ಪತ್ನಿ ಕಪ್ಪಗಿದ್ದಾಳೆಂದು ಸುಟ್ಟ ಮತಾಂಧ ಪತಿ ಮತ್ತು ಕುಟುಂಬದವರು !

ಬಂಗಾಲದಲ್ಲಿ ಮುಸಲ್ಮಾನ ಮತ್ತು ಅವನ ಕುಟುಂಬದವರ ಕ್ರೌರ್ಯ
ಇಂತಹ ಕ್ರೂರಿಗಳಿಗೆ ಶರಿಯತ್‌ಗನುಸಾರ ದೇಹದಂಡದ ಶಿಕ್ಷೆಯನ್ನೇಕೆ ನೀಡಬಾರದು?
ವೀರಭೂಮ (ಬಂಗಾಲ) : ಇಲ್ಲಿನ ಸೋಮೇರಾ ಬೀಬಿ ಎಂಬ ೨೨ ವರ್ಷದ ವಿವಾಹಿತೆಯನ್ನು ಅವಳು ಕಪ್ಪಗಿದ್ದಾಳೆಂದು ಅವಳ ಬೀಗರ ಮನೆಯವರು ಜೀವಂತ ಸುಟ್ಟು ಹಾಕಿದ ಘಟನೆ ಸಂಭವಿಸಿದೆ. ಸೋಮೇರಾ ಜೀವ ಹೋಗುವ ಮೊದಲು ನೀಡಿದ ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಿದಳು.
ನಾಸಿರ್ ಎಂಬವನು ೩ ವರ್ಷದ ಹಿಂದೆ ೧ ಲಕ್ಷ ನಗದು ಮತ್ತು ಸ್ವಲ್ಪ ಭೂಮಿಯ ಬದಲಿಗೆ ಸೋಮೇರಾಳೊಂದಿಗೆ ವಿವಾಹವಾಗಿದ್ದನು; ಆದರೆ ಸೊಮೇರಾಳ ಮೈಬಣ್ಣ ಕಪ್ಪಿರುವುದರಿಂದ ನಾಸಿರ್ ಮತ್ತು ಅವನ ಕುಟುಂಬದವರು ಅವಳಿಗೆ ನಿರಂತರ ಪೀಡಿಸುತ್ತಿದ್ದರು. ‘ನಮ್ಮ ಹುಡುಗನಿಗೆ ನಿನಗಿಂತ ಒಳ್ಳೆಯ ಬೆಳ್ಳಗಿನ ಹುಡುಗಿ ಬೇಕಿತ್ತು. ನಿನಗೆ ಇಲ್ಲಿ ಇರಲಿಕ್ಕಿದ್ದರೆ, ತಂದೆ-ತಾಯಿಯರಿಂದ ಹಣ ತೆಗೆದುಕೊಂಡು ಬಾ’ ಎಂದು ಅವಳಿಗೆ ಪದೇ ಪದೇ ಹೇಳುತ್ತಿದ್ದರು. ಸೋಮೇರಾಳ ತಾಯಿ-ತಂದೆ ಮಗಳಿಗಾಗಿ ಅನೇಕ ಬಾರಿ ಹಣದ ಬೇಡಿಕೆಯನ್ನು ಪೂರೈಸಿದರು. ಅನಂತರ ನಾಸಿರ್ ಮತ್ತು ಕುಟುಂಬದವರು ಮನೆ ಕಟ್ಟಲು ಅವಳಿಂದ ೨ ಲಕ್ಷ ರೂಪಾಯಿಗಳನ್ನು ಕೇಳಿ ದರು. ಅದು ಸಾಧ್ಯವಿಲ್ಲದ ಕಾರಣ ಸೋಮೇರಾ ಅದನ್ನು ವಿರೋಧಿಸಿದಳು. ಅದರಿಂದ ರೊಚ್ಚಿಗೆದ್ದ ನಾಸಿರ್ ಮತ್ತು ಕುಟುಂಬದವರು ಅವಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಅವಳ ಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪತ್ನಿ ಕಪ್ಪಗಿದ್ದಾಳೆಂದು ಸುಟ್ಟ ಮತಾಂಧ ಪತಿ ಮತ್ತು ಕುಟುಂಬದವರು !