ಹೋಶಿಯಾರಪುರ (ಪಂಜಾಬ)ದಲ್ಲಿರುವ ಭೃಗು ಸಂಹಿತೆಯ ವಾಚಕರಾದ ಡಾ. ವಿಶಾಲ ಶರ್ಮಾರಿಂದ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಕಕ್ಷೆಯಲ್ಲಿ ಭಾವಪೂರ್ಣ ನಾಡಿವಾಚನ !

ಉಜ್ಜೈನಿಯ ಸಿಂಹಸ್ಥಪರ್ವದಲ್ಲಿ ಅವತರಿಸಿದ ಮಹರ್ಷಿಗಳ ದಿವ್ಯವಾಣಿ !
ಭೃಗುಋಷಿ
ಪ್ರದರ್ಶನ ಕಕ್ಷೆಯಲ್ಲಿ
ಪೂಜಿಸಲಾದ ಭೃಗು ನಾಡಿ
ಉಜ್ಜೈನಿ : ಇಲ್ಲಿ ನಡೆಯುತ್ತಿರುವ ಸಿಂಹಸ್ಥಪರ್ವದಲ್ಲಿ ಏಪ್ರಿಲ್ ೨೨ ರಂದು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಹಮ್ಮಿಕೊಂಡ ಪ್ರದರ್ಶನಕಕ್ಷೆಯು ತುಂಬಿಹೋಯಿತು. ಈ ನಿಮಿತ್ತ ಹೋಶಿಯಾರಪೂರ (ಪಂಜಾಬ)ನಲ್ಲಿರುವ ಭೃಗು ಸಂಹಿತೆಯ ವಾಚಕರಾದ ಡಾ. ವಿಶಾಲ ಶರ್ಮಾ ಹಾಗೂ ಅವರ ಭಕ್ತರು ನಾಡಿಸಹಿತ ಪ್ರದರ್ಶನಕಕ್ಷೆಗೆ ಆಗಮಿಸಿದರು. ಬೆಳಗ್ಗೆ ೯.೨೫ ಕ್ಕೆ ಡಾ. ವಿಶಾಲ ಶರ್ಮಾ ಹಾಗೂ ರಾಜಸ್ಥಾನದ ನಾಥದ್ವಾರದಲ್ಲಿರುವ ಡಾ. ಸುನೀಲ ಚೋಪ್ರಾರೊಂದಿಗೆ ಅವರ ಭಕ್ತರು ಸನಾತನವು ಪ್ರದರ್ಶನಕಕ್ಷೆಗೆ ಆಗಮಿಸಿದರು. ಆಗ ೫ ಸುವಾಸಿನಿ ಸಾಧಕಿಯರು ಆರತಿ ಮಾಡಿ ಹೂವಿನ ಮಳೆಗೆರೆದು ನಾಡಿಯನ್ನು ಸ್ವಾಗತಿಸಿದರು.
ತರುವಾಯ ಡಾ. ವಿಶಾಲ ಶರ್ಮಾ ಹಾಗೂ ಅವರ ಸಹಕಾರಿಗಳು ಅಮೃತ ಸ್ನಾನ (ಶಾಹಿ)ಕ್ಕೆ ಹೋದರು, ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಸಾಧಕರು ಭೃಗು ನಾಡಿಯ ದರ್ಶನವನ್ನು ಪಡೆದರು.
ಅನಂತರ ಮಧ್ಯಾಹ್ನ ೧.೩೫ ರಿಂದ ೨.೩೦ ರ ಸಮಯದಲ್ಲಿ ನಾಡಿವಾಚನವು ನಡೆಯಿತು. ಆ ಸಮಯದಲ್ಲಿ ಸನಾತನದ ಸಂತರಾದ ಪೂ. (ಕು.) ಸ್ವಾತಿ ಖಾಡ್ಯೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. ಡಾ. ಚಾರುದತ್ತ ಪಿಂಗಳೆ ಹಾಗೂ ಸನಾತನದ ಚಂದೀಗಡದ ಸಾಧಕರಾದ ಶ್ರೀ. ಗೌರವ ಸೇಠಿ ಮುಂತಾದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಡಾ. ವಿಶಾಲ ಶರ್ಮಾರವರು ಭೃಗು ನಾಡಿಯ ಒಂದು ಪುಟವನ್ನು (ಅಂದರೆ ಸಾಕ್ಷಾತ್ ಭೃಗುಋಷಿಗಳ ದೇಹವನ್ನು) ಸನಾತನ ಸಂಸ್ಥೆಯ ಆಶ್ರಮಕ್ಕೆ ಕಳುಹಿಸಿಕೊಡಲು ನೀಡಿದರು. ಈ ಪುಟವನ್ನು ಪ್ರತಿದಿನ ಹಣೆಗೆ ಸ್ಪರ್ಶಿಸಬೇಕು. ಹೀಗೆ ಮಾಡುವುದರಿಂದ ಸನಾತನದ ಗ್ರಂಥಗಳು ಸಮಾಜದಲ್ಲಿ ಹೆಚ್ಚು ಪ್ರಮಾಣ ದಲ್ಲಿ ಪ್ರಚಾರವಾಗುವುದು, ಎಂದು ಡಾ. ವಿಶಾಲ ಶರ್ಮಾ ಇವರು ಈ ಸಂದರ್ಭದಲ್ಲಿ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹೋಶಿಯಾರಪುರ (ಪಂಜಾಬ)ದಲ್ಲಿರುವ ಭೃಗು ಸಂಹಿತೆಯ ವಾಚಕರಾದ ಡಾ. ವಿಶಾಲ ಶರ್ಮಾರಿಂದ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಕಕ್ಷೆಯಲ್ಲಿ ಭಾವಪೂರ್ಣ ನಾಡಿವಾಚನ !