ಗೋಮೂತ್ರವನ್ನು ಉಪಯೋಗಿಸಿದ ಪತಂಜಲಿಯ ಉತ್ಪಾದನೆಗಳ ವಿರುದ್ಧ ಬರೇಲಿಯಲ್ಲಿ ಫತ್ವಾ !

ಗೋಮೂತ್ರ ಅಪವಿತ್ರವಾಗಿದ್ದರೆ,
ಗೋಹತ್ಯೆ ಮಾಡಿ ಅದರ ಮಾಂಸ ತಿನ್ನುವುದು ಹೇಗೆ ಪವಿತ್ರವಾಗುತ್ತದೆ ?
ಬರೇಲಿ (ಉತ್ತರಪ್ರದೇಶ) : ಇಲ್ಲಿ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಂಸ್ಥೆಯ ಉತ್ಪಾದನೆಯಲ್ಲಿ ಗೋಮೂತ್ರವಿರುವುದರಿಂದ ಅದರ ವಿರುದ್ಧ ದರಗಾಹ ಅಲ್-ಹಜರತ್ ಫತ್ವಾ ಹೊರಡಿಸಿದೆ. ಮುಸಲ್ಮಾನರಿಗೆ ಗೋಮೂತ್ರ ಅಪವಿತ್ರ ಆಗಿರುವುದರಿಂದ ಈ ಫತ್ವಾವನ್ನು ಹೊರಡಿಸಲಾಗಿದೆ. ಮರಕಜೀ ದಾರುಲ ಇಫ್ತಾದ ಮುಫ್ತಿ ಮುಹಮ್ಮದ ಹಕೀಮ ಮುಜಫ್ಫರ್ ಹುಸೇನ್ ಕಾದ್ರಿ ಮತ್ತು ಮುಫ್ತಿ ಮುಹಮ್ಮದ ಅಲಿ ರಜವಿ ಇವರು ‘ಪತಂಜಲಿ ಇರಲಿ ಅಥವಾ ಇತರ ಯಾವುದೇ ಕಂಪನಿ ತನ್ನ ಉತ್ಪಾದನೆಯಲ್ಲಿ ಗೋಮೂತ್ರವನ್ನು ಬಳಸಿದ್ದರೆ, ಆ ಉತ್ಪಾದನೆಯು ಮುಸಲ್ಮಾನರಿಗೆ ಅಪವಿತ್ರವಾಗುತ್ತದೆ. ಇಂತಹ ಉತ್ಪಾದನೆಗಳನ್ನು ಬಳಸುವುದು ಅಯೋಗ್ಯವಾಗಿದೆ. ಒಂದು ವೇಳೆ ಔಷಧಿಗಳಲ್ಲಿ ಗೋಮೂತ್ರವನ್ನು ಬಳಸುತ್ತಿದ್ದರೆ, ಆ ಔಷಧಿಯೂ ಮುಸಲ್ಮಾನರಿಗೆ ಅಪವಿತ್ರವಾಗುತ್ತದೆ. (ಇಂತಹ ಬುರುಸು ಹಿಡಿದಿರುವ ಮತಾಂಧ ಮುಸಲ್ಮಾನ ಸಂಘಟನೆಗಳ ವಿರುದ್ಧ ಯಾವುದೇ ಜಾತ್ಯತೀತವಾದಿಗಳು ಮತ್ತು ಢೋಂಗಿ ಪ್ರಗತಿಪರರು ಎಂದಿಗೂ ತುಟಿ ಬಿಚ್ಚುವುದಿಲ್ಲ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋಮೂತ್ರವನ್ನು ಉಪಯೋಗಿಸಿದ ಪತಂಜಲಿಯ ಉತ್ಪಾದನೆಗಳ ವಿರುದ್ಧ ಬರೇಲಿಯಲ್ಲಿ ಫತ್ವಾ !