ತತ್ತ್ವಾಧಾರಿತ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆ !

(ಪೂ.) ಶ್ರೀ. ಕೆ. ಉಮೇಶ ಶೆಣೈ
. ಅಧ್ಯಾತ್ಮದಲ್ಲಿ ತತ್ತ್ವಗಳ ಮಹತ್ವ
ಅಧ್ಯಾತ್ಮದಲ್ಲಿಹಾಗೂ ವಿಜ್ಞಾನ ದಲ್ಲಿಯೂ ಕೆಲವು ತತ್ತ್ವಗಳನ್ನು ಅಂಗೀಕರಿ ಸಲಾಗಿದೆ ಹಾಗೂ ಆ ತತ್ತ್ವಗಳ ಆಧಾರದಲ್ಲಿ ಅವರು ಕಾರ್ಯ ಮಾಡುತ್ತಿರುತ್ತಾರೆ. ವಿಜ್ಞಾನದ ತತ್ತ್ವಗಳು ಪದೇ ಪದೇ ಹಾಗೂ ಸ್ಥಳ ಕಾಲಕ್ಕನುಸಾರ ಬದಲಾಗುತ್ತವೆ; ಆದರೆ ಅಧ್ಯಾತ್ಮದ ತತ್ತ್ವಗಳು ಸ್ಥಳಕಾಲಾತೀತ ವಾಗಿರುತ್ತವೆ. ಅನಾದಿ ಕಾಲದಿಂದ ಬಂದಿರುವ ಅಧ್ಯಾತ್ಮದ ತತ್ತ್ವಗಳು ಇಂದು ಸಹ ಅನ್ವಯಿಸುತ್ತವೆ ಹಾಗೂ ಮುಂದೆಯೂ ಅನ್ವಯವಾಗುತ್ತವೆ.
೧ ಅ. ಅಧ್ಯಾತ್ಮದಲ್ಲಿ ಕಾರ್ಯನಿರತವಾಗಿರುವ ಗುರುತತ್ತ್ವದ ಮಹತ್ವ!:ಗುರು’ ಎಂಬುದು ಒಂದು ತತ್ತ್ವವಾಗಿದೆ. ಈ ತತ್ತ್ವವೇ ಕೆಲವು ಸಂತರನ್ನು ಮತ್ತು ಗುರುಗಳನ್ನು ನಿರ್ಮಾಣ ಮಾಡಿದೆ. ದೇಹಧಾರಿ ಗುರುಗಳು ಎಷ್ಟೇ ಸಂಖ್ಯೆಯಲ್ಲಿದ್ದರೂ, ಅವರೆಲ್ಲರೂ ಒಂದೇ ‘ಗುರುತತ್ತ್ವ’ದಿಂದ ಪರಸ್ಪರ ಜೋಡಿಸಲ್ಪಟ್ಟಿರುತ್ತಾರೆ. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ. ಅದು ಕೇಳುವ, ಓದುವ ಅಥವಾ ನೋಡುವ ಶಾಸ್ತ್ರವಲ್ಲ. ಯಾರು ತತ್ತ್ವಾಧಾರಿತ ಸಾಧನೆ ಮಾಡುತ್ತಾರೋ, ಅವರನ್ನು ಈ ತತ್ತ್ವವು ಪ್ರಗತಿಯ ಕಡೆಗೆ ಕೊಂಡೊಯ್ಯುತ್ತದೆ. ತತ್ತ್ವದ ಕಾರ್ಯವು ತಪ್ಪುರಹಿತವಾಗಿದ್ದು ಅದು ವ್ಯಕ್ತಿಯ ಆಚಾರ, ವಿಚಾರ ಮತ್ತು ಪ್ರಯತ್ನ ಇವುಗಳ ಆಧಾರದಲ್ಲಿಯೇ ಅವನಿಗೆ ಪ್ರತಿಫಲವನ್ನು ಕೊಡುತ್ತದೆ. ಅದರಲ್ಲಿ ಯಾವುದೇ ರೀತಿಯ ತಪ್ಪಾಗಲು ಸಾಧ್ಯವಿಲ್ಲ. ಮನುಷ್ಯನ ಜೀವನದಲ್ಲಿ ಈ ಸಾಧನೆಯ ತತ್ತ್ವವೇ ಕಾರ್ಯನಿರತವಾಗಿರುವುದರಿಂದ ಅವನ ಮುಂದಿನ ಸಾಧನೆ ಹಾಗೂ ಜನ್ಮ, ಪ್ರಾರಬ, ಕೊಡುಕೊಳ್ಳುವ ಲೆಕ್ಕಾಚಾರ, ಬೇಕು-ಬೇಡ, ವಾಸನೆ, ಇಷ್ಟಾನಿಷ್ಟಗಳು ಅದರ ಆಧಾರದಲ್ಲಿಯೇ ನಿರ್ಧರಿಸಲ್ಪಡುತ್ತವೆ. ವ್ಯಕ್ತಿಯ ಕರ್ಮಕ್ಕನುಸಾರ ಅವನಿಗೆ ಪ್ರತಿಫಲ ಸಿಗುತ್ತದೆ.
