ಪಾಕ್ ಹಾಗೂ ತಾಲಿಬಾನ್‌ನ ಭಯೋತ್ಪಾದನೆಯಿಂದ ಅಲ್ಲಿರುವ ಗಾಂಧಾರ ಕಲೆ ವಿನಾಶದ ಅಂಚಿನಲ್ಲಿ !

ಗಾಂಧಾರ ಕಲೆಯು ಒಂದು ಪ್ರಾಚೀನ ಶೈಲಿಯ ಶಿಲ್ಪಕಲೆಯಾಗಿದೆ. ಗಾಂಧಾರ ಕಲೆಯು ಅಸ್ತಿತ್ವಕ್ಕೆ ಬಂದ ಹಾಗೂ ಪುರಾತನ ಸಂಸ್ಕೃತಿಯಿಂದ ಸಮೃದ್ಧವಾಗಿರುವ ಭೂಮಿಯು ಈಗ ದುರ್ದೈವದಿಂದ ಕಲೆಯನ್ನೇ ದ್ವೇಷಿಸುವ ಪಾಕ್ ಹಾಗೂ ತಾಲಿಬಾನ್ ಉಗ್ರರ ವಶವಾಗಿದೆ. ಅಲ್ಲಿನ ಸರಕಾರಕ್ಕೆ ಈ ಕಲೆಯ ಬಗ್ಗೆ ಅಥವಾ ಪುರಾತನ ಸಂಸ್ಕೃತಿಯ ಸೊತ್ತನ್ನು ಕಾಪಾಡಲು ಆಸಕ್ತಿ ಇಲ್ಲ. ಬದಲಾಗಿ ಈ ಪುರಾತನ ಸಂಪತ್ತಿನ ಬಗ್ಗೆ ರೋಮರೋಮಗಳಲ್ಲಿ ದ್ವೇಷ ತುಂಬಿರುವ ಉಗ್ರರು ಅದನ್ನು ಸಂಪೂರ್ಣ ಧ್ವಂಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳಿಗೆ ಈ ಭೂಭಾಗದೊಂದಿಗೆ ಹೃದಯದ ಸಂಬಂಧವಿತ್ತು.
ಈ ಕಲೆಯನ್ನು ಕಾಪಾಡುವ ಬದಲು ಅದು ವಿನಾಶದ ಅಂಚಿನಲ್ಲಿದೆ, ಅದನ್ನು ಕಾಪಾಡಲು ಭಾರತ ಸರಕಾರವು ಪ್ರಯತ್ನಿಸಬೇಕು. ಇಂತಹ ಅಪರೂಪ ಕಲೆಯ ಬಗ್ಗೆ ಸಂಪೂರ್ಣ ಮಾಹಿತಿ ವಾಚಕರಿಗೆ ಸಿಗಲೆಂದು ಶ್ರೀ. ಸಂಜಯ ಗೋಡಬೋಲೆಯವರು ನೀಡಿರುವ ಮಾಹಿತಿಯನ್ನು ನೀಡುತ್ತಿದ್ದೇವೆ.
. ಪಾಕಿಸ್ತಾನ-ಅಫ್ಘಾನ್ ಉಗ್ರರ ಕರ್ಮಭೂಮಿ !
ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉಗ್ರರ ವಿಶ್ವವಿದ್ಯಾಲಯ ಹಾಗೂ ಭಯೋತ್ಪಾದನೆಯ ತವರೂರು ಎಂದು ಗುರುತಿಸಲಾಗುತ್ತದೆ. ಪಾಕಿಸ್ತಾನದ ಜನರ ಜೀವನವು ಭಯೋತ್ಪಾದನೆ, ರಕ್ತಪಾತ ಹಾಗೂ ವಿವಿಧ ಸಂಕಟಗಳಿಂದಲೇ ಕೂಡಿದೆ. ಅಲ್ಲಿನ ಸರಕಾರವು ದೇಶವನ್ನು ನಡೆಸಲು ಹಾಗೂ ಹೆಚ್ಚಾಗುತ್ತಿರುವ ಅರಾಜಕತೆ ಯನ್ನು ನಿಲ್ಲಿಸಲು ವಿಫಲವಾಗಿದೆ. ಪಾಕಿಸ್ತಾನ-ಅಫ್ಘಾನ್ ಗಡಿಯ ಸಮೀಪದ ಕ್ಷೇತ್ರವು ತಾಲಿಬಾನ್ ಹಾಗೂ ಇತರ ಭಯೋತ್ಪಾದಕರ ಕರ್ಮಭೂಮಿಯಾಗಿ ಮಾರ್ಪಾಡಾಗಿದೆ.
. ಪುರಾತನ ವಸ್ತುಗಳನ್ನು ಮಾರಿ ಹಣ ಸಂಪಾದಿಸುವ ಸಂಸ್ಕೃತಿದ್ವೇಷಿ ತಾಲಿಬಾನ್ !
