ಯಳ್ಳೂರಿನ (ಬೆಳಗಾವಿ) ಶ್ರೀ ಚಾಂಗಳೇಶ್ವರೀ ದೇವಿಯ ಯಾತ್ರೆ ಸಮಯದಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಸಲು ಆಡಳಿತದಿಂದ ನಕಾರ !

ಹಿಂದೂಬಹುಸಂಖ್ಯಾತರಿರುವ ಭಾರತದಲ್ಲಿ ಹಜ್ ಯಾತ್ರಿಕರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ,
ಆದರೆ ಹಿಂದೂಗಳ ಯಾತ್ರೆಗಳಿಗೆ ನೀರಿನಂತಹ ಮೂಲಭೂತ ಸೌಲಭ್ಯವನ್ನೂ ಪೂರೈಸುವುದಿಲ್ಲ,
ಎಂಬುದನ್ನು ಗಮನದಲ್ಲಿಡಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
ಯಾತ್ರಾ ಸಮಿತಿಯೇ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಲಹೆ !
ಬೆಳಗಾವಿ : ಯಳ್ಳೂರಿನಲ್ಲಿ ಮೇ ೨ ರಿಂದ ಆರಂಭವಾಗುವ ಗ್ರಾಮದೇವತೆ ಶ್ರೀ ಚಾಂಗಳೇಶ್ವರಿ ದೇವಿಯ ಯಾತ್ರೆಯ ಸಮಯದಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಸಲು ಸ್ಥಳೀಯ ಆಡಳಿತದವರು ನಿರಾಕರಿಸಿದ್ದಾರೆ. (ಆಡಳಿತದವರು ಇತರ ಪಂಥೀಯರ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಹೀಗೆ ನಿರಾಕರಿಸುತ್ತಿದ್ದರೇ ?- ಸಂಪಾದಕರು)
. ಪ್ರತಿವರ್ಷದಂತೆ ಈ ವರ್ಷವೂ ಯಳ್ಳೂರ ಗ್ರಾಮದೇವತೆ ಶ್ರೀ ಚಾಂಗಳೇಶ್ವರಿ ದೇವಿಯ ಯಾತ್ರೆಯ ನಿಯೋಜನೆ ಮಾಡಲಾಗಿದೆ.

. ಆದರೂ ಬೆಳಗಾವಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣ ವಾಗಿದ್ದು ಎಲ್ಲೆಡೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾತ್ರೆಗಾಗಿ ಕುಡಿಯುವ ನೀರನ್ನು ಎಲ್ಲಿಂದ ತರುವುದೆಂಬ ಪ್ರಶ್ನೆ ಗ್ರಾಮಸ್ತರನ್ನು ಕಾಡುತ್ತಿದೆ.
. ಯಾತ್ರೆಯ ಸಮಯದಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗ ಬಾರದೆಂದು ಟ್ಯಾಂಕರ್‌ನಿಂದ ನೀರು ಪೂರೈಸಬೇಕೆಂದು ಯಳ್ಳೂರ ಗ್ರಾಮಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರ ವತಿಯಿಂದ ತಹಶೀಲ್ದಾರರಿಗೆ ಮನವಿಯನ್ನು ನೀಡಲಾಗಿದೆ.
. ತಹಶೀಲ್ದಾರ ಪ್ರೀತಮ್ ನಸಲಾಪುರೆ ಇವರು ಯಳ್ಳೂರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಚಿವರನ್ನು ಕರೆದು ಜಿಲ್ಲೆಯಲ್ಲಿ ಎಲ್ಲೆಡೆ ತೀವ್ರ ನೀರಿನ ಕೊರತೆ ನಿರ್ಮಾಣ ಆಗಿರುವುದರಿಂದ ಕೇವಲ ಕುಡಿಯುವ ನೀರನ್ನು ಮಾತ್ರ ಪೂರೈಸಬೇಕೆಂದು ರಾಜ್ಯ ಸರಕಾರ ಆದೇಶ ನೀಡಿದೆ. ಆದ್ದರಿಂದ ಯಾತ್ರೆಗಾಗಿ ನೀರನ್ನು ಪೂರೈಸಲು ಸಾಧ್ಯವಿಲ್ಲ. ಯಾತ್ರೆಯ ಸಮಯದಲ್ಲಿ ಯಾತ್ರಾಸಮಿತಿಯೇ ಟ್ಯಾಂಕರ್‌ಗಳಿಂದ ನೀರಿನ ವ್ಯವಸ್ಥೆ ಮಾಡಬೇಕೆಂದು ಹೇಳಿದ್ದಾರೆ.
. ಆದ್ದರಿಂದ ಈಗ ಯಾತ್ರಾ ಸಮಿತಿಯೇ ಟ್ಯಾಂಕರ್‌ಗಳಿಂದ ಊರಿಗೆ ನೀರು ಪೂರೈಸಿಕೊಳ್ಳಬೇಕಾಗಿದೆ.
. ಜಿಲ್ಲೆಗೆ ತೀವ್ರ ನೀರಿನ ಸಮಸ್ಯೆಯು ಕಾಡುತ್ತಿರುವಾಗ ವಿವಿಧ ಸ್ಥಳಗಳಲ್ಲಿ ಆಯೋಜಿಸುವ ಮಂತ್ರಿಗಳ ಮತ್ತು ನೇತಾರರ ಕಾರ್ಯ ಕ್ರಮಗಳಿಗೆ ಮಾತ್ರ ಅವರಿಗೆ ಬೇಕಾದಷ್ಟು ನೀರನ್ನು ಪೂರೈಸಲಾಗುತ್ತದೆ. ಹಾಗಾದರೆ ಇಂತಹ ಕಾರ್ಯಕ್ರಮಗಳಿಗೆ ನೀರನ್ನು ಪೂರೈಸಬೇಕೆಂದು ಕಾನೂನಿನಲ್ಲಿ ವ್ಯವಸ್ಥೆ ಇದೆಯೇ ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯಳ್ಳೂರಿನ (ಬೆಳಗಾವಿ) ಶ್ರೀ ಚಾಂಗಳೇಶ್ವರೀ ದೇವಿಯ ಯಾತ್ರೆ ಸಮಯದಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಸಲು ಆಡಳಿತದಿಂದ ನಕಾರ !