ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು. 
 
ಫಲಕ ಪ್ರಸಿದ್ಧಿಗಾಗಿ

೧. ರಾಮಮಂದಿರವೇ ಇಲ್ಲದಿದ್ದಾಗ ಅಧಿಕಾರವಿದ್ದೂ ಏನು ಪ್ರಯೋಜನ ?
‘ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಮಮಂದಿರದ ವಿಷಯವಿರುವುದಿಲ್ಲ. ಅಭಿವೃದ್ಧಿ ಮತ್ತು ಸುರಾಜ್ಯಾಡಳಿತ ಹಾಗೆಯೇ ಭ್ರಷ್ಟಾಚಾರ ಮುಕ್ತಾಯಗೊಳಿಸಲು ಒತ್ತು ನೀಡಲಾಗುವುದು. ನಾವು ೪೦೩ ರಲ್ಲಿ ೨೬೫ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವೆವು’, ಎಂದು ಭಾಜಪದ ನಾಯಕ ಮತ್ತು ಕೇಂದ್ರ ಸಚಿವ ಮಹೇಶ ಶರ್ಮಾ ಹೇಳಿದ್ದಾರೆ.
೨. ಸರಕಾರ ಹೇಳಿಕೆಗಳಿಂದ ಮುಂದೆ ಹೋಗಿ ಕ್ರಮಕೈಗೊಳ್ಳುವುದು ಅಪೇಕ್ಷಿತ !
ಅಂದಿನ ಕಾಂಗ್ರೆಸ್ ಸರಕಾರದ ಪಿ. ಚಿದಂಬರಮ್ ಇವರ ನೇತೃತ್ವದಲ್ಲಿ ಗೃಹ ಸಚಿವಾಲಯವು ಇಶ್ರತ್ ಜಹಾನ್ ಚಕಮಕಿಯ ವಿಷಯದಲ್ಲಿನ ಸತ್ಯವನ್ನು ಅಡಗಿಸಿಡಲು ಪಾಕಿಸ್ತಾನಿ ಉಗ್ರವಾದಿ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಕೈ ಜೋಡಿಸಿ ಕೆಲಸ ಮಾಡಿತ್ತು, ಎಂದು ಕೇಂದ್ರ ಗೃಹರಾಜ್ಯಮಂತ್ರಿ ಕಿರೆನ್ ರಿಜುಜು ಆರೋಪಿಸಿದ್ದಾರೆ.

೩. ರಾಷ್ಟ್ರಗೀತೆಯನ್ನು ಅವಮಾನಿಸುವವರು ರಾಷ್ಟ್ರಪ್ರೇಮಿಗಳಾಗಿರಬಹುದೇ ?
ಕೋಲಕಾತಾದ ಒಂದು ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಕಿದ್ದಾಗ ವ್ಯಾಸಪೀಠದ ಮೇಲೆ ಉಪಸ್ಥಿತರಿದ್ದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ ಅಬ್ದುಲ್ಲಾ ದೂರವಾಣಿ ಮಾಡುತ್ತಿದ್ದರು. ಇದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ ಅವರು, ಇಂತಹ ವಿವಾದಗಳು ಆಗುತ್ತಿರುತ್ತವೆ, ಎಂದು ಹೇಳಿದರು.

೪. ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರಂತೆ ಕೆಚ್ಚೆದೆಯಿಂದ ಅಭಿಪ್ರಾಯ ಮಂಡಿಸುವ
ಧೈರ್ಯ ಒಬ್ಬ ಸಂಸದರಲ್ಲಾದರೂ ಇದೆಯೇ ?
ಭಾರತದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ನೆಲೆಸಬೇಕಿದ್ದರೆ ಇಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿರುವುದು ಆವಶ್ಯಕವಾಗಿದೆ. ಯಾವಾಗ ಮುಸಲ್ಮಾನರು ಬಹುಸಂಖ್ಯೆಯಲ್ಲಿರುತ್ತಾರೆಯೋ ಅಲ್ಲಿ ಜಾತ್ಯತೀತತೆ ಅಥವಾ ಪ್ರಜಾಪ್ರಭುತ್ವ ನೆಲೆಸುವುದಿಲ್ಲ, ಎಂದು ಭಾಜಪದ ಹಿರಿಯ ನೇತಾರ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಪ್ರತಿಪಾದಿಸಿದ್ದಾರೆ.

