ಸಂಬಂಧ ಸುಧಾರಿಸಲು ಲಾಹೋರಿಗೆ ಹೋಗಿದ್ದೆನು ! - ನರೇಂದ್ರ ಮೋದಿ

ಕಳೆದ ೬೮ ವರ್ಷಗಳಲ್ಲಿ ಪಾಕಿಸ್ತಾನದೊಂದಿಗೆ ಸಂಬಂಧವು ಸುಧಾರಿಸದಿರುವ ಇತಿಹಾಸವಿರುವಾಗ
ಅದಕ್ಕಾಗಿ ಮರಳಿ ಪ್ರಯತ್ನಿಸಿ ಏನು ಸಾಧಿಸಲಿದ್ದಾರೆ ?
ನವ ದೆಹಲಿ : ಪಾಕಿಸ್ತಾನವು ನಮ್ಮ ಪಕ್ಕದ ದೇಶವಾಗಿದ್ದು, ಅದರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಬೇಕೆನ್ನುವುದು ಸರಕಾರದ ಆಶಯವಾಗಿದೆ. ಈ ಕಾರಣದಿಂದ ಪಾಕಿಸ್ತಾನದ ಪ್ರಧಾನಮಂತ್ರಿಗಳನ್ನು ನಾನು ಪ್ರಧಾನಮಂತ್ರಿಯಾಗಿ ಪ್ರತಿಜ್ಞೆಯನ್ನು ಸ್ವೀಕರಿಸುವ ಸಮಾರಂಭಕ್ಕೆ ಆಹ್ವಾನಿಸಿದ್ದೆನು ಮತ್ತು ಮಿತ್ರತ್ವವನ್ನು ಹೊಂದಲು ನಾನಾಗಿಯೇ ಮುಂದುವರಿದು ಲಾಹೋರಿಗೂ ಹೋಗಿದ್ದೆನು ಎಂದು ಮಾನ್ಯ ಪ್ರಧಾನಮಂತ್ರಿಗಳು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರಕಾರವು ಎರಡು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿರುವ ಸಂಬಂಧದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ‘ವಾಲ ಸ್ಟ್ರೀಟ್ ಜರ್ನಲ್’ ಹೆಸರಿನ ಅಮೇರಿಕಾದ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸುತ್ತಾ, ಭಯೋತ್ಪಾದನೆಯು ಇಡೀ ಜಗತ್ತಿಗೆ ಚಿಂತೆಯ ವಿಷಯವಾಗಿದೆ ಹಾಗೂ ಭಯೋತ್ಪಾದಕರೊಂದಿಗೆ ಎಂದಿಗೂ ಹೊಂದಾಣಿಕೆಯನ್ನು ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಅವರು ಈ ಸಂದರ್ಶನದಲ್ಲಿ ಅನೇಕ ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಮೋದಿಯವರು ಮಾತನಾಡುತ್ತಾ, ದೇಶದ ಪ್ರಗತಿಗಾಗಿ ಅವರ ಸರಕಾರವು ಅನೇಕ ಸುಧಾರಣೆಯ ಕ್ರಮಗಳನ್ನು ಕೈಕೊಂಡಿದ್ದು, ಅದ ರಿಂದಾಗಿ ಅಂತರ್‌ರಾಷ್ಟ್ರೀಯ ವೇದಿಕೆಯ ಮೇಲೆ ಭಾರತ ಈಗ ಒಂದು ಮೂಲೆಯಲ್ಲಿ ನಿಲ್ಲದೇ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತಿದೆ. ಮುಂಬರುವ ೩ ವರ್ಷಗಳಲ್ಲಿ ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡ ಬೇಕಾಗಿದೆ ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಂಬಂಧ ಸುಧಾರಿಸಲು ಲಾಹೋರಿಗೆ ಹೋಗಿದ್ದೆನು ! - ನರೇಂದ್ರ ಮೋದಿ