೧ ಆ. ತತ್ತ್ವ ಹೇಗೆ ಕಾರ್ಯ ಮಾಡುತ್ತದೆ ? : ತತ್ತ್ವವೇ ಇಡೀ ವಿಶ್ವವನ್ನು ನಡೆಸುತ್ತದೆ. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ, ಉನ್ನತಿ-ಅವನತಿ, ಯುದ್ಧಗಳು ಮತ್ತು ರಾಜಕಾರಣ ಇವೆಲ್ಲವೂ ಯಾವುದೋ ಕಾರ್ಯಕಾರಣ ಭಾವದಿಂದ ಘಟಿಸುತ್ತಿದ್ದು ಪೂರ್ವನಿಶ್ಚಿತವಾಗಿರುತ್ತದೆ. ಆದ್ದರಿಂದ ಅವುಗಳನ್ನು ತಪ್ಪಿಸುವುದು ಅಸಾಧ್ಯವಾಗಿದೆ. ಪ್ರತಿಯೊಂದು ಕಾಲಕ್ಕನುಸಾರ ದಾರ್ಶನಿಕರು ಇದನ್ನು ಮೊದಲೇ ಹೇಳಿಟ್ಟಿದ್ದಾರೆ ಹಾಗೂ ಅದಕ್ಕನುಸಾರ ಅದು ಘಟಿಸುತ್ತಾ ಇರುತ್ತದೆ. ಈ ತತ್ತ್ವಗಳು ಯಾವಾಗ ಹಾಗೂ ಹೇಗೆ ನಡೆಯುತ್ತವೆ ? ಎಂಬುದನ್ನು ಕೇವಲ ಶ್ರೇಷ್ಠ ಗುರುಗಳು ಮತ್ತು ದಾರ್ಶನಿಕರೇ ಹೇಳಲು ಸಾಧ್ಯ.
೧ ಇ. ಆಧ್ಯಾತ್ಮಿಕತತ್ತ್ವಗಳು ಬುದ್ಧಿಅಗಮ್ಯವಾಗಿದ್ದು ಅದು ಕೃತಿ ಯನ್ನು ಆಧರಿಸಿರುವುದರಿಂದ ಕೃತಿ ಮಾಡುವುದು ಮಹತ್ವದ್ದಾಗಿದೆ ! :
ಆಧ್ಯಾತ್ಮಿಕತತ್ತ್ವಗಳು ಬುದ್ಧಿಅಗಮ್ಯವಾಗಿದ್ದು ಅದು ಕೃತಿಯನ್ನು ಆಧರಿಸಿರು ವುದರಿಂದ ಕೃತಿ ಮಾಡಿ ಅನುಭೂತಿ ಬಂದ ನಂತರವೇ ಅದು ಸಿದ್ಧವಾಗುತ್ತದೆ. ಒಬ್ಬನಿಗೆ ಅದರ ಮೇಲೆ ಶೇ. ೧೦ ರಷ್ಟೇ ಶ್ರದೆ ಇದ್ದರೆ, ಭಗವಂತನು ಅವನಿಗೆ ಶೇ. ೧೦ ರಷ್ಟೇ ಅನುಭೂತಿ ನೀಡುತ್ತಾನೆ. ಏನೂ ಮಾಡದೆ ಸಾಧನೆಯ ತತ್ತ್ವಗಳ ಅನುಭೂತಿ ಬರುವುದಿಲ್ಲ. ಇದು ತತ್ತ್ವಾಧಾರಿತವಾಗಿದ್ದು ಅದು ಸಾಧನೆಯ ಸಿದ್ಧಾಂತವಾಗಿದೆ. ವೈದ್ಯರು ನೀಡಿದ ಔಷಧಿಯನ್ನು ಸೇವಿಸಿದ ನಂತರವೇ ಅದರ ಕಾರ್ಯ ಪ್ರಾರಂಭವಾಗುತ್ತದೆ; ಆದರೆ ಅದು ಕಾಣಿಸುವುದಿಲ್ಲ. ಅದೇ ರೀತಿ ಸಾಧನೆಯ ಕೃತಿಯಾಗಿದೆ.
೧ ಈ. ಸಾಧನೆಯೆಂದರೆ ಅಂತರ್ಮನಸ್ಸಿನಲ್ಲಿರುವ ಸಂಸ್ಕಾರಗಳ ನಿರ್ಮಿತಿ ಹಾಗೂ ಅವುಗಳನ್ನು ನಾಶಗೊಳಿಸುವ ಶಕ್ತಿಯಾಗಿದ್ದು ಸಾಧನೆಯಲ್ಲಿ ಕಲ್ಪನೆ ಮಾಡಿರುವ ತತ್ತ್ವಗಳೇ ಮನುಷ್ಯನ ಸೂಕ್ಷ್ಮದೇಹದಲ್ಲಿ ಪರಿವರ್ತನೆ ಮಾಡುತ್ತಿರುವುದು : ಹೇಗೆ ಗಣಕಯಂತ್ರದಲ್ಲಿ ನಾವು ಯಾವುದಾದರೂ ವಿಷಯವನ್ನು ಅಥವಾ ವಿಡಿಯೋವನ್ನು ಹಾಕಿದಾಗ ಅದು ಸಂಗ್ರಹವಾಗು ತ್ತದೆಯೋ, ಹಾಗೆಯೇ ದೇವರು ನಿರ್ಮಾಣ ಮಾಡಿದ ನಮ್ಮ ಲಿಂಗದೇಹ ದಲ್ಲಿರುವ ನಮ್ಮ ಗುಣ, ದೋಷ, ಅಹಂ, ಭಾವ ಮತ್ತು ಭಕ್ತಿ ಇತ್ಯಾದಿಗಳು ಸಂಗ್ರಹವಾಗಿ ನಾವು ಆ ಸಂಸ್ಕಾರ ಎಂಬ ಹೆಸರಿನ ಧ್ವನಿಚಿತ್ರ ಮುದ್ರಿಕೆಯ ಹಾಗೆ ವರ್ತಿಸುತ್ತೇವೆ. ಈ ಸಂಸ್ಕಾರಗಳ ನಿರ್ಮಾಪಕರು