ಸಂತರ ಸಹಜಸ್ಥಿತಿಯಲ್ಲಿನ ಆಹ್ಲಾದಕರ ನಗುವಿನಲ್ಲಿನ ಆನಂದದ ಅನುಭೂತಿ ಕೊಡುವ ಸನಾತನದ ಸಂತರ ಛಾಯಾಚಿತ್ರಗಳು !

ಎಡದಿಂದ ಪೂ. (ಡಾ.) ಚಾರುದತ್ತ ಪಿಂಗಳೆ, ಪೂ. ನಂದಕುಮಾರ ಜಾಧವ ಮತ್ತು ಪೂ. (ಕು.) ಸ್ವಾತಿ ಖಾಡ್ಯೆ
ಆನಂದಾಚೆ ಡೋಹಿ ಆನಂದತರಂಗ I
ಆನಂದಚಿ ಅಂಗ ಆನಂದಾಚೆ II
ಈ ಮರಾಠಿ ಅಭಂಗದಲ್ಲಿ ಸಂತ ತುಕಾರಾಮ ಮಹಾರಾಜರು ಆನಂದದ ಸ್ಥಿತಿಯ ವರ್ಣನೆಯನ್ನು ಮಾಡಿದ್ದಾರೆ. ಅವರ ಈ ಅಭಂಗವು ಜನಪ್ರಿಯವಿದೆ. ಅವರು ಹೀಗೆನ್ನುತ್ತಾರೆ, ನನ್ನ ಮನಸ್ಸು ಆನಂದದ ಕೆರೆಯಾಗಿದ್ದು, ಅದರಲ್ಲಿ ಆನಂದದ ಅಲೆಗಳು ಬರುತ್ತವೆ; ಆನಂದದ ಎಲ್ಲ ಅಂಗಗಳಲ್ಲಿ ಆನಂದವೇ ಇರುತ್ತದೆ. ತುಕಾರಾಮ ಮಹಾರಾಜರು ವರ್ಣಿಸಿದ ಸಂತರ ಮನಸ್ಸಿನ ಈ ಸ್ಥಿತಿಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ತುಂಬ ಕಠಿಣವಿದೆ. ಇದೇ ರೀತಿಯಲ್ಲಿ ಸನಾತನದ ಸಂತರ ಸಹಜ ಸ್ಥಿತಿಯಲ್ಲಿನ ಆಹ್ಲಾದಕರ ನಗುವಿನಲ್ಲಿನ ಆನಂದದ ಕ್ಷಣದಲ್ಲಿ ಸಹಭಾಗಿಯಾಗಿ ಆ ಆನಂದವನ್ನು ನೀಡುವ ಕೆರೆಯಲ್ಲಿ ಮುಳುಗೋಣ.
ಈ ಛಾಯಾಚಿತ್ರಗಳನ್ನು ೨೩.೯.೨೦೧೫ ರಂದು ಸನಾತನದ ಪೂ.(ಕು.) ಸ್ವಾತಿ ಖಾಡ್ಯೆ, ಪೂ. ನಂದಕುಮಾರ ಜಾಧವ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪೂ. (ಡಾ.) ಚಾರುದತ್ತ ಪಿಂಗಳೆಯವರು ನಾಶಿಕದ ಕುಂಭಮೇಳದಲ್ಲಿ ಪೂ. (ಕು.) ಸ್ವಾತಿ ಖಾಡ್ಯೆ ಇವರು ಶೇ. ೮೦ ಆಧ್ಯಾತ್ಮಿಕ ಮಟ್ಟಕ್ಕೆ ತಲುಪಿದ್ದರೆಂದು (ಸದ್ಗುರು ಪದವಿಗೆ ಆಸೀನರಾಗಿದ್ದಾರೆಂದು) ಘೋಷಿಸಿದಾಗ ತೆಗೆಯಲಾಗಿದೆ. ಈ ಛಾಯಾಚಿತ್ರಗಳ ಕಡೆಗೆ ಸ್ವಲ್ಪ ಸಮಯ (ಕೆಲ ಕ್ಷಣಗಳು) ನೋಡಿದರೆ ಮನಸ್ಸಿನಲ್ಲಿ ಯಾವುದೇ ವಿಚಾರಗಳು ಬರುವುದಿಲ್ಲ. ಮನಸ್ಸು ಕೇವಲ ಅವರ ಆನಂದದ ಕ್ಷಣದಲ್ಲಿ ಮೈಮರೆತು ಹೋಗುತ್ತದೆ. ಛಾಯಾಚಿತ್ರಗಳನ್ನು ನೋಡುತ್ತಲೇ ಇರಬೇಕು ಎಂದೆನಿಸುತ್ತದೆ.
ಪ್ರತಿಯೊಬ್ಬ ಸಂತರ ಪ್ರಕೃತಿಯು ವಿಭಿನ್ನವಾಗಿರುತ್ತದೆ; ಆದರೆ ಆತ್ಮಾನಂದದಲ್ಲಿ ಮಗ್ನರಾಗಿರುವಾಗ ಅವರು ಅಂತರಂಗದಲ್ಲಿ ಏಕರೂಪರಾಗಿರುತ್ತಾರೆ. ಆದುದರಿಂದ ಅವರ ಸಹಜಸ್ಥಿತಿಯಲ್ಲಿಯೂ ಆನಂದ ಕಾಣಿಸುತ್ತದೆ.
- ಕು. ಪ್ರಿಯಾಂಕಾ ಲೋಟಲೀಕರ್, ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಂತರ ಸಹಜಸ್ಥಿತಿಯಲ್ಲಿನ ಆಹ್ಲಾದಕರ ನಗುವಿನಲ್ಲಿನ ಆನಂದದ ಅನುಭೂತಿ ಕೊಡುವ ಸನಾತನದ ಸಂತರ ಛಾಯಾಚಿತ್ರಗಳು !