ನಮ್ಮ ದಿನಚರಿ ಹೇಗಿರಬೇಕು ?

ಧರ್ಮಶಿಕ್ಷಣ ನೀಡುವ ಹೊಸ ಮಾಲಿಕೆ !
ಬೇಗನೆ ಮಲಗಿ, ಬೇಗನೆ ಏಳುವವನಿಗೆ ಆಯುರಾರೋಗ್ಯವು ಲಭಿಸುವುದು’ ಇಂತಹ ಬೋಧನೆಯನ್ನು ಮೊದಲು ಹಿರಿಯರು ಮಕ್ಕಳಿಗೆ ಕೊಡುತ್ತಿದ್ದರು. ಇಂದು ಮಕ್ಕಳು ತಡವಾಗಿ ಮಲಗುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳುತ್ತಾರೆ. ಹಿಂದಿನ ಕಾಲದ ದಿನಚರಿಯು ನಿಸರ್ಗದ ಮೇಲೆ ಆಧರಿಸಿತ್ತು, ಆದರೆ ಇಂದು ಅದು ಹಾಗಿಲ್ಲ. ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳ ಪಾಲನೆಯನ್ನು ಮಾಡುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆಯನ್ನು ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ತಮ್ಮ ಮಕ್ಕಳಲ್ಲಿಯೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲಿ ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ. (ಮುಂದುವರಿದ ಭಾಗ)

ಇ ೨. ವೈಶ್ವದೇವ ವಿಧಿ
ಇ ೨ ಅ. ಅಗ್ನಿಕುಂಡದಲ್ಲಿ ‘ರುಕ್ಮಕ’ ಅಥವಾ ‘ಪಾವಕ’ ಎಂಬ ಹೆಸರಿನ ಅಗ್ನಿಯ ಸ್ಥಾಪನೆಯನ್ನು ಮಾಡಿ ಅಗ್ನಿಯ ಉಪಾಸನೆಯನ್ನು ಮಾಡಬೇಕು. ಅಗ್ನಿಯ ಸುತ್ತಲೂ ಆರು ಬಾರಿ ನೀರು ಹಾಕಿ (ಮಂಡಲವನ್ನು ಹಾಕಿ) ಅಷ್ಟದಿಕ್ಕುಗಳಿಗೆ ಗಂಧ ಮತ್ತು ಹೂವುಗಳನ್ನು ಅರ್ಪಿಸಬೇಕು ಮತ್ತು ಅಗ್ನಿಯಲ್ಲಿ ಚರೂವಿನ (ಅನ್ನದ) ಆಹುತಿಯನ್ನು ಕೊಡಬೇಕು. ಅನಂತರ ಅಗ್ನಿಯ ಸುತ್ತಲೂ ಮತ್ತೊಮ್ಮೆ ಆರು ಬಾರಿ ನೀರು ಹಾಕಿ ಅಗ್ನಿಯ ಪಂಚೋಪಚಾರ ಪೂಜೆ ಮಾಡಬೇಕು ಮತ್ತು ವಿಭೂತಿ ಯನ್ನು ಹಚ್ಚಿಕೊಳ್ಳಬೇಕು.
ಇ ೨ ಆ. ಉಪವಾಸದ ದಿನ ಅಕ್ಕಿಯ ಆಹುತಿಯನ್ನು ಕೊಡಬೇಕು. (ಉಪವಾಸದ ದಿನ ಅಡುಗೆಯನ್ನು ಮಾಡು ವುದಿಲ್ಲ, ಆದುದರಿಂದ ಅಗ್ನಿಗೆ ಚರುವಿನ ಆಹುತಿ ನೀಡದೇ ಅಕ್ಕಿಯ ಆಹುತಿಯನ್ನು ನೀಡುತ್ತಾರೆ.)
