ಹಿಂದೂ ರಾಷ್ಟ್ರದ ಸ್ಥಾಪನೆಯ ಆದರ್ಶ

. ಪ್ರಭು ಶ್ರೀರಾಮ : ಇಂದು ‘ಲಕ್ಷಗಟ್ಟಲೆ ವರ್ಷಗಳಾದರೂ ಶ್ರೀರಾಮನ ರಾಜ್ಯ ಸ್ಮರಣೆಯಲ್ಲಿದೆ; ಏಕೆಂದರೆ ಅದು ಎಲ್ಲಕ್ಕಿಂತ ಆದರ್ಶ ರಾಷ್ಟ್ರವಾಗಿತ್ತು. ಸದ್ಯದ ರಾಜಕಾರಣಿಗಳ ತುಲನೆಯಲ್ಲಿ ಪ್ರಭು ಶ್ರೀರಾಮನ ಆದರ್ಶತ್ವವು ಕೆಳಗಿನ ಅಂಶಗಳಿಂದ ಸಹಜವಾಗಿ ಗಮನಕ್ಕೆ ಬರುವುದು.
. ಎಲ್ಲಿ ಜನತೆಯ ಒಂದೂ ದೂರುಗಳ ಕಡೆಗೆ ಗಮನಹರಿಸದ ಇಂದಿನ ರಾಜಕಾರಣಿಗಳು ಮತ್ತು ಎಲ್ಲಿ ಒಬ್ಬ ಅಗಸನ ತಪ್ಪು ದೂರಿನ ಕಡೆಗೂ ಗಮನಹರಿಸಿ ‘ನಿರ್ದೋಷಿ ಪತ್ನಿಯನ್ನು ತ್ಯಜಿಸುವ ಆದರ್ಶರಾಜ ಶ್ರೀರಾಮ !’
. ಎಲ್ಲಿ ಧರ್ಮಾಚರಣೆಯನ್ನು ಮಾಡದ ಮತ್ತು ಧರ್ಮದ ಎಲ್ಲ ಮಿತಿಗಳನ್ನು ಉಲ್ಲಂಘಿಸುವ ಸದ್ಯದ ರಾಜಕಾರಣಿಗಳು ಮತ್ತು ಎಲ್ಲಿ ಧರ್ಮದ ಎಲ್ಲ ಮರ್ಯಾದೆಗಳನ್ನು ಪಾಲಿಸಿದ್ದರಿಂದ ‘ಮರ್ಯಾದಾ ಪುರುಷೋತ್ತಮ’ ಎಂದು ಗುರುತಿಸಲ್ಪಡುವ ಆದರ್ಶ ರಾಜ ಶ್ರೀರಾಮ !
. ಎಲ್ಲಿ ಪ್ರತಿಯೊಂದು ಚುನಾವಣೆಯಲ್ಲಿ ಜನತೆಗೆ ವಿಕಾಸ ಮಾಡುವೆವು ಎಂದು ಆಶ್ವಾಸನೆ ಕೊಟ್ಟು ಅದನ್ನು ಪಾಲಿಸದ ಸದ್ಯದ ರಾಜಕಾರಣಿಗಳು ಮತ್ತು ಎಲ್ಲಿ ‘ಏಕವಚನಿ’ ಎಂದು ಇತಿಹಾಸದಲ್ಲಿ ಅಜರಾಮರನಾದ ಆದರ್ಶ ರಾಜ ಶ್ರೀರಾಮ !
. ಎಲ್ಲಿ ಭ್ರಷ್ಟಾಚಾರದ ಅನೇಕ ಆರೋಪಗಳು ಇದ್ದರೂ ಅಧಿಕಾರದ ಕುರ್ಚಿಯನ್ನು ಬಿಡದ ಸದ್ಯದ ರಾಜಕಾರಣಿಗಳು ಮತ್ತು ಎಲ್ಲಿ ಮೊದಲು ಅಯೋಧ್ಯೆ, ನಂತರ ಕಿಷ್ಕಿಂಧೆ ಮತ್ತು ಅನಂತರ ಲಂಕೆಯ ರಾಜ್ಯವನ್ನು ಇತರರಿ ಗಾಗಿ ಬಿಟ್ಟುಕೊಡುವ ವಿರಕ್ತ ವೃತ್ತಿಯ ಆದರ್ಶ ರಾಜ ಶ್ರೀರಾಮ !
. ಎಲ್ಲಿ ಅನಾರೋಗ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಸದ್ಯದ ರಾಜಕಾರಣಿಗಳು ಮತ್ತು ಎಲ್ಲಿ ಜನತೆಗೆ ರೋಗ ಮತ್ತು ಅಪ ಮೃತ್ಯುಗಳಿಲ್ಲದ ‘ರಾಮರಾಜ್ಯ’ ನೀಡುವ ಆದರ್ಶ ರಾಜ ಶ್ರೀರಾಮ !
