ಸಾಧನೆಯ ದೃಷ್ಟಿಯಿಂದ ೧೪ ವಿದ್ಯೆ ಮತ್ತು ೬೪ ಕಲೆಗಳ ಶಿಕ್ಷಣದ ಬೀಜವನ್ನು ಬಿತ್ತಿದ ಪರಾತ್ಪರ ಗುರು ಡಾ. ಆಠವಲೆ !

‘ಸಾಧನೆಯಲ್ಲಿ ‘ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’, ಎಂಬ ಸಿದ್ದಾಂತವನ್ನು ಅನುಸರಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ವಿದ್ಯೆಯನ್ನು ಗ್ರಹಿಸುವ ಕ್ಷಮತೆ ಮತ್ತು ಕಲೆಯ ಆಸಕ್ತಿಗನುಸಾರ ಅವರಿಗೆ ಸಾಧನೆಯನ್ನು ಕಲಿಸಿದರು. ಇಂದು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ‘ಈಶ್ವರಪ್ರಾಪ್ತಿಗಾಗಿ ಕಲೆ’, ಎಂಬ ಧ್ಯೇಯವನ್ನಿಟ್ಟು ಅನೇಕ ಸಾಧಕರು ಚಿತ್ರಕಲೆ, ಮೂರ್ತಿಕಲೆ, ಸಂಗೀತ, ನೃತ್ಯಕಲೆ, ವಾಸ್ತುವಿದ್ಯೆ ಇತ್ಯಾದಿ ಕಲೆಗಳ ಮೂಲಕ ಸಾಧನೆ ಮಾಡುತ್ತಿದ್ದಾರೆ. ಮುಂದೆ ಪರಾತ್ಪರ ಗುರು ಡಾ. ಆಠವಲೆ ಇವರು ಸ್ಥಾಪನೆ ಮಾಡಿದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮೂಲಕ ಸಾಧನೆಯ ದೃಷ್ಟಿಯಿಂದ ೧೪ ವಿದ್ಯೆಗಳು ಮತ್ತು ೬೪ ಕಲೆಗಳ ಶಿಕ್ಷಣವನ್ನು ನೀಡಲಾಗುವುದು.
ಗಣೇಶಮೂರ್ತಿ ಸಾತ್ತ್ವಿಕವಾಗಿ ಹೇಗೆ ತಯಾರಿಸಬೇಕು, ಎಂಬುದರ ಬಗ್ಗೆ ಸನಾತನದ ಸಾಧಕ ಮೂರ್ತಿಕಾರ
ಶ್ರೀ. ಗುರುದಾಸ ಖಂಡೇಪಾರಕರ ಇವರಿಗೆ ಮಾರ್ಗದರ್ಶನ ಮಾಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ (ವರ್ಷ ೨೦೦೫ )
ಸನಾತನದ ಕಲಾವಿದ-ಸಾಧಕಿ ಸೌ. ಜಾಹ್ನವಿ ರಮೇಶ ಶಿಂದೆಯವರಿಗೆ ಚಿತ್ರದ
ಸೂಕ್ಷ್ಮ ಅಂಶಗಳನ್ನು ತಿಳಿಸಿ ಹೇಳುತ್ತಿರುವ ಪರಾತ್ಪರ ಗುರು ಡಾ. ಆಠವಲೆ
 ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ವಿವಿಧ ಕಲೆಗಳಲ್ಲಿ ನಿಪುಣರಾದ ಸಾಧಕ-ಕಲಾವಿದರು ತಮ್ಮ ಕಲೆಯನ್ನು ಸಾತ್ತ್ವಿಕಗೊಳಿಸುವ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.
ಚಿತ್ರಕಲೆ ಮತ್ತು ಮೂರ್ತಿಕಲೆ : ಪರಾತ್ಪರ ಗುರು ಡಾ. ಆಠವಲೆಯವರು ಸಾಧಕ-ಕಲಾವಿದರು ಬಿಡಿಸಿದ ವಿಷ್ಣು, ಲಕ್ಷ್ಮೀ, ಶ್ರೀರಾಮ, ಮಾರುತಿ, ಶ್ರೀಕೃಷ್ಣ, ಶಿವ, ದುರ್ಗಾದೇವಿ, ಗಣಪತಿ ಮತ್ತು ದತ್ತ ಮುಂತಾದ ೯ ದೇವತೆಗಳ ಚಿತ್ರಗಳು, ವಿವಿಧ ದೇವತೆಗಳ ತತ್ತ್ವಗಳಿರುವ ರಂಗೋಲಿ ಹಾಗೂ ಶ್ರೀಗಣೇಶನ ಮೂರ್ತಿ ಮುಂತಾದವುಗಳಲ್ಲಿ ಆಯಾ ದೇವತೆಯ ತತ್ತ್ವ ಹಾಗೂ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಹೆಚ್ಚೆಚ್ಚು ಪ್ರಮಾಣದಲ್ಲಿ ಬರಬೇಕೆಂದು ಪ್ರತಿಯೊಂದು ಹಂತದಲ್ಲಿ ಮಾರ್ಗದರ್ಶನ ಮಾಡಿದರು. ಮುಂಬರುವ ೧-೨ ವರ್ಷಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಮೂರ್ತಿಕಾರ-ಸಾಧಕರು ಶ್ರೀ ದುರ್ಗಾದೇವಿಯ ಮಾರಕ ತತ್ತ್ವ ಇರುವ ಮೂರ್ತಿಗಳನ್ನು ತಯಾರಿಸಲಿಕ್ಕಿದ್ದಾರೆ.
ಸಾತ್ತ್ವಿಕ ಅಕ್ಷರಗಳು ಮತ್ತು ಸಂಖ್ಯೆಗಳು ಹಾಗೂ ಸಾತ್ತ್ವಿಕ ಮದರಂಗಿ : ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾತ್ತ್ವಿಕ ಅಕ್ಷರಗಳು ಮತ್ತು ಸಂಖ್ಯೆಗಳು ಹಾಗೂ ಸಾತ್ತ್ವಿಕ ಮದರಂಗಿಯ ಕಲಾಕೃತಿಗಳನ್ನೂ ನಿರ್ಮಿಸಲಾಗಿದೆ.
ಸಂಗೀತ : ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ದೇವತೆಗಳ ನಾಮಜಪಗಳಿಗೆ ಆಯಾ ದೇವತೆಯ ತತ್ತ್ವ ಹಾಗೂ ಭಾವ ಮತ್ತು ಕ್ಷಾತ್ರಗೀತೆಗಳಿಗೆ ಕ್ಷಾತ್ರವೃತ್ತಿ ನಿರ್ಮಾಣವಾಗುವ ಲಯವನ್ನು ನೀಡಿದರು. ಅದರೊಂದಿಗೇ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆಗಳಿಂದಾಗುವ ಕಾಯಿಲೆಗಳಿಗೆ ಸಂಗೀತದ ಮೂಲಕ ಉಪಚಾರವನ್ನು ಮಾಡುವ ವಿಷಯದಲ್ಲಿ ಸಂಶೋಧನೆ ಸಹ ನಡೆಯುತ್ತಿದೆ.
ನೃತ್ಯಕಲೆ : ನೃತ್ಯದಲ್ಲಿನ ವಿವಿಧ ಶಾರೀರಿಕ ಸ್ಥಿತಿ ಮತ್ತು ಮುದ್ರೆಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಅಧ್ಯಯನ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನದ ಗ್ರಂಥ
  • ‘ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳು’ ಮತ್ತು ‘ಶ್ರೀ ಗಣೇಶಮೂರ್ತಿ   ಶಾಸ್ತ್ರಕ್ಕನುಸಾರ ಇರಬೇಕು !’
  • ‘ದೇವತೆಗಳ ನಾಮಜಪ ಮತ್ತು ಉಪಾಸನಾಶಾಸ್ತ್ರ (ಭಾಗ ೩)’ ಮತ್ತು ‘ಕ್ಷಾತ್ರಗೀತೆಗಳು’ ಈ ಧ್ವನಿಮುದ್ರಿಕೆ (‘ಆಡಿಯೋ ಸಿಡಿ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧನೆಯ ದೃಷ್ಟಿಯಿಂದ ೧೪ ವಿದ್ಯೆ ಮತ್ತು ೬೪ ಕಲೆಗಳ ಶಿಕ್ಷಣದ ಬೀಜವನ್ನು ಬಿತ್ತಿದ ಪರಾತ್ಪರ ಗುರು ಡಾ. ಆಠವಲೆ !