ಇ ೨ ಇ. ಅತಿಸಂಕಟದ ಸಮಯದಲ್ಲಿ ಕೇವಲ ನೀರಿ ನಿಂದಲೇ (ದೇವತೆಗಳ ಹೆಸರನ್ನು ಹೇಳಿ ಹರಿವಾಣದಲ್ಲಿ ನೀರನ್ನು ಬಿಡಬೇಕು) ಈ ವಿಧಿಯನ್ನು ಮಾಡಬಹುದು.
ಇ ೨ ಈ. ಪ್ರವಾಸದಲ್ಲಿದ್ದರೆ ಕೇವಲ ವೈಶ್ವದೇವಸೂಕ್ತ ಅಥವಾ ಮೇಲಿನ ವಿಧಿಯನ್ನು ಕೇವಲ ಬಾಯಿಯಿಂದ ಹೇಳಿದರೂ ಪಂಚಮಹಾಯಜ್ಞದ ಫಲ ಸಿಗುತ್ತದೆ.
. ಭೂತಯಜ್ಞ (ಬಲಿಹರಣ) : ವೈಶ್ವದೇವರಿಗೆ ತೆಗೆದುಕೊಂಡಿರುವ ಅನ್ನದ ಒಂದು ಭಾಗವನ್ನು ದೇವತೆಗಳಿಗೆ ಬಲಿ ಎಂದು ಅರ್ಪಿಸಬೇಕಾಗಿರುತ್ತದೆ. ಭೂತಯಜ್ಞದಲ್ಲಿ ಬಲಿಯನ್ನು ಅಗ್ನಿಯಲ್ಲಿ ನೀಡದೇ ನೆಲದ ಮೇಲೆ ಇಡುತ್ತಾರೆ.
. ನರಯಜ್ಞ ಅಥವಾ ಮನುಷ್ಯಯಜ್ಞ : ಅತಿಥಿ ಗಳ ಸತ್ಕಾರ ಮಾಡುವುದು ಎಂದರೆ ನರಯಜ್ಞ ಅಥವಾ ಮನುಷ್ಯಯಜ್ಞ ಎಂದು ಮನುವು (ಮನುಸ್ಮ ೃತಿ, ಅಧ್ಯಾಯ
, ಶ್ಲೋಕ ೭೦) ಹೇಳಿದ್ದಾನೆ. ಬ್ರಾಹ್ಮಣರಿಗೆ ಅನ್ನವನ್ನು ನೀಡುವುದೂ ಸಹ ಮನುಷ್ಯಯಜ್ಞವೇ ಆಗಿದೆ.
ಈ ೩ ಅ. ಪಂಚಮಹಾಯಜ್ಞಗಳ ಮಹತ್ವ : ಯಾವ ಮನೆಯಲ್ಲಿ ಪಂಚಮಹಾಯಜ್ಞವನ್ನು ಮಾಡುವು ದಿಲ್ಲವೋ, ಆ ಮನೆಯ ಅನ್ನದ ಮೇಲೆ ಸಂಸ್ಕಾರವಾಗಿರುವುದಿಲ್ಲ. ಆದುದರಿಂದ ಆ ಮನೆಯ ಆಹಾರವನ್ನು ಸಂನ್ಯಾಸಿಗಳು, ಸತ್ಪುರುಷರು ಮತ್ತು ಶ್ರಾದ್ಧದ ಸಮಯ ದಲ್ಲಿ ಪಿತೃಗಳು ಗ್ರಹಣ ಮಾಡುವುದಿಲ್ಲ. ಯಾವ ಮನೆ ಯಲ್ಲಿ ಪಂಚಮಹಾಯಜ್ಞವನ್ನು ಮಾಡಿ ಉಳಿದ ಅನ್ನವನ್ನು ಸೇವಿಸುತ್ತಾರೆಯೋ, ಅಲ್ಲಿ ಗೃಹಶಾಂತಿ ಇರುತ್ತದೆ ಮತ್ತು ಅನ್ನಪೂರ್ಣಾ ದೇವಿಯ ವಾಸ್ತವ್ಯವೂ ಇರುತ್ತದೆ.
