ಬುದ್ಧಿಜೀವಿಗಳ, ಜಾತ್ಯತೀತವಾದಿಗಳ ಒತ್ತಡದಿಂದ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶ ಮಾಡಲು ಮುಂದಾದ ರಾಜ್ಯ ಸರಕಾರದ ಮೌಢ್ಯ ನಿಷೇಧ ಕಾಯ್ದೆ ! - ಶ್ರೀ. ಲಕ್ಷ್ಮೀಶ ಗಬ್ಲಡ್ಕ

ಮಂಗಳೂರು : ಏಪ್ರಿಲ್ ೨೪ ರಂದು ಇಲ್ಲಿನ ಎಸ್.ಡಿ.ಎಂ. ಲಾ ಕಾಲೇಜು, ಕೊಡಿಯಾಲ್‌ಬೈಲ್ ಮಂಗಳೂರಿನಲ್ಲಿ ಹಿಂದೂ ಧರ್ಮಜಾಗೃತಿ ಸಭೆ ನಡೆ ಯಿತು. ಶ್ರೀ. ಲಕ್ಷ್ಮೀಶ ಗಬ್ಲಡ್ಕ ಇವರು ಈ ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ ರೇವಣಕರ, ಸನಾತನ ಸಂಸ್ಥೆಯ ಡಾ. ಗೌರಿ ಆಚಾರ್ಯ, ರಣರಾಗಿಣಿಯ ಸೌ. ಲಕ್ಷ್ಮೀ ಪೈ ಇವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು.

ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಹತ್ತಿಕ್ಕಲು ಸರಕಾರದ ಹುನ್ನಾರ ನಡೆಯುತ್ತಿದೆ !
- ಶ್ರೀ. ಲಕ್ಷ್ಮೀಶ ಗಬ್ಲಡ್ಕ, ಹಿಂದೂ ಮುಖಂಡರು
ಬುದ್ಧಿಜೀವಿಗಳ, ಜಾತ್ಯತೀತವಾದಿಗಳ ಒತ್ತಡದಿಂದ ನಮ್ಮ ರಾಜ್ಯ ಸರಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ತಂದು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶ ಮಾಡಲು ಮುಂದಾಗಿದೆ. ಈ ಕಾಯ್ದೆಯ ಪ್ರಕಾರ ಹಿಂದೂಗಳು ತೀರ್ಥ ಸ್ವೀಕರಿಸಿದರೆ, ಹೋಮ ಮಾಡಿದರೆ, ಹಣೆಗೆ ತಿಲಕ ಹಚ್ಚಿದರೆ, ಕೈಗೆ ಬಳೆ ತೊಟ್ಟರೆ ತಪ್ಪು. ಆದರೆ ಅದೇ ಕ್ರೈಸ್ತರು ‘ಹೋಲಿ ವಾಟರ್’ ಕುಡಿಸಿ ಸಮಸ್ಯೆಯನ್ನು ದೂರ ಮಾಡಿದರೆ ಅದು ಈ ಕಾನೂನು ಪ್ರಕಾರ ತಪ್ಪಾಗುವುದಿಲ್ಲವಂತೆ. ಇಂತಹ ಅನೇಕ ಹಿಂದೂ ವಿರೋಧಿ ನೀತಿಗಳನ್ನು ಈ ಕಾನೂನು ಒಳಗೊಂಡಿದೆ. ಪ್ರಸ್ತಾವಿತ ಈ ಕಾನೂನನ್ನು ಹಿಂದೂಗಳೆಲ್ಲರೂ ಕಾನೂನುಮಾರ್ಗದಲ್ಲಿ ವಿರೋಧಿಸು ವುದು ಆವಶ್ಯಕವಾಗಿದೆ. ‘ರಾಜಾ ಕಾಲಸ್ಯ ಕಾರಣಂ’ ಎಂಬ ಮಾತಿನಂತೆ ಇಂದು ಇಂತಹ ಧರ್ಮದ್ರೋಹಿ ಕಾನೂನು ಬರಲು ಸದ್ಯದ ರಾಜ ಅಂದರೆ ಸರಕಾರವೇ ಕಾರಣವಾಗಿದೆ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಹಿಂದೂ ರಾಷ್ಟ್ರ ಸ್ಥಾಪಿಸುವುದು ಏಕೈಕ ಪರಿಹಾರವಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಸ್ತ್ರೀಯರ ಮಹಾನತೆಯು ಮಹತ್ವಪೂರ್ಣದ್ದಾಗಿದೆ !
- ಸೌ. ಲಕ್ಷ್ಮೀ ಪೈ, ರಣರಾಗಿಣಿ
ಜಗತ್ತಿನಲ್ಲಿ ಸರ್ವಶ್ರೇಷ್ಠವಾದ ಮಹಾನ್ ಹಿಂದೂ ಧರ್ಮಕ್ಕೆ ವಿಶ್ವದ ಬಹುದೊಡ್ಡ ಪರಂಪರೆ ಲಭಿಸಿದೆ, ಈ ಪರಂಪರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರಂತೆ ರಾಜಾಮಾತೆ ಜೀಜಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ವೀರಾಂಗನೆಯರು ಆಗಿ ಹೋದರು, ಸದ್ಯ ಆಧುನಿಕತೆಯ ಹೆಸರಿನಲ್ಲಿ ಧರ್ಮಾಚರಣೆಯನ್ನು ಮರೆತು ಹಿಂದೂ ಯುವತಿ ಯರು ಅಬಲೆಯರಾಗುತ್ತಿರುವುದು ಕಂಡುಬರು ತ್ತಿದೆ. ಮುಸಲ್ಮಾನ ಯುವಕರು ‘ಲವ್ ಜಿಹಾದ್’ ಹೆಸರಿನಲ್ಲಿ ಮುಗ್ಧ ಮತ್ತು ಸುಂದರ ಹಿಂದೂ ಯುವತಿಯರೊಂದಿಗೆ ಪ್ರೀತಿಯೆಂಬ ನಾಟಕವಾಡಿ, ಅವರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ಇಸ್ಲಾಂಗೆ ಮತಾಂತರ ಮಾಡಿ, ಅರಬ್ ದೇಶಗಳಿಗೆ ತರಕಾರಿಯಂತೆ ಮಾರಾಟ ಮಾಡುವ ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆಲ್ಲ ಹಿಂದೂ ಸ್ತ್ರೀಯರಲ್ಲಿರುವ ಶಾರೀರಿಕ ದುರ್ಬಲತೆಯೇ ಕಾರಣ ! ಅದಕ್ಕಾಗಿ ಹಿಂದೂ ಸ್ತ್ರೀಯರು ಧರ್ಮಶಿಕ್ಷಣದ ಜೊತೆಗೆ ಸ್ವ-ಸಂರಕ್ಷಣಾ ತರಬೇತಿ ಪಡೆಯುವುದು ಮತ್ತು ಅದನ್ನು ಯೋಗ್ಯ ಸಮಯದಲ್ಲಿ ಉಪಯೋಗಿಸಲು ಎಲ್ಲರೂ ಸಕ್ಷಮರಾಗುವುದು ಆವಶ್ಯಕವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬುದ್ಧಿಜೀವಿಗಳ, ಜಾತ್ಯತೀತವಾದಿಗಳ ಒತ್ತಡದಿಂದ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶ ಮಾಡಲು ಮುಂದಾದ ರಾಜ್ಯ ಸರಕಾರದ ಮೌಢ್ಯ ನಿಷೇಧ ಕಾಯ್ದೆ ! - ಶ್ರೀ. ಲಕ್ಷ್ಮೀಶ ಗಬ್ಲಡ್ಕ