ಸ್ತ್ರೀಯರ ಜವಾಬ್ದಾರಿ !

. ಯಾವುದೇ ಸ್ತ್ರೀ ಕೇವಲ ಕನ್ಯೆ, ಸಹೋದರಿ, ಸೊಸೆ ಮತ್ತು ಪತ್ನಿ ಇಷ್ಟಕ್ಕೇ ಸೀಮಿತವಾದ ಕೌಟುಂಬಿಕ ಸಂಬಂಧಕ್ಕೆ ಮಾತ್ರ ಬದ್ಧಳಾಗಿರುವುದಿಲ್ಲ. ಮಾತೃತ್ವವು ಸ್ತ್ರೀಯ ಎಲ್ಲಕ್ಕಿಂತ ಮಹತ್ವದ ವೈಶಿಷ್ಟ್ಯವಾಗಿದೆ. ಭಗವಂತನು ಮಾತೃತ್ವದ ವರದಾನವನ್ನು ವಿಶೇಷವಾಗಿ ಕೇವಲ ಸ್ತ್ರೀಯರಿಗೆ ನೀಡಿದ್ದಾನೆ ಎಂಬುದನ್ನು ಯಾವಾಗಲೂ ಗಮನದಲ್ಲಿಡಬೇಕು.

ಮನುಷ್ಯಪ್ರಾಣಿಗಳಲ್ಲಿ ಸ್ತ್ರೀಯು ಪ್ರಜಾನಿರ್ಮಿತಿಯ ಕಾರ್ಯ ಮಾಡುತ್ತಾಳೆ. ಉತ್ತಮ ಪ್ರಜೆಯ ನಿರ್ಮಿತಿ ಹಾಗೂ ಅದರ ಪಾಲನೆ ಪೋಷಣೆಯಾಗುವುದು ಆವಶ್ಯಕವಾಗಿದೆ. ಈ ದೃಷ್ಟಿಯಿಂದ ಹದಿನಾರು ಸಂಸ್ಕಾರಗಳಲ್ಲಿ ಗರ್ಭದಾನಕ್ಕೆ ಅತ್ಯಂತ ಮಹತ್ವವಿದೆ. ಸುಪ್ರಜೆಗಳ ನಿರ್ಮಿತಿಯ ಸಿದ್ಧಾಂತದಂತೆ ಯೋಗ್ಯ ಗರ್ಭಧಾರಣೆಯ ದೃಷ್ಟಿ ಯಿಂದ ಗರ್ಭಧಾರಣೆಯ ಮೊದಲು ಪಿಂಡ ಶುದ್ಧವಾಗುವುದು ಆವಶ್ಯಕವಾಗಿರುತ್ತದೆ; ಏಕೆಂದರೆ ಒಳ್ಳೆಯ ಬೀಜಶಕ್ತಿಯಿಂದಲೇ ಒಳ್ಳೆಯ ಸಂತತಿ ನಿರ್ಮಾಣವಾಗುತ್ತದೆ.
- .ಪೂ. ಪರಶರಾಮ ಪಾಂಡೆ ಮಹಾರಾಜ
. ರಾಷ್ಟ್ರದ ಉಜ್ವಲ ಭವಿಷ್ಯದ ಬೀಜವು ವರ್ತಮಾನದ ಗರ್ಭದಲ್ಲಿ ಅಡಗಿರುತ್ತದೆ. ಸ್ತ್ರೀ ರಾಷ್ಟ್ರದ ಜನನಿಯಾಗಿದ್ದಾಳೆ. ಸ್ತ್ರೀ ಸೃಜನಶಕ್ತಿಯಾಗಿದ್ದು ಸಮಾಜಜೀವನವನ್ನು ಸುರಕ್ಷಿತ, ಸುಖದಾಯಕ, ಆರೋಗ್ಯಸಂಪನ್ನವಿಡಲು ಮತ್ತು ರಾಷ್ಟ್ರವನ್ನು ಬಲಶಾಲಿಯನ್ನಾಗಿಸಿ ರಾಷ್ಟ್ರದ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಸಹಕಾರಿಯಾಗಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ತ್ರೀಯರ ಜವಾಬ್ದಾರಿ !