ಅಜ್ಮೇರ ದರ್ಗಾ ದರ್ಶನಕ್ಕಾಗಿ ಆದಷ್ಟು ಬೇಗ ಬರುವೆನು ! - ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ

ನವ ದೆಹಲಿ : ಅಜ್ಮೇರ ದರ್ಗಾದ ಪೀರ ಸಯ್ಯದ ಫಖ ಕಾಜಮಿ ಚಿಸ್ತಿ ಇವರು ತಮ್ಮ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ಲೋಕಸಭೆಯ ಕಾರ್ಯಾಲಯದಲ್ಲಿ ಭೇಟಿ ಮಾಡಿ ದರು.
ಅವರು ಮೋದಿಯನ್ನು ದರ್ಗಾದ ದರ್ಶನ ಕ್ಕಾಗಿ ಬರುವಂತೆ ಆಹ್ವಾನಿಸಿದರು. ಕಾಜಮಿಯನ್ನು ಮೋದಿಯವರೇ ಭೇಟಿಯಾಗಲು ಕರೆದಿದ್ದರು. ಈ ಸಂದರ್ಭದಲ್ಲಿ ಮೋದಿಯವರಿಗೆ ಪೇಟಾ ಮತ್ತು ಶಾಲನ್ನು ನೀಡಿ ಗೌರವಿಸಲಾಯಿತು. ಮೋದಿಯವರು ಕಳೆದ ತಿಂಗಳಿನಲ್ಲಿಯೇ ಅಜ್ಮೇರ ಶರೀಫ ದರ್ಗಾಕ್ಕೆ ಚಾದರನ್ನು ಕಳುಹಿಸಿದ್ದರು. ಮೋದಿ ಪರವಾಗಿ ಕೇಂದ್ರ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿ ಈ ಚಾದರ ಹೊದಿಸಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಜ್ಮೇರ ದರ್ಗಾ ದರ್ಶನಕ್ಕಾಗಿ ಆದಷ್ಟು ಬೇಗ ಬರುವೆನು ! - ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