ಅಮೇರಿಕಾದಲ್ಲಿ ಪ್ರಯಾಣಿಕನೊಬ್ಬ ವಿಮಾನದಲ್ಲಿ ಇನ್ಶಾಅಲ್ಲಾ ಹೇಳಿದ್ದರಿಂದ ಅವನನನ್ನು ಕೆಳಗಿಳಿಸಿದರು !

ಲಾಸ್ ಎಂಜಲೀಸ್ : ಇನ್ಶಾಅಲ್ಲಾ ಎಂದು ಹೇಳಿದ್ದರಿಂದ ಒಬ್ಬ ವಿದ್ಯಾರ್ಥಿ ಪ್ರಯಾಣಿಕನನ್ನು ಸೌತ್ ವೆಸ್ಟರ್ನ್ ಏರ್‌ಲೈನ್ಸ್‌ನ ಒಂದು ವಿಮಾನದಿಂದ ಕೆಳಗಿಳಿಸಲಾಯಿತು. ಅವನ ಹೆಸರು ಖೈರುದ್ದೀನ ಮಖಜೂಮೀ ಎಂದಿದ್ದು ಅವನು ಮೂಲತಃ ಇರಾನ್ ನಿವಾಸಿಯಾಗಿದ್ದಾನೆ. ಅವನು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾನೆ.
೧. ಈ ವಿದ್ಯಾರ್ಥಿ ಏಪ್ರಿಲ್ ೬ ರಂದು ಆಕ್‌ಲ್ಯಾಂಡ್‌ಗೆ ಹೋಗುತ್ತಿದ್ದನು. ಆಗ ಅವನು ತನ್ನ ಚಿಕ್ಕಪ್ಪನ ಜೊತೆಗೆ ಸಂಚಾರಿವಾಣಿಯಲ್ಲಿ ಅರಬೀ ಭಾಷೆಯಲ್ಲಿ ಮಾತನಾಡುತ್ತಿದ್ದನು.
೨. ಕೊನೆಗೆ ಅವನು ಇನ್ಶಾಅಲ್ಲಾ ಎಂದು ಹೇಳಿದನು. ಅವನ ಮಾತು ಕೇಳಿ ಅವನ ಪಕ್ಕದಲ್ಲಿ ಕುಳಿತ ಮಹಿಳೆ ಅವನ ಮಾತು ಸಂಶಯಾಸ್ಪದವಾಗಿದೆಯೆಂದು ವಿಮಾನದ ಸಿಬ್ಬಂದಿಗೆ ದೂರು ನೀಡಿದಳು.
೩. ಅರಬೀ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ಖೈರುದ್ದೀನ್‌ಗೆ ವಿಮಾನದ ಒಬ್ಬ ಸಿಬ್ಬಂದಿ ಪ್ರಶ್ನಿಸಿದನು. ಆಗ ಅವನು ಉದ್ಧಟತನದಿಂದ ಈ ದೇಶಕ್ಕೆ ಇಸ್ಲಾಮೊಫೋಬಿಯಾ ಆಗಿದೆಯೇ ?, ಎಂದು ಮರು ಪ್ರಶ್ನೆ ಕೇಳಿದನು. ಅವನ ಉದ್ಧಟತನವನ್ನು ನೋಡಿ ಅವನನ್ನು ವಿಮಾನದಿಂದ ಕೆಳಗೆ ಇಳಿಸಲಾಯಿತು.
೪. ಅಮೇರಿಕಾದ ಒಂದು ದಿನಪತ್ರಿಕೆಗನುಸಾರ ಇದು ಸೌತ್ ವೆಸ್ಟರ್ನ್ ಏರ್‌ಲೈನ್ಸ್‌ನಲ್ಲಿ ಘಟಿಸಿದ ೪ ನೇ ಘಟನೆಯಾಗಿದೆ. ಈ ಹಿಂದೆಯೂ ಚಿಕಾಗೋದ ವಿಮಾನದಿಂದ ಒಬ್ಬ ಮುಸಲ್ಮಾನ ಪ್ರಯಾಣಿಕನನ್ನು ಕೆಳಗಿಳಿಸಲಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಮೇರಿಕಾದಲ್ಲಿ ಪ್ರಯಾಣಿಕನೊಬ್ಬ ವಿಮಾನದಲ್ಲಿ ಇನ್ಶಾಅಲ್ಲಾ ಹೇಳಿದ್ದರಿಂದ ಅವನನನ್ನು ಕೆಳಗಿಳಿಸಿದರು !