ಬೈಬಲ್‌ಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲನಾದ ಹುಡುಗನಿಗೆ ಕ್ರೈಸ್ತ ಧರ್ಮಗುರುಗಳಿಂದ ಥಳಿತ !

ಕ್ರೈಸ್ತ ಧರ್ಮಗುರುವಿನ ಮತಾಂಧತೆ !
ಮಂಗಳೂರು : ಇಲ್ಲಿರುವ ಅವರ್ ಲೇಡಿ ಆಫ್ ಫಾತಿಮಾ ಚರ್ಚ್‌ನ ಒಂದು ಪ್ರಶ್ನಾವಳಿಯಲ್ಲಿ ಬೈಬಲ್‌ನ ವಿಷಯದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲನಾದ ಓರ್ವ ಹುಡುಗನಿಗೆ ಚರ್ಚ್‌ನ ಧರ್ಮಗುರು ಥಳಿಸಿದನು. ಆರೋಪಿ ಧರ್ಮಗುರು ಸದ್ಯ ಪರಾರಿಯಾಗಿದ್ದಾನೆ. ಸದರಿ ಪ್ರಕರಣದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ತಕರಾರು ನೀಡಲಾಗಿದೆ.

ಪೀಡಿತ ಹುಡುಗನ ಪೋಷಕರು ನೀಡಿದ ಮಾಹಿತಿಯಂತೆ ಅವರ ಮಗ ಬೈಬಲ್‌ಗೆ ಸಂಬಂಧಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲನಾದ ಕಾರಣ ಕ್ರೈಸ್ತ ಧರ್ಮಗುರು ಆಂಡ್ಯೂ ಡಿಕಾಸ್ತಾ ಸಂತಪ್ತಗೊಂಡನು ಮತ್ತು ಆ ಹುಡುಗನಿಗೆ ಕೋಲಿನಿಂದ ಅಮಾನವೀಯ ವಾಗಿ ಹೊಡೆದನು. ಕ್ರೈಸ್ತ ಧರ್ಮಗುರುವಿನ ವಿರುದ್ಧ ಮಕ್ಕಳಹಕ್ಕು ಕಾಯಿದೆಯ ಅನ್ವಯದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ, ಎಂದು ಪೊಲೀಸರು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೈಬಲ್‌ಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲನಾದ ಹುಡುಗನಿಗೆ ಕ್ರೈಸ್ತ ಧರ್ಮಗುರುಗಳಿಂದ ಥಳಿತ !