ಛತ್ರಪತಿ ಶಿವಾಜಿಯಂತೆ ಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ಸ್ಥಾಪನೆಯ ಧ್ಯೇಯವನ್ನು ಸಾಕಾರಗೊಳಿಸಿರಿ !

(ಪೂ.) ಶ್ರೀ. ಸಂದೀಪ ಆಳಶಿ
ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳೇ, ‘ಹಿಂದೂ ಅಧಿವೇಶನದ ಹಿಂದಿನ ದಿನ ‘ಶಿವರಾಜ್ಯಾಭಿಷೇಕದಿನ’ ಆಚರಿಸಲ್ಪಡುವುದು ಯೋಗಾಯೋಗವಾಗಿರದೆ ಇದು ಈಶ್ವರೀ ನಿಯೋಜನೆಯೇ ಆಗಿದೆ ! ೧೬ ನೇ ವಯಸ್ಸಿನಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪನೆಯ ಪ್ರಮಾಣ ಮಾಡುವ ಶಿವಾಜಿ ಬಳಿ ಧನ, ಸೈನ್ಯ, ಕೋಟೆಗಳೇನೂ ಇರಲಿಲ್ಲ. ಹಿಂದೂ ಪ್ರಜೆಗಳ ವಿಶ್ವಾಸ ಮತ್ತು ಪ್ರೇಮದಿಂದಲೇ ಸ್ಥಾಪನೆಯಾದ ಮಾವಳೆಯರ ಸಂಘಟನೆ ಮತ್ತು ಕುಲದೇವಿ ಶ್ರೀ ಭವಾನಿದೇವಿಯ ಆಶೀರ್ವಾದವೇ ಶಿವಾಜಿ ಮಹಾರಾಜರ ವಿಜಯದ ಶಕ್ತಿಸ್ಥಾನವಾಗಿತ್ತು.
ಮಹಾರಾಜರ ಜಗದಂಬೆಯ ಮೇಲಿನ ಶ್ರದ್ಧೆ ಮತ್ತು ಭಕ್ತಿಯಿಂದಾಗಿ ಜಗದಂಬೆಯು ಮಹಾರಾಜರ ಮತ್ತು ಸ್ವರಾಜ್ಯದ ಮೇಲಿನ ಸಂಕಟಗಳನ್ನು ಸ್ವತಃ ಸ್ವೀಕರಿಸಿದಳು, ಮುಂದೆ ಗುರು ಸಮರ್ಥ ರಾಮದಾಸಸ್ವಾಮಿಗಳ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಪ್ರತ್ಯಕ್ಷ ಸಾಕಾರಗೊಳಿಸಿದರು.
ಇಂದು ಹಿಂದೂ ಅಧಿವೇಶನದ ನಿಮಿತ್ತ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯದ) ಸ್ಥಾಪನೆಯೊಂದೇ ಧ್ಯೇಯದಿಂದ ಕೃತಿಶೀಲರಾಗಿರುವ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಸಂಘಟಿತರಾಗಿದ್ದಾರೆ. ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಸಾಧನೆ ಮಾಡಿದರೆ ಹಾಗೂ ಸಾಧನೆಯೆಂದೇ ರಾಷ್ಟ್ರ-ಧರ್ಮ ಕಾರ್ಯ ಮಾಡಿದರೆ ಅವರ ಆಧ್ಯಾತ್ಮಿಕ ಪ್ರಗತಿ ಶೀಘ್ರದಲ್ಲಾಗುವುದು ಹಾಗೂ ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಂದೂ ಧರ್ಮಕ್ಕೆ (ಸನಾತನ ಧರ್ಮಕ್ಕೆ) ರಾಜಸಿಂಹಾಸನ ಲಭಿಸಿದಂತೆ ಈಗಲೂ ಲಭಿಸುವುದು !’ - (ಪೂ.) ಶ್ರೀ. ಸಂದೀಪ ಆಳಶಿ (೧೬..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಛತ್ರಪತಿ ಶಿವಾಜಿಯಂತೆ ಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ಸ್ಥಾಪನೆಯ ಧ್ಯೇಯವನ್ನು ಸಾಕಾರಗೊಳಿಸಿರಿ !