ಅಂತರರಾಷ್ಟ್ರೀಯ ಖ್ಯಾತಿಯ ಸಮ್ಮೋಹನ-ಉಪಚಾರತಜಪರಾತ್ಪರ ಗುರು ಡಾ. ಆಠವಲೆ

ಸಮ್ಮೋಹನ-ಉಪಚಾರದ ಸಂಶೋಧನೆಗಾಗಿ ಬ್ರಿಟನ್‌ಗೆ ಹೋಗುತ್ತಿರುವಾಗ
ಮುಂಬಯಿ ವಿಮಾನ ನಿಲ್ದಾಣದಲ್ಲಾದ ಸತ್ಕಾರ
ಪರಾತ್ಪರ ಗುರು ಡಾ. ಆಠವಲೆಯವರು ೧೯೭೧ ರಿಂದ ೧೯೭೮ ಈ ಅವಧಿಯಲ್ಲಿ ಬ್ರಿಟನ್‌ನಲ್ಲಿ ಸಮ್ಮೋಹನ-ಉಪಚಾರಪದ್ಧತಿಯಲ್ಲಿ ಯಶಸ್ವಿ ಸಂಶೋಧನೆ ಮಾಡಿದ ನಂತರ ಅವರಿಗೆ ‘ಸಮ್ಮೋಹನ ಉಪಚಾರತಜ್ಞ’ರೆಂದು ಅಂತರರಾಷ್ಟ್ರೀಯ ಖ್ಯಾತಿ ಲಭಿಸಿತು. ೧೯೭೮ ರಲ್ಲಿ ಮುಂಬಯಿಗೆ ಹಿಂತಿರುಗಿದ ನಂತರ ಅವರು ಮುಂಬಯಿಯಲ್ಲಿ ಮಾನಸಿಕ ಕಾಯಿಲೆಗಳ ಸಮ್ಮೋಹನ-ಉಪಚಾರತಜ್ಞರೆಂದು ಸ್ವತಂತ್ರ ವ್ಯವಸಾಯ ಆರಂಭಿಸಿದರು. ೧೯೮೨ ರಲ್ಲಿ ಅವರು ‘ಭಾರತೀಯ ವೈದ್ಯಕೀಯ ಸಮ್ಮೋಹನ ಹಾಗೂ ಸಂಶೋಧನ ಸಂಸ್ಥೆ’ಯನ್ನು ಸ್ಥಾಪಿಸಿದರು. ೧೯೭೮ ರಿಂದ ೧೯೮೩ ಈ ಅವಧಿಯಲ್ಲಿ ಅವರು ೫೦೦ ಕ್ಕಿಂತಲೂ ಹೆಚ್ಚು ಆಧುನಿಕ ವೈದ್ಯರಿಗೆ ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನ-ಉಪಚಾರದ ಸಿದ್ಧಾಂತ ಮತ್ತು ಪ್ರಾತ್ಯಕ್ಷಿಕೆಯ ವಿಷಯದಲ್ಲಿ ಅಮೂಲ್ಯವಾದ ಮಾರ್ಗದರ್ಶನ ಮಾಡಿದರು.
ಸಮ್ಮೋಹನ-ಉಪಚಾರದಲ್ಲಿನ ನಾವಿನ್ಯಪೂರ್ಣ ಸಂಶೋಧನೆ
ಪರಾತ್ಪರ ಗುರು ಡಾ. ಆಠವಲೆಯವರು ‘ಅಯೋಗ್ಯ ಕೃತಿಯ ಅರಿವು ಮತ್ತು ಅದರ ನಿಯಂತ್ರಣ’, ‘ಅಯೋಗ್ಯ ಪ್ರತಿಕ್ರಿಯೆಗಳ ಸ್ಥಾನದಲ್ಲಿ ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಮಾಣ ಮಾಡುವುದು’, ‘ಪ್ರಸಂಗಗಳನ್ನು ಮನಸ್ಸಿನಲ್ಲಿ ಪೂರ್ವಾಭಿನಯ (ರಿಹರ್ಸಲ್) ಮಾಡುವುದು’ ಇತ್ಯಾದಿ  ನಾವಿನ್ಯಪೂರ್ಣ ಪದ್ಧತಿಗಳನ್ನು ನಿರ್ಮಾಣ ಮಾಡಿದರು. ಅವರು ‘ಇಓಸಿನೋಫಿಲಿಯಾ’ ಎಂಬ ರಕ್ತಕಣಗಳಲ್ಲಿನ ಒಂದು ಕಾಯಿಲೆಯು ಮಾನಸಿಕ ಒತ್ತಡದಿಂದಲೂ ಬರಬಹುದೆಂದು ಮೊಟ್ಟಮೊದಲು ಕಂಡುಹಿಡಿದರು.
ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನ-ಉಪಚಾರಕ್ಕೆ ಸಂಬಂಧಿಸಿದ ಗ್ರಂಥಸಂಪತ್ತು
ಪರಾತ್ಪರ ಗುರು ಡಾ. ಆಠವಲೆಯವರು ಬರೆದಿರುವ ‘ದಿ ಇಂಡಿಯನ್ ಜರ್ನಲ್ ಆಫ್ ಕ್ಲಿನಿಕಲ್ ಹಿಪ್ನೋಸಿಸ್ ಎಂಡ್ ರಿಸರ್ಚ್’ ಇದರ ೧ ರಿಂದ ೫ ಭಾಗ (೧೯೮೩-೧೯೮೭), ‘ಹಿಪ್ನೋಥೆರಪಿ ಎಕಾರ್ಡಿಂಗ್‌ಟೂ ದಿ ಪರ್ಸನಾಲಿಟಿ ಡಿಫೆಕ್ಟ್ ಮಾಡೆಲ್ ಆಫ್ ಸೈಕೋಥೆರಪಿ’, ‘ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನ ಉಪಚಾರ’, ‘ಸುಖೀ ಜೀವನಕ್ಕಾಗಿ ಸಮ್ಮೋಹನ ಉಪಚಾರ’, ‘ಶಾರೀರಿಕ ಕಾಯಿಲೆಗಳಿಗೆ ಸ್ವಸಮ್ಮೋಹನ ಉಪಚಾರ’, ‘ಲೈಂಗಿಕ ಸಮಸ್ಯೆಗಳ ಮೇಲೆ ಸ್ವಸಮ್ಮೋಹನ ಉಪಚಾರ’,‘ಮಾನಸಿಕ ಕಾಯಿಲೆಗಳ ಮೇಲೆ ಸ್ವಸಮ್ಮೋಹನ ಉಪಚಾರ’, (೨ ಭಾಗ) ‘ಸ್ವಭಾವದೋಷ ನಿರ್ಮೂಲನ ಮತ್ತು ಗುಣಸಂವರ್ಧನ ಪ್ರಕ್ರಿಯೆ’ (೪ ಭಾಗ), ಈ ಗ್ರಂಥಗಳು; ಜನಪ್ರಿಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾದ ಅವರ ೧೨೩ ಲೇಖನಗಳು ಮತ್ತು ವಿದೇಶಗಳಲ್ಲಿ ಪ್ರಶಂಸಿಸಲ್ಪಟ್ಟ ಶೋಧ-ನಿಬಂಧಗಳು ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಯಶಸ್ವಿ ಕಾರ್ಯಕಲಾಪದ ಹಾಗೂ ಸಮ್ಮೋಹನ-ಉಪಚಾರಕ್ಕೆ ಸಂಬಂಧಿಸಿದ ವ್ಯಾಸಂಗಪೂರ್ಣ ಹಾಗೂ ಅದ್ವಿತೀಯ ಸಂಶೋಧನೆಯ ಫಲಶ್ರುತಿಯಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಂತರರಾಷ್ಟ್ರೀಯ ಖ್ಯಾತಿಯ ಸಮ್ಮೋಹನ-ಉಪಚಾರತಜಪರಾತ್ಪರ ಗುರು ಡಾ. ಆಠವಲೆ