ಹಿಂದೂಗಳ ಭೋಗ !

ಬಾಂಗ್ಲಾದೇಶದಲ್ಲಿ ೪ ಕೋಟಿ ೯೦ ಲಕ್ಷ ಹಿಂದೂಗಳು ನಾಪತ್ತೆ, ಪಂಜಾಬ್‌ನಲ್ಲಿ ಖಾಲಿಸ್ತಾನಿ ಉಗ್ರವಾದದಲ್ಲಿ ಹತ್ಯೆಗೀಡಾದ ೩೦ ಸಾವಿರ ಹಿಂದೂಗಳಿಗೆ ನ್ಯಾಯ ನೀಡಿರಿ, ಇಂತಹ ಶೀರ್ಷಿಕೆಗಳು ಇತ್ತೀಚೆಗಷ್ಟೇ ವರ್ತಮಾನಪತ್ರಿಕೆಗಳ ವಾರ್ತೆಗಳಲ್ಲಿ ಕಾಣಿಸಿದವು. ಹಿಂದೂಗಳ ಈ ಸಂಹಾರವೇನು ಅಪಘಾತವಲ್ಲ. ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ? ಇಂದು ಹಿಂದೂ ಪುರೋಹಿತರ ಹತ್ಯೆ,
ನಾಳೆ ಹಿಂದೂ ಪ್ರಾಧ್ಯಾಪಕರ ಹತ್ಯೆ, ನಂತರ ಯಾರೋ ಹಿಂದೂ ವ್ಯಾಪಾರಿಯ ಹತ್ಯೆ ಹಾಗೂ ಆಮೇಲೆ ಹಿಂದೂ ಯುವತಿಯ ಅಪಹರಣ ಮತ್ತು ಅತ್ಯಾಚಾರ. ಈ ವಾರ್ತೆಗಳು ಇಷ್ಟು ವೇಗದಿಂದ ಬರುತ್ತವೆಯೋ, ಅದರ ವಿಚಾರ ಮಾಡುವಾಗ ಬಾಂಗ್ಲಾದೇಶದಿಂದ ಹೆಚ್ಚುಕಡಿಮೆ ೫ ಕೋಟಿ ಹಿಂದೂಗಳು ನಾಪತ್ತೆಯಾಗಿರುವ ವಾರ್ತೆಗೆ ಪುಷ್ಟಿ ಸಿಗುತ್ತದೆ. ವಿದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾಗಲು ಆರಂಭವಾದಾಗ ಭಾರತದಲ್ಲಿ ಆ ವಿಷಯದಲ್ಲಿ ಚಿಂತೆ ನಿರ್ಮಾಣವಾಗುತ್ತದೆ. ಇಂತಹ ಭಾವನಿಕ ಸ್ಥಿತಿ ನಿರ್ಮಾಣವಾಗಲು ಕಾರಣ ಸ್ಪಷ್ಟವಿದೆ. ಭಾರತ ಬಹುಸಂಖ್ಯಾತ ಹಿಂದೂಗಳ ದೇಶವಾಗಿರುವುದರಿಂದ ಸಹಜವಾಗಿಯೇ ಜಗತ್ತಿನಲ್ಲಿ ಎಲ್ಲೆಲ್ಲಿ ಹಿಂದೂಗಳಿದ್ದಾರೆಯೋ, ಅಲ್ಲಲ್ಲಿ ಅವರ ಸ್ಥಿತಿಯ ವಿಷಯವನ್ನು ತಿಳಿದುಕೊಳ್ಳುವುದು ಭಾರತೀಯರ ಸ್ವಾಭಾವಿಕ ಮಾನಸಿಕತೆಯಾಗಿದೆ. ಭಾರತದ ಹಿಂದೂಗಳು ಇಂತಹ ದೌರ್ಜನ್ಯದ ವಿಷಯದಲ್ಲಿ ವಿಚಾರ ಮಾಡತೊಡಗಿದಾಗ ಹಿಂದೂ ಪರಂಪರೆ ಮತ್ತು ಸಂಸ್ಕೃತಿ ಬಹಳಷ್ಟು ವಿರೋಧವನ್ನು ಎದುರಿಸುತ್ತಿದೆ, ಎಂದು ಅರಿವಾಗುತ್ತದೆ. ಹಿಂದೂ ಸಂಸ್ಕೃತಿಯು ಹಿಂದೂಗಳಿಗೆ ಸಾತ್ತ್ವಿಕತೆಯ ಪಾಠ ಕಲಿಸುತ್ತದೆ. ಮಾನವ ಜೀವನವು ಸುಂದರ ಹಾಗೂ ಸುಖಮಯವಾಗುವ ದೃಷ್ಟಿಯಿಂದ ದೃಷ್ಟಿಕೋನವನ್ನು ನೀಡುತ್ತದೆ. ಅದಕ್ಕೆ ದೌರ್ಜನ್ಯ ಎಂಬ ಶಬ್ದವೇ ಗೊತ್ತಿಲ್ಲ. ವಾಮಮಾರ್ಗದಿಂದ ಹೋಗುವವರನ್ನೂ ಸರಿದಾರಿಗೆ ತರುವ ವ್ಯವಸ್ಥೆ ಹಿಂದೂ ಸಂಸ್ಕೃತಿಯಲ್ಲಿದೆ. ಮಾನವನ ಕಾಳಜಿ ವಹಿಸುವ ಇಂತಹ ಸಂಸ್ಕೃತಿ ಬಹುವಿರಳವಾಗಿದೆ ! ಆದರೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ! ಹಿಂದೂ ವೃತ್ತಿಯಿಂದ ಸಹಿಷ್ಣು ಆಗಿದ್ದಾನೆ, ಸಂಘರ್ಷ ಅವನಿಗೆ ಅಪ್ರಿಯ ವಾಗಿದೆ. ಅವನ ಈ ಮುಗ್ಧತೆಯ ಲಾಭವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರು ಹಿಂದೂಗಳ ಮೇಲೇ ದೌರ್ಜನ್ಯ ಮಾಡುತ್ತಾರೆ. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಎರಡೂ ಇಸ್ಲಾಮಿಕ್ ರಾಜ್ಯ ವ್ಯವಸ್ಥೆಯನ್ನು ಹೊಂದಿರುವ ದೇಶಗಳು. ಅವರ ಹೊಕ್ಕಳಬಳ್ಳಿ ಭಾರತಕ್ಕೆ ಜೋಡಿಸ ಲ್ಪಟ್ಟಿದೆಯೆಂಬುದು ಇಂದು ಅವರಿಗೆ ನೆನಪಿಲ್ಲ. ಎಲ್ಲಿ ಕೃತಘ್ನತೆಯಿದೆಯೋ, ಅಲ್ಲಿ ವೈರತ್ವದ ಹೊರತು ಇನ್ನೇನಿರಬಹುದು ? ಬಾಂಗ್ಲಾದೇಶದಿಂದ ಹೇಗೆ ಹಿಂದೂಗಳ ಸಂಹಾರವಾಯಿತೋ, ಹಾಗೆಯೇ ಪಾಕಿಸ್ತಾನದಲ್ಲಿಯೂ ಆಗಿದೆ. ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ೧ ಕೋಟಿ ೬೦ ಲಕ್ಷ ಹಿಂದೂಗಳಿದ್ದರು. ಇಂದು ಅಲ್ಲಿ ೨೫ ರಿಂದ ೩೦ ಲಕ್ಷದಷ್ಟೇ ಹಿಂದೂ ಗಳಿದ್ದಾರೆ. ೧೯೭೧ ರಲ್ಲಿ ಬಾಂಗ್ಲಾದೇಶದ ನಿರ್ಮಿತಿಯಾಗಿದೆ. ಆಗ ಅಲ್ಲಿ ಶೇ. ೧೨ ರಷ್ಟು ಹಿಂದೂಗಳಿದ್ದರು. ಇಂದು ಅದು ಶೇ. .೩೦ ಕ್ಕೆ ಬಂದಿದೆ. ಹಿಂದೂಗಳ ಜನಸಂಖ್ಯೆಯಲ್ಲಿನ ಇಳಿಕೆ ನೈಸರ್ಗಿಕವಾಗಿರದೆ ಮತಾಂಧರ ಕ್ರೌರ್ಯದ ಪರಿಣಾಮವಾಗಿದೆ. ಮಲೇಷ್ಯಾ, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಹಿಂದೂಗಳ ವಸತಿಯಿದೆ. ಅವರು ಅಲ್ಲಿ ಹಿಂದೂ ಸಂಸ್ಕೃತಿಯನ್ನು ಜೋಪಾನ ಮಾಡಿದ್ದಾರೆ. ಅಲ್ಲಿಯೂ ಹಿಂದೂಗಳು ಮತಾಂಧರ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂಗಳ ದೇವಸ್ಥಾನಗಳ ಮೂರ್ತಿಗಳನ್ನು ಕೆಡಹುವುದು ಹಾಗೂ ವಿಡಂಬನೆ ಮಾಡುವುದು ಅಲ್ಲಿನ ಮತಾಂಧರ ನಿತ್ಯ ಕಾರ್ಯಕ್ರಮವಾಗಿದೆ. ಅಂದರೆ ಜೀವಿಸುವ ಸಲುವಾಗಿ ಹೋರಾಡುವುದೇ ಹಿಂದೂಗಳಿಗೆ ಪಾಲಿಗೆ ಬಂದ ಶಾಪವಾಗಿದೆ.
