ಭಾರತದಲ್ಲಿ ೧ ವರ್ಷದಲ್ಲಿ ೩೨ ಸಾವಿರದ ೭೭ ಬಲಾತ್ಕಾರಗಳು

ಸಂಸ್ಕೃತಿಪ್ರಧಾನ ಭಾರತವು ಬಲಾತ್ಕಾರಿಗಳ ದೇಶವಾಯಿತು ! ಈ ಬಲಾತ್ಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿರಿ !
ನವ ದೆಹಲಿ : ೨೦೧೫ ರಲ್ಲಿ ದೇಶಾದ್ಯಂತ ಸುಮಾರು ೩೨ ಸಾವಿರದ ೭೭ ಬಲಾತ್ಕಾರಗಳ ಘಟನೆ ಘಟಿಸಿದ್ದು ಅದರಲ್ಲಿ ೧ ಸಾವಿರದ ೭೦೬ ಘಟನೆಗಳು ಸಾಮೂಹಿಕ ಬಲಾತ್ಕಾರದ್ದಾಗಿವೆ, ಎಂದು ಕೇಂದ್ರೀಯ ಗೃಹರಾಜ್ಯಮಂತ್ರಿ ಹರಿಭಾಯಿ ಪಾರ್ಥಿಭಾಯಿ ಚೌಧರಿ ಇವರು ರಾಷ್ಟ್ರೀಯ ಅಪರಾಧ ನೋಂದಣಿ ವಿಭಾಗವು ನೀಡಿದ ಮಾಹಿತಿ ಆಧಾರದಲ್ಲಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.
ಕೇಂದ್ರಸರಕಾರವು ಬಲಾತ್ಕಾರ ಪೀಡಿತರ ಸಹಾಯಕ್ಕಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿದ್ದು ಅದಕ್ಕಾಗಿ ಪ್ರಾರಂಭದಲ್ಲಿ ೨೦೦ ಕೋಟಿ ರೂಪಾಯಿಗಳ ನಿಧಿಯನ್ನು ಒದಗಿಸಲು ನಿರ್ಧರಿಸಿದೆ, ಎಂದು ಸಹ ಚೌಧರಿ ಹೇಳಿದರು. (ಸರಕಾರ ದೇಶದಲ್ಲಿನ ಮಹಿಳೆಯರಿಗೆ ಭದ್ರತೆಯನ್ನು ಪೂರೈಸುವುದರೊಂದಿಗೆ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಸ್ವರಕ್ಷಣಾ ತರಬೇತಿ ಕೊಡಬೇಕು !- ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ೧ ವರ್ಷದಲ್ಲಿ ೩೨ ಸಾವಿರದ ೭೭ ಬಲಾತ್ಕಾರಗಳು