ರಾಮಮಂದಿರ ನಿರ್ಮಿಸುವ ಹಂಬಲ ! - ಸಂಪಾದಕೀಯ

ರಾಜ್ಯಸಭೆಯಲ್ಲಿ ಭಾಜಪದ ಸಂಸದರಾದ ಡಾ. ಸುಬ್ರಮಣ್ಯಮ್ ಸ್ವಾಮಿಯವರು ಮೇ ೬ ರಂದು ರಾಮಮಂದಿರದ ಪ್ರಶ್ನೆಯನ್ನು ಮುಂದಿಟ್ಟರು. ಸರ್ವೋಚ್ಛ ನ್ಯಾಯಾಲಯದಲ್ಲಿ ರಾಮ ಮಂದಿರದ ವಿಷಯದಲ್ಲಿ ಪ್ರತಿದಿನ ಆಲಿಕೆ ನಡೆಯಲಿ, ಕೇಂದ್ರ ಸರಕಾರವು ಮುಂದಾಳತ್ವ ವಹಿಸಲಿ, ಎಂದು ಬೇಡಿಕೆ ಸಲ್ಲಿಸಿದರು.
ಆಡಳಿತ ಪಕ್ಷದ ಶಾಸಕರೇ ಈ ರೀತಿ ಆಗ್ರಹಿಸಿದ್ದನ್ನು ನೋಡಿ, ಕೆಲವರಿಗೆ ಆಶ್ಚರ್ಯವೆನಿಸಿತು, ಕೆಲವರಿಗೆ ಅದು ಸರಿ ಎಂದೆನಿಸಿತು ಹಾಗೂ ಕೆಲವರು ಡಾ. ಸ್ವಾಮಿಯವರ ಧೈರ್ಯ ನೋಡಿ ಮೆಚ್ಚಿದರು. ರಾಜಕೀಯ ಕ್ಷೇತ್ರದಲ್ಲಿ ಡಾ. ಸ್ವಾಮಿಯವರ ಅನುಭವವನ್ನು ನೋಡಿದರೆ, ಅವರಿಗೆ ಬಂದ ಹಲವಾರು ಅಡೆತಡೆಗಳು ಗೊತ್ತಿರಬಹುದು, ಅದರೊಂದಿಗೆ ಜನಪ್ರತಿನಿಧಿಯೆಂದು ತಮ್ಮ ಜವಾಬ್ದಾರಿಯು ಸಹ ಅವರಿಗೆ ಉತ್ತಮವಾಗಿ ತಿಳಿದಿತ್ತು ಎಂದು ಹೇಳಬಹುದು. ದೇಶದಲ್ಲಿ ರಾಮಮಂದಿರ ಒಂದು ಸೂಕ್ಷ್ಮ ವಿಷಯವಾಗಿ ಬಿಟ್ಟಿದೆ. ಬಾಬರಿ ಧ್ವಂಸಗೊಂಡ ಬಳಿಕ ಅಲ್ಲಿ ರಾಮಮಂದಿರವನ್ನು ನಿರ್ಮಿಸಬೇಕೆಂಬ ಅಪೇಕ್ಷೆ ಜನತೆಗಿತ್ತು. ಆ ಘಟನೆ ನಡೆದು ೨೫ ವರ್ಷಗಳಾಗಿದ್ದರೂ, ಜನತೆಯ ನಿರೀಕ್ಷೆ ಮಾತ್ರ ಮುಗಿದಿಲ್ಲ. ಡಾ. ಸ್ವಾಮಿಯವರು ಅದೇ ಅಂಶವನ್ನು ಮುಂದಿಟ್ಟು ಅಭ್ಯುದಯವನ್ನು ಗಳಿಸಿಕೊಟ್ಟರು. ಜನರ ಭಾವನೆ ಅರಿತು ಅದಕ್ಕೆ ಸರಕಾರದ ದರಬಾರಿನಲ್ಲಿ ಬೆಂಬಲ ಗಳಿಸುವುದೇ ಜನಪ್ರನಿಧಿಗಳ ಜವಾಬ್ದಾರಿಯಾಗಿರುತ್ತದೆ. ಡಾ. ಸ್ವಾಮಿ ಅದನ್ನುಉತ್ತಮವಾಗಿ ನಿಭಾಯಿಸಿದರು. ಅವರ ಈ ಕಾರ್ಯದಿಂದ ಜನತೆಗೆ ಅಚ್ಚುಮೆಚ್ಚಾದ ವಿಷಯವೇನು ? ಎಂಬುದರ ಬಗ್ಗೆ ವಿಚಾರ ಮಾಡಿದಾಗ, ಇಂದು ಸಂಸತ್ತಿನ ಎರಡೂ ಸಭೆಯಲ್ಲಿ ಒಟ್ಟು ೩೨೫ ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಡಾ. ಸ್ವಾಮಿಯವರು ರಾಜ್ಯಸಭೆಯೊಳಗೆ ಪ್ರವೇಶಿಸಿ ಒಂದು ವಾರವಾಗಿದೆಯಷ್ಟೇ; ಅವರು ಬಂದ ತಕ್ಷಣ ರಾಮಮಂದಿರದ ವಿಷಯವನ್ನು ಎತ್ತಿ ಹಿಡಿದರು. ೩೨೫ ಸದಸ್ಯರು ಮಾತ್ರ ಹಿಂದಿನ ಎರಡು ವರ್ಷಗಳಿಂದ ತಟಸ್ಥರಂತೆ ಮೌನ ವಹಿಸಿದ್ದಾರೆ. ಈಗಿರುವ ಕೇಂದ್ರ ಸರಕಾರವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಿ ಎಂಬುದೇ ಭಾರತೀಯ ಜನತೆಯ ಅಪೇಕ್ಷೆಯಾಗಿದೆ. ಅವರು ಜನತೆಗೆ ಚುನಾವಣೆಯ ಘೋಷಣಾಪತ್ರದ ಮೂಲಕ ಆಶ್ವಾಸನೆ ನೀಡಿದ್ದರು. ಕೊಟ್ಟ ಮಾತನ್ನು ಪಾಲಿಸಬೇಕೆಂಬುದೇ ಜನತೆಯ ಅಪೇಕ್ಷೆಯಾಗಿದೆ. ಕೇಂದ್ರ ಸರಕಾರದ ವೈಫಲ್ಯದ ಬಗ್ಗೆ ವಿಶ್ಲೇಷಿಸಬೇಕೆಂದರೆ, ಎಷ್ಟೋ ವಿಷಯಗಳು ಬಹಿರಂಗವಾಗಿ ಕಾಣಿಸುತ್ತಿದೆ. ಮೊದಲ ವಿಷಯವೇನೆಂದರೆ ಡಾ. ಸ್ವಾಮಿಯವರು ಸ್ವತಃ ಆಡಳಿತ ಪಕ್ಷದ ಸಂಸದರಾಗಿದ್ದಾರೆ. ಮೊತ್ತೊಂದು ವಿಷಯವೆಂದರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಅಂಶವನ್ನು ಎತ್ತಿ ಹಿಡಿದ ಕಾರಣದಿಂದ ಆಡಳಿತ ಪಕ್ಷವು ಅಧಿಕಾರಕ್ಕೆ ಬಂದಿತು ಹಾಗೂ ಮೂರನೇ ವಿಷಯವೆಂದರೆ ಜನರ ಸಹನೆ ಈಗ ಮುಗಿದು ಹೋಗುತ್ತಿರುವ ಕುರುಹು ಕಾಣಿಸ ತೊಡಗಿದೆ. ಜನತೆಯನ್ನು ನಿತ್ಯವೂ ದಾರಿ ತಪ್ಪಿಸಲು ಸಾಧ್ಯವೇ? ೨೫ ವರ್ಷಗಳ ಸಮಯಮಿತಿಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಆಶಾಕಿರಣ ಈಗ ಕಾಣಿಸುತ್ತಿರುವ ಕ್ಷಣದಿಂದ ಇದೆ. ಈ ಹಿಂದೆ ರಾಮಜನ್ಮಭೂಮಿಗಾಗಿ ಹೋರಾಟ ನಡೆಸಿದ ಎಷ್ಟೋ ಪೀಳಿಗೆಗಳು ಆಗಿ ಹೋಗಿವೆ. ಒಟ್ಟಿನಲ್ಲಿ ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದೂಗಳ ಶ್ರದ್ಧಾಸ್ಥಾನವನ್ನು ನಿರ್ಮಿಸಲು ಹೋರಾಟ ನಡೆಸಬೇಕಾಗುತ್ತದೆ, ಎಂಬ ವಿಷಯ ಮಾತ್ರ ಆಶ್ಚರ್ಯವುಂಟು ಮಾಡುವಂತಿದೆ. ಇಂದು ಡಾ. ಸ್ವಾಮಿ ಸಂಸತ್ತಿನಲ್ಲಿದ್ದಾರೆ. ಸಂಸತ್ತಿನ ಹೊರಗಿದ್ದಾಗಲೂ ಅವರು ರಾಮಮಂದಿರಕ್ಕಾಗಿ ಪ್ರಯತ್ನಿಸು ತ್ತಿದ್ದರು. ಅವರು ತಮ್ಮ ಜವಾಬ್ದಾರಿಯ ಮೇರೆಗೆ ಸರ್ವೋಚ್ಛ ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿ ರಾಮಮಂದಿರದ ಆಲಿಕೆ ನಿಯಮಿತವಾಗಿ ನಡೆಯಲಿ, ಎಂದು ನ್ಯಾಯಾಲಯಕ್ಕೆ ವಿನಂತಿಸಿದ್ದರು. ನ್ಯಾಯಾಲಯವು ಅವರ ಅರ್ಜಿಯನ್ನು ತಳ್ಳಿ ಹಾಕಿತು, ಆದರೆ ಇದರಿಂದ ಅವರಿಗೆ ರಾಮಮಂದಿರದ ಬಗ್ಗೆ ಇರುವ ಆತ್ಮೀಯತೆ ಸ್ಪಷ್ಟವಾಗುತ್ತದೆ.
