ರಾಮಮಂದಿರ ರಾಷ್ಟ್ರೀಯ ವಿಷಯ, ಹಾಗಾಗಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಅದರ ಉಲ್ಲೇಖವಿಲ್ಲ! - ಕೇಂದ್ರ ಸಚಿವ ಕಲರಾಜ ಮಿಶ್ರ

ರಾಷ್ಟ್ರೀಯ ವಿಷಯವಾಗಿದ್ದರೆ, ಅದನ್ನು ರಾಷ್ಟ್ರಮಟ್ಟದಲ್ಲಿ ಪರಿಹರಿಸಲು
ಕೇಂದ್ರ ಸರಕಾರದಲ್ಲಿ ಯಾರೂ ಆ ಬಗ್ಗೆ ಏಕೆ ಮಾತನಾಡುವುದಿಲ್ಲ ?
ಭರತಪುರ (ರಾಜಸ್ಥಾನ) : ರಾಮಮಂದಿರ ರಾಷ್ಟ್ರೀಯ ವಿಷಯವಾಗಿದೆ. ಅದು ಉತ್ತರಪ್ರದೇಶದ ಚುನಾವಣೆಯ ವಿಷಯವಲ್ಲ; ಆದರೆ ಅದು ಭಾಜಪದ ಕಾರ್ಯಸೂಚಿಯಲ್ಲಿದೆ, ಎಂದು ಕೇಂದ್ರ ಸಚಿವ ಕಲರಾಜ ಮಿಶ್ರ ಹೇಳಿದ್ದಾರೆ. ಭಾಜಪವು ವಿಕಾಸದ ವಿಷಯವನ್ನು ಮುಂದಿಟ್ಟು ಉತ್ತರಪ್ರದೇಶದಲ್ಲಿ ಚುನಾವಣೆಯನ್ನು ಎದುರಿಸಲಿದೆ, ಎಂದು ಅವರು ಸ್ಪಷ್ಟಪಡಿಸಿದರು. ರಾಮಮಂದಿರ ಆಗಬೇಕು ! - ಅಮಿತ್ ಶಾ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಅದು ನ್ಯಾಯಾಲಯದ ಆದೇಶದಿಂದ ಆಗಲಿ ಅಥವಾ ಎಲ್ಲರ ಒಮ್ಮತದಿಂದ ಆಗಲಿ, ಇದೇ ನಮ್ಮ ಧೋರಣೆ ಯಾಗಿದೆ, ಎಂದು ಭಾಜಪದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲಕ್ಷ್ಮಣಪುರಿಯಲ್ಲಿ ಜರುಗಿದ ಒಂದು ಕಾರ್ಯಕ್ರಮದಲ್ಲಿ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಮಮಂದಿರ ರಾಷ್ಟ್ರೀಯ ವಿಷಯ, ಹಾಗಾಗಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಅದರ ಉಲ್ಲೇಖವಿಲ್ಲ! - ಕೇಂದ್ರ ಸಚಿವ ಕಲರಾಜ ಮಿಶ್ರ