ಸಾಧಕರೇ ತಮ್ಮ ಸುತ್ತಲೂ ಮಾನಸವಾಗಿ ನಾಮಜಪದ ಪೆಟ್ಟಿಗೆಯನ್ನು ತಯಾರಿಸಿ ಅದರೊಳಗೆ ಮಲಗಿರಿ !

(ಪೂ). ಶ್ರೀ. ರಾಜೇಂದ್ರ ಶಿಂದೆ
ಎಷ್ಟೋ ಸಾಧಕರಿಗೆ ಬೆಳಗ್ಗೆ ನಿದ್ದೆ ಯಿಂದ ಎದ್ದ ಬಳಿಕ ನಾನಾ ವಿಧದ ತೊಂದರೆಗಳಾಗುತ್ತವೆ. ಈ ರೀತಿ ತೊಂದರೆಯಿಂದ ಬಳಲುತ್ತಿರುವ ಸಾಧಕರು ಹಾಗೂ ಇತರ ಸಾಧಕರು ಸಹ ರಾತ್ರಿ ಮಲಗುವಾಗ ಮಾನಸವಾಗಿ ನಾಮ ಜಪದ ಪೆಟ್ಟಿಗೆಯನ್ನು ತಯಾರಿಸಿ ಆ ಪೆಟ್ಟಿಗೆಯೊಳಗೆ ಮಲಗಿದರೆ ಅವರಿಗಾ ಗುವ ನಾನಾ ವಿಧದ ತೊಂದರೆಗಳ ಪ್ರಮಾಣ ಎಷ್ಟೋ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ.

. ಮಾನಸವಾಗಿ ನಾಮಜಪದ ಪೆಟ್ಟಿಗೆ ತಯಾರಿಸುವ ಪದ್ಧತಿ
. ಹಾಸಿಗೆಯಲ್ಲಿ ಮಲಗಿದ ಬಳಿಕ ನಾವು ಒಂದು ಪೆಟ್ಟಿಗೆಯೊಳಗೆ ಇದ್ದೇವೆ ಮತ್ತು ಈ ಪೆಟ್ಟಿಗೆಯು ಹಾಸಿಗೆಗಿಂತ ೨-೩ ಅಡಿ ಉದ್ದ-ಅಗಲ ಹೆಚ್ಚಿದೆ ಎಂದು ತಿಳಿದುಕೊಳ್ಳಿರಿ.
. ಮೊದಲು ಪೆಟ್ಟಿಗೆಯ ಕೆಳಭಾಗದಲ್ಲಿ ಅಂದರೆ ಹಾಸಿಗೆಯಲ್ಲಿ ತಲೆಯಿಂದ ಪ್ರಾರಂಭಿಸಿ ಕಾಲಿನ ತನಕ ಮಾನಸವಾಗಿ ನಾಮಜಪವನ್ನು ಬರೆಯಿರಿ.
. ನಂತರ ತಲೆಯ ಮೇಲಿರುವ ಪೆಟ್ಟಿಗೆಯ ಭಾಗದಲ್ಲಿ ಮೇಲಿನಿಂದ ಕೆಳಗಿನ ತನಕ (ಹಾಸಿಗೆಯ ದಿಕ್ಕಿನಲ್ಲಿ) ನಾಮಜಪವನ್ನು ಬರೆಯಬೇಕು.
. ಕಾಲಿನ ಕೆಳಗಿರುವ ಪೆಟ್ಟಿಗೆಯ ಭಾಗದಲ್ಲೂ ತಲೆಯ ಬದಿಯಲ್ಲಿ ಬರೆದಂತೆ ನಾಮಜಪವನ್ನು ಬರೆಯಿರಿ.
. ಈಗ ಪೆಟ್ಟಿಗೆಯ ಎಡಗಡೆ ಹಾಗೂ ಬಲಗಡೆಯಲ್ಲಿ ಮೇಲಿನಿಂದ ಕೆಳಗಿನ ತನಕ ನಾಮಜಪವನ್ನು ಬರೆಯಿರಿ.
. ನಾವು ಮಲಗಿದ ನಂತರ ಕಣ್ಣಿನ ಎದುರುಗಡೆ ಬರುವ (ಆಕಾಶದ ದಿಕ್ಕಿನಲ್ಲಿರುವ) ಪೆಟ್ಟಿಗೆಯ ದಿಕ್ಕಿನ ಮೇಲೆ ತಲೆಯ ಭಾಗದಿಂದ ನಾಮಜಪವನ್ನು ಬರೆಯುತ್ತಾ ಹೋಗಬೇಕು.
. ಮಾನಸ ನಾಮಜಪದ ಪೆಟ್ಟಿಗೆಯ ಬಗ್ಗೆ ಸೂಚನೆ
. ಮಲಗಲು ಎಲ್ಲ ತಯಾರಿ ಆದ ನಂತರ ಕೊನೆಗೆ ನಾಮಜಪದ ಪೆಟ್ಟಿಗೆಯನ್ನು ತಯಾರಿಸಿ. ಅದರ ನಂತರ ಹಾಸಿಗೆಯಿಂದ ಏಳಬಾರದು. ಸಾಧ್ಯವಿದ್ದರೆ ಅನಂತರ ಅನಾವಶ್ಯಕವಾಗಿ ಮಾತನಾಡಬಾರದು.
. ನಾಮಜಪವನ್ನು ದೂರದೂರ ಬರೆಯದೆ ಸ್ವಲ್ಪ ಅಂತರ ಬಿಟ್ಟು ಬರೆಯಬೇಕು. ಉದಾ. ನಾಮಜಪದ ಪೆಟ್ಟಿಗೆಯ ಕೆಳಗಿನ ದಿಕ್ಕಿನಲ್ಲಿ, ಅಂದರೆ ಹಾಸಿಗೆಯ ಮೇಲೆ ನಾಮಜಪವನ್ನು ಬರೆಯುವಾಗ ಮಹರ್ಷಿಗಳು ಎಲ್ಲರಿಗಾಗಿ ನೀಡಿರುವ ೪ ಸಾಲಿನ ಜಪವನ್ನು ಸಾಧಾರಣವಾಗಿ ಮೂರು ಸಲ (ಒಟ್ಟು ೧೨ ಸಾಲು) ಬರೆಯಬಹುದು. ನಾಮಜಪದ ಪೆಟ್ಟಿಗೆಯಿರುವ ತಲೆಯ ಹಾಗೂ ಕಾಲಿನ ಭಾಗದಲ್ಲಿ ಸಾಧಾರಣವಾಗಿ ೨ ಸಲ (ಒಟ್ಟು ೮ ಸಾಲು) ನಾಮಜಪವನ್ನು ಬರೆಯಬಹುದು. (ಇಲ್ಲಿ ನೀಡಿರುವುದಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ನಾಮಜಪವನ್ನು ಬರೆಯಬಹುದು.)
. ೪ ಸಾಲುಗಳಲ್ಲಿ ನಾಮಜಪವನ್ನು ಬರೆಯುವಾಗ ಒಂದು ಸಾಲಿನಲ್ಲಿರುವ ಶಬ್ದವನ್ನು (ಉದಾ. ಓಂ ನಿಸರ್ಗದೇವೋ ಭವ) ಒಂದೇ ಸಾಲಿನಲ್ಲಿ ಬರೆಯಬೇಕು.
. ಇತರ ಯಾವುದೇ ಜಪಗಳನ್ನೂ ಅದೇ ರೀತಿ ಬರೆದು ನಾಮಜಪದ ಪೆಟ್ಟಿಗೆಯನ್ನು ತಯಾರಿಸಿ.
. ನಾಮಜಪದ ಪೆಟ್ಟಿಗೆ ತಯಾರಾದ ಬಳಿಕ ‘‘ಹೇ ಶ್ರೀಕೃಷ್ಣಾ, ನಾಮಜಪದ ಪೆಟ್ಟಿಗೆಯ ಮಾಧ್ಯಮದಿಂದ ನನ್ನ ಸುತ್ತಲೂ ಅಭೇದ್ಯವಾದ ರಕ್ಷಾ ಕವಚ ನಿರ್ಮಾಣವಾಗಿ ನಾಮಜಪದಿಂದ ಪ್ರಕ್ಷೇಪಿತಗೊಳ್ಳುವ ಚೈತನ್ಯದಿಂದ ನನಗೆ ಸಂಪೂರ್ಣ ಲಾಭವಾಗಲಿ. ನಿದ್ದೆಯಲ್ಲಿಯೂ ನಾಮಜಪ ನಡೆಯುತ್ತಿರಲಿ ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ’’ ಎಂದು ಪ್ರಾರ್ಥನೆ ಮಾಡಬೇಕು.
. ನಾಮಜಪದ ಪೆಟ್ಟಿಗೆ ತಯಾರಾದ ನಂತರ ಮಧ್ಯೆ ಏಳಬೇಕಾದರೆ ಮಂಡಲ ಭಗ್ನವಾದ ದಿಕ್ಕನ್ನು ಮತ್ತೆ ನಾಮಜಪ ಬರೆದು ಅದನ್ನು ಮುಚ್ಚಿರಿ.
. ಬೆಳಗ್ಗೆ ಎದ್ದ ಕೂಡಲೇ ನಾಮಜಪದ ಪೆಟ್ಟಿಗೆಯಿಂದ ಲಾಭವಾದ ಬಗ್ಗೆ ಶ್ರೀಕೃಷ್ಣನ ಚರಣಗಳಲ್ಲಿ ಮನಃಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ.
. ಈ ರೀತಿಯ ನಾಮಜಪದ ಪೆಟ್ಟಿಗೆ ಯನ್ನು ಬೇರೆ ಸಮಯದಲ್ಲೂ (ಉದಾ. ಸೇವೆ ಮಾಡುವ ಜಾಗದಲ್ಲಿ, ಪ್ರವಾಸ ಮಾಡುವಾಗ) ತಯಾರಿಸಬಹುದು.
. ಮಾನಸ ನಾಮಜಪದ ಪೆಟ್ಟಿಗೆಯೊಳಗೆ ಮಲಗುವುದರಿಂದಾಗುವ ಲಾಭಗಳು
. ನಿದ್ದೆಯ ಸಮಯಮಿತಿ ಒಂದರಿಂದ ಒಂದೂವರೆ ತಾಸು ಕಡಿಮೆಯಾಗುವುದು
. ಮಲಗಿದ ನಂತರ ಮಧ್ಯದಲ್ಲಿ ಎಚ್ಚರ ವಾಗುವ ಪ್ರಮಾಣ ಕಡಿಮೆಯಾಗುವುದು / ಎಚ್ಚರವಾಗದಿರುವುದು
. ತ್ರಾಸದಾಯಕ ಹಾಗೂ ಭಯಾ ನಕ ಕನಸುಗಳು ಬೀಳುವ ಪ್ರಮಾಣ ಕಡಿಮೆಯಾಗುವುದು
. ಬೆಳಗ್ಗೆ ಎದ್ದ ನಂತರ ನಮ್ಮಲ್ಲಿ ಕಂಡುಬರುವ ಬದಲಾವಣೆ
ಈ ೧. ಮೈಕೈನೋವಿನ ಪ್ರಮಾಣ ಕಡಿಮೆಯಾಗುವುದು / ತೊಂದರೆ ಯಾಗದಿರುವುದು
ಈ ೨. ಪ್ರಾಣಶಕ್ತಿ ಕಡಿಮೆಯಾಗುವ ಪ್ರಮಾಣ ಕಡಿಮೆಯಾಗುವುದು
ಈ ೩. ಹುರುಪು ಹಾಗೂ ಉತ್ಸಾಹವೆನಿಸುವುದು
ಈ ೪. ರಾತ್ರಿಯಿಡೀ ನಾಮಜಪ ನಡೆಯುತ್ತಿರುವುದು ಗಮನಕ್ಕೆ ಬರುವುದು.
ಈ ೫. ಮೊದಲಿಗಿಂತ ಹೆಚ್ಚಿನ ವೇಗದಲ್ಲಿ ಕೃತಿಗಳಾಗುವುವು.
- (ಪೂ). ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ್, ಪನವೇಲ್ (೨೫..೨೦೧೬)
........................................
ಮಾನಸ ನಾಮಜಪದ ಪೆಟ್ಟಿಗೆ ತಯಾರಿಸಿ ಅದರೊಳಗೆ ಮಲಗಿದ್ದರಿಂದ ಬಂದ ಅನುಭೂತಿ
ಆಧ್ಯಾತ್ಮಿಕ ತೊಂದರೆಯಿಂದ ತಡರಾತ್ರಿಯಾದರೂ ನಿದ್ರೆ ಬರದೆ ಇರುವುದು ಹಾಗೂ ಬೆಳಗ್ಗೆ ಎದ್ದಾಗ ಮೈ ಭಾರವಾಗಿರುವುದು ಹಾಗೂ ಮಾನಸ ನಾಮಜಪದ ಪೆಟ್ಟಿಗೆ ತಯಾರಿಸಿ ಅದರೊಳಗೆ ಮಲಗಿದ ನಂತರ ಬೇಗ ಎಚ್ಚರವಾಗುವುದು ಹಾಗೂ ಮೈಕೈನೋವಿನ ಪ್ರಮಾಣ ಮೊದಲಿಗಿಂತ ಕಡಿಮೆಯಾಗುವುದು : ನನಗೆ ಆಧ್ಯಾತ್ಮಿಕ ತೊಂದರೆಯಿರುವುದರಿಂದ ಮಧ್ಯರಾತ್ರಿ ೨ ಗಂಟೆಯ ವರೆಗೆ ನಿದ್ರೆ ಬರುತ್ತಿರಲಿಲ್ಲ. ಬೆಳಗ್ಗೆ ೮ ಗಂಟೆಗೆ ಏಳುವಾಗಲೂ ಮೈ ಭಾರವಾಗಿರುವುದು ಹಾಗೂ ಅಂಗಾಂಗಗಳಲ್ಲಿ ತೀವ್ರ ವೇದನೆಯುಂಟಾಗಿ ಒಂದು ರೀತಿಯಲ್ಲಿ ಪ್ರತಿದಿನ ಮೈ ಜುಮ್ಮುಗಟ್ಟುವುದನ್ನು ಅನುಭವಿಸುತ್ತೇನೆ.
ಪೂ. ರಾಜೇಂದ್ರ ದಾದಾರವರ ಈ ಲೇಖನ ಬಂದ ನಂತರ ಅದರಲ್ಲಿ ಬಂದಂತೆ ೨೭..೨೦೧೬ ರಂದು ರಾತ್ರಿ ಮಲಗುವಾಗ ನಾನು ಮಾನಸ ನಾಮಜಪದ ಪೆಟ್ಟಿಗೆಯನ್ನು ತಯಾರಿಸಿ ಅದರಲ್ಲಿ ಮಲಗಿದೆನು. ಎಷ್ಟೋ ಸಲ ನಾಮದ ಪೆಟ್ಟಿಗೆ ತಯಾರಿಸುವಾಗ ನನ್ನ ಮನಸ್ಸು ಚಂಚಲವಾಗುತ್ತಿತ್ತು. ಅದರಲ್ಲೂ ೬ ದಿಕ್ಕಿನಲ್ಲೂ ನಾಮಜಪ ಬರೆಯುವಾಗ ನನಗೆ ಬಹಳ ಗೊಂದಲವಾಗುತ್ತಿತ್ತು. ಆದ್ದರಿಂದ ಆ ಪೆಟ್ಟಿಗೆ ತಯಾರಿಸಲು ನನಗೆ ಅರ್ಧ ಗಂಟೆ ತಗಲಿತು. ಅನಂತರ ನನಗೆ ಯಾವಾಗ ನಿದ್ರೆ ಬಂದಿತು ಎಂಬುದೇ ತಿಳಿಯಲಿಲ್ಲ.
ಬೆಳಗ್ಗೆ ನನ್ನನ್ನು ಯಾರೂ ಎಬ್ಬಿಸದೆಯೇ ೭ ಗಂಟೆಗೆ ಎಚ್ಚರವಾಯಿತು ಹಾಗೂ ನನಗೆ ಮೈಕೈನೋವು ಎಂದಿಗಿಂತ ಶೇಕಡಾ ೫೦ ಕ್ಕಿಂತಲೂ ಕಡಿಮೆಯಾಗಿತ್ತು ಮತ್ತು ಮೈ ಭಾರವೂ ಶೇಕಡಾ ೭೦ ಕ್ಕಿಂತ ಕಡಿಮೆಯಾಗಿರುವಂತೆನಿಸಿತು. ಆಗ ತಿಳಿಯದೆಯೇ ಕೃತಜ್ಞತೆ ವ್ಯಕ್ತವಾಯಿತು. ದಿನವಿಡೀ ಉತ್ಸಾಹವೆನಿಸುತ್ತಿತ್ತು. ಈ ಎಲ್ಲ ಕೃತಿಗಳಿಂದ ನನಗೆ ಬಹಳ ಆಶ್ಚರ್ಯವೆನಿಸಿತು. ಈ ಕಡತವನ್ನು ತಯಾರಿಸುವಾಗ ಹಾಗೂ ಆ ಸಂದರ್ಭದ ಆಕೃತಿಯನ್ನು ಮಾಡುವಾಗ ಆ ದಿನ ರಾತ್ರಿ ಬಹಳ ಅಡಚಣೆಯಾಯಿತು; ಆದರೆ ಆಗ ಸಿಡಿಮಿಡಿ ಅಥವಾ ಯಾವುದೇ ಮಾನಸಿಕ ತೊಂದರೆಯಾಗದಿರುವುದರ ಅರಿವಾಯಿತು.
- ಸೌ. ಆನಂದಿ ರಾಮಚಂದ್ರ ಪಾಂಗುಳ, ಸನಾತನ ಆಶ್ರಮ, ದೇವದ್, ಪನವೇಲ್ (೨೮..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ ತಮ್ಮ ಸುತ್ತಲೂ ಮಾನಸವಾಗಿ ನಾಮಜಪದ ಪೆಟ್ಟಿಗೆಯನ್ನು ತಯಾರಿಸಿ ಅದರೊಳಗೆ ಮಲಗಿರಿ !