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಪ್ರಾಚೀನ ಇತಿಹಾಸವು ಬೌದ್ಧ ಮತದೊಂದಿಗೆ ಸಂಬಂಧಿಸಿದೆ. ತಾಲಿಬಾನ್‌ಗೆ ಪ್ರಾಚೀನ ಸಂಸ್ಕೃತಿಗೆ ಸಂಬಂಧಪಟ್ಟ ಯಾವುದೇ ರೀತಿಯ ಕುರುಹುಗಳನ್ನು ತನ್ನ ಆಡಳಿತದಲ್ಲಿರುವ ಜಾಗದಲ್ಲಿ ಉಳಿಸಲು ಇಷ್ಟವಿಲ್ಲ. ದುರ್ದೈವದಿಂದ ಯಾವ ಪ್ರದೇಶವು ತಾಲಿಬಾನ್‌ನ ಆಡಳಿತದಲ್ಲಿದೆಯೋ ಆ ಪ್ರದೇಶವು ಪುರಾತನ ಅವಶೇಷ ಹಾಗೂ ಇತಿಹಾಸ ಸಂಸ್ಕೃತಿಯಿಂದ ಎಷ್ಟು ಸಮೃದ್ಧವಾಗಿದೆಯೆಂದರೆ, ಅವರಿಗೆ ಯಾವುದರ ಬಗ್ಗೆ ತಿರಸ್ಕಾರವಿದೆಯೋ, ಅದೇ ಪುರಾತನ ವಸ್ತುಗಳು ಅಲ್ಲಿ ಸತತವಾಗಿ ಸಿಗುತ್ತಿರುತ್ತವೆ. ಇಲ್ಲಿ ಸಿಗುವ ಪುರಾತನ ವಸ್ತುಗಳನ್ನು ತಾಲಿಬಾನ್ ಮಾರಾಟ ಮಾಡುತ್ತಿದೆ, ಎಂಬ ಸತ್ಯ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಬೆಲ್ಜಿಯಮ್‌ನ ಪೊಲೀಸರಿಗೆ ತಿಳಿದು ಬಂದ ಒಂದು ರಹಸ್ಯ ಮಾಹಿತಿಗನುಸಾರ ಪುರಾತನ ವಸ್ತುಗಳು ಹಾಗೂ ಹೆರಾಯಿನ್ ಮಾರಾಟದಿಂದ ತಾಲಿಬಾನ್‌ಗೆ ಅತ್ಯಧಿಕವಾಗಿ ಹಣ ಸಿಗುತ್ತಿದೆ.
. ಯೂರೋಪಿಯನ್ ಮಾರುಕಟ್ಟೆಯಲ್ಲಿ ಪುರಾತನ ಗಾಂಧಾರ ಕಲೆಯ ಶಿಲ್ಪಗಳ ಬಹಿರಂಗ ಮಾರಾಟ !
ಪೀಟರ್ ಬ್ರೇಮ್ ಎಂಬ ಓರ್ವ ಪತ್ರಕರ್ತನು ಬ್ಲಡ್ ಆಂಟಿಕ್ವಿಟೀಸ್ ಎಂಬ ಲೇಖನವನ್ನು ಬರೆಯಲು ಪಾಕಿಸ್ತಾನದ ತಾಲೀಬಾನ್ ನಿಯಂತ್ರಿತ ಪ್ರದೇಶದಿಂದ ಅಫ್ಘಾನಿಸ್ತಾನಕ್ಕೆ ಪ್ರವಾಸ ಮಾಡಿದ್ದನು. ಅವರು ತಮ್ಮ ಪುಸ್ತಕದಲ್ಲಿ ಬ್ರಸೆಲ್ಸ್‌ನಲ್ಲಿರುವ ಕಲೆಯ ಅಂಗಡಿಗಳು ಗಾಂಧಾರ ಕಲೆಯ ವಸ್ತುಗಳಿಂದ ತುಂಬಿವೆ ಎಂದು ನೋಂದಾಯಿಸಿದ್ದಾರೆ. ಈ ಎಲ್ಲ ವಸ್ತುಗಳು ಕಾನೂನು ಬಾಹಿರವಾಗಿ ಬ್ರಸೆಲ್ಸ್‌ಗೆ ತಲುಪಿವೆ ಎಂಬ ವಿಷಯ ಗ್ರಾಹಕರಿಗೆ ಹಾಗೂ ಮಾರಾಟಗಾರರಿಗೆ ತಿಳಿದಿದೆ. ಪುರಾತನ ವಸ್ತುಗಳ ವ್ಯಾಪಾರಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಕ್ಕೆ ಐತಿಹಾಸಿಕ ಮೌಲ್ಯಕ್ಕಿಂತ ಸಿಗುವ ಮೌಲ್ಯ ಹೆಚ್ಚಾಗಿರುವುದರಿಂದ ಅವರು ಸತತ ವಾಗಿ ಪುರಾತನ ವಸ್ತುಗಳನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ಸ್ಥಳಾಂತರಿಸುತ್ತಾರೆ.
