ಸತ್ಯವೇನೆಂದು ತಿಳಿಯದಿರುವುದರಿಂದ ಸಣ್ಣ ಸಣ್ಣ ವಿಷಯಗಳಲ್ಲಿಯೂ ಅಸತ್ಯದ ಸಾಂಗತ್ಯ ಇರುವುದು ಹಾಗೂ ಭಗವಂತನ ನಿಯೋಜನೆಯನ್ನು ತಿಳಿದುಕೊಂಡರೆ ಭಾವ ಜಾಗೃತವಾಗಿ ಸತ್ಯವನ್ನು ತಿಳಿದುಕೊಳ್ಳುವ ಕ್ಷಮತೆ ನಿರ್ಮಾಣವಾಗುತ್ತಿರುವುದು

. ಅಸತ್ಯದ ಸಾಂಗತ್ಯದ ಪ್ರಭಾವದಿಂದ ರಜ-ತಮದ ಪರಿಣಾಮ ಹೆಚ್ಚಾಗಿ ಆತ್ಮದ ಮೇಲೆ ಕಪ್ಪು ಶಕ್ತಿಯ ಆವರಣ ಬಂದಿರುವುದರಿಂದ ಮಾಯೆಯಲ್ಲಿನ ಎಲ್ಲ ವ್ಯವಹಾರಗಳು ಸತ್ಯವೆಂದೇ ಅನಿಸುತ್ತಿದ್ದು ಜೀವವು ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕುವುದು: ನಾನು ಕೈಯಿಂದ ದೀಪವನ್ನು ಆರಿಸಿದೆ, ಎಂದು ನಾವು ಹೇಳುತ್ತೇವೆ; ಆದರೆ ವಾಸ್ತವದಲ್ಲಿ ಅಲ್ಲಿ ವಾಯು (ಗಾಳಿ) ಇತ್ತು.
ನಾನು ಕೈಯಿಂದ ಅಲ್ಲಿನ ವಾಯುವಿಗೆ ಕೇವಲ ಚಾಲನೆ ನೀಡಿದೆ ಹಾಗೂ ಆ ವಾಯುವಿನ ಮೂಲಕ ದೀಪವು ಆರಿತು. ಇದು ಸತ್ಯವಾಗಿರುವಾಗ ನಾವು ಮಾತ್ರ ನಾನು ಕೈಯಿಂದ ದೀಪವನ್ನು ಆರಿಸಿದೆ, ಎಂದು ಹೇಳುತ್ತೇವೆ, ಅಂದರೆ ಯಾವುದು ಸತ್ಯವಾಗಿದೆಯೋ, ಅದು ಅಜ್ಞಾನದಿಂದ ಲೋಪವಾಗುತ್ತದೆ ಹಾಗೂ ಅಸತ್ಯವು ದೃಶ್ಯರೂಪದಲ್ಲಿರುವುದರಿಂದ ಅದರ ಪ್ರಭಾವದಿಂದ ಅದು ಸತ್ಯವೆಂದು ಭಾಸವಾಗುತ್ತದೆ. ಈ ರೀತಿಯಲ್ಲಿ ನಿರಂತರ ಅಸತ್ಯ ಸಂಗದ ಪ್ರಭಾವದಿಂದ ರಜ-ತಮದ ಪರಿಣಾಮವು ಹೆಚ್ಚಾಗಿ ಆತ್ಮದ ಮೇಲೆ ಕಪ್ಪು ಶಕ್ತಿಯ ಆವರಣ ಬರುತ್ತದೆ. ಆಗ ಮಾಯೆಯಲ್ಲಿನ ಎಲ್ಲ ವ್ಯವಹಾರಗಳು ಸತ್ಯವೆಂದು ಅನಿಸಲು ಪ್ರಾರಂಭವಾಗಿ ಸತ್ಯವಾಗಿರುವ ಪರಮೇಶ್ವರನಿಂದ ಅವನು ದೂರ ಹೋಗುತ್ತಾನೆ. ಅದರಿಂದ ಅವನ ಆಧ್ಯಾತ್ಮಿಕ ಉನ್ನತಿಯು ಕುಂಠಿತವಾಗಿ ಆ ಜೀವವು ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕುತ್ತದೆ. ಅದರಿಂದ ಬಿಡುಗಡೆಯಾಗಲು ಅವನು ನಿರಂತರ ಸಾಧನೆ ಮಾಡಿದರೆ ಅವನು ಭಗವಂತನ ಅನುಸಂಧಾನದಲ್ಲಿರುತ್ತಾನೆ. ಅಲ್ಲಿ ಅವನಿಗೆ ನಿರಂತರ ಸತ್ಯದ ಅರಿವು ಇರುವುದರಿಂದ ಅವನ ಆಧ್ಯಾತ್ಮಿಕ ಮಟ್ಟ ಹೆಚ್ಚಾಗುತ್ತದೆ. ಈ ರೀತಿಯಲ್ಲಿ ಆ ಜೀವವು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗುತ್ತದೆ.
. ಸಣ್ಣ ವಿಷಯಗಳಲ್ಲಿನ ಭಗವಂತನ ನಿಯೋಜನಸ್ವರೂಪದ ವಿಜ್ಞಾನವನ್ನು ತಿಳಿದುಕೊಂಡರೆ ಅವನ ಉಪಕಾರದ ಅರಿವಾಗಿ ಸ್ವಭಾವದೋಷ ಮತ್ತು ಅಹಂ-ನಿರ್ಮೂಲನವಾಗಲು ಸಹಾಯವಾಗುವುದು: ನಾನು ಚಹಾ ಕುಡಿಯುತ್ತೇನೆ, ಎಂದು ನಾವು ಹೇಳುತ್ತೇವೆ. ಪ್ರತ್ಯಕ್ಷವಾಗಿ ನಾವು ಚಹಾ ಕುಡಿಯುವಾಗ ಬಾಯಿಯಿಂದ ಗಾಳಿಯನ್ನು ಒಳಗೆ ಎಳೆಯುತ್ತೇವೆ. ಅದರಿಂದ ಬಾಯಿಯಲ್ಲಿ ಟೊಳ್ಳು ನಿರ್ಮಾಣವಾಗುತ್ತದೆ. ಆ ಟೊಳ್ಳನ್ನು ತುಂಬಿಸಲು ಹೊರಗಿನ ಗಾಳಿ ಒಳಗೆ ಹೋಗುತ್ತಿರುವಾಗ ಗಾಳಿಯಿಂದ ಚಹಾ ಬಾಯಿಯ ಒಳಗೆ ತಳ್ಳಲ್ಪಡುತ್ತದೆ. ಈ ರೀತಿಯಲ್ಲಿ ನಾವು ಚಹಾ ಕುಡಿಯುತ್ತೇವೆ; ಆದರೆ ಸತ್ಯವೇನೆಂದು ತಿಳಿಯದಿರುವುದರಿಂದ ನಾನು ಚಹಾ ಕುಡಿಯುತ್ತೇನೆ, ಎಂದು ಹೇಳಿ ಇಂತಹ ಅಸತ್ಯದ ಸಂಗದಲ್ಲಿರುತ್ತೇವೆ, ಅಂದರೆ ಇಲ್ಲಿ ಭಗವಂತನೇ ಎರಡೂ ಬದಿಯಲ್ಲಿ ಕಾರ್ಯ ಮಾಡುತ್ತಾನೆ. ಇಂದಿನ ವಿಜ್ಞಾನ ಯುಗದಲ್ಲಿ ಇಂತಹ ಸಣ್ಣ ಸಣ್ಣ ವಿಷಯಗಳಲ್ಲಿನ ಭಗವಂತನ ನಿಯೋಜನೆಯನ್ನು ತಿಳಿದುಕೊಂಡರೆ, ಅವನ ಉಪಕಾರವನ್ನು ಅರಿತುಕೊಂಡರೆ ನಮ್ಮ ಭಾವಜಾಗೃತವಾಗುವುದು ಹಾಗೂ ಸತ್ಯವನ್ನು ತಿಳಿದುಕೊಳ್ಳುವ ಕ್ಷಮತೆ ನಿರ್ಮಾಣವಾಗುವುದು.
ಇಂತಹ ಪ್ರತಿಯೊಂದು ಕಾರ್ಯದಿಂದ ಭಗವಂತನ ನಿಯೋಜನೆಯನ್ನು ತಿಳಿದುಕೊಂಡರೆ ನಮಗೆ ಅವನಿಂದಾಗುವ ಉಪಕಾರದ ಅರಿವು ಸತತವಾಗಿ ಆಗುತ್ತಾ ಇರುವುದು. ಹೀಗೆ ಅನುಸಂಧಾನದಲ್ಲಿದ್ದರೆ, ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನವಾಗಲು ಸಹಾಯವಾಗುವುದು.
- .ಪೂ. ಪರಶರಾಮ ಪಾಂಡೆ, ಸನಾತನ ಆಶ್ರಮ, ದೇವದ್, ಪನವೇಲ್, ಮಹಾರಾಷ್ಟ್ರ (..೨೦೧೪, ಸಮಯ ಬೆಳಗ್ಗೆ ೮.೩೦)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸತ್ಯವೇನೆಂದು ತಿಳಿಯದಿರುವುದರಿಂದ ಸಣ್ಣ ಸಣ್ಣ ವಿಷಯಗಳಲ್ಲಿಯೂ ಅಸತ್ಯದ ಸಾಂಗತ್ಯ ಇರುವುದು ಹಾಗೂ ಭಗವಂತನ ನಿಯೋಜನೆಯನ್ನು ತಿಳಿದುಕೊಂಡರೆ ಭಾವ ಜಾಗೃತವಾಗಿ ಸತ್ಯವನ್ನು ತಿಳಿದುಕೊಳ್ಳುವ ಕ್ಷಮತೆ ನಿರ್ಮಾಣವಾಗುತ್ತಿರುವುದು