ಎಲ್ಲಿ ಸಂಸ್ಕೃತ ಭಾಷೆಯನ್ನು ದುರ್ಲಕ್ಷಿಸುವ ಭಾರತ ಹಾಗೂ ಎಲ್ಲಿ ಸಂಸ್ಕೃತದ ಮಹತ್ವವನ್ನು ತಿಳಿದು ಅಧ್ಯಯನ ಮಾಡುವ ಚೀನಾ !

ಪ್ರಧಾನಮಂತ್ರಿ ಮನಮೋಹನ ಸಿಂಗ್‌ರವರು ಚೀನಾದಲ್ಲಿ ಭಾರತೀಯ ಸಂಸ್ಕೃತಿಯ ಅಭ್ಯಾಸಕರಾದ ೯೭ ವರ್ಷದ ವೃದ್ಧ ವಿದ್ವಾಂಸರಾದ ಜೀ ಎಕ್ಸೀ ಆನಿಲಿನ್‌ರವರಿಗೆ ಭಾರತದ ಪದ್ಮಭೂಷಣವನ್ನು ನೀಡಿ ಗೌರವಿಸಿದರು. ಅವರು ರಾಮಾಯಣದ ಸಂಸ್ಕೃತ ಶ್ಲೋಕವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿದ್ದಾರೆ ಹಾಗೂ ಭಾರತೀಯ ಪರಂಪರೆಯ ಇತರ ವಿಷಯ ಗಳನ್ನೂ ಚೈನೀಸ್ ಭಾಷೆಗೆ ಪರಿಚಯಿಸಿದ್ದಾರೆ. ಮೊದಲ ಬಾರಿಗೆ ಭಾರತೀಯರಲ್ಲದ ಓರ್ವ ವ್ಯಕ್ತಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಅವರು ಚೈನಾದ ಭಾರತೀಯ ಸಂಸ್ಕೃತಿ ಅಭ್ಯಾಸಕರ ಗುರುಗಳಾಗಿದ್ದಾರೆ. ಅವರು ಬೀಜಿಂಗ್‌ನ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. (ತ್ರೈಮಾಸಿಕ ಸಂದೇಶ ಭಾರತಿ, ಜನವರಿ - ಮಾರ್ಚ್ ೨೦೦೮)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲಿ ಸಂಸ್ಕೃತ ಭಾಷೆಯನ್ನು ದುರ್ಲಕ್ಷಿಸುವ ಭಾರತ ಹಾಗೂ ಎಲ್ಲಿ ಸಂಸ್ಕೃತದ ಮಹತ್ವವನ್ನು ತಿಳಿದು ಅಧ್ಯಯನ ಮಾಡುವ ಚೀನಾ !