ಧಾರ್ಮಿಕಪರಂಪರೆ ರಕ್ಷಣೆಯ ಚಳುವಳಿಯನ್ನು ಶುಭಾರಂಭಗೊಳಿಸುವ ರಣರಾಗಿಣಿ ಶಾಖೆ !

ಚಳುವಳಿಯಿಂದಾಗಿ ಮತ್ತೊಮ್ಮೆ ಸ್ತ್ರೀಶಕ್ತಿಯ ದರ್ಶನ ! 
ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ರಣರಾಗಿಣಿ ಮಹಿಳಾ ಶಾಖೆಯ ಕಾರ್ಯವು ಕಳೆದ ೭ ವರ್ಷಗಳಿಂದ ನಡೆಯುತ್ತಿದೆ. ಸದ್ಯ ಮಹಿಳೆಯರ ಅಧಿಕಾರಗಳ ಹೆಸರಿನಲ್ಲಿ ಹಿಂದೂ ಧರ್ಮದಲ್ಲಿನ ಪ್ರಾಚೀನ ಪರಂಪರೆ, ಧರ್ಮಶಾಸ್ತ್ರ ಇತ್ಯಾದಿಗಳ ಮೇಲೆ ಆಘಾತ ಮಾಡುವ ಕೃತ್ಯಗಳು ಹೆಚ್ಚುತ್ತಿರುವುದು ಕಂಡು ಬರುತ್ತಿವೆ. ಸ್ತ್ರೀ-ಪುರುಷ ಸಮಾನತೆಯ ಹೆಸರಿನಲ್ಲಿ ಶ್ರೀಕ್ಷೇತ್ರ ಶನಿಶಿಂಗಾಣಪುರ, ಶ್ರೀಕ್ಷೇತ್ರ ತ್ರ್ಯಂಬಕೇಶ್ವರ ಮತ್ತು ಕೊಲ್ಹಾಪುರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿನ ನೂರಾರು ವರ್ಷಗಳ ಧಾರ್ಮಿಕ ಪರಂಪರೆಯನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ. ಆಂದೋಲನಗಳ 'ಸ್ಟಂಟ್' ತೋರಿಸಲಾಗುತ್ತಿದೆ.
ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ರಣರಾಗಿಣಿ ಶಾಖೆಯು ದುಷ್ಪ್ರವೃತ್ತಿಗಳನ್ನು ತಡೆಯಲು ಹಾಗೂ ಧಾರ್ಮಿಕ ಪರಂಪರೆಗಳನ್ನು ರಕ್ಷಿಸಲು ಯುಗಾದಿಯ ಶುಭಮುಹೂರ್ತದಲ್ಲಿ ಅಂದರೆ ಏಪ್ರಿಲ್ ೮ ರಂದು ಧಾರ್ಮಿಕ ಪರಂಪರೆ ರಕ್ಷಣೆ ಚಳುವಳಿಯ ಶುಭಾರಂಭ ಮಾಡಿತು. ಈ ಚಳುವಳಿಯ ಮೂಲಕ ಸಮಾಜದಲ್ಲಿ ಧರ್ಮದ ವಿಷಯದಲ್ಲಿ ಜಾಗೃತಿ ಮೂಡಿಸುವುದು, ಅದಕ್ಕಾಗಿ ಊರುಕೇರಿಗಳಲ್ಲಿನ ಮಹಿಳೆಯರನ್ನು ಭೇಟಿಯಾಗುವುದು, ಅವರಿಗೆ ಪ್ರಬೋಧನೆ ಮಾಡುವುದು, ಪತ್ರಕರ್ತರ ಪರಿಷತ್ತನ್ನು ನಡೆಸುವುದು ಇತ್ಯಾದಿ ಕಾರ್ಯಗಳನ್ನು ಮಾಡಲಾಯಿತು. ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ಇವರು ಮಹಿಳೆಯರಿಗೆ ಗರ್ಭಗುಡಿಯೊಳಗೆ ಪ್ರವೇಶ ನೀಡುವ ವಿಷಯದಲ್ಲಿ ನಡೆಸಿದ ಆಂದೋಲನದ ವಿರುದ್ಧ ಈ ರಣರಾಗಿಣಿ ಶಾಖೆಯ ಮಹಿಳಾ ಕಾರ್ಯಕರ್ತೆಯರು ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದರು. ಈಶ್ವರನ ಅಧಿಷ್ಠಾನ ಹಾಗೂ ಧರ್ಮದ ಬಗ್ಗೆ ಇರುವ ಅಭಿಮಾನ ಹಾಗೂ ಪ್ರೇಮದಿಂದ ಈ ಆಂದೋಲನಕ್ಕೆ ಮನಃಪೂರ್ವಕವಾಗಿ ವಿರೋಧವನ್ನೂ ಮಾಡಿದರು. ರಣರಾಗಿಣಿ ಶಾಖೆಯು ಲವ್ ಜಿಹಾದ್, ಅಶ್ಲೀಲತೆ, ಮಹಿಳೆಯರ ಮೇಲಿನ ಅನ್ಯಾಯ, ಯುವತಿಯರನ್ನು ರೇಗಿಸುವುದು, ಇತ್ಯಾದಿ ಅನೇಕ ಅಯೋಗ್ಯ ಕೃತ್ಯಗಳ ವಿರುದ್ಧ ಕಾರ್ಯ ಮಾಡಿದೆ ಹಾಗೂ ಮಹಿಳೆಯರ ಶಾರೀರಿಕ ಹಾಗೂ ಮಾನಸಿಕ ಪ್ರತಿಕಾರಕ್ಷಮತೆ ಹೆಚ್ಚಾಗ ಬೇಕೆಂದು ಉಚಿತ ಸ್ವರಕ್ಷಣಾ ತರಬೇತಿ ನೀಡಿದೆ. ಹಿಂದೂ ಸ್ತ್ರೀಯರನ್ನು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಬಲಶಾಲಿಗೊಳಿಸಲು ರಣರಾಗಿಣಿ ಶಾಖೆಯು ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಅಶ್ಲೀಲತೆಯ ಪ್ರಸಾರವನ್ನು ತಡೆಗಟ್ಟಲು ಮಹಿಳೆಯರು ಸಹ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ದಾಖಲಿಸಲು ಮುಂದೆ ಬರಬೇಕು. ಅದಕ್ಕಾಗಿ ರಣರಾಗಿಣಿ ಶಾಖೆಯು ಅಗತ್ಯ ಕಾನೂನು ಸಹಾಯ ನೀಡುವುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧಾರ್ಮಿಕಪರಂಪರೆ ರಕ್ಷಣೆಯ ಚಳುವಳಿಯನ್ನು ಶುಭಾರಂಭಗೊಳಿಸುವ ರಣರಾಗಿಣಿ ಶಾಖೆ !