ಪ್ರತ್ಯೇಕತಾವಾದ !
 ಜಗತ್ತಿನಾದ್ಯಂತ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಸ್ವಲ್ಪದರಲ್ಲಿ ದೇಶದ ಮಟ್ಟದಲ್ಲಿ ವಿಮರ್ಶಿಸಬಹುದಾಗಿದೆ. ಪಂಜಾಬ ರಾಜ್ಯದಲ್ಲಿ ಸುಮಾರು ೩೦-೪೦ ವರ್ಷಗಳ ಹಿಂದೆ ಖಾಲಿಸ್ತಾನ ಚಳುವಳಿ ಜರುಗಿತು. ಪಂಜಾಬ ರಾಜ್ಯವನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ಖಾಲಿಸ್ತಾನ ಹೆಸರಿನ ದೇಶವನ್ನು ಈ ಭೂಖಂಡದಲ್ಲಿ ನಿರ್ಮಿಸುವುದೇ ಈ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. ಕೆಲವು ಪ್ರತ್ಯೇಕತಾವಾದಿ ಸಿಕ್ಖ್ ಮುಖಂಡರು ಈ ಚಳುವಳಿಯ ಮುಂದಾಳತ್ವವನ್ನು ವಹಿಸಿದ್ದರು ಹಾಗೂ ಈ ಕಾರ್ಯದಲ್ಲಿ ಪಾಕಿಸ್ತಾನವು ಅವರಿಗೆ ಸಹಕಾರವನ್ನು ನೀಡುತ್ತಿತ್ತು. ಸಹಜವಾಗಿಯೇ ಈ ಚಳುವಳಿಯ ಗುರಿ ಹಿಂದೂಗಳೇ ಆಗಿದ್ದರು. ಖಾಲಿಸ್ತಾನಿ ಚಳುವಳಿಯಲ್ಲಿ ಅಮಾಯಕ ಹಿಂದೂಗಳ ಹತ್ಯೆಯಾಯಿತು; ಆದರೆ ಅವರು ಹುತಾತ್ಮರಾಗಿರುವ ಬಗ್ಗೆ ಭಾರತೀಯ ಇತಿಹಾಸದಲ್ಲಿ ಎಲ್ಲಿಯೂ ಉಲ್ಲೆೀಖಿಸಲಾಗಿಲ್ಲ. ಈಗ ಹುತಾತ್ಮರಾಗಿರುವ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಲು ವಿಶೇಷ ತನಿಖಾ ದಳವನ್ನು ಸ್ಥಾಪಿಸಬೇಕೆನ್ನುವ ಬೇಡಿಕೆ ಸಲ್ಲಿಕೆಯಾಗಿದೆ. ಆದರೆ ಹಿಂದೂಗಳ ಈ ಸಂಹಾರದ ಕುರಿತು ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಎಲ್ಲಿಯೂ ಮಹತ್ವ ಅಥವಾ ಆತ್ಮೀಯತೆ ಕಂಡುಬಂದಿಲ್ಲ. ಇಂದಿನ ರಾಜಕೀಯ ವಾತಾವರಣ ಬದಲಾಗಿದೆ. ಪಂಜಾಬಿನಲ್ಲಿ ಹಿಂದೂಗಳ ಮೇಲಾಗಿರುವ ಈ ಅನ್ಯಾಯವನ್ನು ಇಂದಿನ ವಾತಾವರಣದಲ್ಲಿ ಖಂಡಿತವಾಗಿಯೂ ಯಾರಾದರೂ ಗಮನಹರಿಸುವರೆಂದು ಹಿಂದೂಗಳ ಅನಿಸಿಕೆಯಾಗಿದೆ.
ಸಂಘಟಿತರಾಗುವ ಅವಶ್ಯಕತೆ !
ಹಿಂದೂಗಳ ಮೇಲಾಗುತ್ತಿರುವ ಈ ರೀತಿಯ ದೌರ್ಜನ್ಯಗಳನ್ನು ಪರಿಶೀಲಿಸಿದಾಗ ಹಿಂದೂಗಳ ಸಂಘಟನೆಯ ಹೊರತು ಪರ್ಯಾಯ ಮಾರ್ಗವಿಲ್ಲವೆಂದು ಅನಿಸುತ್ತದೆ. ಇಂತಹ ಮಹತ್ತರ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯು ಪ್ರತಿವರ್ಷ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಆಯೋಜಿಸುತ್ತಿದೆ. ಈ ಅಧಿವೇಶನದಲ್ಲಿ ದೇಶ-ವಿದೇಶದಿಂದ ಹಿಂದುತ್ವನಿಷ್ಠರು ಹಾಗೂ ಅವರ ಸಂಘಟನೆಗಳು ಭಾಗವಹಿಸಿ ಹಿಂದೂಗಳ ದುಃಸ್ಥಿತಿಯನ್ನು ವಿವರಿಸುತ್ತಾರೆ. ಈ ಪ್ರಯತ್ನವನ್ನು ಕಳೆದ ಐದು ವರ್ಷಗಳಿಂದ ಸಮಿತಿಯು ಮಾಡುತ್ತಿದೆ. ಈ ಸಂದರ್ಭದಲ್ಲಿ ಕೆಲವು ಬುದ್ಧಿಜೀವಿಗಳು ಇನ್ನೂ ಎಷ್ಟು ಇಂತಹ ಅಧಿವೇಶನಗಳನ್ನು ಜರುಗಿಸುವವರಿದ್ದಾರೆ ? ಎಂದು ಪ್ರಶ್ನಿಸಬಹುದು. ಅಂದರೆ ಅವರಿಗೆ ಅಕಾಲಿಕವಾಗಿ ಪ್ರಾಣ ಕಳೆದುಕೊಳ್ಳುವ ಹಿಂದೂ ಸಹೋದರರ ಸ್ಥಿತಿಯ ಬಗ್ಗೆ ಏನೂ ಅನಿಸುವುದಿಲ್ಲವೋ ಅಥವಾ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದಿಂದ ಅವರಿಗೆ ಯಾವುದೇ ಕೊಡುಕೊಳ್ಳುವಿಕೆ ಇರುವುದಿಲ್ಲವೇ ? ಇರಲಿ ! ಮುಖ್ಯ ವಿಷಯವೆಂದರೆ ಹಿಂದೂಗಳ ದುಃಸ್ಥಿತಿಯೆಡೆಗೆ ಗಮನಹರಿಸಬೇಕಾಗಿದೆ. ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಒಂದು ಕಾಲದಲ್ಲಿ ದಾನಿಶ ಕನೇರಿಯಾ ಎಂಬ ಒಬ್ಬ ಆಟಗಾರನಿದ್ದನು. ಪಾಕಿಸ್ತಾನದ ತಂಡದಲ್ಲಿ ಅವನಿಗೆ ಸ್ಥಾನ ದೊರೆತಿರುವುದನ್ನು ಗಮನಿಸಿದಾಗ ಜಗತ್ತಿನ ಒಂದು ಪರಮಾಶ್ಚರ್ಯವೇ ಎನ್ನಬಹುದು. ಆದರೆ ಆ ಸಂತೋಷವು ಬಹಳ ಕಾಲದವರೆಗೆ ಇರಲಿಲ್ಲ. ಪಾಕಿಸ್ತಾನವು ಅವನನ್ನು ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಸಿ ಅವನ ಜೀವನವನ್ನೇ ನಾಶಗೊಳಿಸಿತು. ಇತ್ತೀಚೆಗೆ ಅವನ ಆರ್ಥಿಕ ಪರಿಸ್ಥಿತಿ ಬಹಳ ನಾಜೂಕಾಗಿದೆ. ಅಲ್ಲಿ ಅವನಿಗೆ ಸಹಾಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ನಾನು ಹಿಂದೂ ಆಗಿರುವುದರಿಂದ ಪಾಕಿಸ್ತಾನದಲ್ಲಿ ಇಂದು ನನ್ನ ಸ್ಥಿತಿ ಅತ್ಯಂತ ಹೀನಾವಸ್ಥೆಗೆ ತಲುಪಿದೆಯೆಂದು ಕನೇರಿಯಾ ಇತ್ತೀಚೆಗಿನ ತಮ್ಮ ಭಾರತದ ಭೇಟಿಯ ಸಂದರ್ಭದಲ್ಲಿ ಹೇಳಿದ್ದಾನೆ. ಹಿಂದೂಗಳಿಗೆ ಒಳ್ಳೆಯ ದಿನಗಳನ್ನು ಕಾಣಲು ಅವರ ದುಃಸ್ಥಿತಿಯನ್ನು ಗಮನಿಸಬೇಕಾಗುವುದು ಅತ್ಯಂತ ಮಹತ್ವದ್ದಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳ ಭೋಗ !