ಪೂ. (ಸೌ.) ಅಂಜಲಿ ಗಾಡಗೀಳ ಇವರು ಸಾಧನೆಯ ಬಗ್ಗೆ ನೀಡಿದ ಅಮೂಲ್ಯ ದೃಷ್ಟಿಕೊನ

. ಸಮಾಜದಲ್ಲಿ ಸಂಗೀತ, ನೃತ್ಯ ಇತ್ಯಾದಿ ಕಲೆಗಳಲ್ಲಿ
ಮಕ್ಕಳು ನಿಪುಣರಿರುವ ಬಗ್ಗೆ ಪೂ. ಕಾಕುರವರು ಹೇಳಿದ
ಕಾರಣಗಳು ಮತ್ತು ಸ್ಪಷ್ಟಪಡಿಸಿದ ಸಾಧನೆಯ ಮಹತ್ವ
ಸದ್ಯ ಸಮಾಜದಲ್ಲಿ, ಯಾವುದೇ ಶಿಕ್ಷಣ ಪಡೆಯದೆ ಯಾವುದಾದರೂ ಕಲೆಯಲ್ಲಿ ನಿಪುಣರಿದ್ದಂತೆ ಬರುವ ಅನೇಕ ಮಕ್ಕಳಿದ್ದಾರೆ. ಇದರ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ದೂರದರ್ಶನದಲ್ಲಿ ಕಂಡುಬರುವ ಹಾಡಿನ ಮತ್ತು ನೃತ್ಯದ ಕಾರ್ಯಕ್ರಮಗಳ ಬಗ್ಗೆ ನೋಡುವಾಗ, ವರ್ಷಾನುವರ್ಷ ಅಭ್ಯಾಸ ಮಾಡಿದ ನಂತರವೂ ಇಂತಹ ಸ್ವರ ಸಿದ್ಧವಾಗುವುದಿಲ್ಲ; ಆದರೆ ಇಂದಿನ ಮಕ್ಕಳು ಅದನ್ನು ಸಹಜವಾಗಿ ಹಾಡುತ್ತಾರೆ,
ಅದು ಶಾಸ್ತ್ರೀಯ ಅಥವಾ ಸುಗಮ ಸಂಗೀತವೇ ಇರಲಿ. ಇದರ ಬಗ್ಗೆ ಪೂ. (ಸೌ.) ಅಂಜಲಿ ಗಾಡಗೀಳ ಕಾಕೂರವರಿಗೆ ಕೇಳಿದಾಗ ಅವರು, ಈ ಮಕ್ಕಳು ಗಂಧರ್ವಲೋಕದಿಂದ, ಕೆಲವರು ಉಚ್ಚ ಮತ್ತು ಕೆಲವರು ಮಹರ್ಲೋಕದಿಂದ ಬಂದಿರುತ್ತಾರೆ. ಅವರ ಸಂಗೀತದ ಶಿಕ್ಷಣವು ಮೊದಲೇ ಆಗಿರುತ್ತದೆ. ಇನ್ನೂಮುಂದೆಯೂ ಸಾಧನೆ ಮಾಡಿ ಮೋಕ್ಷಪ್ರಾಪ್ತಿಗಾಗಿ ಈ ಜೀವಗಳು ಪುನಃ ಪೃಥ್ವಿಯ ಮೇಲೆ ಜನ್ಮ ತಾಳಿದ್ದಾರೆ. ಆದರೆ ಇಲ್ಲಿ ಅವರಿಗೆ ಯೋಗ್ಯವಾದ ಸಾಧನಾಮಾರ್ಗ ಸಿಗದಿದ್ದರಿಂದ ಅವರ ತಂದೆತಾಯಿ, ಕಲಾಕ್ಷೇತ್ರದ ಶಿಕ್ಷಕರು ಅವರಿಗೆ ಪುನಃ ಅದೇ ಶಿಕ್ಷಣ ನೀಡುತ್ತಾರೆ ಮತ್ತು ಆ ಮಕ್ಕಳ ಆಯುಷ್ಯವು ಪುನಃ ವ್ಯರ್ಥವಾಗುತ್ತದೆ. ಆ ಮಕ್ಕಳು ಜನಪ್ರಿಯತೆ ಮತ್ತು ಮಾಯೆಯಲ್ಲಿ ಸಿಲುಕುತ್ತಾರೆ. ಸನಾತನ ಸಂಸ್ಥೆಯಲ್ಲಿ ಇಂತಹ ಬಹಳಷ್ಟು ಮಕ್ಕಳಿದ್ದಾರೆ ಮತ್ತು ಈ ಮಕ್ಕಳು ಸಂಗೀತ, ನೃತ್ಯ, ಅಭಿನಯ, ಚಿತ್ರಕಲೆ ಇಂತಹ ಅನೇಕ ಕಲೆಗಳಲ್ಲಿ ನಿಪುಣರಿದ್ದಾರೆ; ಆದರೆ ಸನಾತನವು ಅವರಿಗೆ ಮುಂದಿನ ಸಾಧನೆ ಕಲಿಸುತ್ತದೆ. ಆದ್ದರಿಂದ ಈ ಮಕ್ಕಳ ನಿಜವಾದ ಆಧ್ಯಾತ್ಮಿಕ ಉನ್ನತಿಯಾಗಿ ಅವರಿಗೆ ಮೋಕ್ಷಪ್ರಾಪ್ತಿಯಾಗುತ್ತದೆ. ಇದುವೇ ಅವರ ಸಾಧನೆಯಾಗಿದೆ. ಸಮಾಜದಲ್ಲಿಯೂ ಇಂತಹ ದೈವೀ ಮಕ್ಕಳಿದ್ದರೆ ಯೋಗ್ಯ ಸಮಯದಲ್ಲಿ ಅವರಿಗೆ ಯೋಗ್ಯ ಸಾಧನಾಮಾರ್ಗ ತೋರಿಸುವುದು ಆವಶ್ಯಕವಾಗಿದೆ. ಇದರ ಹೊಣೆಯು ಮುಖ್ಯವಾಗಿ ತಂದೆ-ತಾಯಿ ಮತ್ತು ಶಿಕ್ಷಕರದ್ದಾಗಿದೆ.
. ಸನಾತನದ ಕೆಲವು ಸಾಧಕರಿಗೆ ಸಂಗೀತ ಸಾಧನೆ ಮಾಡಿ
ಸ್ವರಗಳ ದೇವತೆಗಳ ದರ್ಶನವಾಗಿದ್ದು ನಾದಗಳ ಅನುಭೂತಿ ಬಂದಿರುವುದು
ರಾಮನಾಥಿ ಆಶ್ರಮ ಭೇಟಿಗಾಗಿ ಒಂದೂವರೆ- ಎರಡು ವರ್ಷಗಳ ಹಿಂದೆ ಓರ್ವ ಪ್ರಸಿದ್ಧ ಗಾಯಕರು ಬಂದಿದ್ದರು. ಪೂ. ಗಾಡಗೀಳಕಾಕು ಮತ್ತು ಅವರ ಭೇಟಿಯಾಯಿತು. ಆಗ ಪೂ. ಕಾಕು ಮತ್ತು ಅವರಲ್ಲಿ ಮುಂದಿನಂತೆ ಸಂಭಾಷಣೆಯಾಯಿತು.
ಪೂ. ಕಾಕೂ : ತಾವು ಇಷ್ಟು ವರ್ಷಗಳಿಂದ ಸಂಗೀತ ಸಾಧನೆ ಮಾಡುತ್ತಿದ್ದೀರಿ. ತಮಗೆ ಎಂದಾದರೂ ದೇವತೆಗಳ ದರ್ಶನವಾಗಿದೆಯೇ ? ಏನಾದರೂ ಅನುಭೂತಿಗಳು ಬಂದಿವೆಯೇ ?
ಗಾಯಕರು : ಇಲ್ಲ, ಹಾಗೆ ನೆನಪಿಗೆ ಬರುತ್ತಿಲ್ಲ.
ಪೂ. ಕಾಕೂ : ನಮ್ಮಲ್ಲಿ ಇಂತಹ ಕೆಲವು ಸಾಧಕ ರಿದ್ದಾರೆ, ಅವರಿಗೆ ಇಂದು ಸಾಧನೆ ಮಾಡಿ ಸ್ವರಗಳ ದೇವತೆಗಳ ದರ್ಶನವಾಗಿದೆ. ನಾದದ ಅನುಭೂತಿ ಬಂದಿದೆ. ವೈಖರಿಯಲ್ಲಿನ ವಾಣಿಗಿಂತ ಅಂತರ್ಮ ನಸ್ಸಿನಲ್ಲಿನ ನಾದಬ್ರಹ್ಮಕ್ಕೆ ಸಂಗೀತ ಸಾಧನೆ ಜಾಗೃತ ಮಾಡುವುದು ಮಹತ್ವದ್ದಾಗಿದೆ ! ಇಲ್ಲದಿದ್ದರೆ ಸಂಪೂರ್ಣ ಜೀವನವು ಹೀಗೆಯೇ ಹಾಡುವುದರಲ್ಲಿ ವ್ಯರ್ಥಗೊಳ್ಳಬಹುದು.
. ಮಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಪೂರ್ಣವೇಳೆ ಸಾಧನೆಯಲ್ಲಿ ತೊಡಗಿಸುವ ಮತ್ತು
ಆ ಮೂಲಕ ಅವಳನ್ನು ಈಶ್ವರನ ಚರಣಗಳಲ್ಲಿ ಹಾಕಿದ್ದೇನೆ, ಎಂಬ ಭಾವವನ್ನಿಡುವ ಪೂ. ಕಾಕು !
ಪೂ. ಕಾಕೂರವರ ಮಗಳು ಕು. ಸಾಯಲಿ (ಈಗಿನ ಸೌ. ಸಾಯಲಿ ಕರಂದೀಕರ್) ಯು ತನ್ನ ೧೩ ನೇ ವಯಸ್ಸಿ ನಲ್ಲಿ ಅಂದರೆ ೮ ನೇ ತರಗತಿಯಲ್ಲಿರುವಾಗ ಯಾವ ದಿನದಂದು ಶಾಲೆ ಬಿಟ್ಟಳೋ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಪೂರ್ಣವೇಳೆ ಸಾಧಕಿಯಾದಳೋ, ಆ ದಿನದಂದು ಪೂ. ಕಾಕೂರವರ ಮನಸ್ಸಿನಲ್ಲಿ ಮುಂದಿನ ವಿಚಾರಗಳು ಬಂದವು, ತಾಯಿಯೆಂದು ಈಶ್ವರನ ಚರಣಗಳಲ್ಲಿ ಮಗುವನ್ನು ಅರ್ಪಿಸದಿದ್ದರೆ ನನಗೆ ತಾಯಿಯೆಂದು ಜೀವಿಸುವ ಯಾವುದೇ ಅಧಿಕಾರವಿಲ್ಲ. ಇದರ ಜೊತೆಗೆ ಅವರು ಒಂದು ಮಾತನ್ನೂ ಹೇಳುತ್ತಾರೆ. ಜನತೆ ಹೇಗಿದೆ ?
ಜನತೆಯು ರಾಜನ ಬಗ್ಗೆ ಏನು ವಿಚಾರ ಮಾಡುತ್ತದೆ ?
ಎಂಬುದನ್ನು ನೋಡಲು ಛತ್ರಪತಿ ಶಿವಾಜಿ ಮಹಾರಾಜರು ರಾತ್ರಿ ವೇಷ ಬದಲಾಯಿಸಿ ತನ್ನ ರಾಜ್ಯದಲ್ಲಿ ರಹಸ್ಯವಾಗಿ ಅಲೆದಾಡುತ್ತಿದ್ದರು. ಒಮ್ಮೆ ರಾಜರು ಒಂದು ಗುಡಿಸಲಿನ ಹೊರಗೆ ಬಂದು ನಿಂತರು. ಒಳಗಿನಿಂದ ಸ್ವರ ಕೇಳಿ ಬರುತ್ತಿತ್ತು. ತಾಯಿ ತನ್ನ ಇಬ್ಬರು ಮಕ್ಕಳಿಗೆ ಭೋಜನ ಬಡಿಸುತ್ತಿದ್ದಳು. ಹೊರಗೆ ಶಬ್ದವಾಯಿತೆಂದು ಮಕ್ಕಳು ಕೂಡಲೇ ಹೊರಗೆ ಬಂದು ನೋಡುತ್ತಾರೆ. ಆಗ ಅವರ ತಾಯಿ ಪ್ರೀತಿ ಯಿಂದ, ಇದು ಶಿವಾಜಿಯ ರಾಜ್ಯವಾಗಿದೆ, ಚಿಂತೆ ಮಾಡಬೇಡಿ. ಈ ರೊಟ್ಟಿ ತಿನ್ನಲು ಶಿವಾಜಿಯೂ ನಿಮ್ಮೊಂದಿಗಿರುತ್ತಿದ್ದರೆ ಎಷ್ಟು ಸಂತೋಷವೆನಿಸುತ್ತಿತ್ತು, ಎಂದಳು. ಅಷ್ಟರಲ್ಲಿ ಶಿವಾಜಿ ಭಿಕ್ಷೆ ಬೇಡುತ್ತಾರೆ. ಅವರೂ ರೊಟ್ಟಿ ತಿನ್ನುತ್ತಾರೆ ಮತ್ತು ರಾತ್ರಿ ಅಲ್ಲಿಯೇ ಮಲಗುತ್ತಾರೆ. ಮರುದಿನ ರಾಜರ ಸೈನಿಕರು ಅಲ್ಲಿಗೆ
ಬರುತ್ತಾರೆ. ಆಗ ಆ ತಾಯಿ ಮತ್ತು ಮಕ್ಕಳು ಶಿವಾಜಿ ಯನ್ನು ಗುರುತಿಸುತ್ತಾರೆ ಮತ್ತು ಸಂತೋಷ ಪಡುತ್ತಾರೆ. ಆಗ ಶಿವಾಜಿ ಆ ತಾಯಿಗೆ, ‘ಸ್ವರಾಜ್ಯದ ಎಲೆಯಲ್ಲಿ ಇವೆರಡು ಮಕ್ಕಳ ಭಿಕ್ಷೆ ನೀಡು’ ಎಂದರು. ಆಗ ತಾಯಿ ಕೂಡಲೇ ಅವಳ ಎರಡು ಮಕ್ಕಳನ್ನು ರಾಜರ ಚರಣಗಳಲ್ಲಿ ಹಾಕುತ್ತಾಳೆ ಮತ್ತು, ‘ಈಗ ಇವರ ಬಗ್ಗೆ ಏನೂ ಚಿಂತೆಯಿಲ್ಲ. ಎಲ್ಲವೂ ದೇವರ ಚರಣಗಳಲ್ಲಿಯೇ’ ಎಂದು ಹೇಳುತ್ತಾಳೆ.
. ತಪ್ಪಾದಾಗ ಕ್ಷಮೆ ಬೇಡಿದ ನಂತರ ಪಾಪಕ್ಷಾಲನೆಯಾಗುತ್ತದೆ !
ತಪ್ಪಾದಾಗ ಹಾಗೂ ಅಯೋಗ್ಯ ವಿಚಾರಗಳು ಮತ್ತು ಪ್ರತಿಕ್ರಿಯೆಗಳು ಮನಸ್ಸಿನಲ್ಲಿ ಬಂದ ನಂತರ ಅವು ಗಮನಕ್ಕೆ ಬಂದರೆ ಮತ್ತು ಅದಕ್ಕಾಗಿ ಕೂಡಲೇ ಕ್ಷಮೆಯನ್ನೂ ಬೇಡಿದರೆ ಪಾಪದ ಕ್ಷಾಲನೆಯಾಗುತ್ತದೆ ಹಾಗೂ
ಪ್ರತಿಕ್ರಿಯೆಗಳು ಕಡಿಮೆಯಾಗುತ್ತಾ ಹೋಗುತ್ತವೆ.
. ಸಹಸಾಧಕರೊಂದಿಗೆ ಮನಮುಕ್ತವಾಗಿ ಮಾತನಾಡುವುದು ಮತ್ತು ಅವರ ಅಡಚಣೆಗಳನ್ನು ಅರಿತುಕೊಳ್ಳುವುದರಿಂದ ಕೃಷ್ಣನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ !
ಕೃಷ್ಣನೆಂದರೆ ಬೇರೆಯೇನೂ ಅಲ್ಲ. ಸಹಸಾಧಕ ರೊಂದಿಗೆ ಏಕರೂಪವಾಗುವುದೆಂದರೆ ಕೃಷ್ಣನೊಂದಿಗೆ
ಏಕರೂಪನಾಗುವುದು. ಅವರೊಂದಿಗೆ ಮನಮುಕ್ತವಾಗಿ ಮಾತನಾಡುವುದು, ಅವರ ಅಡಚಣೆಗಳನ್ನು ಅರಿತು
ಕೊಳ್ಳುವುದು, ತಾಯಿಯಂತೆ ಅವರ ಕಾಳಜಿ ವಹಿಸುವುದು, ಇದನ್ನು ಮಾಡುವುದರಿಂದ ಕೃಷ್ಣನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ.
. ಯಾವುದೇ ಕಲೆಯು ಸ್ಥಿರತ್ವದೆಡೆಗೆ ಹೋದರೆ ಮಾತ್ರ ಅದು ಈಶ್ವರನವರೆಗೆ ಕೊಂಡೊಯ್ಯಬಹುದು !
ರಾಕ್, ಜ್ಯಾಝ್ ಇತ್ಯಾದಿ ಎಲ್ಲ ಪಾಶ್ಚಾತ್ಯ ಸಂಗೀತ ದಲ್ಲಿ ಹಾಡು ದೊಡ್ಡ ಸ್ವರದಲ್ಲಿರುತ್ತದೆ ಮತ್ತು ಎಲ್ಲ ಹಾವಭಾವಗಳೇ ಇರುತ್ತವೆ; ಆದರೆ ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತವು ಹಾಗಿಲ್ಲ. ಇದರಲ್ಲಿ ಹಾಡು ಒಳಗಿನಿಂದಲೇ ಬರುತ್ತದೆ.
. ಒಂದು ಕೋಟೆಯನ್ನು ನೋಡಲು ಹೋಗುವ ಬಗ್ಗೆ ಪೂ. (ಸೌ.) ಗಾಡಗೀಳಕಾಕು ನೀಡಿದ ದೃಷ್ಟಿಕೋನ
ಪೂ. (ಸೌ.) ಬಿಂದಾ ಸಿಂಗಬಾಳರವರು ಸೇವೆಯ ನಿಮಿತ್ತ ಒಂದು ಜಿಲ್ಲೆಗೆ ಹೋಗಿದ್ದರು. ಆಗ ಸಮೀಪದಲ್ಲಿರುವ ಒಂದು ಕೋಟೆಯನ್ನು ಹೋಗಿ ನೋಡಿ ಬರೋಣವೆಂದು ಎಲ್ಲ ಸಾಧಕರು ಪೂ. ಬಿಂದಾಅಕ್ಕನಿಗೆ ಸೂಚಿಸಿದರು. ಇದರ ಬಗ್ಗೆ ಪೂ. ಬಿಂದಾಅಕ್ಕನವರು ಸಂಚಾರಿವಾಣಿಯ ಮೂಲಕ ಪೂ. ಗಾಡಗೀಳಕಾಕೂರವರಿಗೆ ಕೇಳಿದರು. ಆಗ ಪೂ. ಕಾಕೂರವರು ಮುಂದಿನ ಸಮಷ್ಟಿದೃಷ್ಟಿಕೋನವನ್ನು ನೀಡಿದರು, ನೀವು ಕೋಟೆ ನೋಡಲು ಹೋಗುವ ಆವಶ್ಯಕತೆಯಿಲ್ಲ. ಸಮಷ್ಟಿ ಸೇವೆ ಮೊದಲು ಮಹತ್ವ ದ್ದಾಗಿದೆ. (ಹೀಗೆ ಪೂ. ಅಕ್ಕನಿಗೂ ಅನಿಸುತ್ತಿತ್ತು.) ಕಾಲಾನುಸಾರ ನಮ್ಮ ಸಮಯವನ್ನು ಯಾವುದಕ್ಕೆ ನೀಡಬೇಕು ಎಂಬುದು ಮಹತ್ವದ್ದಾಗಿದೆ. ಕಾಲಕ್ಕನು ಸಾರ ನಮ್ಮ ಪ್ರತಿಯೊಂದು ಕೃತಿಯು ಸಮಷ್ಟಿಗೆ ಲಾಭದಾಯಕವಾಗಿರಬೇಕು. - ಶ್ರೀ. ದಿವಾಕರ ಆಗಾವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
(ಇಲ್ಲಿ ಪ್ರಸಂಗವು ಪೂ. ಗಾಡಗೀಳಕಾಕೂ ಮತ್ತು ಪೂ. ಬಿಂದಾಅಕ್ಕ ಈ ಇಬ್ಬರು ಸಂತರ ಸಂದರ್ಭ ದ್ದಾಗಿದ್ದರೂ ಇದರಿಂದ ಸಮಷ್ಟಿಯು ಬಹಳ ಕಲಿಯುವಂತಿದೆ. ಸಂತರಾಗಿದ್ದರೂ, ಯಾವುದೇ ವಿಷಯವನ್ನು ಅದರ ಮಾಹಿತಿಯಿರುವ ವ್ಯಕ್ತಿಗೆ ಕೇಳಿ ಮಾಡುವ ಮನಸ್ಸಿನ ದೊಡ್ಡತನ, ನಮ್ರತೆಯು ಪೂ. ಬಿಂದಾಅಕ್ಕನವರು ತಮ್ಮ ಈ ಕೃತಿಯಿಂದ ಕಲಿಸುತ್ತಾರೆ. ಪೂ. ಕಾಕೂ ಪ್ರಯಾಣದ ಸಮಯದಲ್ಲಿ ಅನೇಕ ಬಾರಿ ಆ ಕೋಟೆಯ ಮೇಲೆ ಹೋಗಿ ಬಂದಿದ್ದಾರೆ. ಸಂತರ ಆಶೀರ್ವಾದ, ಅವರ ಕೃಪೆನಮ್ಮ ಕಾರ್ಯಕ್ಕೆ ಯಾವಾಗಲೂ ಇದೆ; ಆದರೆ ಸದ್ಯದ ಕಾಲಕ್ಕನುಸಾರ ಸಮಷ್ಟಿಗೆ ಯಾವುದು ಲಾಭ ದಾಯಕವಾಗಿದೆ ಎಂಬುದರ ವಿಚಾರ ಮಾಡುವುದು ಮತ್ತು ಅದರಂತೆ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ, ಎಂಬುದು ಪೂ. ಕಾಕೂರವರಿಂದ ಕಲಿಯಲು ಸಿಗುತ್ತದೆ. - ಶ್ರೀ. ದಿವಾಕರ ಆಗಾವಣೆ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೂ. (ಸೌ.) ಅಂಜಲಿ ಗಾಡಗೀಳ ಇವರು ಸಾಧನೆಯ ಬಗ್ಗೆ ನೀಡಿದ ಅಮೂಲ್ಯ ದೃಷ್ಟಿಕೊನ