ವಿಷಯಕ್ಕೆ ಬಿಸಿ ತಟ್ಟಲಿದೆ !
ರಾಮಮಂದಿರದ ಸಂದರ್ಭದಲ್ಲಿ ದೇಶದಲ್ಲಿನ ವಾತಾವರಣ ಹೇಗಿದೆ? ರಾಮಮಂದಿರವನ್ನು ನಿರ್ಮಿಸುವ ವಿಷಯದಲ್ಲಿ ಜನತೆಯ ಆಸೆ ಮತ್ತೆ ಚಿಗುರಿದ್ದರೂ ಸರಕಾರ ಮಾತ್ರ ತಾಂತ್ರಿಕ ಅಡಚಣೆಗಳನ್ನು ಮುಂದೆ ಮಾಡುತ್ತದೆ. ಅಂದರೆ ರಾಮಮಂದಿರವನ್ನು ನಿರ್ಮಿಸುವ ಅಂಶವು ಸರಕಾರಿ ಬೆಂಬಲದಿಂದ ಮುನ್ನಡೆಯಲು ಸಾಧ್ಯವಿಲ್ಲ, ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ. ಪ್ರಕರಣ ನ್ಯಾಯಾಲಯದಲ್ಲಿದೆ ಅಥವಾ ಸಂಸತ್ತಿನಲ್ಲಿರುವ ಆಡಳಿತ ಪಕ್ಷಕ್ಕೆ ಬಹುಮತವಿಲ್ಲ, ಎಂಬ ತಾಂತ್ರಿಕ ಕಾರಣಗಳನ್ನು ಮುಂದೆ ಮಾಡಿದ್ದರಿಂದ ಜನರಲ್ಲಿ ಆಕ್ರೋಶ ಮೂಡಿದೆ, ಅಂದರೆ ರಾಮಮಂದಿರವನ್ನು ನಿರ್ಮಿಸಲು ವಾತಾವರಣ ಪೋಷಕವಾಗಿಲ್ಲ. ಜಾಣರಾಗಿರುವ ಜನತೆ ಆಡಳಿತ ಪಕ್ಷದಲ್ಲಿ ಸೌಮ್ಯ ಹಾಗೂ ತೀವ್ರ ಎಂಬ ಎರಡು ಬಣಗಳಿವೆಯೆ ಎಂದು ಪ್ರಶ್ನಿಸುತ್ತಿದೆ. ತಜ್ಞರ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಪ್ರಕರಣವು ನ್ಯಾಯಾಲಯದಲ್ಲಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಬಾಕಿಯಿರುವ ಖಟ್ಲೆಗಳ ಸಂದರ್ಭದಲ್ಲಿ ತಮ್ಮ ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ. ನ್ಯಾಯಾಧೀಶರ ಸಂಖ್ಯೆ ಕಡಿಮೆಯಾಗಿರುವ ಮುಖ್ಯ ಕಾರಣವನ್ನು ಅವರು ಪ್ರಧಾನಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ನ್ಯಾಯವ್ಯವಸ್ಥೆಯು ಈ ಸ್ಥಿತಿಯಲ್ಲಿರುವಾಗ ರಾಮಮಂದಿರದ ವಿಷಯದಲ್ಲಿ ಖಟ್ಲೆ ಬಾಕಿಯಿದೆ, ಎಂಬುದು ಜನತೆಯು ಅರ್ಥೈಸಿಕೊಳ್ಳಬಹುದಾದರೂ, ರಾಷ್ಟ್ರೀಯ ಮಟ್ಟದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಸಂಬಂಧಪಟ್ಟ ಪ್ರಕರಣವಾಗಿರುವುದರಿಂದ ಅದಕ್ಕೆ ಪ್ರಾಮುಖ್ಯತೆ ನೀಡಿ ವಿಚಾರಣೆಯನ್ನು ಮುಂದುವರಿಸಲಿ, ಎಂಬುದಕ್ಕಾಗಿ ಸರಕಾರಿ ಮಟ್ಟದಲ್ಲಿ ಪ್ರಯತ್ನ ನಡೆಯ ಬೇಕೆಂಬ ಉದ್ದೇಶವಿದೆ. ಡಾ. ಸುಬ್ರಮಣ್ಯಮ್ ಸ್ವಾಮಿಯವರಿಗೆ ಇದನ್ನೇ ಸೂಚಿಸಬೇಕಾಗಿತ್ತು. ಎರಡು ದಿನಗಳ ಹಿಂದೆ ಡಾ. ಸ್ವಾಮಿಯವರು ಈ ಅಂಶವನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಸಂಸತ್ತಿನ ಕಾರ್ಯಕಲಾಪದಲ್ಲಿ ಅದು ನೋಂದಾಯಿಸಲ್ಪಟ್ಟಿರಬಹುದು. ಕೇಂದ್ರ ಸರಕಾರವು ಈ ಸಂದರ್ಭದಲ್ಲಿ ಏನಾದರೂ ತೀರ್ಮಾನ ತೆಗೆದುಕೊಳ್ಳಲೇಬೇಕು. ಪರಿಣಾಮವಾಗಿ ರಾಮಮಂದಿರದ ಅಂಶಕ್ಕೆ ಬಿಸಿ ಮುಟ್ಟಿರುತ್ತದೆ. ಹಿಂದೂಗಳಿಗೆ ಇನ್ನೇನು ಬೇಕು? ಧಾರ್ಮಿಕ ಭಾವನೆಯ ಅಂಶವು ೨೫ ವರ್ಷಗಳಿಂದ ನಿಂತು ಹೋಗಿರುವ ಉದಾಹರಣೆ ಎಲ್ಲಾದರೂ ಇದೆಯೇ? ಡಾ. ಸ್ವಾಮಿಯವರು ರಾಮಮಂದಿರದ ಅಂಶವನ್ನು ರಾಜ್ಯ ಸಭೆಯಲ್ಲಿ ಮಂಡಿಸುತ್ತಿರುವಾಗ ವಿಪಕ್ಷದ ಸದಸ್ಯರು ಅವರ ವಿರುದ್ಧ ಘೋಷಣೆ ಕೂಗುತ್ತಿದ್ದರು. ಜಾತ್ಯತೀತ ಹಾಗೂ ಸಾಮ್ಯವಾದಿಗಳೇ ತುಂಬಿರುವ ರಾಜ್ಯಸಭೆಯ ವಿರೋಧಕರ ಗುಂಪು ಇನ್ನೇನು ಮಾಡಲು ಸಾಧ್ಯ? ಅವರಿಗೆ ಧರ್ಮ ಬೇಡ. ಅದು ಅವರ ವಿರೋಧಕ್ಕಾಗಿ ವಿರೋಧವಿತ್ತು. ಅವರಿಗೆ ಡಾ. ಸ್ವಾಮಿಯವರು ರಾಮಮಂದಿರದ ವಿಷಯದಲ್ಲಿ ಅಧ್ಯಯನ ಪೂರ್ಣವಾಗಿ ಮಂಡಿಸಿದ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಏಕೆಂದರೆ ಧರ್ಮ ಅವರ ವಿಷಯವಲ್ಲ. ಡಾ. ಸುಬ್ರಮಣ್ಯಮ್ ಸ್ವಾಮಿಯವರು ಹಿಂದೂ ಭಕ್ತರ ರಾಮಮಂದಿರದ ಭಾವನೆಯನ್ನು ಮಾತ್ರ ಜಾಗೃತಗೊಳಿಸಿದ್ದಾರೆ, ಎಂಬುದು ಮಾತ್ರ ನಿಶ್ಚಯ!

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಮಮಂದಿರ ನಿರ್ಮಿಸುವ ಹಂಬಲ ! - ಸಂಪಾದಕೀಯ