೫. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರೆ ಪೊಲೀಸರು
ಈ ರೀತಿ ತತ್ಪರತೆ ಎಂದಾದರೂ ತೋರಿಸುತ್ತಾರಾ ?
ಅಯೋಧ್ಯೆಯಲ್ಲಿ ಬಜರಂಗ ದಳದಿಂದ ಸ್ವರಕ್ಷಣೆಗಾಗಿ ಆಯೋಜಿಸಿದ ಪ್ರಶಿಕ್ಷಣ ಶಿಬಿರದಲ್ಲಿ ಕಾರ್ಯಕರ್ತರು ಕೈಯಲ್ಲಿ ಬಂದೂಕುಗಳನ್ನು ಹಿಡಿದಿದ್ದರು. ಆಗ ಪ್ರತಿಸ್ಪರ್ಧಿಗಳನ್ನು ಇಸ್ಲಾಮಿ ವೇಶದಲ್ಲಿ ತೋರಿಸಲಾಗಿತ್ತು. ಇದರಿಂದಾಗಿ ಮುಸಲ್ಮಾನರ ಭಾವನೆಗೆ ಧಕ್ಕೆಯಾಗಿದೆ ಎಂದು ಕಾರಣ ನೀಡುತ್ತಾ ಪೊಲೀಸರು ಕಾರ್ಯಕರ್ತರ ಮೇಲೆ ದೂರು ದಾಖಲಿಸಿದರು.

೬. ಪಿಡಿಪಿ-ಭಾಜಪ ಸರಕಾರದ ರಾಜ್ಯದಲ್ಲಿ ಕಾಶ್ಮೀರದ ಇಸ್ಲಾಮೀಕರಣ !
ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು ಪ್ರಕಟಿಸಿದ ಜಾಹೀರಾತಿನಲ್ಲಿ ಹರಿ ಪ್ರಬಾತ ಗುಡ್ಡದ ಹೆಸರನ್ನು ಕೋಹ-ಎ-ಮಾರಣ ಎಂದು ಮುದ್ರಿಸಲಾಗಿದೆ. ಇದಕ್ಕೆ ಕಾಶ್ಮೀರಿ ಹಿಂದೂಗಳು ಆಕ್ಷೇಪವೆತ್ತಿದ್ದಾರೆ. ಜಮ್ಮು-ಕಾಶ್ಮೀರದ ಇಸ್ಲಾಮೀಕರಣವಾಗುತ್ತಿದೆ, ಎಂದು ಅವರು ಟೀಕಿಸಿದ್ದಾರೆ.

೭. ಅನ್ನು ವಿರೋಧಿಸುವವರಿಗೆ ಉಪರಾಷ್ಟ್ರಪತಿ ಹಮೀದ ಅನ್ಸಾರಿಯ
ಪತ್ನಿಯಿಂದ ತಪರಾಕಿ !
ಹೇಳುವುದರಲ್ಲಿ ಏನೂ ತಪ್ಪಿಲ್ಲ. ನಾವು ಉಚ್ಚಾರಣೆ ಮಾಡುವಾಗ ನಮಗೆ ಹೆಚ್ಚು ಪ್ರಾಣವಾಯು (ಆಕ್ಸಿಜನ್) ದೊರೆಯುತ್ತದೆ. ಅದರ ಪಠಣದಿಂದಾಗಿ ಆರೋಗ್ಯ ಸುಧಾರಿಸುತ್ತದೆ, ಆದ್ದರಿಂದ ಯೋಗವನ್ನು ವಿರೋಧಿಸುವುದು ಸಂಪೂರ್ಣವಾಗಿ ತಪ್ಪಾಗಿದೆ, ಎಂಬ ಪ್ರತಿಪಾದನೆಯನ್ನು ಉಪರಾಷ್ಟ್ರಪತಿ ಹಮೀದ ಅನ್ಸಾರಿ ಇವರ ಪತ್ನಿ ಸಲ್ಮಾ ಅನ್ಸಾರಿ ಇವರು ಮಾಡಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !