ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

ಫಲಕ ಪ್ರಸಿದ್ಧಿಗಾಗಿ

೧. ಹಿಂದೂಗಳೇ, ದೇವತೆಗಳನ್ನು
ಅವಮಾನಿಸುವ ಅಮೆಝಾನ್‌ನನ್ನು ಬಹಿಷ್ಕರಿಸಿ !
ವಿವಿಧ ವಸ್ತುಗಳ ಆನ್‌ಲೈನ್ ಮಾರಾಟ ಮಾಡುವ ಅಮೇರಿಕಾದ ಜಾಲತಾಣ ಅಮೆಝಾನ್ ಮಾರಾಟಕ್ಕಾಗಿ ಇಟ್ಟಿರುವ ಕಾಲೊರೆಸುವ ಮ್ಯಾಟ್‌ಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳಿವೆ. ಟ್ವಿಟರ್‌ನ ಮೂಲಕ ಹಿಂದೂಗಳು ಅಮೇಝಾನ್‌ಗೆ ಬಹಿಷ್ಕಾರ ಹಾಕುವ ಜನಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ.


೨. ಭಾರತ ಸಹಿತ ಜಗತ್ತಿನ ವಿವಿಧ
ದೇಶಗಳಲ್ಲಿನ ದೇವಸ್ಥಾನಗಳು ಅಸುರಕ್ಷಿತ !
ಮಲೇಷ್ಯಾದ ಪೆನಾಂಗದಲ್ಲಿನ ಮುತ್ತುಮಾರಿಯಮ್ಮನ್ ದೇವಸ್ಥಾನದ ಮೇಲೆ ಮತಾಂಧರು ದಾಳಿ ಮಾಡಿ ೪ ದೇವತೆಗಳ ಮೂರ್ತಿಗಳನ್ನು ಒಡೆದರು. ಅಲ್ಲಿನ ಉಪಮುಖ್ಯಮಂತ್ರಿ ಪಿ. ರಾಮಸಾಮಿ ಇವರು ಈ ದಾಳಿಯ ಹಿಂದೆ ಕೋಮು ಧ್ರುವೀಕರಣದ ಭಾಗವಿದೆಯೆಂದು ಹೇಳಿದ್ದಾರೆ. ಕಳೆದ ತಿಂಗಳು ಇಪೋಹದಲ್ಲಿ ದೇವಸ್ಥಾನದಲ್ಲಿನ ಮೂರ್ತಿಗಳನ್ನೂ ಒಡೆಯಲಾಗಿತ್ತು.

೩. ಕೇಂದ್ರದ ಭಾಜಪ ಸರಕಾರದ ಮೇಲೆ ಕೇಸರೀಕರಣ
ಆರೋಪ ಮಾಡುವವರು ಈಗೇಕೆ ಸುಮ್ಮನಿದ್ದಾರೆ ?
ತೆಲಂಗಾಣ ಸರಕಾರವು ರಂಜಾನ್ ತಿಂಗಳ ನಿಮಿತ್ತ ರಾಜ್ಯದ ೨೦೦ ಮಸೀದಿಗಳಲ್ಲಿ ಇಫ್ತಾರ್ ಪಾರ್ಟಿಗಳನ್ನು ಆಯೋಜಿಸಲು ಹಾಗೂ ಬಡಮುಸಲ್ಮಾನರಿಗೆ ಬಟ್ಟೆಗಳನ್ನು ಹಂಚಲು ೨೬ ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಲಿದೆ; ತಮಿಳುನಾಡು ಸರಕಾರವು ಶಿರಖುರ್ಮಾಕ್ಕಾಗಿ ೩ ಸಾವಿರ ಮಸೀದಿಗಳಿಗೆ ಉಚಿತ ಅಕ್ಕಿಯನ್ನು ನೀಡಲಿದೆ.

