ಬಾಂಗ್ಲಾದೇಶದಲ್ಲಿ ಮತಾಂಧರಿಂದ ಮತ್ತೊಬ್ಬ ಹಿಂದೂವಿನ ಹತ್ಯೆ!

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ, ಇತರ ಧರ್ಮೀಯರು ಏನಾಗುವರು?, ಎಂದು ಪ್ರಶ್ನೆ ಕೇಳುವವರು ಇಸ್ಲಾಮ್ ರಾಷ್ಟ್ರಗಳಲ್ಲಿ ಹಿಂದೂಗಳ ಸ್ಥಿತಿ ಏನಾಗುತ್ತಿದೆ, ಎಂಬುದನ್ನು ಗಮನಿಸುವುದಿಲ್ಲ ಹಾಗೂ ಅದರ ವಿಷಯದಲ್ಲಿ ಏಕೆ ಬಾಯಿ ಬಿಡುವುದಿಲ್ಲ ?
 ಹಿಂದೂಗಳೇ, ಬಾಂಗ್ಲಾದೇಶದಲ್ಲಿ ಆಗುತ್ತಿರುವ ಹಿಂದೂಗಳ ಶಿರಚ್ಛೇದವು ನಾಳೆ ಭಾರತದಲ್ಲಿಯೂ ಆರಂಭವಾಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! ಜಗತ್ತಿನಾದ್ಯಂತ ಕಾರ್ಯ ಮಾಡುತ್ತಿರುವ ಹಿಂದುತ್ವವಾದಿ ಸಂಘಟನೆಗಳು ಇದರ ವಿರುದ್ಧ ಏಕೆ ಏನೂ ಮಾತನಾಡುವುದಿಲ್ಲ ?

ಹಿಂದೂಗಳೇ, ಇಂತಹ ವಾರ್ತೆಗಳನ್ನು ಓದಿ ಮಲಗಬೇಡಿ, ಸ್ವರಕ್ಷಣೆಗಾಗಿ ಸಂಘಟಿತರಾಗಿ !
ಢಾಕಾ : ಮೂರು ದಿನಗಳ ಹಿಂದೆ ಬಾಂಗ್ಲಾದೇಶ ದಲ್ಲಿ ೭೦ ವರ್ಷದ ಹಿಂದೂ ಪುರೋಹಿತರ ಕೊಲೆಯಾಗಿತ್ತು, ಈಗ ಒಬ್ಬ ೬೨ ವರ್ಷ ವಯಸ್ಸಿನ ಹಿಂದೂವಿನ ಕೊಲೆಯಾಗಿದೆ. ನಿತ್ಯರಂಜನ ಪಾಂಡೆ ಎಂದು ಈ ಹಿಂದೂವಿನ ಹೆಸರು, ಇವರು ಇಲ್ಲಿ ಒಂದು ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಇದೇ ರೀತಿ ಹಿಂದೂಗಳ ಹತ್ಯೆಯಾಗಿದ್ದರಿಂದ ಇದನ್ನು ಐಸಿಸ್ ಉಗ್ರರು ಮಾಡಿರಬಹುದೆಂದು ಶಂಕಿಸಲಾಗುತ್ತಿದೆ.
೧. ನಿತ್ಯರಂಜನ ಪಾಂಡೆ ಹಿಮಾಯತಪುರದ ಠಾಕೂರ ಅನುಕೂಲ ಚಂದ್ರ ಸತ್ಸಂಗ ಪರಮತೀರ್ಥ ಆಶ್ರಮದ ಸಿಬ್ಬಂದಿಯಾಗಿದ್ದರು. ಕಳೆದ ೪೦ ವರ್ಷ ಗಳಿಂದ ಅವರು ಈ ಆಶ್ರಮದಲ್ಲಿ ಸ್ವಯಂಸೇವಕರೆಂದು ಕೆಲಸ ಮಾಡುತ್ತಿದ್ದರು. ಜೂನ್ ೯ ರಂದು ಬೆಳಗ್ಗೆ ವಾಯು ವಿಹಾರಕ್ಕಾಗಿ ಹೊರಗೆ ಹೋದಾಗ ಕೆಲವು ಅಜ್ಞಾತರು ಅವರನ್ನು ತಡೆದು ಅವರ ಕುತ್ತಿಗೆಗೆ ಹರಿತವಾದ ಶಸ್ತ್ರಗಳಿಂದ ಆಘಾತ ಮಾಡಿದ್ದಾರೆ.
೨. ಜನವರಿ ೨೦೧೬ ರಿಂದ ಇಂದಿನ ವರೆಗೆ ಜಿಹಾದಿ ಮತಾಂಧರು ೪೦ ಜನರ ಕೊಲೆ ಮಾಡಿದ್ದಾರೆ. (೫ ತಿಂಗಳಲ್ಲಿ ೪೦ ಜನರ ಕೊಲೆಯಾದರೂ ಇಲ್ಲಿನ ಪ್ರಗತಿಪರರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ, ಎಂದು ಏಕೆ ಬೊಬ್ಬೆ ಹೊಡೆಯುವುದಿಲ್ಲ ಅಥವಾ ಅಲ್ಲಿ ಪ್ರಗತಿಪರರೆನ್ನುವವರು ಯಾರೂ ಇಲ್ಲವೇ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಂಗ್ಲಾದೇಶದಲ್ಲಿ ಮತಾಂಧರಿಂದ ಮತ್ತೊಬ್ಬ ಹಿಂದೂವಿನ ಹತ್ಯೆ!