ಉಂಗುರ
ಉಪಯೋಗ
೧. ಸಂರಕ್ಷಣೆ : ಉಂಗುರವು ಕೇವಲ ಕೈ ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ಸಂರಕ್ಷಣೆಯ ಉದ್ದೇಶವೂ ಇದೆ.
ಅ. ಉಂಗುರವು ಬೆರಳುಗಳನ್ನು ಅನಿಷ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ.
ಆ. ಬೆರಳಿನಲ್ಲಿ ಮಂತ್ರಿಸಿದ ಉಂಗುರವನ್ನು ಧರಿಸುವುದರಿಂದ ಪಿಶಾಚಿಗಳ ಬಾಧೆಯಾಗುವುದಿಲ್ಲ. - ಈಶ್ವರ (ಕು. ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭)
ಇ. ವಿಶಿಷ್ಟ ಹರಳುಗಳ ಉಂಗುರವನ್ನು ಧರಿಸುವುದರಿಂದ ಗ್ರಹಪೀಡೆ ನಾಶವಾಗುತ್ತದೆ.
ಪುರುಷರು ಬಲಗೈಯಲ್ಲಿ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ 
ಉಂಗುರವನ್ನು ಏಕೆ ಧರಿಸಬೇಕು ?
ಪುರುಷರೂಪಿ ಕ್ರಿಯಾಧಾರಕತೆಯು ಸ್ವಯಂ ಕ್ರಿಯೆಯ ಪ್ರತೀಕವಾಗಿರುವುದರಿಂದ ಪುರುಷರು ಬಲಗೈಯ ನಾಡಿಯನ್ನು ಪ್ರತಿನಿಧಿಸುವ ಬಲಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ ಮತ್ತು ಸ್ತ್ರೀಯರು ಕರ್ಮಪ್ರಧಾನಸ್ವರೂಪದ ಪ್ರತೀಕವಾಗಿರುವುದರಿಂದ ಅವರು ಎಡನಾಡಿಯನ್ನು ಪ್ರತಿನಿಧಿಸುವ ಎಡಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ. ಎಡನಾಡಿಯು ತಾರಕ, ಅಂದರೆ ಕರ್ಮ ಪ್ರಧಾನವಾಗಿದೆ ಮತ್ತು ಬಲನಾಡಿಯು ಮಾರಕ ಅಂದರೆ ಕೃತಿಪ್ರಧಾನವಾಗಿದೆ. - ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ, ೩೧.೧೨.೨೦೦೭)
೧. ಬಲಗೈಯು ಕರ್ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದ್ದಾಗಿದೆ; ಆದುದರಿಂದ ಪುರುಷರು ಬಲಗೈಯಲ್ಲಿ ಮತ್ತು ಸ್ತ್ರಿಯರು ಎಡಗೈಯಲ್ಲಿ ಉಂಗುರವನ್ನು ಧರಿಸುತ್ತಾರೆ.
. ಬಲಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸುವುದರಿಂದ ಪುರುಷರಲ್ಲಿರುವ ಮೂಲ ಕರ್ತವ್ಯ ಸ್ವರೂಪ ವಿಚಾರಕ್ಕೆ ತೇಜದ ಬಲವು ಪ್ರಾಪ್ತವಾಗಿ, ಬಲ ನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಇದರಿಂದ ಕಾರ್ಯವು ಕಡಿಮೆ ಸಮಯದಲ್ಲಾಗುತ್ತದೆ.
. ಯಾವುದೇ ಕಾರ್ಯದಲ್ಲಿ ಶಕ್ತಿಯು ಸಾಕ್ಷಿಭಾವದ ರೂಪದಲ್ಲಿ ಸಹಭಾಗಿಯಾಗುವುದರಿಂದ ಅಪ್ರಕಟ ಕಾರ್ಯದ ದರ್ಶಕವೆಂದು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕೆಂದು ಹೇಳಲಾಗಿದೆ. - ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ. (೧೪.೭.೨೦೦೮))
ಆದುದರಿಂದ ಪುರುಷರು ಬಲಗೈಯ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !