ವಾಯುಮಾಲಿನ್ಯದಿಂದ ಭಾರತೀಯರ ಆಯುಷ್ಯ ೩ ವರ್ಷ ೪ ತಿಂಗಳು ಕುಸಿತ !

ವಿಜ್ಞಾನ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆಯೆನ್ನುವ ಹೇಳಿಕೆಯನ್ನು
ಈಗ ಬದಲಾಯಿಸಬೇಕು, ಎಂದು ಯಾರಾದರೂ ನುಡಿದರೆ ಅದರಲ್ಲೇನು ಆಶ್ಚರ್ಯ ?
ಯಜ್ಞಯಾಗಗಳಿಂದಾಗಿ ಮತ್ತು ಹೋಳಿ ಬಂದಾಗ ವಾಯು ಮಾಲಿನ್ಯದ ಕುರಿತು ಉದ್ದುದ್ದ ಭಾಷಣ 
ಬಿಗಿಯುವವರು ಈಗೇಕೆ ಸುಮ್ಮನಿರುವರು? ಬುದ್ಧಿಪ್ರಾಮಾಣ್ಯವಾದಿಗಳು ಈಗ ಬಾಯಿ ಬಿಡುವರೇ ?
ನವ ದೆಹಲಿ : ವಾಯುಮಾಲಿನ್ಯದಿಂದ ಶ್ವಾಸದ ಮೂಲಕ ಶರೀರದಲ್ಲಿ ಸೇರ್ಪಡೆಗೊಳ್ಳುವ ವಿಷಕಾರಿ ಅಂಶಗಳಿಂದ ಮಾನವನ ಆಯುಷ್ಯವು ಸಾಧಾರಣವಾಗಿ ೩ ವರ್ಷ ೪ ತಿಂಗಳುಗಳಷ್ಟು ಕಡಿಮೆಯಾಗುತ್ತಿರುವ ಮಾಹಿತಿ ಬಯಲಾಗಿದೆ. ಐ.ಐ.ಟಿ.ಎಂ. ಈ ಪರೀಕ್ಷಣೆಯನ್ನು ಕೈಕೊಂಡಿರುವುದಾಗಿ ಒಂದು ಆಂಗ್ಲ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಭಾರತದಲ್ಲಿರುವ ಎಲ್ಲ ರಾಜ್ಯಗಳ ತುಲನೆಯಲ್ಲಿ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ಮನುಷ್ಯನ ಆಯುಷ್ಯದ ಮೇಲೆ ಅತ್ಯಧಿಕ ಪರಿಣಾಮ ಬೀರುತ್ತಿದೆಯೆಂದು, ಇಲ್ಲಿಯ ಜನರ ಆಯುಷ್ಯ ೬ ವರ್ಷ ೩ ತಿಂಗಳುಗಳಷ್ಟು ಕಡಿಮೆಯಾಗುತ್ತಿದೆಯೆಂದು ಈ ಸಮೀಕ್ಷೆಯಿಂದ ಸ್ಪಷ್ಟಗೊಂಡಿದೆ.
ಹಾಗೆಯೇ ಮಾಲಿನ್ಯದಿಂದಾಗಿ ಉದ್ಭವಿಸುವ ಪುಪ್ಪುಸದ ಗಂಭೀರ ರೋಗದಿಂದ ಪ್ರತಿ ವರ್ಷವೂ ಸುಮಾರು ೩೧ ಸಾವಿರ ಭಾರತೀಯರ ಮೃತ್ಯುವಾಗುತ್ತಿದೆಯೆಂದು ಈ ಸಮೀಕ್ಷೆಯಿಂದ ಕಂಡುಬಂದಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಾಯುಮಾಲಿನ್ಯದಿಂದ ಭಾರತೀಯರ ಆಯುಷ್ಯ ೩ ವರ್ಷ ೪ ತಿಂಗಳು ಕುಸಿತ !