. ಪಾಕಿಸ್ತಾನದಲ್ಲಿರುವ ನಾಗರಿಕರಿಗೆ ಗಾಂಧಾರ ಕಲೆಯ ಬಗ್ಗೆ
ಈ ಪುರಾತನ ವಸ್ತುಗಳನ್ನು ಮಾರಿದರೆ ಹಣ ಸಿಗುತ್ತದೆ, ಎಂದಷ್ಟೇ ಜ್ಞಾನವಿದೆ !
ಪಾಕಿಸ್ತಾನದ ಜನರಿಗೆ ತಮ್ಮ ಪುರಾತನ ಇತಿಹಾಸವನ್ನು ಯಾರೂ ಕಲಿಸುವುದಿಲ್ಲ, ಆದ್ದರಿಂದ ಅವರಿಗೆ ಈ ಪ್ರಾಚೀನ ಕಲಾಕೃತಿಗಳು ತಮ್ಮ ರಾಷ್ಟ್ರೀಯ ಸಂಪತ್ತು ಎಂದು ತಿಳಿದುಕೊಂಡು ಅದನ್ನು ಉಳಿಸಿ ಅದರ ಮೇಲೆ ಸಂಶೋಧನೆ ಮಾಡುವ ಬಗ್ಗೆ ಆಸಕ್ತಿಯಿಲ್ಲ. ಬ್ರಿಟಿಷರ ಕಾಲದಿಂದಲೂ ಇಂಡೋಗ್ರೀಕ್ ನಾಣ್ಯಗಳು ಹಾಗೂ ಗಾಂಧಾರ ಕಲೆಯ ಕಲಾಕೃತಿಗಳನ್ನು ಮಾರಲು ವಾಯುವ್ಯದ ಗಡಿಯಿಂದ ಇಲ್ಲಿಗೆ ಬರುತ್ತಿದ್ದರು. ಅವರಿಗೆ ಕೇವಲ ಈ ವಸ್ತುಗಳನ್ನು ಮಾರಿದರೆ ಹಣ ಸಿಗುತ್ತದೆ ಎಂದಷ್ಟೇ ಗಾಂಧಾರ ಕಲೆಯ ಬಗ್ಗೆ ಜ್ಞಾನವಿತ್ತು. ಪಾಕಿಸ್ತಾನದಲ್ಲಿ ಇಂದಿಗೂ ಪ್ರಾಚೀನ ಮೂರ್ತಿ, ಮೃಣ್ಮಯೀ, ಸ್ಟುಕೋ, ವಿವಿಧ ಮಣಿಗಳು, ರೋಮನ್ ದೀಪಗಳು, ಪೂಜೆಯ ಸ್ತೂಪ, ಆನೆದಂತದ ಕಲಾಕೃತಿಗಳು ಸಿಗುತ್ತವೆ. ಈ ವಸ್ತುಗಳು ಕೊನೆಗೆ ಪಾಶ್ಚಾತ್ಯ ಸಂಶೋಧನಾಲಯಗಳಲ್ಲಿ ಅಥವಾ ಹರಾಜು ಕೇಂದ್ರಗಳಿಗೆ ರವಾನೆಯಾಗುತ್ತವೆ.
. ಗಾಂಧಾರ ಕಲೆಯ ಪುರಾತನ ಶಿಲ್ಪಗಳ ಕಳ್ಳ ವ್ಯಾಪಾರ !
ಪಾಕಿಸ್ತಾನದಲ್ಲಿ ಪ್ರಾಚೀನ ಕಲಾಕೃತಿಯ ವ್ಯಾಪಾರಿ ಗಳ ವಿಷಯದಲ್ಲಿ ಶಾರಜಾಹ್ ಚಲೋ, ಎಂದು ಹೇಳಲಾಗುತ್ತದೆ. ಹೆರಾಲ್ಡ್ ಟ್ರಿಬ್ಯೂನ್ ಎಂಬ ಪತ್ರಿಕೆ ಯಲ್ಲಿ ಪಾಕಿಸ್ತಾನದ ಕಳ್ಳಸಾಗಾಣಿಕೆದಾರರಿಂದ ವಶಪಡಿಸಿ ಕೊಂಡ ಗಾಂಧಾರದ ಪುರಾತನ ಮೂರ್ತಿಗಳ ಬಗ್ಗೆ ವಾರ್ತೆಯನ್ನು ಪ್ರಸಿದ್ಧಪಡಿಸಲಾಯಿತು. ಕರಾಚಿಯ ಮಹಮ್ಮದ್ ಎಂಬ ಕಸ್ಟಮ್ ಅಧಿಕಾರಿಯು ಮಾಡಿದ ಮನವಿಯಂತೆ ಓರ್ವ ಕಳ್ಳಸಾಗಾಣಿಕೆದಾರನು ಹಳೆಯ ಮರದ ವಸ್ತುಗಳೊಂದಿಗೆ (ಫರ್ನೀಚರ್) ೨೩ ಮರದ ಪೆಟ್ಟಿಗೆಗಳನ್ನು ಅರಬ್ ಎಮಿರೈಟ್ಸ್‌ಗೆ ರಫ್ತು ಮಾಡಲು ಕಳುಹಿಸಿದನು. ಕರಾಚಿ ಬಂದರಿನಲ್ಲಿ ಸಂಶಯ ಬಂದು ಅದನ್ನು ತೆರೆದು ನೋಡಿದಾಗ, ಅದರಲ್ಲಿ ಗಾಂಧಾರ ಕಲೆಯ ೬೨೫ ಶಿಲ್ಪಗಳು ಸಿಕ್ಕಿದವು. ವಶಪಡಿಸಿಕೊಂಡ ಸಾಮಗ್ರಿಗಳು ಯಾವುದಾದರೂ ಸಂಗ್ರಹಾಲಯದಲ್ಲಿ ರುವುದಕ್ಕಿಂತಲೂ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದವು.
. ಪಾಕಿಸ್ತಾನದಲ್ಲಿ ಪುರಾತನ ವಸ್ತುಗಳ ಸಂವರ್ಧನೆಯ ಕಾಯಿದೆಯಿದ್ದರೂ ಅದು ಜಾರಿಗೆ ತರದಿರುವುದು
ತನ್ನಲ್ಲಿರುವ ಪುರಾತನ ಅವಶೇಷಗಳ ಶಿಪ್‌ಮೆಂಟ್ ಅನ್ನು (ಹಡಗಿನಿಂದ) ಜಗತ್ತಿನ ಯಾವುದೇ ಮೂಲೆಗೂ ಖಚಿತವಾಗಿ ತಲುಪಿಸುವ ಒಂದೇ ಒಂದು ದೇಶ ಪಾಕಿಸ್ತಾನ, ಎಂದು ಈ ಕ್ಷೇತ್ರಕ್ಕೆ ಸಂಬಂಧಪಟ್ಟ ವರು ಹೇಳುತ್ತಾರೆ. ಪಾಕಿಸ್ತಾನದಲ್ಲಿ ೧೯೭೫ ರಲ್ಲಿ ಪುರಾತನ ವಸ್ತುಗಳ ಸಂವರ್ಧನೆಯ ಕಾಯಿದೆಯನ್ನು ಸಮ್ಮತಿಸಿದ್ದರೂ ಅದನ್ನು ಅಲ್ಲಿ ಜಾರಿಗೆ ತರಲು ಆಗುವುದಿಲ್ಲ; ಆದ್ದರಿಂದ ಡಾನ್ ಎಂಬ ವಾರ್ತಾ ಪತ್ರಿಕೆಯು ಅದರ ಮೇಲೆ ಸಂಪಾದಕೀಯವನ್ನು ಬರೆದಿತ್ತು. ಯುನೆಸ್ಕೋದ ರಕ್ಷಣೆಯಲ್ಲಿರುವ ಪ್ರಾಚೀನ ಸ್ಥಳವನ್ನು ಅವರು ಚೆನ್ನಾಗಿ ಕಾಪಾಡುವುದಿಲ್ಲ. ಒಮ್ಮೆ ಯುನೆಸ್ಕೋದ ಸದಸ್ಯರು ಮಹೆಂಜೋದಾರೋದ ಪ್ರಾಚೀನ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದಾಗ, ಅಲ್ಲಿ ಒಂದು ಸಂಚಾರಿವಾಣಿ ಕಂಪೆನಿಯು ತನ್ನ ಟವರ್ ನಿಲ್ಲಿಸಿರುವುದು ಅವರ ಗಮನಕ್ಕೆ ಬಂದಿತು !
. ತಾಲಿಬಾನ್‌ನಿಂದ ೨ ಸಾವಿರ ಪುರಾತನ ಶಿಲ್ಪ ಕಲೆಗಳ ಧ್ವಂಸ
ಪ್ರಾಚ್ಯ ವಸ್ತು ಅಭ್ಯಾಸಕಿ ಬೆರನೀಸ್ ಜೆಫ್ರಿ ಶಿಫರ್‌ರವರು ತಮ್ಮ ಸಂಪೂರ್ಣ ಆಯಸ್ಸನ್ನು ಗಾಂಧಾರ ಕಲೆಯ ಅಭ್ಯಾಸದಲ್ಲಿ ತೊಡಗಿಸಿ ಅದರ ಮೇಲೆ ಒಂದು ಸಚಿತ್ರ ಗ್ರಂಥವನ್ನು ಬರೆದಿದ್ದಾರೆ. ಅವರು ಆಗ ಗಾಂಧಾರ ಕಲೆಯ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ದುರ್ದೈವದಿಂದ ಅವರ ಅಂದಾಜು ಈಗ ಸಂಪೂರ್ಣವಾಗಿ ನಿಜವಾಗಿ ರೂಪಾಂತರಗೊಂಡಿದೆ ಹಾಗೂ ಅಫ್ಘಾನಿಸ್ತಾನದಲ್ಲಿರುವ ೨ ಸಾವಿರ ಪ್ರಾಚೀನ ಶಿಲ್ಪಗಳು ಹಾಗೂ ಅಸಂಖ್ಯಾತ ಮಣ್ಣಿನ ಪಾತ್ರೆಗಳನ್ನು ತಾಲಿಬಾನ್ ನಾಶ ಮಾಡಿದೆ.
. ತಾಲಿಬಾನ್‌ನ ಉಗ್ರರು ಗಾಂಧಾರ ಪಾಟರೀ ವಿಭಾಗವನ್ನು ನಾಶ ಮಾಡುವುದು
೧೯೫೯ರಲ್ಲಿ ಸ್ವಾತ್ ಪರಿಸರದಲ್ಲಿ ಪ್ರಾಚೀನ ಶಿಲ್ಪ ಹಾಗೂ ವಸ್ತುಗಳ ಪ್ರಸಿದ್ಧ ಸಂಗ್ರಹಾಲಯವನ್ನು ಭಿಗೋರಾ - ಸ್ವಾತ್‌ನಲ್ಲಿ ಕಟ್ಟಲಾಯಿತು. ಇಲ್ಲಿ ಓರ್ವ ಸಂಗ್ರಾಹಕರಾದ ಮೇಜರ್ ಜನರಲ್ ಅಬ್ದುಲ್ ಹಕ್ ಜಹಾನ್‌ಜೇಬ್ ದೊಡ್ಡ ಸಂಖ್ಯೆಯಲ್ಲಿ ವಸ್ತುಗಳನ್ನು ನೀಡಿದ್ದರು. ಫೀಲ್ಡ್ ಮಾರ್ಶಲ್ ಆಯುಬ್ ಖಾನ್ ಅದರ ಉದ್ಘಾಟನೆ ಮಾಡಿದ್ದರು. ಅನಂತರ ೧೯೯೨ ರಲ್ಲಿ ಜಪಾನಿನ ನೆರವಿನಿಂದ ಈ ಸಂಗ್ರಹಾಲಯವನ್ನು ವಿಸ್ತರಿಸಲಾಯಿತು. ತಾಲಿಬಾನ್ ಕಣ್ಣಿಗೆ ಈ ಸಂಗ್ರಹಾಲಯವು ಕುಕ್ಕುತ್ತಿತ್ತು. ಆದ್ದರಿಂದ ತಾಲಿಬಾನಿ ಗಳು ಫೆಬ್ರವರಿ ೨೦೦೮ ರಲ್ಲಿ ಸಂಗ್ರಹಾಲಯದ ಮೇಲೆ ಸ್ಫೋಟಕಗಳನ್ನು ಉಪಯೋಗಿಸಿ ಬಹುದೊಡ್ಡ ದಾಳಿ ನಡೆಸಿದರು. ಮೌಲಾನಾ ಫಝಲುಲ್ಲಾಹ್‌ನ ಸಮರ್ಥಕರು ಎಲ್ಲ ಪ್ರಾಚೀನ ಅವಶೇಷಗಳನ್ನು ಸಂಪೂರ್ಣ ನಾಶ ಮಾಡಲು ಹಾತೊರೆಯುತ್ತಿದ್ದರು. ಆದರೆ ಅವರಿಗೆ ಅದನ್ನು ಸಂಪೂರ್ಣವಾಗಿ ನಾಶ ಮಾಡಲು ಆಗಲಿಲ್ಲ. ಸ್ಫೋಟಕ್ಕೆ ಸಂಗ್ರಹಾಲಯದಲ್ಲಿದ್ದ ಕ್ರಿ.ಪೂ. ಮೊದಲ ಶತಮಾನದ ಗಾಂಧಾರ ಪಾಟರಿ (ಕುಂಭಾರದ ಕೆಲಸ) ವಿಭಾಗ ಸಂಪೂರ್ಣ ನಾಶ ವಾಯಿತು. ಅಲ್ಲಿದ್ದ ೧೫೦ ಬಹುಮೂಲ್ಯ ಪಾತ್ರೆಗಳ ತುಣುಕುಗಳನ್ನು ಕೊನೆಗೆ ತಕ್ಷಶಿಲಾದಲ್ಲಿರುವ ಪ್ರಯೋಗ ಶಾಲೆಗೆ ಪ್ರಕ್ರಿಯೆಗಾಗಿ ಕಳುಹಿಸಲಾಯಿತು.
. ಭದ್ರತೆಯ ಅಭಾವದಿಂದ ಸ್ವಾತ್‌ನ ಸಂಗ್ರಹಾಲಯ ಬಂದ್ !
ಸ್ವಾತ್ ಸಂಗ್ರಹಾಲಯದ ಕ್ಯುರೇಟರ್ ಆದ (ನಿರ್ವಾಹಕರು) ಮಹಮ್ಮದ್ ಅಕಲೀಮ್ ಹಾಗೂ ಅವರ ಸಹಕಾರಿಗಳು ಈ ವಿಪತ್ತಿನಿಂದ ಹತಾಶಗೊಂಡಿ ದ್ದಾರೆ. ಕ್ರಿ.ಪೂ. ೩ ನೇ ಶತಮಾನದಿಂದ ಹಿಡಿದು ಹಲವಾರು ಅವಶೇಷಗಳನ್ನು ಇಲ್ಲಿರುವ ೮ ಸಭಾಂಗಣ ಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಈಗ ಆ ಸಂಗ್ರಹಾಲಯ ವನ್ನು ಭದ್ರತೆಯ ಅಭಾವದಿಂದ ಮುಚ್ಚಲಾಗಿದೆ, ಭವಿಷ್ಯ ದಲ್ಲೇನಾದರೂ ಸ್ವಾತ್ ಕಣಿವೆಯಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆಯಾದರೆ, ಆಗ ಮರಳಿ ಈ ಸಂಗ್ರಹಾಲಯವನ್ನು ಪ್ರಾರಂಭಿಸಲಾಗುವುದು, ಎಂದು ಸ್ವಾತ್ ಸಂಗ್ರಹಾಲಯದ ಆಯೋಜಕರು ಘೋಷಿಸಿದರು. ಈಗ ಈ ಸ್ಥಳವು ಸೇನೆಯ ಕೋಟೆಯಂತೆ ಕಾಣಿಸುತ್ತದೆ. ಮರಳಿನ ಮೂಟೆ ಹಾಗೂ ಬಂಕರ್ಸ್‌ಗಳನ್ನು ನಿಲ್ಲಿಸಿ ಇದನ್ನು ರಕ್ಷಿಸಲಾಗುತ್ತಿದೆ, ಕ್ಯುರೇಟರ್ ಅಕಲೀಮ್ ತಮ್ಮ ಕುಟುಂಬ ದವರೊಂದಿಗೆ ಇಲ್ಲಿ ವಾಸಿಸುತ್ತಾರೆ. ಅವರ ಅಭಿಪ್ರಾಯ ದಂತೆ ಈಗ ಅವರ ಜೀವನವು ಸೆರೆಮನೆಯಂತಾಗಿದೆ.
೧೦. ತಾಲಿಬಾನ್ ಹಾಗೂ ಉಗ್ರರ ಭಯೋತ್ಪಾದನೆಯಿಂದ
ಗಾಂಧಾರ ಕಲೆಯನ್ನು ಅಭ್ಯಾಸ ಮಾಡುವ ಸಂಶೋಧಕರ ಸಂಶೋಧನೆ ನಿಂತು ಹೋಗಿದೆ !
ಹಿಂದೆ ಸುಮಾರು ೨೦ ವಿದೇಶಿ ಸಂಶೋಧಕರ ಗುಂಪು ಇಲ್ಲಿ ಕೆಲಸ ಮಾಡುತ್ತಿತ್ತು; ಆದರೆ ಈಗ ಅವರ ಸಂಶೋಧನೆ ಸಂಪೂರ್ಣವಾಗಿ ನಿಂತು ಹೋಗಿದೆ. ಪೇಶಾವರ್ ಮ್ಯೂಝಿಯಮ್‌ನ ಕಾಜಿ ಎಜಾಝ್ ರವರು, ‘ಪೇಶಾವರಕ್ಕೆ ಬರುವ ಸಾವಿರಾರು ವಿದೇಶಿ ಪ್ರವಾಸಿಗರು ಈಗ ಅಲ್ಲಿಗೆ ಬರುವುದಿಲ್ಲ. ತಾಲಿಬಾನ್ ಹಾಗೂ ಉಗ್ರರ ಭಯದಿಂದ ಅಲ್ಲಿಗೆ ಹೋಗಲೂ ಯಾರೂ ಧೈರ್ಯ ಮಾಡುವುದಿಲ್ಲ. ಪ್ರವಾಸಿ ಕಂಪನಿ ಗಳು ಕೂಡ ಮುಚ್ಚಲ್ಪಟ್ಟಿದ್ದು ಈಗ ಪುರಾತತ್ವದ ಸ್ಥಾನ ಗಳು ನಿರ್ಜನವಾಗಿವೆ’ ಎಂದಿದ್ದಾರೆ. ಪೇಶಾವರದ ಸಾಲೆಹ್ ಮಹಮ್ಮದ್‌ರವರ ಅಭಿಪ್ರಾಯದಂತೆ, ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಎಲ್ಲ ಕಲಾಕೃತಿ ಗಳನ್ನು ಮಂಡಿಸುವ ಪ್ರಯತ್ನವಾಗಬೇಕು. ತಾಲಿಬಾನ್ ನಿರ್ಮಿಸಿರುವ ಅಶಾಂತಿಯಿಂದ ಈಗ ವಿದೇಶಿ ಪ್ರವಾಸಿಗರು ಹಾಗೂ ಗಾಂಧಾರ ಕಲೆಯ ಅಭ್ಯಾಸಕರು ಇಲ್ಲಿಗೆ ಬರಲು ಧೈರ್ಯ ಮಾಡುವುದಿಲ್ಲ. ತಕ್ಷಶಿಲಾ ಸಂಗ್ರಹಾಲಯದ ಕ್ಯುರೇಟರ್ ಅಬ್ದುಲ್ ನಾಸೀರ್ ಖಾನ್‌ರವರು ಉಗ್ರರು ಈ ಸಂಸ್ಕೃತಿಯ ದೊಡ್ಡ ಶತ್ರುಗಳಾಗಿದ್ದಾರೆ ಎಂದು ಹೇಳಿದರು. ತಕ್ಷಶಿಲಾದಲ್ಲಿ ರುವ ಈ ಸಂಗ್ರಹಾಲಯದಲ್ಲಿ ಅನರ್ಘ್ಯ ಕಲಾಕೃತಿ ಗಳಿವೆ. ಕೆಲವು ಶಿಲೆಗಳಲ್ಲಿ ಬುದ್ಧನನ್ನು ಗ್ರೀಕ್ ದೇವತೆಯಂತೆ ತೋರಿಸಲಾಗಿದೆ. ಉಗ್ರರ ಸ್ಥಳೀಯ ಸಂಘಟನೆ ಗಳು ಭವಿಷ್ಯದಲ್ಲಿ ತಕ್ಷಶಿಲಾ ಸಂಗ್ರಹಾಲಯಕ್ಕೆ ಗುರಿ ಮಾಡಬಹುದು.
೧೧. ತಕ್ಷಶಿಲೆಯ ಪ್ರಾಚೀನ ಅವಶೇಷಗಳ ಜಾಗ ಅಸುರಕ್ಷಿತ !
ಅಬ್ದುಲ್ ಖಾನ್‌ರವರ ಅಭಿಪ್ರಾಯದಲ್ಲಿ ಅಲ್ಲಿ ಹೆಚ್ಚು ಸುರಕ್ಷತೆಯ ಕಾಳಜಿಯನ್ನು ತೆಗೆದುಕೊಳ್ಳ ಲಾಗುತ್ತಿದೆ; ಆದರೆ ನಿಧಿಯ ಅಭಾವದಿಂದ ಈ ಸಂಗ್ರಹಾಲಯದ ಸುರಕ್ಷೆ ಪೂರ್ಣವಾಗಿಲ್ಲ. ಕಳೆದ ಒಂದು ತಿಂಗಳಿನಲ್ಲಿ ಒಬ್ಬ ವಿದೇಶಿ ಅಭ್ಯಾಸಕನೂ ಈ ಕಡೆ ತಲೆ ಹಾಕಲಿಲ್ಲ. ತಕ್ಷಶಿಲೆಯ ಪ್ರಾಚೀನ ಅವಶೇಷಗಳ ತಾಣವು ಈಗ ಸುರಕ್ಷಿತವಾಗಿಲ್ಲ. ಅದನ್ನೂ ಜೋಪಾನ ವಾಗಿಟ್ಟಿಲ್ಲ. ಒಂದು ವೇಳೆ ಸಂಶೋಧನೆ ನಿಂತರೆ ಪಾಕ್‌ನ ಪ್ರಾಚ್ಯವಸ್ತು ಇಲಾಖೆಯ ಭವಿಷ್ಯವೇನು, ಎಂದು ಅಬ್ದುಲ್ ನಾಸೀರ್ ಖಾನ್ ಪ್ರಶ್ನಿಸಿದ್ದಾರೆ. ತಾಲಿಬಾನ್ ಎಲ್ಲ ರೀತಿಯ ಸಂಗೀತ, ನೃತ್ಯ ಹಾಗೂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ನಿರ್ಬಂಧ ಹೇರಿದ್ದು ಅದರ ಈ ಉಗ್ರಮತವಾದವು ಸಂಪೂರ್ಣ ಪಾಕಿಸ್ತಾನದಲ್ಲಿ ಬೇರೂರುತ್ತಿದೆ. ಆದ್ದರಿಂದ ದೇಶದಲ್ಲಿರುವ ಈ ಸಾಂಸ್ಕೃತಿಕ ಹಾಗೂ ಪ್ರಾಚೀನ ಕೊಡುಗೆ ಮೇಲೆ ದೊಡ್ಡ ಸಂಕಟ ಬಂದಿದೆ. ಖಾನ್‌ರವರ ಅಭಿಪ್ರಾಯದಲ್ಲಿ ಪಾಕಿಸ್ತಾನದ ಪ್ರಾಚ್ಯವಸ್ತು ಇಲಾಖೆಯು ಇಂತಹ ಬಿಕ್ಕಟ್ಟು ಹಾಗೂ ಅಂಧಃಕಾರದಲ್ಲಿದೆ.
೧೨. ಪಾಕಿಸ್ತಾನದಲ್ಲಿರುವ ಗಾಂಧಾರ ಕಲೆಯ ಅಧ್ಯಾಯ
ಉಳಿಯಬೇಕೆಂದರೆ ಪೇಶಾವರ ಮ್ಯುಝಿಯಮ್‌ನ ರಕ್ಷಣೆ ಅಗತ್ಯ !
ಬಾಂಬ್‌ಸ್ಫೋಟದಿಂದ ಪೇಶಾವರ ಮ್ಯೂಝಿಯಮ್‌ಗೆ ಹಾನಿ ಯುಂಟಾಗಿರುವುದರಿಂದ ಅದರ ಅಡಿಪಾಯಕ್ಕೆ ಪೆಟ್ಟಾಗಿದ್ದು ಪೂರ್ಣ ಕಟ್ಟಡ ನೂತನೀಕರಣಗೊಳಿಸುವುದು ಅಗತ್ಯವಾಗಿದೆ. ಪೇಶಾವರ ಮ್ಯೂಝಿಯಮ್‌ನ ಒಂದು ಬಾಗಿಲನ್ನು ಮುಚ್ಚಿ ಅಲ್ಲಿ ಸಿಮೆಂಟಿನ ಬ್ಯಾರಿಕೇಡ್ ನಿಲ್ಲಿಸಲಾಗಿದ್ದು ಅಲ್ಲಿ ಒಳಗೆ ಪ್ರವೇಶಿಸಲು ಮತ್ತೊಂದು ಬಾಗಿಲನ್ನು ಬಳಸಬಹುದು. ಪೇಶಾವರ ಮ್ಯೂಝಿಯಮ್ ಈಗ ಶತಾಬ್ಧಿಯತ್ತ ಮಾರ್ಗಕ್ರಮಣ ಮಾಡುತ್ತಿದ್ದು ಸಂಪೂರ್ಣ ಜಗತ್ತಿನಲ್ಲೇ ಗಾಂಧಾರ ಕಲೆಯ ದೊಡ್ಡ ಸಂಗ್ರಹ ಇಲ್ಲಿದೆ. ಕ್ರಿ.. ೧೯೦೨ ರಿಂದ ೧೯೪೧ ರ ಕಾಲದಲ್ಲಿ ಆಂಗ್ಲರ ಪ್ರಾಚ್ಯವಸ್ತು ಇಲಾಖೆಯು ಮಾಡಿದ ಉತ್ಖನನದಲ್ಲಿ ಸಿಕ್ಕಿದ ಅವಶೇಷಗಳನ್ನು ಹಾಗೂ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದೇ ಭಾಗದಲ್ಲಿ ತಾಲಿಬಾನ್‌ನ ಪ್ರಭಾವವು ಪ್ರಚಂಡವಾಗಿದೆ.ಆದ್ದರಿಂದ ಈ ಸಂಗ್ರಹಾಲಯವನ್ನು ರಕ್ಷಿಸಲು ಭವಿಷ್ಯದಲ್ಲಿ ಪಾಕಿಸ್ತಾನದ ಸಂಪೂರ್ಣ ಸೇನೆಯನ್ನು ನಿಲ್ಲಿಸಬೇಕಾಗುತ್ತದೆ ಇಲ್ಲದಿದ್ದರೆ ಗಾಂಧಾರ ಕಲೆಯ ಅಧ್ಯಾಯವೇ ಪಾಕಿಸ್ತಾನದ ಭೂಮಿಯಿಂದ ಶಾಶ್ವತವಾಗಿ ನಾಶವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. - ಶ್ರೀ. ಸಂಜಯ ಗೋಡಬೋಲೆ (ಆಧಾರ : ದೈನಿಕ ಲೋಕಸತ್ತಾ, ..೨೦೧೦)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕ್ ಹಾಗೂ ತಾಲಿಬಾನ್‌ನ ಭಯೋತ್ಪಾದನೆಯಿಂದ ಅಲ್ಲಿರುವ ಗಾಂಧಾರ ಕಲೆ ವಿನಾಶದ ಅಂಚಿನಲ್ಲಿ !