ಅಕ್ಷಯ ತೃತೀಯಾದ ಶುಭಮುಹೂರ್ತದಲ್ಲಿ ಮಾಡಿದ ಕಲಶಸ್ಥಾಪನೆಯಿಂದ ತೀರ್ಥಕ್ಷೇತ್ರವಾದ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮ !

ಸನಾತನದ ಕಾರ್ಯವು ವಿಶ್ವವ್ಯಾಪಿಯಾಗಬೇಕೆಂದು
ಆಶ್ರಮದ ಮೇಲೆ ಸ್ಥಾಪಿಸಿದ ೩ ಕಲಶಗಳ ಪೈಕಿ ೧ ಕಲಶ


ಕಲಶವನ್ನು ಸ್ಪರ್ಷಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ
ಮತ್ತು ಮಂತ್ರಪಠಿಸುತ್ತಿರುವ ವೇದಮೂರ್ತಿ ಕೇತನ ಗುರೂಜಿ

ಕಲಶವನ್ನು ಸ್ಪರ್ಷಿಸುತ್ತಿರುವ ಪೂ. ಡಾ. ಮುಕುಲ ಗಾಡಗೀಳ

ಕಲಶವನ್ನು ಸ್ಪರ್ಷಿಸುತ್ತಿರುವ ಪೂ. (ಸೌ.) ಬಿಂದಾ ಸಿಂಗಬಾಳ
ರಾಮನಾಥಿ (ಗೋವಾ) : ಮೂರುವರೆ ಮುಹೂರ್ತಗಳಲ್ಲಿ ಒಂದಾಗಿರುವ ಅಕ್ಷಯ ತೃತಿಯಾದ ಶುಭಮುಹೂರ್ತದಲ್ಲಿ ಸುವರ್ಣಾಕ್ಷರ ಗಳಲ್ಲಿ ಕೊರೆಯುವಂತಹ ಐತಿಹಾಸಿಕ ವಿಧಿ ಇಲ್ಲಿನ ಸನಾತನ ಆಶ್ರಮದಲ್ಲಿ ಜರುಗಿತು ! ನಾಡಿಪಟ್ಟಿಯ ಮೂಲಕ ಮಹರ್ಷಿಗಳು ಮಾಡಿದ ಮಾರ್ಗ ದರ್ಶನಕ್ಕನುಸಾರ ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ೩ ದೈವೀ ಕಲಶಗಳನ್ನು ಮೇ ೯ ರಂದು ಸ್ಥಾಪಿಸಲಾಯಿತು.
ಸನಾತನದ ಸಾಧಕ-ಪುರೋಹಿತ ಪಾಠಶಾಲೆಯ ವೇದಬ್ರಾಹ್ಮಣರು ಭಾವಪೂರ್ಣವಾಗಿ ಮಾಡಿದ ವಿಧಿಯಲ್ಲಿ ಅಕ್ಷಯ ತೃತಿಯಾದ ದಿನ ಮಧ್ಯಾಹ್ನ ೧೨.೧೫ ರಿಂದ ೧.೪೫ ರ ಈ ಅವಧಿಯಲ್ಲಿ ಷೋಡೋಪಚಾರ ಪೂಜೆ ಮಾಡಿ ಕಲಶಗಳನ್ನು ಸ್ಥಾಪಿಸಲಾಯಿತು. ಕಲಶಸ್ಥಾಪನೆಯ ಮೊದಲು ಕಲಶದ ಕೆಳಗೆ ನವಗ್ರಹಗಳ ಹರಳುಗಳನ್ನು ಇಡಲಾಯಿತು. ಬೆಳಗ್ಗೆ ೯.೪೦ಕ್ಕೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆ ಹಾಗೂ ಸನಾತನದ ಸಂತರಾದ ಪೂ. ಡಾ. ಮುಕುಲ ಗಾಡಗೀಳರು ಮತ್ತು ಪೂ. (ಸೌ.) ಬಿಂದಾ ಸಿಂಗಬಾಳ ಇವರು ಕಲಶಗಳನ್ನು ಸ್ಪರ್ಷಿಸಿದರು. ಕಾಲವನ್ನು ಪ್ರತಿನಿಧಿಸುವ ಈ ಕಲಶಗಳ ಸ್ಥಾಪನೆಯಿಂದ ಆಶ್ರಮಕ್ಕೆ ದೇವಸ್ಥಾನದ ಸ್ವರೂಪ ಪ್ರಾಪ್ತವಾಯಿತು. ಈ ಕಲಶಗಳ ಮೂಲಕ ಬ್ರಹ್ಮ, ವಿಷ್ಣು, ಮಹೇಶ ಮತ್ತು ಎಲ್ಲ ದೇವತೆಗಳು, ೮೮ ಸಾವಿರ ಋಷಿಗಣಗಳು ಆಕಾಶಮಂಡಲದಿಂದ ಚೈತನ್ಯವನ್ನು ಪ್ರಕ್ಷೇಪಿಸಲಿದ್ದಾರೆ ಮತ್ತು ಎಲ್ಲ ಸಾಧಕರಿಗೆ ಆಶೀರ್ವಾದ ನೀಡಲಿದ್ದಾರೆ.
ಸನಾತನದ ಕಾರ್ಯವು ವಿಶ್ವವ್ಯಾಪಿಯಾಗಬೇಕೆಂದು ಹಾಗೂ ಘೋರ ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಬೇಕೆಂದು ಈ ಕಲಶದ ಮೂಲಕ ಮಹರ್ಷಿಗಳು ಸಾಧಕರ ಮೇಲೆ ಕೃಪಾವೃಷ್ಟಿಯನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಅವರ ಚರಣಗಳಲ್ಲಿ ಎಷ್ಟೇ ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೇ ಆಗಿದೆ ! ೮ ಮೇ ೨೦೧೬ ರಂದು ಸಂಕಲ್ಪ, ವರುಣಪೂಜೆ, ಪುಣ್ಯಾಹವಾಚನ, ಮಾತೃಕಾಪೂಜೆ, ನಾಂದಿಶ್ರಾದ, ಆಚಾರ್ಯವರಣ ಮುಂತಾದ ಧಾರ್ಮಿಕ ವಿಧಿಗಳ ನಂತರ ಕಲಶಗಳಲ್ಲಿ ವಿವಿಧ ದೇವೀತತ್ತ್ವಗಳನ್ನು ಆಹ್ವಾನಿಸಲಾಯಿತು. ಸನಾತನದ ಸಾಧಕ ದಂಪತಿಗಳಾದ ಶ್ರೀ. ಭಾನು ಪುರಾಣಿಕ ಮತ್ತು ಸೌ. ಆರತಿ ಪುರಾಣಿಕ ಇವರು ಈ ವಿಧಿಯ ಯಜಮಾನ ಸ್ಥಾನದಲ್ಲಿದ್ದರು. ಮೊದಲ ಕಲಶದಲ್ಲಿ ಶ್ರೀ ಯೋಗೇಶ್ವರೀ ದೇವೀ, ಎರಡನೆಯ ಕಲಶದಲ್ಲಿ ವಜ್ರೇಶ್ವರೀದೇವಿ ಹಾಗೂ ಮೂರನೇ ಕಲಶದಲ್ಲಿ ರಾಜರಾಜೇಶ್ವರಿ ಲಲಿತಾ ಮಹಾತ್ರಿಪುರಸುಂದರೀ ದೇವೀ ಇವರ ಆಹ್ವಾನಿಸಲಾಯಿತು. ದೇವೀತತ್ತ್ವಗಳ ಆಹ್ವಾನದ ನಂತರ ಉಟಣೆ, ತುಪ್ಪ, ಚೆನ್ನಂಗಿಯ ಹಿಟ್ಟು, ಜವೆಗೋದಿಯ ಹಿಟ್ಟು, ಅರಿಶಿನ, ಪಲ್ಲವೋದಕ (ಮಾವಿನ ಎಲೆಗಳನ್ನಿಟ್ಟ ನೀರು), ಅಕ್ಷೋದಕ (ಅಕ್ಷತೆಯನ್ನು ಹಾಕಿದ ನೀರು) ಇವುಗಳಿಂದ ಅಭಿಷೇಕ ಹಾಗೂ ಪಂಚಾಮೃತ ಸ್ನಾನ ಮಾಡಿಸಿ ಷೋಡಷೋಪಚಾರ ಪೂಜೆ ಮಾಡಲಾಯಿತು. ಅನಂತರ ಕಲಶಗಳಿಗೆ ಶಯ್ಯಾಧಿವಾಸ ಅಂದರೆ ಮಲಗಿಸುವ ವಿಧಿ ಮಾಡಲಾಯಿತು. ಅನಂತರ ಹವನ ಮಾಡಿ ಅದರಲ್ಲಿ ಸಮಿಧೆ, ಎಳ್ಳು, ಜೇನು, ತುಪ್ಪ, ಚರೂ (ಅನ್ನ) ಇವುಗಳ ಆಹುತಿ ನೀಡಲಾಯಿತು.
ಕ್ಷಣಚಿತ್ರಗಳು
. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಈ ಕಲಶಗಳ ಹಾಗೂ ಎಲ್ಲಿ ಈ ಕಲಶಗಳನ್ನು ಸ್ಥಾಪಿಸಲಾಯಿತೋ, ಆ ಸ್ಥಳಗಳ (ಕಲಶ ಸ್ಥಾಪನೆಯ ಮೊದಲು ಮತ್ತು ನಂತರ) ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್) ಮತ್ತು ಥರ್ಮಲ್ ಇಮೇಜಿಂಗ್ ಈ ಉಪಕರಣಗಳ ಮೂಲಕ ಸಂಶೋಧನೆ
. ಕಲಶಸ್ಥಾಪನೆಯ ಸಮಯದಲ್ಲಿ ಸನಾತನದ ಸಂತರಾದ ಪೂ. ಸಂದೀಪ ಆಳಶಿ, ಎಸ್.ಎಸ್.ಆರ್.ಎಫ್.(ಸ್ಪಿರಿಚ್ಯುಅಲ್ ಸೈನ್ಸ್ ರಿಸರ್ಚ್ ಫೌಂಡೇಶನ್) ಸಂತರಾದ ಪೂ.ಸಿರಿಯಾಕ್ ವಾಲೆ ಇವರ ವಂದನೀಯ ಉಪಸ್ಥಿತಿ
ಕಲಶಸ್ಥಾಪನೆಯನ್ನು ನೋಡಲು
ಮಹರ್ಷಿಗಳು ಪ್ರತ್ಯಕ್ಷ ಬಂದಿರುವುದಕ್ಕೆ ಸಾಕ್ಷಿ !
ನಾಡಿಪಟ್ಟಿಯಲ್ಲಿ ಕಲಶಸ್ಥಾಪನೆ ಸಮಯದಲ್ಲಿ ಗರುಡನ ರೂಪದಲ್ಲಿ ಮಹರ್ಷಿಗಳು ಸ್ವತಃ ಬರುವರು ಎಂಬ ಉಲ್ಲೇಖವಿತ್ತು. ಪ್ರತ್ಯಕ್ಷದಲ್ಲಿಯೂ ಮೇ ೯ ರಂದು ಕಲಶಸ್ಥಾಪನೆಯ ಸಮಯದಲ್ಲಿ ಒಂದು ಗರುಡ ಮೂರು ಬಾರಿ ಆಕಾಶದಲ್ಲಿ ಸುತ್ತು ಹಾಕಿ ಹೋಯಿತು. (ಯಾವುದೇ ಒಂದು ಶುಭ ಘಟನೆ ನಡೆಯುವಾಗ ಅಲ್ಲಿ ಗರುಡ ಅಥವಾ ಹಸು ಬರುವುದೆಂದರೆ ಅದು ಆ ಕಾರ್ಯವು ಯಶಸ್ವಿಯಾಗಲಿರುವುದರ ಲಕ್ಷಣವಾಗಿದೆಯೆಂದು ಮಹರ್ಷಿಗಳು ಹೇಳಿದ್ದಾರೆ.)
ರಾಮನಾಥಿಯಲ್ಲಿ ನಡೆಯುತ್ತಿರುವ
ಕಲಶಸ್ಥಾಪನೆಯ ಸಮಾರಂಭದ ಸಮಯದಲ್ಲಿ
ಮಂಗಳೂರಿನ ಸಾಧಕರಿಗೆ ಯಜ್ಞ ನಡೆಯುತ್ತಿರುವಾಗ
ಬರುವ ಪರಿಮಳದಂತೆ ಪರಿಮಳ ಬರುವುದು
ಮಂಗಳೂರಿನ ಸೇವಾಕೇಂದ್ರದಲ್ಲಿ ೯..೨೦೧೬ ರಂದು ಮಧ್ಯಾಹ್ನ ೧೨ ಗಂಟೆಯಿಂದ ಯಜ್ಞದಂತಹ ಪರಿಮಳ ಬರುತ್ತಿತ್ತು. ಮಧ್ಯಾಹ್ನ ೧೨ ಗಂಟೆಗೆ ಸನಾತನದ ಸಂತರಾದ ಪೂ. ರಾಧಾ ಪ್ರಭು ಇವರು ನಾಮಜಪಕ್ಕೆ ಕುಳಿತಿದ್ದರು ಹಾಗೂ ಕೆಲವು ಸಾಧಕರೂ ಅಲ್ಲಿ ನಾಮಜಪ ಮಾಡುತ್ತಿದ್ದರು. ಆಗ ಪೂ. ರಾಧಾ ಪ್ರಭು ಇವರಿಗೆ ಹೂವಿನ ಹಾಗೂ ಕೆಲವು ಸಾಧಕರಿಗೆ ಯಜ್ಞದ ಪರಿಮಳ ಬರುತ್ತಿತ್ತು ಹಾಗೂ ಅದು ಪಕ್ಕದ ಕೋಣೆಗೂ ಸ್ವಲ್ಪ ಪ್ರಮಾಣದಲ್ಲಿ ಹರಡಿತ್ತು.
- ಶ್ರೀ. ಪ್ರಶಾಂತ ಹರಿಹರ, ಮಂಗಳೂರು (..೨೦೧೬)

ಪರಾತ್ಪರ ಗುರು ಡಾ. ಆಠವಲೆ ಇವರಿಗೆ
ಅರಿವಾದ ಕಲಶ ಸ್ಥಾಪನೆಯ ಹಿಂದಿನ ಕಾರಣ
ಕಲಶದ ಪೂಜೆ ಮತ್ತು ಸ್ಥಾಪನೆ ಮಾಡುವುದರಿಂದ ಬ್ರಹ್ಮಾಂಡದಲ್ಲಿನ ಎಲ್ಲ ಪ್ರಕಾರಗಳ ಈಶ್ವರೀ ಲಹರಿಗಳು ಕಲಶದಲ್ಲಿ ಪ್ರವೇಶಿಸುವುದರಿಂದ ಸಾಧಕರಿಗೆ ಎಲ್ಲ ದೇವತೆಗಳ ಆಶೀರ್ವಾದ ಸಿಗಲಿರುವುದು : ೧೦..೨೦೧೬ ರಂದು ಮಹರ್ಷಿಗಳು ಎರಡು ತಾಮ್ರದ ಹಾಗೂ ಒಂದು ಹಿತ್ತಾಳೆಯ ಹೀಗೆ ಮೂರು ಕಲಶಗಳಿಗೆ ವಸಂತಪಂಚಮಿಯಂದು ಪೂಜಿಸಲು ಹೇಳಿದ್ದಾರೆ. ೧೨..೨೦೧೬ ರಂದು ಮಹರ್ಷಿಗಳು ಈ ಮೂರು ಕಲಶಗಳನ್ನು ಸ್ಥಾಪಿಸಲು ಹೇಳುವುದರಲ್ಲಿನ ಶಾಸ್ತ್ರ ತಿಳಿಯಿತು. ವಾಸ್ತುಶಾಸ್ತ್ರದ ದೃಷ್ಟಿಯಿಂದ ಅರ್ಧಗುಮ್ಮಟ, ದೇವಸ್ಥಾನಗಳ ಕಲಶ, ಭಾರತದ ದಕ್ಷಿಣ ದಿಕ್ಕಿನಲ್ಲಿರುವ ದೇವಸ್ಥಾನಗಳ ಗೋಪುರ ಮತ್ತು ಪಿರಾಮಿಡ್ ಇತ್ಯಾದಿಗಳ ಆಕಾರವನ್ನು ನೋಡಿದಾಗ ಅವುಗಳ ಕೆಳಗಿನ ಭಾಗವು ಅಗಲವಾಗಿದ್ದು ಮೇಲೆ ಹೋದಂತೆ ಕಿರಿದಾಗುತ್ತಾ ಹೋಗುತ್ತವೆ. ದೇವಸ್ಥಾನಗಳು ನೂರಾರು ಅಡಿ ಎತ್ತರವಾಗಿರುತ್ತವೆ ಹಾಗೂ ಅದಕ್ಕನುಸಾರ ಅವುಗಳ ಉದ್ದ ಮತ್ತು ಅಗಲವೂ ನಿರ್ಧಿಷ್ಟ ಆಕಾರದ ನಿಯಮಕ್ಕನುಸಾರವೇ ಇರುತ್ತದೆ. ಆದ್ದರಿಂದ ಅವುಗಳಲ್ಲಿ ನಿರ್ಧಿಷ್ಟ ಕಂಪನಗಳ ಸ್ಪಂದನಗಳನ್ನು ಆಕರ್ಷಿಸುವ, ಸಂಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಇರುತ್ತದೆ. ದೇವಸ್ಥಾನಗಳ ಕಲಶಗಳ ಕಾರ್ಯವು ಸಂಚಾರಿವಾಣಿಯ ಟವರ್‌ನಂತೆ ಅಥವಾ ದೂರದರ್ಶನದ ಆ್ಯಂಟೇನಾದಂತೆ ಇರುತ್ತದೆ. ಒಂದು ಊರಿನಲ್ಲಿ ಸಂಚಾರಿವಾಣಿಯ ಟವರ್ ಇದ್ದರೆ ಆ ಟವರ್‌ನಿಂದಾಗಿ ಸಂಚಾರಿವಾಣಿಗೆ ಉತ್ತಮ ರೇಂಜ್ ಸಿಗುವಂತೆಯೇ ಕಲಶಗಳದ್ದಾಗಿರುತ್ತದೆ. ಕಲಶವೆಂದರೆ Antenna to receive Gods energy. (ದೇವರ ಶಕ್ತಿ ಸಿಗುವ ಆ್ಯಂಟೇನಾ) ಬ್ರಹ್ಮಾಂಡದಿಂದ ವೈಶ್ವಿಕ ಇಂಧನ ಹಾಗೂ ನಿರ್ಗುಣ ಸ್ಪಂದನಗಳು ಕಲಶದಲ್ಲಿ ಸಂಗ್ರಹವಾಗುತ್ತವೆ. ಆದ್ದರಿಂದ ಕಲಶದ ಪೂಜೆ ಮತ್ತು ಸ್ಥಾಪನೆ ಮಾಡುವುದರಿಂದ ಬ್ರಹ್ಮಾಂಡದಲ್ಲಿನ ಎಲ್ಲ ಪ್ರಕಾರದ ಈಶ್ವರೀ ಲಹರಿಗಳು ಕಲಶಗಳಲ್ಲಿ ಪ್ರವೇಶಿಸುವುವು ಹಾಗೂ ಸಾಧಕರಿಗೆ ಎಲ್ಲ ದೇವತೆಗಳ ಆಶೀರ್ವಾದವೂ ಸಿಗುತ್ತದೆ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಕ್ಷಯ ತೃತೀಯಾದ ಶುಭಮುಹೂರ್ತದಲ್ಲಿ ಮಾಡಿದ ಕಲಶಸ್ಥಾಪನೆಯಿಂದ ತೀರ್ಥಕ್ಷೇತ್ರವಾದ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮ !