ಕುಂಗ್‌ಫೂ ಯುದ್ಧ ಕಲೆಯು ಭಾರತದ ಕೊಡುಗೆ !

ಸುಮಾರು ೩ ಸಾವಿರ ವರ್ಷಗಳ ಹಿಂದೆ ಭಗವಾನ್ ಪರಶುರಾಮನು ಕಂಡುಹಿಡಿದ ಯುದ್ಧಕಲೆಯು ಇಂದು ಸಹ ಕೇರಳದಲ್ಲಿ ಅಸ್ತಿತ್ವದಲ್ಲಿದೆ. ಹಾಂಗ್‌ಕಾಂಗ್‌ನ ಸುಪ್ರಸಿದ್ಧ ವರ್ತಮಾನ ಪತ್ರಿಕೆ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ತನ್ನ ಲೇಖನದಲ್ಲಿ ನಾಟ್ ಜಸ್ಟ್ ಕಿಕ್ಸ್ (ಕೇವಲ ಕಿಕ್ಸ್ (ಕರಾಟೆ ಯುದ್ಧ ಕಲೆಯಲ್ಲಿನ ಕಾಲಿನಿಂದ ಮಾಡುವ ಆಘಾತ)ಗಳಲ್ಲ) ಎಂದು ನವೆಂಬರ್ ೯ ರಂದು ಪ್ರಕಟವಾಗಿರುವ ಲೇಖನದಲ್ಲಿ ಡೇವಿಡ್ ಮಾಮ್‌ಫರ್ಡ್ ಇವರು ಬರೆದಿದ್ದಾರೆ,
ಶಾವಲೀನ್ (ಕುಂಗ್ ಫೂ ಕಲಿಸುವ ಚೀನಾದಲ್ಲಿನ ದೇವಸ್ಥಾನಗಳು) ಕುಂಗ್‌ಫೂವಿನ ಸಂಪೂರ್ಣ ಮಾಹಿತಿ ಬೋಧಿಧರ್ಮವೆಂಬ ಹೆಸರಿನ ಬುದ್ಧ ಸಾಧುವಿನ ಬೋಧನೆಯಲ್ಲಿದೆ. ಅವನು ಇ.. ೫೨೭ ರ ಮೊದಲು ಇಲ್ಲಿನ ದೇವಸ್ಥಾನಗಳಿಗೆ ಬಂದಿದ್ದನು. ಶರೀರ ಮತ್ತು ಮನಸ್ಸಿನ ಕ್ಷಮತೆ ಹೆಚ್ಚಿಸಲು ಹಾಗೂ ಧ್ಯಾನಕ್ಕಾಗಿ ಸಿದ್ಧ ಪಡಿಸಿದ ಯೋಗವನ್ನೂ ಅವನು ಇಲ್ಲಿ ಕಲಿಸಿದನು. ಕುಂಗ್‌ಫೂ ಅಭ್ಯಾಸ ಮಾಡುವವರಿಗೆ ಅದರ ಮೂಲ ಭಾರತವಿರಬೇಕೆಂದು ಅರಿವಾಯಿತು. ಜಪಾನಿನ ಕರಾಟೆ ಮತ್ತು ಕೊರಿಯಾದ ತಾಕ್ವಾಂಡೋಗಳ ಮೇಲೆ ಚೀನಾದ ಕುಂಗ್‌ಫೂವಿನ ಪ್ರಭಾವವಿದೆ. ಅಂದರೆ ಭಾರತವೇ ಈ ೩ ಯುದ್ಧಕಲೆಗಳ ತವರುಮನೆಯಾಗಿದೆ. (ತ್ರೈಮಾಸಿಕ ಸಂದೇಶಭಾರತಿ, ಜನವರಿ-ಮಾರ್ಚ್ ೨೦೦೮)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕುಂಗ್‌ಫೂ ಯುದ್ಧ ಕಲೆಯು ಭಾರತದ ಕೊಡುಗೆ !