ಇದು ‘ಸ್ತ್ರೀ ಶಕ್ತಿಯೇ ? . . . !

ಕಳೆದ ಮೂರು ತಿಂಗಳುಗಳಿಂದ ರಾಜ್ಯದ ಕೆಲವು ಪುರೋ(ಅಧೋ)ಗಾಮಿ ಮಹಿಳೆಯರು ಸ್ತ್ರೀ - ಪುರುಷರ ಸಮಾನತೆಯ ಹೆಸರಿನಲ್ಲಿ ಬಲವಂತವಾಗಿ ಹಿಂದೂ ದೇವಸ್ಥಾನಗಳ ಗರ್ಭಗುಡಿಯೊಳಗೆ ನುಗ್ಗುವ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ‘ಪುರುಷಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆಯರ ಮೇಲೆ ಅನ್ಯಾಯವಾಗುತ್ತ್ತಿದೆ, ದೇವಸ್ಥಾನಗಳ ಗರ್ಭಗುಡಿಯೊಳಗೆ ಪುರುಷರಿಗೆ ಸಮಾನವಾಗಿ ಸ್ತ್ರೀಯರಿಗೂ ಪ್ರವೇಶವಿರಬೇಕು, ದೇವಸ್ಥಾನದಲ್ಲಿ ಪುರುಷರು ಎಲ್ಲೆಲ್ಲಿ ಹೋಗುತ್ತಾರೆಯೋ ಮತ್ತು ಯಾವ್ಯಾವ ಧಾರ್ಮಿಕ ಕೃತಿಗಳನ್ನು ಮಾಡುತ್ತಾರೆಯೋ, ಅವೆಲ್ಲ ಸ್ಥಳಗಳಿಗೆ ಹೋಗಲು ಮತ್ತು ಧಾರ್ಮಿಕ ಕೃತಿಗಳನ್ನು ಮಾಡಲು ಸ್ತ್ರೀಯರಿಗೂ ಸಮಾನ ಅಧಿಕಾರ ದೊರೆಯಬೇಕು.
ಅಷ್ಟೇ ಅಲ್ಲ ಅದು ನಮ್ಮ ಹಕ್ಕುಎಂದು ಈ ಪುರೋ(ಅಧೋ)ಗಾಮಿ ಮಹಿಳೆಯರು ಪ್ರಸಾರಮಾಧ್ಯಮಗಳಿಗೆ, ಪತ್ರಿಕಾಗೋಷ್ಠಿಯಲ್ಲಿ, ಪ್ರತಿಭಟನೆ ಮುಂತಾದ ಸ್ಥಳಗಳಲ್ಲಿ ಹೇಳತೊಡಗಿದರು. ಶನಿಶಿಂಗಣಾಪುರ, ತ್ರ್ಯಂಬಕೇಶ್ವರಗಳಲ್ಲಿ ರಕ್ಷಿಸುವ ಸಲುವಾಗಿ ನ್ಯಾಯೋಚಿತ ಮಾರ್ಗದಿಂದ ಕೈಗೊಂಡ ಪ್ರತಿಭಟನೆಯನ್ನು ಧಿಕ್ಕರಿಸಿ, ಸುಳ್ಳು ಆರೋಪಗಳನ್ನು ಹೊರಿಸಿ ಪುರೋ(ಅಧೋ)ಗಾಮಿ ಮಹಿಳೆಯರು ನೂರಾರು ವರ್ಷಗಳ ಧರ್ಮ-ಶ್ರದ್ಧೆಯ ಮೇಲೆ ಆಘಾತ ಮಾಡಿದರು. ಧರ್ಮ ಶಾಸ್ತ್ರವನ್ನು ತಿಳಿದವರು ಅವರಿಗೆ ಈ ಕುರಿತು ಶಾಸ್ತ್ರದಲ್ಲಿರುವ ಮಾಹಿತಿಯನ್ನು ತಿಳಿಸುವಾಗ, () ಸುಧಾರಣಾವಾದಿ ಮಹಿಳೆ ಯರು ಅದನ್ನು ತಮಾಷೆಯ ವಿಷಯವನ್ನಾಗಿ ಮಾಡಿದರು ಮತ್ತು ಪದ್ಧತಿ-ಪರಂಪರೆಯನ್ನು ತಿರಸ್ಕರಿಸುವ ತಮ್ಮ ಹಠ ಮುಂದುವರಿಸಿದರು. ವಿರೋಧಿಸುವವರ ಮೇಲೆಯೇ ದೇವಸ್ಥಾನದಲ್ಲಿರುವ ದೇವಿಯ ಗರ್ಭಗುಡಿಯೊಳಗೆ ಮಹಿಳೆಯರನ್ನು ಹೋಗಲು
ಬಿಡದಿರುವುದು ಸ್ತ್ರೀ-ಶಕ್ತಿಯ ಬಹುದೊಡ್ಡ ಅಪಮಾನವಾಗಿದೆ, ನಾರಿಶಕ್ತಿಯ ಮೇಲೆ ಅನ್ಯಾಯ
ವಾಗಿದೆ ಎಂದು ಕೂಗಾಡಿದರು ಮತ್ತು ನ್ಯಾಯಾಲಯದ ನಿರ್ಣಯ, ಪೊಲೀಸ್ ಬಲ ಪ್ರಯೋಗದೊಂದಿಗೆ ವಿರೋಧಿಸುವವರನ್ನು ಮೂಲೆ
ಗುಂಪು ಮಾಡಲಾಯಿತು. ಭಾರತೀಯ ಸ್ತ್ರೀಯರ ವಿಚಾರವನ್ನು ಮಾಡಿದರೆ ಅವಳು ಸುಶಿಕ್ಷಿತಳು ಮಾತ್ರವಲ್ಲ ಸುಸಂಸ್ಕೃತಳು, ಗೃಹಕಾರ್ಯಗಳಲ್ಲಿ ದಕ್ಷತೆಯುಳ್ಳವಳು, ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸಬಲ್ಲ ಸ್ತ್ರೀಯ ಚಿತ್ರವು ಕಣ್ಣೆದುರಿಗೆ ನಿಲ್ಲುತ್ತದೆ. ಈ ಕಾರಣದಿಂದ ಮನೆಯಲ್ಲಿ ಇಂತಹ ಸ್ತ್ರೀಯನ್ನು ಲಕ್ಷ್ಮೀ ಎಂದು ಪರಿಗಣಿಸ
ಲಾಗುತ್ತದೆ. ವಿವಾಹಿತ ಸ್ತ್ರೀ ಎರಡು ಕುಟುಂಬಗಳಿಗೆ ದಾರಿದೀಪವಾಗಿರುತ್ತಾಳೆ. ಈ ರೀತಿ ಭಾರತೀಯ ಸ್ತ್ರೀಯನ್ನು ಗುರುತಿಸುವಾಗ, ಧರ್ಮಪರಂಪರೆ ಯನ್ನು ತಿರಸ್ಕರಿಸುವ ಈ ಮಹಿಳೆಯರು ಯಾವ ಆದರ್ಶವನ್ನು ಮುಂದಿಡುತ್ತಿದ್ದಾರೆ. ಯಾವ ಸಂಸ್ಕಾರ
ವನ್ನು ಭಾವೀ ಪೀಳಿಗೆಯ ಮೇಲೆ ಬಿಂಬಿಸು
ತ್ತಿದ್ದಾರೆ ? ಎಲ್ಲಿ ಹಿಂದವೀ ಸ್ವರಾಜ್ಯದ ಸಂಸ್ಥಾಪಕ ರಾದ ಛತ್ರಪತಿ ಶಿವಾಜಿ ಮಹಾರಾಜರನ್ನು ಬೆಳೆಸಿದ ವೀರಮಾತೆ ಜೀಜಾಬಾಯಿ ಮತ್ತು ಎಲ್ಲಿ ಕೇವಲ ಪ್ರಸಿದ್ಧಿಗಾಗಿ ಧರ್ಮಹಾನಿಯನ್ನು ಮಾಡುವ ಮತ್ತು
ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ಇಂದಿನ
ಮಹಿಳೆಯರು. ಆದ ಕಾರಣ, ಈ ಪುರೋ(ಅದೋ) ಗಾಮಿ ಮಹಿಳೆಯರನ್ನು ಸ್ತ್ರೀ ಶಕ್ತಿಎಂದು ಗುರುತಿಸುವುದು ತಪ್ಪೆಂದು ನಿರ್ಧರಿಸಲ್ಪಡುವು ದಷ್ಟೇ ಅಲ್ಲ, ಕಾಲಿನ ಮೇಲೆ ಕಲ್ಲನ್ನೆತ್ತಿ ಹಾಕಿಕೊಳ್ಳು ವಂತಿದೆ. ಇಂತಹ ಧರ್ಮದ್ರೋಹಗಳನ್ನು ಸೂಕ್ತ
ರೀತಿಯಲ್ಲಿ ತಡೆಗಟ್ಟಿ, ಪರಿಜ್ಞಾನವಿರುವ ಭಾರತೀಯ ಸ್ತ್ರೀಯು ತನ್ನ ನಿಜವಾದ ಶಕ್ತಿಯನ್ನು ತೋರಿಸ ಬೇಕೆನ್ನುವುದೇ ಅಪೇಕ್ಷೆ. - ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ್

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇದು ‘ಸ್ತ್ರೀ ಶಕ್ತಿಯೇ ? . . . !