ಧರ್ಮಾಚರಣಿ ಹಿಂದೂಗಳೇ ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಬಲ್ಲರು !

. ಹಿಂದುತ್ವವಾದಿ ಕಾರ್ಯಕರ್ತರ ಸದ್ಯದ ಸ್ಥಿತಿ : ಧರ್ಮರಕ್ಷಣೆಗಾಗಿ ಸಂಘಟಿತರಾದ ವ್ಯಕ್ತಿಗಳು ಹಿಂದುತ್ವವಾದಿ ವಿಚಾರಧಾರೆಯವರಾಗಿದ್ದರೂ, ಪ್ರತಿಯೊಬ್ಬರ ಪ್ರವೃತ್ತಿ, ವಿಚಾರ ಶೈಲಿ ವಿಭಿನ್ನವಾಗಿರುತ್ತದೆ. ಹಿಂದುತ್ವವಾದಿ ಕಾರ್ಯಕರ್ತರಲ್ಲಿ ಕೆಲವರು ವಾಮ ಮಾರ್ಗಿ ಮತ್ತು ವ್ಯಸನಾಧೀನರಾಗಿರುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಾರ್ಯಕರ್ತರು ಅನೇಕ ರಾಜಕೀಯ ಪಕ್ಷಗಳಲ್ಲಿ ಕಾರ್ಯ ಮಾಡುವಂತೆಯೇ ಹಿಂದುತ್ವವಾದಿ ಸಂಘಟನೆಗಳಲ್ಲಿಯೂ ಕಾರ್ಯವನ್ನು ಮಾಡುವುದು ಕಂಡುಬರುತ್ತದೆ. ಹಿಂದುತ್ವವಾದಿ ಕಾರ್ಯಕರ್ತರ ಸದ್ಯಸ್ಥಿತಿಯ ಅಧ್ಯಯನ ಮಾಡಿದರೆ ಇದು ಸಹಜವಾಗಿ ಗಮನಕ್ಕೆ ಬರುವುದು.
. ಧರ್ಮದ ಅಧ್ಯಯನವಿಲ್ಲದಿರುವುದು : ಎಲ್ಲರೂ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಕಾರ್ಯನಿರತರಾಗಿದ್ದರೂ, ಸನಾತನ ಧರ್ಮದ ಅಧ್ಯಯನವಿಲ್ಲದಿರುವುದರಿಂದ ಅನೇಕರಿಗೆ ಹಿಂದೂ ಧರ್ಮದಲ್ಲಿ ಜ್ಞಾನದ ಎಷ್ಟೊಂದು ಅಪಾರ ಭಂಡಾರವಿದೆ ಮತ್ತು ಇತರ ಧರ್ಮಗಳಲ್ಲಿ (ಪಂಥಗಳಲ್ಲಿ) ಅದರ ಒಂದು ಲಕ್ಷಾಂಶದಷ್ಟೂ ಜ್ಞಾನವಿಲ್ಲ ಎಂಬುದರ ಅರಿವಿಲ್ಲ.
. ಸಾಧನೆ ಮಾಡದಿರುವುದು : ಅನೇಕರು ಸಾಧನೆಯನ್ನು ಮಾಡದಿರುವುದರಿಂದ ‘ಹಿಂದೂ ಧರ್ಮವು ಎಷ್ಟು ಸರ್ವೋಚ್ಚ ಮಟ್ಟದ ಅನುಭೂತಿ ಯನ್ನು ಕೊಡುತ್ತದೆ ಮತ್ತು ಕೊನೆಗೆ ಅದ್ವೈತದ ತನಕ ಒಯ್ಯುತ್ತದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ.
. ಹಿಂದೂ ಧರ್ಮದ ಬಗ್ಗೆ ಕೃತಜ್ಞತೆಯಿಲ್ಲದಿರು ವುದು : ವ್ಯವಹಾರದಲ್ಲಿ ಯಾರಾದರೂ ನಮಗೆ ಸಹಾಯ ಮಾಡಿದರೆ ನಮಗೆ ಅವರ ಬಗ್ಗೆ ಕೃತಜ್ಞತೆ ಯೆನಿಸುತ್ತದೆ. ಹಿಂದೂ ಧರ್ಮವು ಜನ್ಮ-ಮರಣದ ಚಕ್ರದಿಂದ ಶಾಶ್ವತ ಮುಕ್ತಿ ಕೊಡುವಂತಹದ್ದಾಗಿದ್ದರೂ, ಅದು ತಿಳಿಯದಿರುವುದರಿಂದ ಅನೇಕರಿಗೆ ಹಿಂದೂ ಧರ್ಮದಲ್ಲಿ ಜನಿಸಿದ್ದಕ್ಕಾಗಿ ಕೃತಜ್ಞತೆಯೆನಿಸುವುದಿಲ್ಲ.
. ನಿಜವಾದ ಧರ್ಮಾಭಿಮಾನ ಇಲ್ಲದೇ ಇರುವುದರಿಂದ ಧರ್ಮದ್ರೋಹಿ ಕೃತ್ಯಗಳು ಘಟಿಸುವುದು : ಕೆಲವರು ಕೇವಲ ಮಾನಸಿಕ ಸ್ತರದಲ್ಲಿ ಧರ್ಮಾಭಿಮಾನ ವನ್ನು ಇಟ್ಟುಕೊಳ್ಳುವುದರಿಂದ ಕೆಲವೊಮ್ಮೆ ಅವರಿಂದ
ಧರ್ಮದ್ರೋಹಿ ಕೃತ್ಯಗಳು ಘಟಿಸುತ್ತವೆ, ಉದಾ. ಶ್ರೀಲಂಕಾದಲ್ಲಿ ತಮಿಳು ಹಿಂದೂಗಳ ಮೇಲಾಗು ತ್ತಿರುವ ಅತ್ಯಾಚಾರಗಳ ಬಗ್ಗೆ ಕೇಂದ್ರದಲ್ಲಿನ ಆಗಿನ ಕಾಂಗ್ರೆಸ್ ಸರಕಾರವು ತೆಗೆದುಕೊಂಡಿದ್ದ ತಟಸ್ಥ ನಿಲುವನ್ನು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಮರ್ಥಿಸಿದ್ದರು. ಆಗ ಅವರನ್ನು ನಿಷೇಧಿಸಲು ತಮಿಳು ಹಿಂದೂಗಳು ಮೂಲತಃ ಬಂಗಾಳದವರಾದ ಮಹರ್ಷಿ ಅರವಿಂದರ ಪಾಂಡಿಚೇರಿಯಲ್ಲಿರುವ ಆಶ್ರಮದ ಮೇಲೆ ದಾಳಿ ಮಾಡಿದ್ದರು. ಸಂತರು ಜಾತಿ, ಪ್ರಾಂತ್ಯ, ಭಾಷೆ ಮತ್ತು ಸ್ವಾಭಿಮಾನ ಇವುಗಳ ಆಚೆಗೆ ಹೋಗಿರುತ್ತಾರೆ. ಮಹರ್ಷಿ ಅರವಿಂದರು ದೇಶ-ವಿದೇಶಗಳಲ್ಲಿ ಹಿಂದೂ ಧರ್ಮದ ಪ್ರಸಾರವನ್ನು ಮಾಡಿದ್ದಾರೆ. ಅವರ ಬಗ್ಗೆ ಅಖಿಲ ಹಿಂದೂ ಸಮಾಜವು ಕೃತಜ್ಞವಾಗಿರಬೇಕು. ತಮಿಳು ವಂಶದ ಹಿಂದೂಗಳ ರಕ್ಷಣೆಗಾಗಿ ಪ್ರಯತ್ನಿಸುವುದು ಧರ್ಮರಕ್ಷಣೆಯ ಕಾರ್ಯವಾಗಿದ್ದರೂ ಸಂತರ ಆಶ್ರಮದ ಮೇಲೆ ದಾಳಿ ಮಾಡುವುದು ಧರ್ಮ ದ್ರೋಹಿ ಕೃತ್ಯವಾಗುತ್ತದೆ. ಸಾಧನೆಯನ್ನು ಮಾಡಿದರೆ ಮಾತ್ರ ಸಂತರ ಮಹತ್ವ ತಿಳಿಯುತ್ತದೆ.
. ದೊಡ್ಡಸ್ತಿಕೆ ಸಿಗಲು ಧರ್ಮರಕ್ಷಣೆಯ ಕಾರ್ಯ ಮಾಡುವುದು : ಕೆಲವರು ತಮ್ಮ ದೊಡ್ಡಸ್ತಿಕೆಗಾಗಿ ಅಥವಾ ರಾಜಕೀಯ ಮಹತ್ವ ಸಿಗಬೇಕೆಂದು ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ಧರ್ಮಕ್ಕೆ, ಅಂದರೆ ಈಶ್ವರನಿಗೆ ಧರ್ಮರಕ್ಷಣೆಗಾಗಿಯಾರ ಆವಶ್ಯಕತೆಯೂ ಇರುವುದಿಲ್ಲ. ಧರ್ಮಕ್ಕೆ ಗ್ಲಾನಿ ಬಂದಾಗ ಭಗವಂತ ಸ್ವತಃ ಅವತಾರ ತಾಳುತ್ತಾನೆ ಅಥವಾ ಯಾರದಾದರೂ ಮಾಧ್ಯಮದಿಂದ ಆ ಕಾರ್ಯವನ್ನು ಮಾಡುತ್ತಾನೆ. ಈ ಕಾರ್ಯದಲ್ಲಿ ನಮ್ಮ ಸಾಧನೆಯೆಂದು ನಾವು ಪಾಲ್ಗೊಳ್ಳಬೇಕಾಗಿರುತ್ತದೆ.
. ಮಾನಸಿಕ ಸ್ತರದ ಧರ್ಮಾಭಿಮಾನವನ್ನಿಟ್ಟು ಕೊಳ್ಳುವ ಹಿಂದುತ್ವವಾದಿಗಳು ಹಿಂದೂ ರಾಷ್ಟ್ರದ ಸ್ಥಾಪನೆಗೆ ಅಪಾತ್ರರಾಗಿದ್ದಾರೆ ! : ಹಿಂದುತ್ವನಿಷ್ಠರ ಈ ಸದ್ಯದ ಸ್ಥಿತಿಯನ್ನು ಹೇಳುವ ಕಾರಣವೇನೆಂದರೆ, ಮಾನಸಿಕ ಸ್ತರದ ಧರ್ಮಾಭಿಮಾನವನ್ನು ಇಟ್ಟು ಕೊಳ್ಳುವುದರಿಂದ ಅವರು ಮಾನಸಿಕ ಮಟ್ಟದ ಹಿಂದುತ್ವವಾದಿಗಳಾಗುತ್ತಾರೆ. ಆದ್ದರಿಂದ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಸಾತತ್ಯ ಉಳಿಯುವುದಿಲ್ಲ. ರಾಷ್ಟ್ರ ಮತ್ತು ಧರ್ಮದ ಹಾನಿಯ ಬಗೆಗಿನ ಮನಸ್ಸಿನ ಕ್ಷೋಭೆ ಕಡಿಮೆಯಾಯಿತೆಂದರೆ ಆ ಸಂದರ್ಭದಲ್ಲಿ ಮಾಡುತ್ತಿದ್ದ ಕಾರ್ಯ ನಿಂತು ಹೋಗುತ್ತದೆ. ಇಂತಹ ಜನರಿಂದ ನಾವು ಒಂದು ಜನರ ಗುಂಪನ್ನು ತಯಾರಿಸ ಬಹುದು; ಆದರೆ ಅದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದಿಲ್ಲ.
. ಹಿಂದೂಗಳೇ, ಧರ್ಮಾಚರಣೆ ಮತ್ತು ಸಾಧನೆ ಮಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! :  ಧರ್ಮಾಚರಣೆ ಮತ್ತು ಸಾಧನೆ ಮಾಡಿದರೆ ಹಿಂದೂ ಧರ್ಮದ ಶ್ರೇಷ್ಠತೆಯ ಅನುಭೂತಿ ಬರುತ್ತದೆ. ಮತ್ತು ಹಿಂದೂ ಧರ್ಮದ ಶ್ರೇಷ್ಠತೆ ತಿಳಿದ ನಂತರವೇ ನಿಜವಾದ ಧರ್ಮಾಭಿಮಾನ ನಿರ್ಮಾಣವಾಗಿ ಸಮಾಜ, ರಾಷ್ಟ್ರ ಮತ್ತು ಧರ್ಮದ ಹಿತಕ್ಕಾಗಿ ನಿಜವಾದ ಪ್ರಯತ್ನಗಳಾಗುತ್ತವೆ. ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವುದರಿಂದ ವ್ಯಕ್ತಿಯು ಧರ್ಮನಿಷ್ಠನಾಗುತ್ತಾನೆ. ಧರ್ಮನಿಷ್ಠನಾದ ವ್ಯಕ್ತಿಯು ಸ್ವತಃ ಹಿಂದೂ ಧರ್ಮದ ಹಾನಿಯನ್ನು ಮಾಡುವುದಿಲ್ಲ ಮತ್ತು ಇತರರು ಧರ್ಮಹಾನಿ ಮಾಡಿದರೆ ಅದನ್ನು ವಿರೋಧಿಸುತ್ತಾನೆ; ಆದುದರಿಂದ ಧರ್ಮರಕ್ಷಣೆಯ ನಿಜವಾದ ಕಾರ್ಯವನ್ನು ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಯೇ ಮಾಡಬಲ್ಲನು. ಇದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಧರ್ಮಾಚರಣಿ ಮತ್ತು ಸಾಧನೆಯನ್ನು ಮಾಡುವ ಹಿಂದೂವೇ ಏಕೆ ಮಾಡಬಲ್ಲನು ಎಂಬುದು ಗಮನಕ್ಕೆ ಬರುತ್ತದೆ.
- .ಪೂ. ಡಾ. ಆಠವಲೆ

ರಾಷ್ಟ್ರರಚನೆಯನ್ನು ನೇತಾರರು ಮತ್ತು ಅವರ ಅನುಯಾಯಿಗಳಲ್ಲಿ ನೈತಿಕ (ಆಧ್ಯಾತ್ಮಿಕ) ಪ್ರೇರಣೆಯಿರುವುದು ಆವಶ್ಯಕವಾಗಿದೆ. ಧರ್ಮಾಚರಣಿ ಹಿಂದೂಗಳಲ್ಲಿಯೇ ನಿಜವಾದ ನೈತಿಕ ಪ್ರೇರಣೆ ಜಾಗೃತವಾಗುವುದರಿಂದ ಅವರು ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರತ್ಯಕ್ಷ ಕಾರ್ಯ ಮಾಡಬಲ್ಲರು. - .ಪೂ. ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಾಚರಣಿ ಹಿಂದೂಗಳೇ ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಬಲ್ಲರು !