. ಎಲ್ಲಿ ನುಸುಳುಕೋರರಿಗೆ ನುಸುಳಲು ಮುಕ್ತ ಸ್ವಾತಂತ್ರ್ಯ ನೀಡಿ ದೇಶದ ನಾಲ್ಕೂ ಗಡಿಗಳನ್ನು ಅಸುರಕ್ಷಿತಗೊಳಿಸುವ, ಶತ್ರುರಾಷ್ಟ್ರದ ಕೂಟ ಯುದ್ಧದಲ್ಲಿ ಪರಾಭವಗೊಳ್ಳುವ ಮತ್ತು ನಕ್ಸಲರು ಹಾಗೂ ಉಗ್ರರಿಂದ ಪ್ರತಿದಿನ ಪರಾಜಯಗೊಳ್ಳುವ ಸದ್ಯದ ರಾಜಕಾರಣಿಗಳು ಮತ್ತು ಎಲ್ಲಿ ಶತ್ರುವಿನ (ರಾವಣನ) ರಾಜ್ಯದಲ್ಲಿ ನುಗ್ಗಿ ಅವನನ್ನು ನಾಶಗೊಳಿಸುವ ಮತ್ತು ಅಶ್ವಮೇಧ ಯಜ್ಞಕ್ಕಾಗಿ ದಿಗ್ವಿಜಯ ಕೈಗೊಳ್ಳುವ ಆದರ್ಶ ರಾಜ ಶ್ರೀರಾಮ !
. ಎಲ್ಲಿ ಭ್ರಷ್ಟಾಚಾರವನ್ನು ಮಾಡಿ ಜನತೆಯನ್ನು ಅಪೌಷ್ಟಿಕರನ್ನಾಗಿಸುವ ಸದ್ಯದ ರಾಜಕಾರಣಿಗಳು ಮತ್ತು ಎಲ್ಲಿ ಪ್ರಜೆಗಳಿಗೆ ಹಿತಕಾರಕವಾಗಿರುವ ಎಲ್ಲ ದೃಷ್ಟಿಯಿಂದ ಸಮೃದ್ಧ ಮತ್ತು ಆದರ್ಶ ‘ರಾಮರಾಜ್ಯ’ ನೀಡುವ ಆದರ್ಶ ರಾಜ ಶ್ರೀರಾಮ ! ಹೀಗೆ ಪ್ರಭು ಶ್ರೀರಾಮನೇ ನಿಜವಾದ ಹಿಂದೂ ರಾಷ್ಟ್ರದ ಸ್ಥಾಪನೆಯ ಆದರ್ಶವಾಗಿದ್ದಾನೆ.
. ಛತ್ರಪತಿ ಶಿವಾಜಿ ಮಹಾರಾಜರು : ಛತ್ರಪತಿ ಶಿವಾಜಿ ಮಹಾರಾಜರು ಚಿಕ್ಕಂದಿನಲ್ಲಿ ‘ಹಿಂದವೀ ಸ್ವರಾಜ್ಯದ ಧ್ಯೇಯವನ್ನಿಟ್ಟುಕೊಂಡಿದ್ದರು ಮತ್ತು ಅವರು ಅದನ್ನು ತಮ್ಮ ಜೀವಿತಾವಧಿಯಲ್ಲಿ ಪ್ರತ್ಯಕ್ಷ ಸಾಕಾರಗೊಳಿಸಿ ತೋರಿಸಿದರು. ಯಾವುದಾದರೊಂದು ಕಾರ್ಯವನ್ನು ಮಾಡುವಾಗ ಯಶಸ್ಸನ್ನು ಸಂಪಾದಿಸಬೇಕಾಗಿದ್ದರೆ, ಪರಾಜಯವಾದವರ ಆದರ್ಶವನ್ನಿಟ್ಟುಕೊಳ್ಳುವುದಿಲ್ಲ, ವಿಜಯಿವೀರರ ಆದರ್ಶವನ್ನೇ ಇಟ್ಟುಕೊಳ್ಳುತ್ತಾರೆ. ಇದೇ ಭಾರತದಲ್ಲಿನ ಸಂಘಟನೆಗಳು ಶಿವಾಜಿ ಮಹಾರಾಜರ ಆದರ್ಶವನ್ನು ಇಟ್ಟುಕೊಳ್ಳುವುದರ ಹಿಂದಿನ ತತ್ತ್ವವಾಗಿದೆ. - .ಪೂ. ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ರಾಷ್ಟ್ರದ ಸ್ಥಾಪನೆಯ ಆದರ್ಶ