ಸೌಭಾಗ್ಯಾಲಂಕಾರಗಳೆಂದರೆ ಸ್ತ್ರೀಯರಿಗೆ ತಮ್ಮ ಪಾತಿವ್ರತ್ಯದ ಅರಿವು ಮಾಡಿಕೊಡುವ ಮಾಧ್ಯಮಗಳು

೧. ಸ್ತ್ರೀಯರಿಗೆ ಸೌಭಾಗ್ಯಾಲಂಕಾರಗಳಿಂದ ಸತತವಾಗಿ ಆಗುವ ತೇಜಲಹರಿಗಳ ಸ್ಪರ್ಶವು, ಅವರಲ್ಲಿನ ಪಾತಿವ್ರತ್ಯದ ಅರಿವು ಮಾಡಿಕೊಡುತ್ತದೆ. ಇದಕ್ಕಾಗಿಯೇ ಈ ವ್ಯವಸ್ಥೆಯನ್ನು ಮಾಡಲಾಗಿದೆ.
೨. ಸೌಭಾಗ್ಯಾಲಂಕಾರಗಳೆಂದರೆ ಅಸುರೀ ಶಕ್ತಿಗಳ ಭೋಗದೃಷ್ಟಿಯಿಂದ ರಕ್ಷಿಸಲು ಮಾಡಿದ ಒಂದು ಪ್ರಯತ್ನ : ಕಲಿಯುಗವು ರಜತಮ ಪ್ರಧಾನವಾಗಿರುವುದರಿಂದ ಈ ಕಾಲವು ಸ್ವೇಚ್ಛಾಚಾರಕ್ಕೆ ಅನುಕೂಲ ಮತ್ತು ಸಾಧನೆಗೆ ಪ್ರತಿಕೂಲವಾಗಿದೆ. ಪುರುಷರಿಗಿಂತ ಹೆಚ್ಚು ಸಂವೇದನಾಶೀಲರಾಗಿರುವುದರಿಂದ ಅವರು ವಾಯುಮಂಡಲದಲ್ಲಿನ ರಜತಮಾತ್ಮಕ ಲಹರಿಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಹಾಗಾಗಿ ಮೊದಲಿನಿಂದಲೂ ಆಭರಣಗಳನ್ನು ಉಪಯೋಗಿಸಿ ಸ್ತ್ರೀಯರನ್ನು ರಕ್ಷಿಸಲಾಗುತ್ತದೆ. - ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ)
ಸ್ತ್ರೀಯರು ತಲೆಯಿಂದ ಕಾಲುಗಳ ವರೆಗೆ ಹಾಕಿಕೊಳ್ಳುವ ಆಭರಣಗಳ ಹೆಸರು 
ಮತ್ತು ಅವುಗಳಿಂದ ಪ್ರಕ್ಷೇಪಿಸುವ ಲಹರಿಗಳು
ಅ. ಬೈತಲೆ ಬೊಟ್ಟು (ಲಹರಿಗಳ ರೂಪ-ವಲಯಾಂಕಿತ) : ಇದನ್ನು ಬೈತಲೆಯಲ್ಲಿ ಧರಿಸುತ್ತಾರೆ. ಇದು ಬ್ರಹ್ಮಾಂಡದಲ್ಲಿನ ಜ್ಞಾನಶಕ್ತಿಯ ಲಹರಿಗಳು ಬ್ರಹ್ಮರಂಧ್ರದೆಡೆಗೆ ಆಕರ್ಷಿಸುವುದರಿಂದ ತಲೆಯ ಸುತ್ತ ಚೈತನ್ಯಮಯ ಲಹರಿಗಳ ಕವಚ ನಿರ್ಮಾಣವಾಗುತ್ತದೆ.
ಆ. ಕುಂಕುಮ (ಲಹರಿಗಳ ರೂಪ-‘ಸ್ಪ್ರಿಂಗ್’ನಂತಹ) : ಕುಂಕುಮವು ಸೌಭಾಗ್ಯದ ಅಲಂಕಾರವಾಗಿದೆ. ಇದು ಬ್ರಹ್ಮಾಂಡದಲ್ಲಿನ ಶಕ್ತಿತತ್ತ್ವದ ಲಹರಿಗಳು ಆಕರ್ಷಿಸುತ್ತದೆ.
