ಬಾಂಗ್ಲಾದೇಶದಲ್ಲಿ ಇಸ್ಲಾಂಅನ್ನು ಅವಮಾನಿಸುವ ಹಿಂದೂ ಶಿಕ್ಷಕನಿಗೆ ೬ ತಿಂಗಳು ಜೈಲು ಶಿಕ್ಷೆ

ಎಲ್ಲಿ ಇಸ್ಲಾಂಅನ್ನು ಅವಮಾನಿಸುವವರ ಮೇಲೆ ತಕ್ಷಣ ಕ್ರಮಕೈಗೊಂಡು ಶಿಕ್ಷಿಸುವ ಬಾಂಗ್ಲಾದೇಶ ಮತ್ತು
ಎಲ್ಲಿ ಹಿಂದೂಗಳ ದೇವತೆಗಳನ್ನು ಅವಮಾನಿಸುವವರ ವಿರುದ್ಧ ಅಪರಾಧವನ್ನೂ ದಾಖಲಿಸಿಕೊಳ್ಳದಿರುವ ಭಾರತ !
ಢಾಕಾ : ಇಸ್ಲಾಂ ಹಾಗೂ ಮಹಮ್ಮದ್ ಪೈಗಂಬರರ ಬಗ್ಗೆ ಅವಮಾನಾಸ್ಪದವಾಗಿ ಟೀಕಿಸಿದ್ದಕ್ಕಾಗಿ ಬಾಂಗ್ಲಾ ದೇಶದಲ್ಲಿ ಇಬ್ಬರು ಹಿಂದೂ ಶಿಕ್ಷಕರಿಗೆ ಅಲ್ಲಿನ ನ್ಯಾಯಾಲಯವು ಏಪ್ರಿಲ್ ೨೭ ರಂದು ಸೆರೆಮನೆಯ ಶಿಕ್ಷೆ ವಿಧಿಸಿದೆ.

. ಹಿಂದೂ ಶಿಕ್ಷಕನು ಬಗೆರಹಾಟ್ ಜಿಲ್ಲೆಯಲ್ಲಿ ರುವ ಹಿಜಲಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಕಲಿಸುವಾಗ ಕುರಾನ್ ನಲ್ಲಿ ಹೇಳಿರು ವಂತೆ ಸ್ವರ್ಗ ಇರುವುದಿಲ್ಲ, ಎಂದು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
. ಇದರಿಂದ ಮುಸಲ್ಮಾನ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಜನರ ಆಕ್ರೋಶಗೊಂಡ ಗುಂಪು ಶಿಕ್ಷಕರ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿದರು. ಘಟನಾಸ್ಥಳಕ್ಕೆ ಪೊಲೀಸರು ಆಗಮಿಸಿ ಶಿಕ್ಷಕರನ್ನು ಮುಕ್ತಗೊಳಿಸಿದರು.
. ಶಾಲೆಯ ಪ್ರಾಂಶುಪಾಲರಿಗೆ ಹಾಗೂ ವಿಜ್ಞಾನದ ಶಿಕ್ಷಕನಿಗೆ ಇಸ್ಲಾಂಅನ್ನು ಅವಮಾನಿಸಿದ ಆರೋಪದ ಮೇರೆಗೆ ೬ ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಂಗ್ಲಾದೇಶದಲ್ಲಿ ಇಸ್ಲಾಂಅನ್ನು ಅವಮಾನಿಸುವ ಹಿಂದೂ ಶಿಕ್ಷಕನಿಗೆ ೬ ತಿಂಗಳು ಜೈಲು ಶಿಕ್ಷೆ