ಕಳಪೆ ಗುಣಮಟ್ಟದ ಚೀನೀ ಉತ್ಪಾದನೆಗಳಿಗೆ ಭಾರತದಲ್ಲಿ ನಿಷೇಧ !

ಚೀನಾದ ಕೇವಲ ಕಳಪೆ ಗುಣಮಟ್ಟದ ವಸ್ತುಗಳನ್ನು ಮಾತ್ರವಲ್ಲದೇ, ಎಲ್ಲ ವಸ್ತುಗಳನ್ನು ನಿಷೇಧಿಸಿ !
ಶತ್ರುರಾಷ್ಟ್ರದ ವಸ್ತುಗಳಿಗೆ ದೇಶದಲ್ಲಿ ಮಾರುಕಟ್ಟೆ ನಿರ್ಮಿಸುವುದು ಆತ್ಮಾಘಾತವೇ ಆಗುತ್ತದೆ !
ಅದರಲ್ಲಿ ಹಾಲು, ಹಾಲಿನ ಉತ್ಪನ್ನಗಳು, ಸಂಚಾರಿವಾಣಿಗಳು ಇತ್ಯಾದಿ ವಸ್ತುಗಳ ಸಮಾವೇಶ
ನವ ದೆಹಲಿ : ಚೀನಾದಿಂದ ಆಮದು ಮಾಡಲ್ಪಡುವ ಮತ್ತು ಉತ್ತಮ ಗುಣಮಟ್ಟವಿಲ್ಲದ ಹಾಲು, ಹಾಲಿನ ಉತ್ಪನ್ನಗಳು ಇತ್ಯಾದಿ ವಸ್ತುಗಳ ಸಹಿತ ಐಎಮ್‌ಐ ಕ್ರಮಾಂಕ ಮತ್ತು ಇತರ ಭದ್ರತೆಗೆ ಸಂಬಂಧಿಸಿದ ಸೌಲಭ್ಯಗಳಿಲ್ಲದ ಸಂಚಾರಿವಾಣಿಗಳಿಗೂ ಕೇಂದ್ರ ಸರಕಾರ ನಿಷೇಧ ಹೇರಿದೆ. ಚೀನಿ ವಸ್ತುಗಳ ಆಮದಿನ ಮೇಲೆ ನಿರ್ಬಂಧ ಹೇರುವ ವಿಷಯದಲ್ಲಿ ಸಾಂಸದ ಭೋಲಾ ಸಿಂಗ್ ಸಹಿತ ಕೆಲವು ಸದಸ್ಯರು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು.
ಪ್ರಶ್ನೆಗೆ ಉತ್ತರ ನೀಡುವಾಗ ಕೇಂದ್ರೀಯ ವಾಣಿಜ್ಯಮಂತ್ರಿ ನಿರ್ಮಲಾ ಸೀತಾರಾಮನ್ ಇವರು ಈ ಮೇಲಿನ ಮಾಹಿತಿಯನ್ನು ನೀಡಿದರು. (ಚೀನಾ ನಮ್ಮ ದೇಶದಲ್ಲಿ ಕಳಪೆ ಮಟ್ಟದ ಸಾವಿರಾರು ಉತ್ಪಾದನೆಗಳನ್ನು ಮಾರಾಟ ಮಾಡುತ್ತದೆ. ಅದರಿಂದಾಗಿ ಭಾರತದ ಅಬ್ಜಗಟ್ಟಲೆ ಹಣ ಚೀನಾಗೆ ಹೋಗುತ್ತದೆ ಹಾಗೂ ಭಾರತದ ಅನೇಕ ಸಣ್ಣಕೈಗಾರಿಕೋದ್ಯಮಗಳು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಆದ್ದರಿಂದ ಚೀನಾದ ಎಲ್ಲ ವಸ್ತುಗಳ ಮೇಲೆ ನಿರ್ಬಂಧ ಹೇರುವುದೇ ಯೋಗ್ಯವೆನಿಸುತ್ತದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಳಪೆ ಗುಣಮಟ್ಟದ ಚೀನೀ ಉತ್ಪಾದನೆಗಳಿಗೆ ಭಾರತದಲ್ಲಿ ನಿಷೇಧ !