ಇ. ಬುಗುಡಿ (ಲಹರಿಗಳ ರೂಪ-‘ಸ್ಪ್ರಿಂಗ್’ ನಂತಹ) : ಬುಗುಡಿಗಳನ್ನು ಕಿವಿಗಳ ಮೇಲ್ಭಾಗದಲ್ಲಿ ಹಾಕಿಕೊಳ್ಳುತ್ತಾರೆ. ಇದು ಬ್ರಹ್ಮಾಂಡದಲ್ಲಿನ ಇಚ್ಛಾ ಮತ್ತು ಕ್ರಿಯಾ ಈ ಶಕ್ತಿಗಳಿಗೆ ಸಂಬಂಧಿಸಿದ ಚೈತನ್ಯಮಯ ಲಹರಿಗಳು ಆಕರ್ಷಿಸುತ್ತವೆ.
ಈ. ಕಿವಿಗಳಲ್ಲಿ ಹಾಕಿಕೊಳ್ಳುವ ಜುಮುಕಿ (ಲಹರಿಗಳ ರೂಪ-ಕಿರಣಗಳಂತೆ) : ಇದು ಬ್ರಹ್ಮಾಂಡದಲ್ಲಿನ ಕ್ರಿಯಾ- ಇಚ್ಛಾ ಈ ಶಕ್ತಿಗಳಿಗೆ ಸಂಬಂಧಿಸಿದ ಚೈತನ್ಯಮಯ ಲಹರಿಗಳು ಆಕರ್ಷಿಸುತ್ತವೆ.
ಉ. ಮೂಗುತಿ (ನತ್ತು) (ಲಹರಿಗಳ ರೂಪ-ಸಣ್ಣ ವರ್ತುಲಗಳಂತೆ) : ಇದು ಬ್ರಹ್ಮಾಂಡದಲ್ಲಿನ ಕ್ರಿಯಾಶಕ್ತಿಗೆ ಸಂಬಂಧಿಸಿದ ಚೈತನ್ಯಮಯ ಲಹರಿಗಳು ಆಕರ್ಷಿಸುತ್ತವೆ.
ಊ. ಕೊರಳಿನಲ್ಲಿ ಹಾಕಿಕೊಳ್ಳುವ ಸರ (ಹಾರ) (ಲಹರಿಗಳ ರೂಪ - ಕಿರಣಗಳಂತೆ) : ಇದು ಬ್ರಹ್ಮಾಂಡದಲ್ಲಿನ ಕ್ರಿಯಾಶಕ್ತಿಗೆ ಸಂಬಂಧಿಸಿದ ಲಹರಿಗಳು ಆಕರ್ಷಿಸುತ್ತವೆ.
ಋ. ವಂಕಿ (ಲಹರಿಗಳ ರೂಪ-ಸಣ್ಣ ವರ್ತುಲಗಳಂತೆ) : ವಂಕಿಗೆ ‘ತೋಳ್ಬಂದಿ, ಬಾಹೂಬಂಧ’ ಎಂದೂ ಹೇಳುತ್ತಾರೆ. ಇದನ್ನು ರಟ್ಟೆಗೆ ಕಟ್ಟುತ್ತಾರೆ. ಇದು ಬ್ರಹ್ಮಾಂಡದಲ್ಲಿನ ಇಚ್ಛಾಶಕ್ತಿಯ ಲಹರಿಗಳು ಆಕರ್ಷಿಸಿ ವಂಕಿಯಲ್ಲಿ ಘನೀಕೃತವಾಗುತ್ತವೆ.
ಎ. ಬಿಲವರ (ಬಂಗಾರದ ಬಳೆಗಳು) (ಲಹರಿಗಳ ರೂಪ-‘ಸ್ಪ್ರಿಂಗ್’ನಂತೆ) : ಇದು ಬ್ರಹ್ಮಾಂಡದಲ್ಲಿನ ಕ್ರಿಯಾ ಶಕ್ತಿಯ ಲಹರಿಗಳು ಆಕರ್ಷಿಸುತ್ತವೆ.
ಏ. ಉಂಗುರ (ಲಹರಿಗಳ ರೂಪ-ಕಿರಣಗಳಂತೆ) : ಇದು ಬ್ರಹ್ಮಾಂಡದಲ್ಲಿನ ಶಕ್ತಿ ತತ್ತ್ವಾತ್ಮಕ ಲಹರಿಗಳು ಆಕರ್ಷಿಸಿ ಅವು ಉಂಗುರದಲ್ಲಿ ಘನೀಕೃತವಾಗುತ್ತವೆ.
ಐ. ನಡುಪಟ್ಟಿ (ಸೊಂಟದಲ್ಲಿ ಕಟ್ಟುವ ಪಟ್ಟಿ) (ಲಹರಿಗಳ ರೂಪ-ವಲಯಾಂಕಿತ) : ಇದು ಬ್ರಹ್ಮಾಂಡದಲ್ಲಿನ ಇಚ್ಛಾಶಕ್ತಿಗೆ ಸಂಬಂಧಿಸಿದ ಲಹರಿಗಳು ಆಕರ್ಷಿಸುತ್ತವೆ.
ಒ. ಛಲ್ಲಾ (ಲಹರಿಗಳ ರೂಪ-ಕಿರಣಗಳಂತೆ) : ಇದನ್ನು ಸೊಂಟದಲ್ಲಿ ಸಿಕ್ಕಿಸುತ್ತಾರೆ. ಇದು ಬ್ರಹ್ಮಾಂಡದಲ್ಲಿನ ಇಚ್ಛಾಶಕ್ತಿಗೆ ಸಂಬಂಧಿಸಿದ ಲಹರಿಗಳನ್ನು ಆಕರ್ಷಿಸಿ, ಅವುಗಳನ್ನು ವಾಯು ಮಂಡಲದಲ್ಲಿ ವೇಗವಾಗಿ ಪ್ರಕ್ಷೇಪಿಸಲಾಗುತ್ತದೆ
ಓ. ಮೇಖಲಾ (ಲಹರಿಗಳ ರೂಪ-ಸ್ಪ್ರಿಂಗ್‌ನಂತೆ) : ಇದನ್ನು ನಡುಪಟ್ಟಿಗೆ ಕಟ್ಟುತ್ತಾರೆ. ಇದು ಶರೀರದ ಸುತ್ತಲೂ ಬ್ರಹ್ಮಾಂಡದಲ್ಲಿನ ಇಚ್ಛಾಶಕ್ತಿಗೆ ಸಂಬಂಧಿಸಿದ ಲಹರಿಗಳ ರಜೋಗುಣೀ ಆವರಣವು ಬರುತ್ತದೆ.
ಔ. ಗೆಜ್ಜೆ (ಲಹರಿಗಳ ರೂಪ-ಕಿರಣಗಳಂತೆ) : ಬ್ರಹ್ಮಾಂಡದಲ್ಲಿನ ಇಚ್ಛಾ ಮತ್ತು ಕ್ರಿಯಾಶಕ್ತಿಗಳಿಗೆ ಸಂಬಂಧಿಸಿದ ಲಹರಿಗಳ ರಜೋಗುಣಿ ಆವರಣವು ಶರೀರದ ಸುತ್ತಲೂ ನಿರ್ಮಾಣವಾಗುತ್ತದೆ.
ಅಂ. ಕಾಲುಂಗುರ (ಲಹರಿಗಳ ರೂಪ-ವಲಯಾಂಕಿತ) : ಬ್ರಹ್ಮಾಂಡದಲ್ಲಿನ ಇಚ್ಛಾ ಮತ್ತು ಕ್ರಿಯಾಶಕ್ತಿಗೆ ಸಂಬಂಧಿಸಿದ ಲಹರಿಗಳು ಒಂದೇ ಸ್ಥಳದಲ್ಲಿ ಬದ್ಧವಾಗಿ ಆವಶ್ಯಕತೆಯಂತೆ ಪ್ರಕ್ಷೇಪಿಸುತ್ತವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸೌಭಾಗ್ಯಾಲಂಕಾರಗಳೆಂದರೆ ಸ್ತ್ರೀಯರಿಗೆ ತಮ್ಮ ಪಾತಿವ್ರತ್ಯದ ಅರಿವು ಮಾಡಿಕೊಡುವ ಮಾಧ್ಯಮಗಳು