ಆಡಳಿತಾರೂಢ ಸಾಮ್ಯವಾದಿಗಳಿಂದ ತ್ರಿಪುರಾದಲ್ಲಿ ಇತಿಹಾಸದ ಪಠ್ಯಪುಸ್ತಕದಿಂದ ಮೋಹನದಾಸ ಗಾಂಧಿಯವರ ಪಾಠವನ್ನು ಹಿಂತೆಗೆದು ಹಿಟ್ಲರ್, ಕಾರ್ಲ್ ಮಾರ್ಕ್ಸಗೆ ಸ್ಥಾನ !

ಭಾರತದ ಭಾವೀ ಪೀಳಿಗೆಯನ್ನು ಹಾಳುಗೆಡಹುವ ಎಡಪಕ್ಷದವರ ಸಂಚು !
ಸಾಮ್ಯವಾದಿಗಳಿಗೆ ಹಿಟ್ಲರ್ ಬಗ್ಗೆ ಇಷ್ಟೊಂದು ಮಮತ್ವವೇಕೆ ?
ಅಗರ್ತಲಾ : ಭಾಜಪದ ಆಡಳಿತವಿರುವ ರಾಜಸ್ಥಾನದಲ್ಲಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಗಾಂಧಿ-ನೆಹರೂರನ್ನು ಕೈ ಬಿಡಲಾದ ಬಳಿಕ ಈಗ ಸಾಮ್ಯವಾದಿ ಆಡಳಿತವಿರುವ ತ್ರಿಪುರಾದಲ್ಲಿಯೂ ಒಂಬತ್ತನೇ ತರಗತಿಯ ಇತಿಹಾಸದ ಪಠ್ಯಪುಸ್ತಕದಿಂದ ಮೋಹನದಾಸ ಗಾಂಧಿಯವರ ಪಠ್ಯವನ್ನು ಕೈಬಿಡಲಾಗಿದೆ ಹಾಗೂ ಈಗ ಈ ಇತಿಹಾಸ ಪಠ್ಯಪುಸ್ತಕದಲ್ಲಿ ಹಿಟ್ಲರ ಮತ್ತು ಕಾರ್ಲಮಾರ್ಕ್ಸ, ಸೋವಿಯತ್ ಕ್ರಾಂತಿ, ಫ್ರೆಂಚ್ ಕ್ರಾಂತಿ ಹಾಗೂ ಕ್ರಿಕೆಟ ಮೇಲೆ ಪಠ್ಯಗಳನ್ನು ಅಳವಡಿಸಲಾಗಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಳುವಳಿ ಮತ್ತು ಗಾಂಧಿ ಇವರ ವಿಷಯದ ಮಾಹಿತಿಯನ್ನು ಈ ಪಠ್ಯಪುಸ್ತಕದಲ್ಲಿ ಅಳವಡಿಸದಿರುವ ಬಗ್ಗೆ ತ್ರಿಪುರಾ ಇತಿಹಾಸ ಸೊಸೈಟಿಯ ಸದಸ್ಯರಾದ ಸಂತೋಷ ಸಾಹಾ ಇವರು ಆರೋಪಿಸಿದ್ದಾರೆ. ಒಂಭತ್ತನೇಯ ತರಗತಿಯ ಹೊಸ ಪಠ್ಯಪುಸ್ತಕವನ್ನು ಎನ್‌ಸಿಆರ್‌ಟಿಯ ನಿಯಮಗಳನುಸಾರವಾಗಿ ರಚಿಸಲಾಗಿದೆಯೆಂದು ತ್ರಿಪುರಾ ಮಾಧ್ಯಮಿಕ, ಉಚ್ಚ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮಿಹಿರ ದೇವ ಇವರು ಸ್ಪಷ್ಟೀಕರಣ ನೀಡಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಡಳಿತಾರೂಢ ಸಾಮ್ಯವಾದಿಗಳಿಂದ ತ್ರಿಪುರಾದಲ್ಲಿ ಇತಿಹಾಸದ ಪಠ್ಯಪುಸ್ತಕದಿಂದ ಮೋಹನದಾಸ ಗಾಂಧಿಯವರ ಪಾಠವನ್ನು ಹಿಂತೆಗೆದು ಹಿಟ್ಲರ್, ಕಾರ್ಲ್ ಮಾರ್ಕ್ಸಗೆ ಸ್ಥಾನ !