ಹಜಾರಿಬಾಗ್ (ಝಾರ್ಖಂಡ)ನಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯಲ್ಲಿನ ಒಂದು ಹಾಡಿನಿಂದಾಗಿ ಮತಾಂಧರಿಂದ ಹಿಂಸಾಚಾರ !

ಹಿಂದೂಗಳೇ, ಉತ್ಸಾಹ ಹಾಗೂ ಶಾಂತ ವಾತಾವರಣದಲ್ಲಿ ಹಬ್ಬಗಳನ್ನು ಆಚರಿಸಲು ಈಗ ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ, ಎಂಬುದನ್ನು ಗಮನದಲ್ಲಿಟ್ಟು ಅದಕ್ಕಾಗಿ ಸಿದ್ಧರಾಗಿ !
ಹಜಾರಿಬಾಗ್ : ಇಲ್ಲಿ ಶ್ರೀರಾಮನವಮಿ ನಿಮಿತ್ತ ಆಯೋಜಿಸಿದ ಶೋಭಾಯಾತ್ರೆಯ ಮೇಲೆ ಮತಾಂಧರು ದಾಳಿ ಮಾಡಿದ್ದರಿಂದ ಭುಗಿಲೆದ್ದ ಹಿಂಸಾಚಾರದಲ್ಲಿ ೩ ಹಿಂದೂಗಳ ಸಹಿತ ಒಬ್ಬ ಮುಸಲ್ಮಾನನು ಬಲಿಯಾಗಿದ್ದಾನೆ. ಅಷ್ಟು ಮಾತ್ರವಲ್ಲ, ಅನೇಕ ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟು ಭಸ್ಮಗೊಳಿಸಲಾಗಿದೆ. ಈ ಗಲಭೆಗೆ ಹಿಂಸಾಚಾರದ ಬದಲು ವೈಯಕ್ತಿಕ ಕಾರಣಗಳಿದ್ದವು ಎಂದು ಹೇಳಿ ಪೊಲೀಸರಿಂದ ಮತಾಂಧರ ಹಿಂಸಾಚಾರದ ಬಿಸಿಯನ್ನು ಶಾಂತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಪೊಲೀಸರ ಅಭಿಪ್ರಾಯದಲ್ಲಿ ಶೋಭಾಯಾತ್ರೆಯಲ್ಲಿ ಒಂದು ಹಾಡನ್ನು ಹಾಕಿದ್ದ ಕಾರಣ ಈ ಹಿಂಸಾಚಾರ ಭುಗಿಲೆದ್ದಿರಬಹುದು, ಎಂದು ಹೇಳಲಾಗುತ್ತದೆ. ಆದರೆ ಈ ಹಾಡು ಮಾತ್ರ ವಿವಾದಾತ್ಮಕವಾಗಿರಲಿಲ್ಲ. ಈ ಹಿಂದೆ ಇದಕ್ಕಿಂತಲೂ ಹೆಚ್ಚು ಉದ್ರೇಕಕಾರಿ ಹಾಡುಗಳನ್ನು ಹಾಕಲಾಗುತ್ತಿತ್ತು; ಅದು ಸಹ ಪಾಕಿಸ್ತಾನವನ್ನು ನಾಶ ಗೊಳಿಸುವಂತಹ ಅರ್ಥದ್ದಾಗಿರುತ್ತಿತ್ತು. ಅದರಲ್ಲಿ ಜಾತಿವಾದದ ವಿಷಯವು ಸ್ವಲ್ಪವೂ ಇರುತ್ತಿರಲಿಲ್ಲ, ಎಂದು ಪೊಲೀಸರು ಹೇಳಿದರು. (ಇದರ ಅರ್ಥ ಮತಾಂಧರಿಗೆ ಹಿಂದೂಗಳ ಹಬ್ಬಗಳಲ್ಲಿ ಹಿಂಸಾಚಾರ ಮಾಡಲು ಕ್ಷುಲ್ಲಕ ಕಾರಣವೂ ಸಾಕಾಗುತ್ತದೆ. ಅದರೊಂದಿಗೆ ಪಾಕಿಸ್ತಾನದ ವಿರುದ್ಧ ಹಾಡುಗಳನ್ನು ಹಾಕಿದರೆ, ಅವರು ಹಿಂಸಾಚಾರ ಮಾಡುತ್ತಾರೆ. ಅದರಿಂದ ಅವರ ನಿಷ್ಠೆ ಯಾವ ದೇಶದೊಂದಿಗಿದೆ, ಎಂಬುದೂ ಸ್ಪಷ್ಟವಾಗುತ್ತದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಜಾರಿಬಾಗ್ (ಝಾರ್ಖಂಡ)ನಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯಲ್ಲಿನ ಒಂದು ಹಾಡಿನಿಂದಾಗಿ ಮತಾಂಧರಿಂದ ಹಿಂಸಾಚಾರ !