. ಹಗಲಿನ ಸಮಯವು ಸಾಧನೆಗೆ ಅನುಕೂಲ ವಾಗಿರುವುದರಿಂದ ಹಗಲಿನಲ್ಲಿ ಮಲಗಬಾರದು
ಆರೋಹಣಂ ಗವಾಂ ಪೃಷ್ಠೆ ಪ್ರೇತಧೂಮಂ ಸರಿತ್ತಟಮ್
ಬಾಲಾತಪಂ ದಿವಾಸ್ವಾಪಂ ತ್ಯಜೆದ್ದೀರ್ಘಂ ಜಿಜೀವಿಷುಃ
- ಸ್ಕಂದಪುರಾಣ, ಬ್ರಹ್ಮಖಂಡ, ಧರ್ಮಾರಣ್ಯಮಾಹಾತ್ಮ ್ಯ,
ಅಧ್ಯಾಯ ೬, ಶ್ಲೋಕ ೬೬, ೬೭
ಅರ್ಥ : ಯಾರು ದೀರ್ಘಕಾಲ ಜೀವಂತರಾಗಿರಲು ಇಚ್ಛಿಸುತ್ತಾರೆಯೋ, ಅವರು ಆಕಳು-ಎತ್ತುಗಳ ಬೆನ್ನಿನ ಮೇಲೆ ಏರಬಾರದು, ಚಿತೆಯ ಹೊಗೆಯನ್ನು ತಮ್ಮ ಶರೀರಕ್ಕೆ
ತಗಲಲು ಬಿಡಬಾರದು, ಗಂಗೆಯನ್ನು ಹೊರತು ಪಡಿಸಿ ಇತರ ನದಿಗಳ ತೀರದಲ್ಲಿ ಕುಳಿತುಕೊಳ್ಳಬಾರದು, ಉದಯಿ ಸುತ್ತಿರುವ ಸೂರ್ಯನ ಕಿರಣಗಳು ನಮ್ಮನ್ನು ಸ್ಪರ್ಶಿಸದಂತೆ ನೋಡಿಕೊಳ್ಳಬೇಕು ಮತ್ತು ಹಗಲಿನಲ್ಲಿ ಮಲಗಬಾರದು.
ಉ ೧. ಹಗಲಿನಲ್ಲಿ ಏಕೆ ಮಲಗಬಾರದು ಎಂಬುದರ ಶಾಸ್ತ್ರ : ಹಗಲು ಮತ್ತು ರಾತ್ರಿ ಈ ಎರಡು ಕಾಲಗಳಲ್ಲಿ ರಾತ್ರಿಯ ಕಾಲದಲ್ಲಿ ಸಾಧನೆಯನ್ನು ಮಾಡಲು ಹೆಚ್ಚು ಪ್ರಮಾಣದಲ್ಲಿ ಶಕ್ತಿಯು ಖರ್ಚಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಾಗಿರುವುದರಿಂದ ಸಾಧನೆಗೆ ಈ ಸಮಯವು ಪ್ರತಿಕೂಲವಾಗಿರುತ್ತದೆ. ಈ ಸಮಯವು ಮಾಂತ್ರಿಕರಿಗೆ (ಮಾಂತ್ರಿಕರು ಎಂದರೆ ಪಾತಾಳದಲ್ಲಿನ ಬಲಾಢ್ಯ ಅಸುರಿ ಶಕ್ತಿಗಳು) ಪೂರಕವಾಗಿರುತ್ತದೆ. ಆದುದರಿಂದ ಎಲ್ಲ ಮಾಂತ್ರಿಕರು ಈ ತಮಕಾಲದಲ್ಲಿ ಸಾಧನೆಯನ್ನು ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಸಾತ್ತ್ವಿಕ ಜೀವಗಳು ಸಾತ್ತ್ವಿಕ ಕಾಲದಲ್ಲಿ (ಹಗಲಿನಲ್ಲಿ) ಸಾಧನೆಯನ್ನು ಮಾಡುತ್ತವೆ. ಹಗಲಿನಲ್ಲಿ ಆದಷ್ಟು ಹೆಚ್ಚು ಸಾಧನೆಯನ್ನು ಮಾಡಿ, ಆ ಸಾಧನೆಯ ಬಗ್ಗೆ ರಾತ್ರಿಯ ಸಮಯದಲ್ಲಿ ಚಿಂತನೆಯನ್ನು ಮಾಡುವುದು ಮತ್ತು ದಿನವಿಡೀ ಆದ ತಪ್ಪುಗಳನ್ನು ಸುಧಾರಿಸುವ ಸಂಕಲ್ಪ ಮಾಡಿ, ಮತ್ತೊಮ್ಮೆ ಮರುದಿನ ಪರಿಪೂರ್ಣ ಸಾಧನೆಯನ್ನು ಮಾಡಲು ಪ್ರಯತ್ನಿಸುವುದೇ ಈಶ್ವರನಿಗೆ ಅಪೇಕ್ಷಿತವಾಗಿರುತ್ತದೆ. ಆದುದರಿಂದ ಹಗಲು ಹೊತ್ತಿನಲ್ಲಿ ಮಲಗುವುದನ್ನು ಬಿಡ ಬೇಕು. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಈ ಅಂಕಿನಾಮದಿಂದ ಲೇಖನ ಬರೆಯುತ್ತಾರೆ, ೨೧..೨೦೦೫, ಮಧ್ಯಾಹ್ನ ೩.೦೯)
(ಯಾವನು ದೀರ್ಘಕಾಲ ಜೀವಂತವಾಗಿರಲು ಇಚ್ಛಿಸುತ್ತಾನೆಯೋ ಅವನು ಆಕಳು-ಎತ್ತಿನ ಬೆನ್ನನ್ನು ಏರಬಾರದು, ಚಿತೆಯ ಹೊಗೆಯನ್ನು ತನ್ನ ಶರೀರಕ್ಕೆ ತಗಲಲು ಬಿಡಬಾರದು ಮತ್ತು ಗಂಗಾನದಿಯನ್ನು ಹೊರತುಪಡಿಸಿ ಇತರ ನದಿಗಳ ತೀರದಲ್ಲಿ ಕುಳಿತುಕೊಳ್ಳ ಬಾರದು, ಈ ವಿಷಯದ ಶಾಸ್ತ್ರವನ್ನು ಮತ್ತು ಉದಯಿಸು ತ್ತಿರುವ ಸೂರ್ಯನ ಕಿರಣಗಳು ನಮ್ಮನ್ನು ಸ್ಪ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರ ಗಳ ಹಿಂದಿನ ಶಾಸ್ತ್ರ’ ಈ ಗ್ರಂಥದಲ್ಲಿ ನೀಡಲಾಗಿದೆ.)
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ’ (ಮುಂದುವರಿಯುವುದು)
ಕೆಟ್ಟ ಶಕ್ತಿ : ವಾತಾವರಣದಲ್ಲಿ ಒಳ್ಳೆಯ ಶಕ್ತಿಗಳು ಮತ್ತು ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿಗಳು ಮನುಷ್ಯನಿಗೆ ಒಳ್ಳೆಯ ಕಾರ್ಯಕ್ಕೆ
ಸಹಾಯ ಮಾಡುತ್ತವೆ ಮತ್ತು ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದೊಡ್ಡುತ್ತಿದ್ದ ಅನೇಕ ಕಥೆಗಳು ವೇದ-ಪುರಾಣಗಳಲ್ಲಿವೆ. ‘ಅಥರ್ವ ವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿಗಳನ್ನು, ಉದಾ. ಅಸುರರನ್ನು, ರಾಕ್ಷಸರನ್ನು, ಪಿಶಾಚಿಗಳನ್ನು ಪ್ರತಿಬಂಧಿಸಲು ಮಂತ್ರ ಗಳನ್ನು ಕೊಡಲಾಗಿವೆ.’ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಇತರ ಗ್ರಂಥಗಳಲ್ಲಿ ನೀಡಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮ ದಿನಚರಿ ಹೇಗಿರಬೇಕು ?