ಹಗಲಿನಲ್ಲಿ ಪೂಜೆ ಮತ್ತು ಅಡುಗೆ ಮಾಡಬಾರದಂತೆ !

ಬೆಂಕಿ ಅನಾಹುತ ತಡೆಯಲು ಬಿಹಾರ ಸರಕಾರದಿಂದ ಜನರಿಗೆ ವಿಚಿತ್ರ ಸಲಹೆ !
ಪಾಟಲೀಪುತ್ರ (ಪಾಟ್ನಾ) : ಬಿಸಿಲಿನ ತೀವ್ರತೆ ಯಿಂದ ಬಿಹಾರದಲ್ಲಿ ಬೆಂಕಿ ಅನಾಹುತಗಳು ಹೆಚ್ಚುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಸರಕಾರದಿಂದ ಸೂಚನೆ ಗಳನ್ನು ಪ್ರಸಿದ್ಧಪಡಿಸಲಾಗಿದೆ. ಅದಕ್ಕನುಸಾರ ನಾಗರಿಕರು ವಿಶೇಷವಾಗಿ ಗ್ರಾಮೀಣ ಪ್ರದೇಶದ ನಾಗರಿಕರು ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಪೂಜೆ, ಹವನ ಅಥವಾ ಅಡುಗೆ ಮಾಡ ಬಾರದೆಂದು ಸಲಹೆ ನೀಡಲಾಗಿದೆ. ಬಿಹಾರದ ವಿಪತ್ತು ನಿರ್ವಹಣ ವಿಭಾಗದ ಪ್ರಧಾನ ಸಚಿವ ವ್ಯಾಸಜೀ ಹೇಳಿಕೆಗನುಸಾರ ಬೇಸಿಗೆ ತೀವ್ರತೆಯಿಂದ ಕಳೆದ ಕೆಲವು ದಿನಗಳಲ್ಲಿ ಬಿಹಾರದಲ್ಲಿ ವಿವಿಧ ಘಟನೆಗಳಲ್ಲಿ ೬೦ ಜನರು ಮೃತಪಟ್ಟು ಲಕ್ಷಗಟ್ಟಲೆ ರೂಪಾಯಿಗಳ ಹಾನಿಯಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಗಲಿನಲ್ಲಿ ಪೂಜೆ ಮತ್ತು ಅಡುಗೆ ಮಾಡಬಾರದಂತೆ !