೪. ಉಗ್ರರ ಕರಿನೆರಳಿನಲ್ಲಿರುವ ಅಸುರಕ್ಷಿತ ದೇವಸ್ಥಾನಗಳು !
ಗುಜರಾತಿನ ಆನಂದ ಜಿಲ್ಲೆಯ ಸಾರಸಾ ಗ್ರಾಮದಲ್ಲಿರುವ ಕೈವಾಲ ದೇವಸ್ಥಾನದ ಪುರೋಹಿತರಾದ ಅವಿಚಲಾದಾಸಜೀ ಮಹಾರಾಜರನ್ನು ಕೊಲೆ ಮಾಡಿ ದೇವಸ್ಥಾನವನ್ನು ಬಾಂಬ್‌ನ ಮೂಲಕ ಸ್ಫೋಟಿಸುವುದಾಗಿ ೨ ಪತ್ರಗಳ ಮೂಲಕ ಬೆದರಿಕೆ ನೀಡಲಾಗಿದೆ. ಜೈಶ್-ಎ-ಮಹಮ್ಮದ ಈ ಉಗ್ರ ಸಂಘಟನೆಯ ಜಿಹಾದಿಗಳು ಈ ಪತ್ರವನ್ನು ಕಳುಹಿಸಿದ್ದಾರೆ.

೫. ಕಾನೂನಿನ ರಕ್ಷಕರೇ ಕಾನೂನನ್ನು ಕೈಗೆತ್ತಿಕೊಳ್ಳುವುದು ಲಜ್ಜಾಸ್ಪದ !
ಜೂನ್ ೧ ರಂದು ಪುಣೆಯ ಸನಾತನದ ಶ್ರೀ. ಮತ್ತು ಸೌ. ಅಕೋಲಕರ್ ಸಾಧಕ ದಂಪತಿಗಳು ಮನೆಯಲ್ಲಿ ಇಲ್ಲದಿರುವಾಗ ಮನೆಯ ಬೀಗ ಒಡೆದು, ಒಳಗಿದ್ದ ಕಪಾಟನ್ನು ಒಡೆದು ಎಲ್ಲ ಸಾಹಿತ್ಯಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿತ್ತು. ದೆಹಲಿಯ ಸಿಬಿಐಯ ಪೊಲೀಸರ ತಂಡ ಈ ಕೃತ್ಯವೆಸಗಿದೆಯೆಂದು ತಿಳಿದುಬಂದಿದೆ.

೬. ಕಳೆದ ೬ ದಶಕಗಳಿಂದ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದ 
ಕಾಂಗ್ರೆಸ್‌ಗೆ ಹೀಗೆ ಹೇಳುವ ಅಧಿಕಾರವಿದೆಯೇ ?
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾಧ್ರಾ ಮೇಲೆ ಭಾಜಪವು ಮಾಡಿದ ಆರ್ಥಿಕ ಅವ್ಯವಹಾರದ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಕಾಂಗ್ರೆಸ್ ಇದು ‘ಕಾಂಗ್ರೆಸ್‌ಮುಕ್ತ ಭಾರತ’ದ ಕಾರಸ್ಥಾನದ ಅಂಗವಾಗಿದ್ದು ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಿದ್ದಾರೆ, ಶೆಹನಶಾ ಅಲ್ಲ, ಎಂದು ಹೇಳಿದರು.

೭. ದೇವರಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು ?
ಪ್ರತಿಯೊಂದು ದೇವತೆಗೆ ವಿಶಿಷ್ಟ ನೈವೇದ್ಯವು ನಿಶ್ಚಯಿಸಲ್ಪಟ್ಟಿರುತ್ತದೆ ಹಾಗೂ ಆ ನೈವೇದ್ಯವು ಅವರಿಗೆ ಪ್ರಿಯವಾಗಿರುತ್ತದೆ. ಉದಾ. ಶ್ರೀ ವಿಷ್ಣುವಿಗೆ ಪಾಯಸ ಅಥವಾ ಶೀರಾ, ಗಣಪತಿಗೆ ಮೋದಕ, ದೇವಿಗೆ ಪಾಯಸ. ದೇವತೆಗಳಿಗೆ ನಿಶ್ಚಯಿಸಲ್ಪಟ್ಟ ನೈವೇದ್ಯದಲ್ಲಿ ಆ ದೇವತೆಯ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ನಂತರ ಆ ನೈವೇದ್ಯವನ್ನು ಸೇವಿಸಿದರೆ ಆ ಶಕ್ತಿಯು ನಮಗೆ ಸಿಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !