ಪಾಕಿಸ್ತಾನದಿಂದ ಮುಂದುವರಿದ ಭಾರತದ ನಕಲಿ ನೋಟುಗಳ ಹಾವಳಿ !

ಪಾಕ್ ಜೊತೆ ಮೈತ್ರಿ ಮಾಡುವವರಿಗೆ ಕಪಾಳಮೋಕ್ಷ !
ನಕಲಿ ನೋಟುಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲದ ಸರಕಾರ
ದೇಶದ ಮುಂದಿರುವ ಇತರ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು ?
ಭದ್ರತಾ ವ್ಯವಸ್ಥೆ ಪೂರ್ಣ ನಿಯಂತ್ರಣ ಪಡೆಯಲು ವಿಫಲ !
ನವ ದೆಹಲಿ : ದೇಶಾದ್ಯಂತ ಬೃಹತ್ಪ್ರಮಾಣದಲ್ಲಿ ನಕಲಿ ನೋಟುಗಳ ವ್ಯವಸಾಯ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರಸರಕಾರ ಮತ್ತು ರಾಜ್ಯಸರಕಾರಗಳು ಪ್ರಯತ್ನಿಸುತ್ತಿವೆ; ಆದರೆ ಅವರಿಗೆ ಯಶಸ್ಸು ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸುರಕ್ಷಾ ದಳಗಳಿಂದ ಮಾಹಿತಿಯ ಕೊಡು-ಕೊಳ್ಳುವಿಕೆಗಾಗಿ ವಿಶೇಷ ಸಮನ್ವಯ ಸಮೂಹವನ್ನು ನಿರ್ಮಿಸಲಾಗಿದೆ.
೧. ಭಾರತದಲ್ಲಿ ಚಲಾವಣೆಯಲ್ಲಿರುವ ಪ್ರತಿ ೧೦ ಲಕ್ಷ ನೋಟುಗಳಲ್ಲಿ ೨೫೦ ನೋಟುಗಳು ನಕಲಿ ಆಗಿವೆ. ಕಳೆದ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ಮಂಡಳದ ಒಂದು ಬೈಠಕ್‌ನಲ್ಲಿ ಸರಕಾರಕ್ಕೆ ನೋಟುಗಳ ಮೇಲೆ ಹೊಸ ನಕ್ಷೆಯನ್ನು ಅಳವಡಿಸುವ ವಿಷಯದಲ್ಲಿ ಪ್ರಸ್ತಾಪಿಸಲಾಗಿತ್ತು. ಭಾರತದ ಅರ್ಥ ವ್ಯವಸ್ಥೆಯು ನೋಟುಗಳ ಚಲಾವಣೆ ಯನ್ನು ಆಧರಿಸಿರು ವುದರಿಂದ ಇದರಲ್ಲಿ ನಕಲಿ ನೋಟುಗಳ ಹೆಚ್ಚುತ್ತಿ ರುವ ಅಪಾಯವನ್ನು ಗಮನಿಸಿ ಈ ಪ್ರಸ್ತಾಪವನ್ನು ಮಾಡಲಾಗಿದೆ, ಎಂಬುದು ಕೇಂದ್ರೀಯ ಮಂಡಲದ ಹೇಳಿಕೆಯಾಗಿದೆ.
೨. ೨೦೧೫ ರಲ್ಲಿ ಜಪ್ತಿ ಮಾಡಿದ ನಕಲಿ ನೋಟು ಗಳಲ್ಲಿ ಶೇ. ೪೩ ರಷ್ಟು ನೋಟುಗಳನ್ನು ದೆಹಲಿ ಮತ್ತು ಉತ್ತರಪ್ರದೇಶದಿಂದ ಜಪ್ತಿ ಮಾಡಲಾಗಿತ್ತು.
೩. ಭಾರತೀಯ ಸಂಖ್ಯಾಶಾಸ್ತ್ರಸಂಸ್ಥೆಯು ಮಾಡಿದ ಅಧ್ಯಯನಕ್ಕನುಸಾರ ಪ್ರತಿ ೧೦ ಲಕ್ಷ ನೋಟುಗಳಲ್ಲಿ ೨೫೦ ನೋಟುಗಳು ನಕಲಿ ಇರುತ್ತವೆ. ಸದ್ಯ ೪೦೦ ಕೋಟಿ ರೂಪಾಯಿಗಳ ನೋಟುಗಳು ಚಲಾವಣೆಯಲ್ಲಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಿಂದ ಮುಂದುವರಿದ ಭಾರತದ ನಕಲಿ ನೋಟುಗಳ ಹಾವಳಿ !