ಭಾರತದಲ್ಲಿ ಅರ್ಬುದ ರೋಗದಿಂದ ಪ್ರತಿದಿನ ೫೦ ಮಕ್ಕಳ ಸಾವು !

ಮುಂಬೈ : ಅರ್ಬುದ ರೋಗದ ಬಗ್ಗೆ ಕೆನಡಾದ ಟೊರಾಂಟೋ ವಿಶ್ವವಿದ್ಯಾಲಯ ಹಾಗೂ ಮುಂಬೈಯ ಟಾಟಾ ಮೆಮೊರಿಯಲ್ ಸೆಂಟರ್ ಒಟ್ಟಾಗಿ ನಡೆಸಿದ ಅಂತರರಾಷ್ಟ್ರೀಯ ಸಂಶೋಧನೆಗೆ ಸಂಬಂಧಪಟ್ಟ ತಜ್ಞರ ಅಭ್ಯಾಸದಿಂದ ಕೆಲವು ಮಾಹಿತಿಗಳು ತಿಳಿದು ಬಂದಿವೆ. ಆ ಮಾಹಿತಿಯಂತೆ ಭಾರತದಲ್ಲಿ ಅರ್ಬುದ ರೋಗದಿಂದ ೧೪ ಕ್ಕಿಂತ ಕಡಿಮೆ ವಯಸ್ಸಿನ ೫೦ ಮಕ್ಕಳು ಪ್ರತಿದಿನ ಸಾವನ್ನಪ್ಪುತ್ತಿದ್ದಾರೆ. ಅಷ್ಟು ಮಾತ್ರವಲ್ಲ ರೋಗ ದೊಡನೆ ಬರುವ ಆರ್ಥಿಕ ಒತ್ತಡ ಹಾಗೂ ಒಳ್ಳೆಯ ಉಪಚಾರದಂತಹ ಪರ್ಯಾಯದ ಕೊರತೆಯ ಮೇಲೂ ಬೆಳಕನ್ನು ಚೆಲ್ಲಲಾಗಿದೆ.

ಇದರಲ್ಲಿ ೧ ಕೋಟಿ ೪೦ ಲಕ್ಷ ಜನರ ಮಾಹಿತಿಯ ಬಗ್ಗೆ ಅಧ್ಯಯನ ಮಾಡಲಾಯಿತು. ೨೦೧೪ ರ ಒಂದು ವರದಿಯಂತೆ ಪ್ರತಿವರ್ಷ ಭಾರತದಲ್ಲಿ ೧೦ ಲಕ್ಷ ಜನರಿಗೆ ಅರ್ಬುದ ರೋಗ ಬರುತ್ತದೆ ಎಂದು ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗನುಸಾರವಾಗಿ ೨೦೨೫ ನೇ ಇಸವಿಯ ತನಕ ಭಾರತದಲ್ಲಿ ಅರ್ಬುದರೋಗಿಗಳ ಸಂಖ್ಯೆಯು ೫ ಪಟ್ಟು ಹೆಚ್ಚಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ಅರ್ಬುದ ರೋಗದಿಂದ ಪ್ರತಿದಿನ ೫೦ ಮಕ್ಕಳ ಸಾವು !