ಹಾಗೂ ಅದನ್ನು ಅಳಿಸಿ ಹಾಕುವವರೂ ನಾವೇ ಆಗಿರುತ್ತೇವೆ. ಸಾಧನೆಯಿಂದಲೇ ನಾವು ನಮ್ಮ ಸಂಸ್ಕಾರವನ್ನು ಅಳಿಸಿ ಆ ಸ್ಥಳದಲ್ಲಿ ದೈವೀ ಗುಣಗಳನ್ನು ನಿರ್ಮಾಣ ಮಾಡಿ ಪ್ರಗತಿ ಮಾಡುತ್ತಾ ಮನುಷ್ಯಜನ್ಮದ ಧ್ಯೇಯವಾಗಿರುವ ಮೋಕ್ಷದ ವರೆಗೆ ಹೋಗಬಹುದು. ಅಂತರ್ಮನಸ್ಸಿನ ಸಂಸ್ಕಾರಗಳ ನಿರ್ಮಿತಿ ಹಾಗೂ ಅದನ್ನು ನಾಶಗೊಳಿಸುವುದು, ಇವೆರಡೂ ಕೇವಲ ಸಾಧನೆಯಿಂದಲೇ ಸಾಧ್ಯವಾಗುತ್ತದೆ. ಸಾಧನೆಯೆಂದರೆ, ದೇವರು ನಮಗೆ ನೀಡಿದ ಕ್ರಿಯ ಮಾಣವನ್ನು ಯೋಗ್ಯರೀತಿಯಲ್ಲಿ ಉಪ ಯೋಗಿಸುವುದು. ಇದರಿಂದ ನಾವು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಬಹುದು. ಸಾಧನೆಯಲ್ಲಿ ಕಲ್ಪನೆ ಮಾಡಿರುವ ತತ್ತ್ವಗಳೇ ನಮ್ಮ ಸೂಕ್ಷ್ಮದೇಹದಲ್ಲಿ ಪರಿವರ್ತನೆಗಳನ್ನು ಮಾಡುತ್ತವೆ.
.ಅಧ್ಯಾತ್ಮಶಾಸ್ತ್ರದ ಕರ್ಮಫಲನ್ಯಾಯ

೨ ಅ. ಕರ್ಮಫಲನ್ಯಾಯವು ತತ್ತ್ವಾಧಾರಿತ ವಾಗಿರುವುದರಿಂದ ಅದರಲ್ಲಿ ಸ್ಥಳಕಾಲಾನುಸಾರ ಬದಲಾವಣೆ ಇಲ್ಲದಿರುವುದು : ತತ್ತ್ವವು ಅಶಕ್ತರು ಅಥವಾ ಸಶಕ್ತರು, ಯುವಕರು ಅಥವಾ ವೃದ್ಧರು, ರೋಗಿ ಅಥವಾ ಆರೋಗ್ಯವಂತ ಇತ್ಯಾದಿ ಭೇದಭಾವ ಮಾಡದೆ ವ್ಯಕ್ತಿಯ ಕರ್ಮವನ್ನು ನೋಡಿ ಅದರ ಪ್ರತಿಫಲವನ್ನು ನೀಡುತ್ತದೆ. ಕರ್ಮಫಲನ್ಯಾಯವು ತತ್ತ್ವಾಧಾರಿತವಾಗಿರುವುದರಿಂದ ಯಾರಿಗೂ ಅನ್ಯಾಯವಾಗಲು ಸಾಧ್ಯವೇ ಇಲ್ಲ. ಇಲ್ಲಿ ನಾವು ನಮ್ಮ ಕ್ರಿಯಮಾಣವನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದು ಮಹತ್ವದ್ದಾಗಿದೆ. ಕೆಲವು ಬುದ್ಧಿಪ್ರಾಮಾಣ್ಯವಾದಿಗಳು, ಸಾಮ್ಯವಾದಿಗಳು, ನಿರೀಶ್ವರವಾದಿಗಳು ಹಾಗೂ ಇತರ ಪಂಥೀಯರು ಕರ್ಮಫಲನ್ಯಾಯವನ್ನು ನಂಬದಿರಬಹುದು; ಆದರೆ ಅವರು ಮಾಡಿದ ಕರ್ಮದ ಫಲವನ್ನು ಅವರು ಇದೇ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸಲೇ ಬೇಕಾಗುವುದು; ಏಕೆಂದರೆ, ಕರ್ಮಫಲನ್ಯಾಯವು ತತ್ತ್ವಾಧಾರಿತವಾಗಿದೆ. ಸುಖ-ದುಃಖ, ಕಾಯಿಲೆ-ಕಸಾಲೆ, ಬಡತನ-ಶ್ರೀಮಂತಿಕೆ ಮುಂತಾದವುಗಳಿಗೆ ಹಾಗೂ ಎಲ್ಲ ಜಾತಿ-ಪಂಗಡ, ಸಂಪ್ರದಾಯ, ಪಂಥ, ರಾಷ್ಟ್ರ ಮತ್ತು ಸ್ಥಳ-ಕಾಲ ಇವೆಲ್ಲದಕ್ಕೂ ಕರ್ಮಫಲನ್ಯಾಯವು ವ್ಯಾಪಿಸಿದೆ. ಕರ್ಮಫಲನ್ಯಾಯವನ್ನು ನಂಬದಿರುವವರಿಗೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ನಮ್ಮ ನಿಷ್ಠೆ ಯಾವಾಗಲೂ ತತ್ತ್ವಾಧಾರಿತವಾಗಿರಬೇಕು.
೨ ಆ. ಕರ್ಮಫಲನ್ಯಾಯಕ್ಕನುಸಾರ ಪಾಪ-ಪುಣ್ಯ ಮತ್ತು ಅವುಗಳ ಫಲ

೨ ಆ ೧. ಪಾಪದ ಫಲವನ್ನು ಅನುಭವಿಸಬೇಕಾಗುವುದು : ಸತ್ಯ,ಧರ್ಮ, ಒಳ್ಳೆಯ ವಿಚಾರ, ಆಚಾರ, ವರ್ತನೆ ಇತ್ಯಾದಿ ಮನುಷ್ಯನನ್ನು ಯೋಗ್ಯ ದಿಕ್ಕಿಗೆ ಒಯ್ಯುತ್ತದೆ. ಅದೇ ರೀತಿ ಅಧರ್ಮಾಚರಣೆ, ಕೆಟ್ಟ ವಿಚಾರ, ಕೆಟ್ಟ ಆಚಾರ, ಅತ್ಯಾಚಾರ ಮತ್ತು ಭ್ರಷ್ಟಾಚಾರ ಇತ್ಯಾದಿ ಮನುಷ್ಯನನ್ನು ಅವನತಿಯತ್ತ ತಲುಪಿಸುತ್ತದೆ. ಕೆಲವೊಮ್ಮೆ ಕೆಟ್ಟ ಆಚಾರವಿಚಾರವಿರುವ ಮನುಷ್ಯ ತನ್ನ ಶ್ರೇಷ್ಠವಾದ ಪುಣ್ಯದಿಂದ ಕೆಲವು ಕಾಲ ಸುಖವನ್ನು ಅನುಭವಿಸುತ್ತಾನೆ; ಆದರೆ ಅದು ತಾತ್ಕಾಲಿಕ ಅಂದರೆ ಕ್ಷಣಿಕ ಆಗಿರುತ್ತದೆ. ಪಾಪದ, ಕುಕರ್ಮದ ಫಲವನ್ನು ಅನುಭವಿಸದೆ ಅವನಿಗೆ ಬೇರೆ ಪರ್ಯಾಯವಿರುವುದಿಲ್ಲ. ಇಂದಲ್ಲ ನಾಳೆ, ಅವನು ಮಾಡಿದ ಕರ್ಮದ ಫಲ ಅವನಿಗೆ ಸಿಗುವುದು ನಿಜ. ಪುರಾಣದಲ್ಲಿ ರಾವಣ, ಕಂಸ, ದುರ್ಯೋಧನ ಮುಂತಾದ ರಾಜರು ತಮ್ಮ ಪೂರ್ವಜನ್ಮದ ಪುಣ್ಯಫಲದಿಂದಲೇ ರಾಜ್ಯ ನಡೆಸಿದರು ಹಾಗೂ ತಮ್ಮ ಕುಕರ್ಮದಿಂದ ಹಾಗೂ ಅನ್ಯಾಯದಿಂದ ಪುಣ್ಯದ ಫಲವು ಕಡಿಮೆಯಾದ ತಕ್ಷಣ ಅವರಿಗೆ ಪಾಪದ ಫಲವನ್ನು ಅನುಭವಿಸಬೇಕಾಯಿತು ಹಾಗೂ ಅವರ ಸರ್ವನಾಶವಾಯಿತು.
೨ ಆ ೨. ಪಾಪಕರ್ಮದ ಫಲವು ಕಡಿಮೆಯಾದ ತಕ್ಷಣ ಪುಣ್ಯದ ಫಲವನ್ನು ಅನುಭವಿಸಬೇಕಾಗುವುದು : ಇದೇ ತತ್ತ್ವವು ಕೆಲವೊಮ್ಮೆ ಒಳ್ಳೆಯ ಕಾರ್ಯವನ್ನೂ ಮಾಡಿಸಿಕೊಳ್ಳುತ್ತದೆ. ಶ್ರೀರಾಮಚಂದ್ರ ಮತ್ತು ಪಾಂಡವರು ಬಹಳಷ್ಟು ಕಷ್ಟಗಳನ್ನು ಅನುಭವಿಸಿ ತಮ್ಮ ಧರ್ಮಾಚರಣೆಯಿಂದ ಮತ್ತು ದೈವೀ ನಿಷ್ಠೆಯಿಂದ ರಾಜ್ಯ ನಡೆಸಿದರು. ಆದ್ದರಿಂದ ಅವರು ಅಜರಾಮರರಾದರು. ಕೆಲವರು ಬಹಳ ಕಷ್ಟಪಡುತ್ತಿರುವುದು ಕಾಣಿಸುತ್ತದೆ. ಇಲ್ಲಿಯೂ ಅವರ ಹಿಂದಿನ ಜನ್ಮಗಳ ಪಾಪಕರ್ಮದ ಫಲ ಕಡಿಮೆಯಾದ ತಕ್ಷಣ ಅವರು ಮುಂದೆ ಒಳ್ಳೆಯ ಫಲವನ್ನು ಅನುಭವಿಸುತ್ತಿರುವುದು ಕಾಣಿಸುತ್ತದೆ. ಒಳ್ಳೆಯ ಕರ್ಮ ಒಳ್ಳೆಯ ಪ್ರತಿಫಲ ಹಾಗೂ ಕೆಟ್ಟ ಕರ್ಮ ಕೆಟ್ಟ ಪ್ರತಿಫಲ ಇದು ನಿರ್ಧರಿಸಲ್ಪಟ್ಟಿದೆ. ಆದ್ದರಿಂದ ದೇವರ ದರ್ಬಾರಿನಲ್ಲಿ ‘ದೇರ್ ಹೈ, ಲೆಕಿನ್ ಅಂಧೇರ್ ನಹೀ ಹೈ’ ‘God sees the truth but waits’ಎಂದು ಹೇಳುತ್ತಾರೆ.
. ಕಲಿಯುಗದ ಪ್ರಭಾವ ಮತ್ತು ಸಾಧನೆಯ ಮಹತ್ವ

೩ ಅ. ಕಲಿಯುಗದ ಪ್ರಭಾವದಿಂದ ವಿಶ್ವದಲ್ಲಿ ನಿರ್ಮಾಣವಾದ ಅಶಾಂತಿ ಹಾಗೂ ಅಭದ್ರತೆ : ಕಾಲಚಕ್ರವು ಉರುಳುತ್ತಾ ಇದೆ. ಈಗ ನಾವು ಕಲಿಯುಗದ ಪ್ರಭಾವವನ್ನು ನೋಡುತ್ತಿದ್ದೇವೆ. ಇಂದು ಎಲ್ಲ ರಾಷ್ಟ್ರಗಳಲ್ಲಿ ಅನ್ಯಾಯ, ದೌರ್ಜನ್ಯ ಹಾಗೂ ಭ್ರಷ್ಟಾಚಾರ ತಮ್ಮ ಅಧಿಕಾರವನ್ನು ಸ್ಥಾಪಿಸುತ್ತಿವೆ. ಧರ್ಮದ ಹೆಸರಿನಲ್ಲಿ ಕಟ್ಟರ್‌ಪಂಥೀಯ ಮತಾಂಧರ ಅನ್ಯಾಯ, ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಉಗ್ರವಾದ, ‘ಲವ್ ಜಿಹಾದ್’ ಇವೆಲ್ಲ ಈಗ ವಿಶ್ವವ್ಯಾಪಿಯಾಗಿವೆ. ಇವುಗಳಿಂದ ವಿಶ್ವದಲ್ಲಿ ಅಶಾಂತಿ ಮತ್ತು ಅಭದ್ರತೆ ನಿರ್ಮಾಣವಾಗಿದೆ. ಇನ್ನೊಂದೆಡೆ ಕ್ರೈಸ್ತರಿಂದ ಮತಾಂತರದ ಷಡ್ಯಂತ್ರ ರಚಿಸಲಾಗುತ್ತಿದೆ. ಕ್ಷಣಿಕ ಸುಖದ ಆಸೆಯಿಂದ ‘ನಾವು ಬಡತನದ ಬೇಗುದಿಯಿಂದ ಪಾರಾಗಬಹುದು’, ಎಂಬ ಮಾನಸಿಕತೆಯಿಂದಾಗಿ ಅನೇಕ ಜನರು ಮತಾಂತರವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಸಂಪೂರ್ಣ ವಿಶ್ವದಲ್ಲಿ ಇವೆರಡು ಪಂಥಗಳು ಬೃಹತ್ಪ್ರಮಾಣದಲ್ಲಿ ಹರಡಿವೆ. ಮತಾಂತರ ಮಾಡುವುದರಿಂದ ಕ್ರೈಸ್ತ ಜಗತ್ತು ಸುಖಿಯಾಗಬಹುದೇ ? ಉಗ್ರವಾದಿ ಜಿಹಾದಿ ಮಾನಸಿಕತೆಯಿಂದ ಮುಸಲ್ಮಾನ ಜಗತ್ತು ಸುಖಿಯಾಗಬಹುದೇ? ಎರಡೂ ಪಂಥದವರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳು ಇಂದು ಅಭದ್ರತೆಯ ಕರಿನೆರಳಿನಲ್ಲಿವೆ. ನಾಳೆ ಏನಾಗಬಹುದೆಂದು ಯಾರಿಗೂ ಗೊತ್ತಿಲ್ಲ.
೩ ಆ. ಮಹಾಯುದ್ಧದ ಕರಿನೆರಳು ಮತ್ತು ದುರ್ಜನರ ನಾಶದ ಪ್ರಕ್ರಿಯೆ ಆರಂಭ
ನಾವು ಈಗ ಮಹಾಯುದ್ಧದ ಹೊಸ್ತಿಲಲ್ಲಿ ನಿಂತಿದ್ದೇವೆ. ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಪಾಪಕರ್ಮಗಳು ಮಿತಿಮೀರಿವೆ. ಸಾಧು-ಸಂತರು ಮತ್ತು ಸಾತ್ತ್ವಿಕ ಜನರಿಗೆ ಸಾಧನೆ ಮಾಡಲು ಹಾಗೂ ಧರ್ಮಾಧಾರಿತ ಜೀವನ ನಡೆಸಲು ಕಠಿಣವಾಗಿದೆ. ಧರ್ಮಕ್ಕೆ ಗ್ಲಾನಿ ಬಂದಿದೆ. ದುರ್ಜನರ ಪಾಪಕರ್ಮಗಳು ಈಗ ಕಂಠದವರೆಗೆ ತಲುಪಿವೆ. ಧರ್ಮಕ್ಕೆ ಗ್ಲಾನಿ ಬಂದಾಗ ಈಶ್ವರ ಅವತಾರ ಪಡೆದು ಧರ್ಮವನ್ನು ಪುನರ್ಸ್ಥಾಪನೆ ಮಾಡುತ್ತಾನೆ. ದುರ್ಜನರ ನಾಶದ ಪ್ರಕ್ರಿಯೆ ಈಗ ಪ್ರಾರಂಭವಾಗಿದೆ. ಆದ್ದರಿಂದ ಈಗ ನಾವು ದುರ್ಜನರ ತಾಂಡವ ನೃತ್ಯವನ್ನು ನೋಡುತ್ತಿದ್ದೇವೆ. ಈಗ ಸಂಪೂರ್ಣ ವಿಶ್ವದಲ್ಲಿಯೇ ಕ್ಷೋಭೆಯ ವಾತಾವರಣವಿದೆ. ದೀಪವು ಆರುವಾಗ ಅದು ಹೆಚ್ಚು ಪ್ರಕಾಶಮಯವಾಗುತ್ತದೆ. ದುರ್ಜನರ ನಾಶದ ಪ್ರಕ್ರಿಯೆ ಈಗ ಪ್ರಾರಂಭವಾಗಿರುವುದರಿಂದ ಸಂಪೂರ್ಣ ವಿಶ್ವದಲ್ಲಿ ದುರ್ಜನರ ತಾಂಡವ ನೃತ್ಯ ನಡೆಯುತ್ತಿದೆ. ‘ವಿನಾಶಕಾಲೇ ವಿಪರೀತ ಬುದ್ಧಿಃ ’ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
೩ ಇ. ಮುಂಬರುವ ಭೀಕರ ಆಪತ್ಕಾಲದಲ್ಲಿ ಭಗವಂತ ದುರ್ಜನರ ನಾಶಕ್ಕಾಗಿ ಪಂಚಮಹಾಭೂತಗಳನ್ನು ಉಪಯೋಗಿಸುವುದರಿಂದ ಸಾಧನೆ ಮಾಡುವುದು ಮಹತ್ವದ್ದಾಗಿರುವುದು : ವಿಜ್ಞಾನವು ಎಷ್ಟೇ ಮುಂದೆ ಹೋದರೂ, ಅದಕ್ಕೆ ಇನ್ನೂ ಪಂಚಮಹಾಭೂತಗಳನ್ನು ತನ್ನ ನಿಯಂತ್ರಣ ದಲ್ಲಿಡಲು ಸಾಧ್ಯವಾಗಲಿಲ್ಲ. ಈ ಪಂಚಮಹಾಭೂತಗಳೇ ಭಗವಂತನ ಶಸ್ತ್ರಗಳಾಗಿವೆ. ದುಷ್ಟ ದುರ್ಜನರ ನಾಶಕ್ಕಾಗಿ ಭಗವಂತ ಈ ಶಸ್ತ್ರಗಳನ್ನೇ ಉಪಯೋಗಿಸುವನು. ಭೂಕಂಪ, ಮೇಘಸ್ಫೋಟ, ಬೆಂಕಿಯ ದುರಂತ, ಯುದ್ಧಜನ್ಯ ಸ್ಥಿತಿ, ತ್ಸುನಾಮಿ ಇಂತಹ ನೈಸರ್ಗಿಕ ಪ್ರಕೋಪಗಳನ್ನು ತಡೆಯಲು ಇಂದು ವಿಜ್ಞಾನಕ್ಕೆ ಸಾಧ್ಯವಾಗಿಲ್ಲ ಹಾಗೂ ಮುಂದೆಯೂ ಅದು ಸಾಧ್ಯವಾಗುವುದಿಲ್ಲ. ಭೂಕಂಪ, ತ್ಸುನಾಮಿ, ಅತಿವೃಷ್ಟಿ, ಅರಣ್ಯಕ್ಕೆ ಬೆಂಕಿ ಹತ್ತುವುದು, ಇತ್ಯಾದಿಗಳಿಂದ ಕೆಲವೇ ಕ್ಷಣಗಳಲ್ಲಿ ಜಗತ್ತು ನಾಶವಾಗಲು ಸಾಧ್ಯವಿದೆ. ಇಂತಹ ಘಟನೆಗಳನ್ನು ನಾವು ಇಂದು ಸಹ ನೋಡುತ್ತೇವೆ. ಇದೇ ಭಗವಂತನ ದುರ್ಜನರ ನಾಶದ ಪ್ರಕ್ರಿಯೆ ಆಗಿದೆ. ಸಾಧಕರು ಮತ್ತು ಭಕ್ತರು ಇಂತಹ ಆಪತ್ಕಾಲದಲ್ಲಿ ಬದುಕಲು ಸಾಧ್ಯವಿದೆ; ಆದ್ದರಿಂದಲೇ ಮುಂಬರುವ ಆಪತ್ಕಾಲವನ್ನು ಎದುರಿಸಲು ಸಾಧನೆ ಮಾಡಬೇಕೆಂದು ಎಲ್ಲರನ್ನೂ ಗುರುದೇವರು ಉತ್ತೇಜಿಸುತ್ತಿದ್ದಾರೆ. ಗೀತೆ ಯಲ್ಲಿ ಹೇಳಿದಂತೆ ಭಗವಂತನೇ ಸಾಧಕರ ರಕ್ಷಣೆ ಮತ್ತು ದುರ್ಜನರ ನಾಶ ಗೊಳಿಸಲಿಕ್ಕಿದ್ದಾನೆ; ಆದ್ದರಿಂದ ಸಾಧನೆಗೆ ಪರ್ಯಾಯವಿಲ್ಲ.
೩ ಈ. ಸಂಪೂರ್ಣ ಮನುಕುಲವೇ ವಿನಾಶದ ಅಂಚಿನಲ್ಲಿರುವುದರಿಂದ ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನೆಗೆ ಪರ್ಯಾಯವಿಲ್ಲದಿರುವುದು: ಕ್ರೈಸ್ತ ದೇಶಗಳ ಚರ್ಚ್‌ಗಳಲ್ಲಿ ನಡೆಯುವ ಅನೈತಿಕತೆಯು ಈಗ ಮಿತಿಮೀರಿದೆ. ಪೋಪ್ ಇವರ ವ್ಯಾಟಿಕನ್ ಅಲ್ಲೋಲಲ್ಲೋಲವಾಗುತ್ತಿದೆ. ಮುಸಲ್ಮಾನರ ಜಗತ್ತು (ಶಿಯಾ-ಸುನ್ನಿ) ಅಂತರಿಕ ಕಲಹದಿಂದ ಕ್ಷೀಣವಾಗುತ್ತಿದೆ. ಉಗ್ರವಾದವು ಸಂಪೂರ್ಣ ಮುಸಲ್ಮಾನ ಜಗತ್ತನ್ನು ವಿನಾಶದತ್ತ ಒಯ್ಯುತ್ತಿದೆ. ಚೀನಾದ ವಿಸ್ತಾರವಾದವನ್ನು ಸಂಪೂರ್ಣ ಜಗತ್ತೇ ಎದುರಿಸಬೇಕಾಗುತ್ತಿದೆ. ಮೂರನೇ ಮಹಾಯುದ್ಧದ ವ್ಯೆಹ ರಚನೆ ಈಗಲೇ ಪ್ರಾರಂಭವಾಗಿದೆ. ಸಮಸ್ತ ಮಾನವ ಜಾತಿಯೇ ವಿನಾಶದ ಮಾರ್ಗದಲ್ಲಿದೆ.
. ನಿರೀಶ್ವರವಾದಿಗಳು, ಬುದ್ಧಿಪ್ರಾಮಾಣ್ಯವಾದಿಗಳು, ಸಾಮ್ಯವಾದಿ ಗಳು ಮತ್ತು ಹಿಂದೂದ್ವೇಷಿಗಳು ಅಧ್ಯಾತ್ಮದಲ್ಲಿನ ತತ್ತ್ವಗಳನ್ನು ಅಧ್ಯಯನ ಮಾಡುವ ಅವಶ್ಯಕತೆ : ನಿರೀಶ್ವರವಾದಿಗಳು, ಬುದ್ಧಿಪ್ರಾಮಾಣ್ಯವಾದಿಗಳು, ಸಾಮ್ಯವಾದಿಗಳು ಮತ್ತು ಹಿಂದೂದ್ವೇಷಿಗಳು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿ ಅವರು ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನಾ ಮಾರ್ಗವನ್ನು ಶ್ರದ್ಧೆಯಿಂದ ಮತ್ತು ನಿಷ್ಠೆಯಿಂದ ಆಚರಣೆ ಮಾಡಿ ಅದರಲ್ಲಿನ ಸತ್ಯವನ್ನು ಆನುಭವಿಸಿದ ನಂತರ ತರ್ಕವನ್ನು ಮಂಡಿಸಬೇಕು. ಆ ವಿಷಯದಲ್ಲಿ ಸ್ವಲ್ಪವೂ ಜ್ಞಾನವಿಲ್ಲದಿರುವಾಗ ಅಭ್ಯಾಸಹೀನ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಇಂದು ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ದೇಶ ವಿದೇಶಗಳಿಂದ ವಿವಿಧ ಪಂಥೀಯರು ಸಾಧನೆ ಮಾಡಿ ಮೋಕ್ಷ ಪ್ರಾಪ್ತಿಯ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಸಾಧನೆಯೆಂದರೆ ಇತರ ಶಾಸ್ತ್ರ ಗಳಂತೆಯೇ ಒಂದು ಶಾಸ್ತ್ರವೇ ಆಗಿದೆ. ಪಾಶ್ಚಿಮಾತ್ಯ ದೇಶಗಳಿಂದ ಅನೇಕ ಜನರು ಇಂದು ಸನಾತನದ ಆಶ್ರಮಕ್ಕೆ ಬಂದು ಜಿಜ್ಞಾಸೆಯಿಂದ ಸಾಧನೆ ಮಾಡಿ ಅದರ ಅನುಭೂತಿಯನ್ನು ಪಡೆಯುತ್ತಿದ್ದಾರೆ. ಅಲ್ಲಿ ಇಂದು ಹಿಂದೂ ಧರ್ಮದ ವಿಷಯದಲ್ಲಿ ಆಳವಾದ ಸಂಶೋಧನೆ ನಡೆಯುತ್ತಿದೆ. ಅಧ್ಯಾತ್ಮವು ಇತರ ಶಾಸ್ತ್ರದಂತೆಯೇ ಒಂದು ಶಾಸ್ತ್ರವೇ ಆಗಿದೆಯೆಂಬುದು ಸಿದ್ಧವಾಗುತ್ತಿದೆ. ಇದನ್ನು ಬುದ್ಧಿಪ್ರಾಮಾಣ್ಯವಾದಿಗಳು ಗಮನಿಸಬೇಕು.
. ಹಿಂದೂ ಜೀವನಪದ್ಧತಿಯಾಗಿರುವ ಹಿಂದೂ ಧರ್ಮದ ಕಡೆಗೆ ಪಾಶ್ಚಾತ್ಯರ ಒಲವು !: ಹಿಂದೂ ಎಂಬುದು ಒಂದು ಜೀವನಪದ್ಧತಿಯಾಗಿದೆ, ಆಚಾರ-ವಿಚಾರ, ವರ್ತನೆ ಆಗಿದೆ. ಆ ಅಡಿಪಾಯವನ್ನೇ ಸಾಧನೆಯು ಆಧರಿಸಿದೆ. ಈಗ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಭೋಗವಿಲಾಸದಿಂದ ಬೇಸರಪಟ್ಟು ಹಿಂದೂ ಜೀವನಪದ್ಧತಿಯ ಕಡೆಗೆ ಹೊರಳುತ್ತಿವೆ. ಭೋಗದಲ್ಲಿ ಅಲ್ಲ, ತ್ಯಾಗದಲ್ಲಿಯೇ ಆನಂದವಿದೆ, ಎಂಬುದು ಅವರಿಗೆ ತಿಳಿದಿದೆ; ಆದ್ದರಿಂದ ಅಮೇರಿಕಾದಂತಹ ಪ್ರಗತಿ ಹೊಂದಿದ ರಾಷ್ಟ್ರದಲ್ಲಿ ಹಿಂದೂ ಧರ್ಮ ಪ್ರಚಾರವು ಅತೀ ವೇಗದಿಂದ ನಡೆಯುತ್ತಿದೆ. ಪಾಶ್ಚಿಮಾತ್ಯರು ಹಿಂದೂ ಧರ್ಮ ಮತ್ತು ಭಾರತದತ್ತ ಆಸೆಯಿಂದ ನೋಡುತ್ತಿದ್ದಾರೆ.
