ಭೂತದ ಹಲ್ಲೆಯ ನಂತರ ಮಲೇಷ್ಯಾದ ಒಂದು ಶಾಲೆ ಅನಿರ್ದಿಷ್ಟ ಕಾಲ ಬಂದ್ !

ಮಲೇಷ್ಯಾದಲ್ಲಿ ಬುದ್ಧಿಪ್ರಾಮಾಣ್ಯವಾದಿಗಳಿಲ್ಲದ ಕಾರಣ ಶಾಲೆಯನ್ನು ಮುಚ್ಚಬೇಕಾಗಿದೆ. ಬುದ್ಧಿಪ್ರಾಮಾಣ್ಯವಾದಿಗಳು ಇರುತ್ತಿದ್ದರೆ, ಹಾಗೆ ಮಾಡಲು ಬಿಡುತ್ತಿರಲಿಲ್ಲ ಹಾಗೂ ಮಕ್ಕಳ ಜೀವ ಅಪಾಯಕ್ಕೊಳಗಾಗುತ್ತಿತ್ತು !
ಕೌಲಾಲಂಪುರ್ : ಉತ್ತರ ಮಲೇಷ್ಯಾದ ಒಂದು ಶಾಲೆಯಲ್ಲಿ ಭೂತದ ನೆರಳು ಕಾಣಿಸಿರುವ ಘಟನೆ ಘಟಿಸಿತು. ಈ ಘಟನೆಯ ನಂತರ ಆ ಶಾಲೆಯನ್ನು ಅನಿರ್ದಿಷ್ಟ ಕಾಲಕ್ಕಾಗಿ ಮುಚ್ಚಲಾಗಿದೆ. ಭೂತದ ಗಾಳಿಸುದ್ದಿಯ ನಂತರ ಸಂಪೂರ್ಣ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿ ಕಪ್ಪು ವಸ್ತ್ರ ಧರಿಸಿದ ಭೂತವನ್ನು ನೋಡಿದ್ದೇವೆ, ಎಂದು ಹೇಳಿದ್ದಾರೆ. ಈ ಭೂತದ ಆಕೃತಿ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದೆ.
೧. ಶಾಲೆಯ ಮುಖ್ಯೋಪಾಧ್ಯಾಪಕಿ ಸೀತಿ ಹವಾ ಮಾತ ಹೀಗೆಂದರು, ಶಾಲೆಯಲ್ಲಿ ಒಂದು ವಾರದಿಂದ ಈ ಘಟನೆ ನಡೆಯುತ್ತಿದೆ. ಮೊದಲ ದಿನ ೨೫ ಮಕ್ಕಳ ಮೇಲೆ ಹಲ್ಲೆ ಆಗಿದೆ. ಅನಂತರ ೫೦ ಮಕ್ಕಳ ಮೇಲೆ ಹಲ್ಲೆ ಆಯಿತು. ಅಷ್ಟು ಮಾತ್ರವಲ್ಲದೇ ೧೧ ಶಿಕ್ಷಕರ ಮೇಲೆ ಸಹ ಹಲ್ಲೆಯಾಗಿದೆ.
೨. ಶಿಕ್ಷಕ ಕಾಮರಾಹ ಇಬ್ರಾಹಿಂ ಹೀಗೆಂದರು, ನಾನು ಒಂದು ಕಪ್ಪು ನೆರಳನ್ನು ನೋಡಿದೆ. ಆ ನೆರಳು ನನ್ನ ಶರೀರದೊಳಗೆ ನುಸುಳಲು ಪ್ರಯತ್ನಿಸುತ್ತಿತ್ತು. ನನ್ನ ಸಂಗಡಿಗರು ನಾಲ್ಕೂ ದಿಕ್ಕಿನಲ್ಲಿ ನಿಂತು ಕುರಾನಿನ ಆಯತೆ ಓದುತ್ತಿದ್ದರು.
೩. ಇಸ್ಲಾಂನ ತಜ್ಞರು, ವಿದ್ವಾಂಸರು ಮತ್ತು ತಂತ್ರ-ಮಂತ್ರಗಳ ಸಹಾಯದಿಂದ ಈ ಬಾಧೆಯನ್ನು ದೂರಗೊಳಿಸುವವರನ್ನು ಶಾಂತಿಯ ಪ್ರಾರ್ಥನೆಯನ್ನು ಮಾಡಲು ಶಾಲೆಯ ಪರಿಸರಕ್ಕೆ ಕರೆಯಲಾಗಿದೆ. ಆದರೆ ಪ್ರಾರ್ಥನೆ ಮಾಡಿದ ನಂತರವೂ ೮ ಮಕ್ಕಳ ಮೇಲೆ ಹಲ್ಲೆ ಮಾಡಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭೂತದ ಹಲ್ಲೆಯ ನಂತರ ಮಲೇಷ್ಯಾದ ಒಂದು ಶಾಲೆ ಅನಿರ್ದಿಷ್ಟ ಕಾಲ ಬಂದ್ !