಾಡದೇ ಹಿಂದೂ ರಾಷ್ಟ್ರ ಬರುವುದು’, ಎಂದು ತಿಳಿಯಬೇಡಿ ! : ಪರಾಕ್ರಮಿಗಳಾದ ಪಾಂಡವರಿಗೂ ಕೌರವರ ವಿರುದ್ಧದ ಯುದ್ಧದಲ್ಲಿ ಶ್ರೀಕೃಷ್ಣನ ಸಹಾಯ ಪಡೆಯಬೇಕಾಯಿತು, ಹೀಗಿರುವಾಗ ಶ್ರೀಕೃಷ್ಣ ಮತ್ತು ಸಾಧನೆಯಿಲ್ಲದೇ ನಾವು ಹಿಂದೂ ರಾಷ್ಟ್ರ ವನ್ನು ಸ್ಥಾಪಿಸಬಲ್ಲೆವು ಎಂದು ಹೇಳುವುದು ಎಷ್ಟು
ಹಾಸ್ಯಾಸ್ಪದವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.
. ಶ್ರೀಕೃಷ್ಣನ ಆಶೀರ್ವಾದದಿಂದ ಪಾಂಡವರಂತೆ ನಾವೂ ವಿಜಯವನ್ನು ಸಾಧಿಸೋಣ ! : ಇಂದು ಭ್ರಷ್ಟಾಚಾರಿಗಳು, ಉಗ್ರವಾದಿಗಳು ಮತ್ತು ಹಿಂದೂ ದ್ವೇಷಿಗಳ ತುಲನೆಯಲ್ಲಿ ಸಾಧನೆ ಮಾಡುವ ಧರ್ಮ ಪ್ರೇಮಿಗಳು ಅತ್ಯಲ್ಪ ಪ್ರಮಾಣದಲ್ಲಿದ್ದರೂ, ಕೌರವರ ತುಲನೆಯಲ್ಲಿ ಸಂಖ್ಯೆಯಲ್ಲಿ ಕಡಿಮೆಯಿದ್ದ  ಪಾಂಡವರಂತೆ, ಶ್ರೀಕೃಷ್ಣನ ಆಶೀರ್ವಾದದಿಂದ ಅವರು ಹಿಂದೂ ರಾಷ್ಟ್ರ ಸ್ಥಾಪಿಸುವರು, ಇದರ ಬಗ್ಗೆ ಚಿಂತೆ ಬೇಡ !
೫ ಆ. ರಜ-ತಮಪ್ರಧಾನ ಉಗ್ರರ ವಿರುದ್ಧ, ಹಾಗೆಯೇ ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿಗಳ ವಿರುದ್ಧ ಜಯ ಸಾಧಿಸಲು ಹಿಂದುತ್ವವಾದಿಗಳು ರಜ-ತಮ ಪ್ರಧಾನಯುಕ್ತರಲ್ಲ, ಸಾಧನೆ ಮಾಡಿ ರಜ-ಸತ್ತ್ವ ಅಥವಾ ಸತ್ತ್ವ-ರಜ ಯುಕ್ತರಾಗುವುದು ಆವಶ್ಯಕವಾಗಿದೆ ! : ಓರ್ವ ಹಿಂದುತ್ವವಾದಿಗಳು ಮುಂದಿನ ಪ್ರಶ್ನೆಯನ್ನು ಕೇಳಿದ್ದರು - ಉಗ್ರರೊಂದಿಗೆ ಹೋರಾಡಲು ನಾವೂ ರಜ ತಮಪ್ರಧಾನರಾಗಿರ ಬೇಕಾಗುತ್ತದೆ. ನಾವು ಸಾಧನೆ ಮಾಡಿ ಸಾತ್ತ್ವಿಕರಾದರೆ ಹಿಂದೂದ್ವೇಷಿಗಳ ವಿರುದ್ಧ ಪ್ರತೀಕಾರ ಮಾಡುವುದು ಹೇಗೆ ? ಯುದ್ಧಶಾಸ್ತ್ರಕ್ಕನುಸಾರ ಶತ್ರುವಿಗಿಂತ ಗುಣ, ಪರಾಕ್ರಮ ಮತ್ತು ಶಸ್ತ್ರಸಂಗ್ರಹ ಹೆಚ್ಚಿದ್ದವರು ಜಯ ಸಾಧಿಸುತ್ತಾರೆ. ರಜ-ತಮಪ್ರಧಾನ ಹಿಂದೂದ್ವೇಷಿಗಳೊಂದಿಗೆ ಸಂಘರ್ಷ ಮಾಡಲು ರಜ-ತಮ ಗುಣವಿದ್ದು ಪ್ರಯೋಜನವಿಲ್ಲ. ಅದರಿಂದ ವಿಜಯ ಸಿಗುವುದಿಲ್ಲ. ರಜ-ತಮ ಗುಣಗಳೊಂದಿಗೆ ಹೋರಾಡಲು ಅದಕ್ಕಿಂತ ಮಿಗಿಲಾದ ರಜ-ಸತ್ತ್ವ ಅಥವಾ ಸತ್ತ್ವ-ರಜ ಗುಣಗಳ ಅಗತ್ಯವಿರುತ್ತದೆ. ಹಿಂದುತ್ವವಾದಿಗಳಲ್ಲಿ ಈ ಗುಣಗಳು ಸಾಧನೆ ಮಾಡುವುದರಿಂದ ಮಾತ್ರ ಹೆಚ್ಚಾಗಬಲ್ಲವು. ಸಾಧನೆಯನ್ನು ಮಾಡುವುದರಿಂದಲೇ ವ್ಯಕ್ತಿಯು ಸತ್ತ್ವಗುಣಿಯಾಗುತ್ತಾನೆ. ಹಿಂದೂದ್ವೇಷಿಗಳ ವಿರುದ್ಧ ಜಯಸಾಧಿಸಲು ಹಿಂದುತ್ವವಾದಿಗಳು ಸಾಧನೆ ಮಾಡುವುದೇ ಏಕೆ ಆವಶ್ಯಕವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
. ಸಾಧನೆ ಮಾಡುವುದರಿಂದ ಸಿಗುವ ಚೈತನ್ಯದ ಮಹತ್ವ
. ‘ವಾಣಿಯಲ್ಲಿ ಚೈತನ್ಯ ಬರುವುದರಿಂದ ಮಾತುಗಳು ಒಳ್ಳೆಯ ಪ್ರಭಾವ ಬೀರುತ್ತವೆ. ಚೈತನ್ಯದಿಂದ ಶಾರೀರಿಕ ಕ್ಷಮತೆಯೂ ಹೆಚ್ಚಾಗುತ್ತದೆ. - .ಪೂ. ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯಿಂದ ಸಾಧನೆಯ ಆವಶ್ಯಕತೆ