. ಭಗವಂತ ಮತ್ತು ಸಂತರ ಆಶೀರ್ವಾದದಿಂದ ಸನಾತನ ಸಂಸ್ಥೆಯು ಸಾಂಪ್ರತ ಪ್ರತಿಕೂಲ ಆಪತ್ತಿನಿಂದ ಬೆಂಕಿಯಲ್ಲಿ ಬೆಂದ ಶುದ್ಧ ಪುತ್ಥಳಿ ಚಿನ್ನದಂತೆ ಹೊರಗೆ ಬರುವುದು ! : ಗುರುದೇವರ ಸಂಕಲ್ಪ ಮತ್ತು ಶ್ರೇಷ್ಠಗುರುಗಳ ಆಶೀರ್ವಾದದಿಂದ ಹಿಂದೂ ರಾಷ್ಟ್ರ ಸ್ಥಾಪನೆಯು ಖಚಿತವಾಗಿ ಆಗುವುದು; ಆದರೆ ದುಷ್ಟ ಶಕ್ತಿಗಳ ಪ್ರಭಾವದಿಂದ ಹಾಗೂ ಅಂತರರಾಷ್ಟ್ರೀಯ ಷಡ್ಯಂತ್ರದಿಂದ ಅದಕ್ಕೆ ಅನೇಕ ಆಪತ್ತುಗಳು ಬರುತ್ತಿವೆ. ಪ್ರತಿಕೂಲ ವಾತಾವರಣ ನಿರ್ಮಾಣ ಮಾಡಲು ದೇಶದಲ್ಲಿನ ಸಾಮ್ಯವಾದಿಗಳು, ಬುದ್ಧಿಪ್ರಾಮಾಣ್ಯವಾದಿಗಳು, ಜಾತ್ಯತೀತ ರಾಜಕಾರಣಿಗಳು ಪ್ರಸಾರ ಮಾಧ್ಯಮಗಳು ಉರಿಯುತ್ತಿರುವ ಬೆಂಕಿಗೆ ತುಪ್ಪವನ್ನು ಸುರಿಯುತ್ತಿದ್ದಾರೆ. ಇದಕ್ಕೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಿರುದ್ಧ ಆಗುವ ಅಪಪ್ರಚಾರವೇ ಸಾಕ್ಷಿಯಾಗಿದೆ. ‘ಸತ್ಯಮೇವ ಜಯತಿ’, ಅಂದರೆ ‘ಸತ್ಯಕ್ಕೇ ಜಯವಾಗುತ್ತದೆ’, ಎಂಬ ನಾಣ್ನುಡಿ ಯಂತೆ ಭಗವಂತನ ಕೃಪೆಯಿಂದ ಹಾಗೂ ಸಂತ-ಮಹಾತ್ಮರ ಆಶಿರ್ವಾದದಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ಜನರಿಗಿರುವ ವಿಶ್ವಾಸ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. ಇದು ಸತ್ಯ-ಅಸತ್ಯ ಮತ್ತು ನ್ಯಾಯ-ಅನ್ಯಾಯದ ವಿರುದ್ಧದ ಯುದ್ಧವೇ ಆಗಿದೆ. ಈ ಯುದ್ಧವೆಂಬ ಬೆಂಕಿಯಲ್ಲಿ ಬೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಶುದ್ಧ ಚಿನ್ನದಂತೆ ಹೊಳೆಯುತ್ತಾ ಹೊರಗೆ ಬರಲಿಕ್ಕಿದೆ. ಕಾಲಕ್ಕನುಸಾರ ದುರ್ಜನರ ನಾಶವಾಗಿ ಹಿಂದೂ ರಾಷ್ಟ್ರ ಅಂದರೆ ರಾಮರಾಜ್ಯದ ಸ್ಥಾಪನೆ ಆಗಲಿಕ್ಕಿದೆ. ಇದನ್ನು ಯಾವುದೇ ಶಕ್ತಿಗೆ ನಿಲ್ಲಿಸಲು ಸಾಧ್ಯವಿಲ್ಲ.
ಜಯತು ಜಯತು ಹಿಂದೂ ರಾಷ್ಟ್ರಮ್‌
ಈ ಲೇಖನವನ್ನು ಶ್ರೀಕೃಷ್ಣನೇ ನನ್ನ ಮನಸ್ಸಿನಲ್ಲಿದ್ದು ಬರೆಯಿಸಿ ಕೊಂಡನು. ಅದನ್ನು ಅವನ ಚರಣಕಮಲಗಳಿಗೆ ಅರ್ಪಿಸುತ್ತೇನೆ. ಶ್ರೀಕೃಷ್ಣಾರ್ಪಣಮಸ್ತು ’ - (ಪೂ.) ಶ್ರೀ. ಕೆ. ಉಮೇಶ ಶೆಣೈ, ಸನಾತನ ಆಶ್ರಮ, ದೇವದ ಪನವೇಲ್, ಮಹಾರಾಷ್ಟ್ರ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ತತ್ತ್ವಾಧಾರಿತ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆ !